Detect Hidden Cameras In Hotel Rooms: ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಸಾಕಷ್ಟು ಮುಂದುವರೆದಿದೆ. ಆದರೆ ಈ ತಂತ್ರಜ್ಞಾನಗಳನ್ನು ಸದುಪಯೋಗಪಡಿಸಿಕೊಳ್ಳುವ ಬದಲು  ದುರುಪಯೋಗ ಕೂಡ ಮಾಡಿಕೊಳ್ಳುತ್ತಿದ್ದಾರೆ ಕೆಲವರು. ಇತ್ತೀಚಿಗೆ ಬಹಳಷ್ಟು ಕೇಳಿಬರುತ್ತಿರುವ ಮತ್ತು ಕಾಣುತ್ತಿರುವ ಸಮಸ್ಯೆಯೆಂದರೆ ರಹಸ್ಯ ಕ್ಯಾಮೆರಾಗಳ ಸಮಸ್ಯೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಗಣೇಶ ಚತುರ್ಥಿ ದಿನ ಈ ದಿಕ್ಕಿಗೆ ಮುಖ ಹಾಕಿ ಕುಳಿತು ಊಟ ಮಾಡಿ: ವರ್ಷವಿಡೀ ಒಂದು ರುಪಾಯಿಯೂ ಸಾಲವಾಗಲ್ಲ; ದುಡಿದ ಹಣವೆಲ್ಲಾ ಉಳಿತಾಯವಾಗುವುದು


ಪ್ರಸ್ತುತ ಸಿಸಿಟಿವಿ ಕ್ಯಾಮೆರಾಗಳ ಬಳಕೆ ಹೆಚ್ಚಾಗಿದೆ. ಶಾಪಿಂಗ್ ಮಾಲ್‌ʼಗಳು, ಹೋಟೆಲ್‌ʼಗಳು, ಶಿಕ್ಷಣ ಸಂಸ್ಥೆಗಳು ಮತ್ತು ಕಚೇರಿಗಳು ಸೇರಿದಂತೆ ನಮ್ಮ ಮನೆಗಳ ಹೊರಗೆ ಮತ್ತು ಸುತ್ತಮುತ್ತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುತ್ತಿದ್ದೇವೆ. ಇವೆಲ್ಲವೂ ಭದ್ರತೆಯ ದೃಷ್ಟಿಯಿಂದ ನಮ್ಮನ್ನು ಕಾಪಾಡುವುದು ಸತ್ಯ.


ಆದರೆ ಅದೇ ಕ್ರಮದಲ್ಲಿ ಕೆಲ ಕ್ರಿಮಿನಲ್ ಗಳು ಸ್ಪೈ ಕ್ಯಾಮೆರಾಗಳನ್ನು ಹೊಂದಿಸಿ ಬೇರೆಯವರಿಗೆ ತಿಳಿಯದಂತೆ ವೀಡಿಯೋ ತೆಗೆಯುತ್ತಾರೆ. ನಂತರ ಅವರನ್ನು ಬೆದರಿಸಿ ಆರ್ಥಿಕವಾಗಿ, ದೈಹಿಕವಾಗಿ ಮತ್ತು ಮಾನಸಿಕವಾಗಿ ತೊಂದರೆ ಕೊಡುತ್ತಾರೆ. ಇಂತಹ ಘಟನೆಗಳಿಂದ ಅನೇಕ ಜೀವಗಳು ನಾಶವಾಗಿವೆ. ಇಂತಹ ಸಮಯದಲ್ಲಿ ರಹಸ್ಯ ಕ್ಯಾಮರಾಗಳನ್ನು ಪತ್ತೆ ಮಾಡುವುದು ಹೇಗೆ ಎಂದು ತಿಳಿಯೋಣ.


ನಿಮ್ಮ ಕೋಣೆಯಲ್ಲಿ ಹಿಡನ್ ಕ್ಯಾಮೆರಾಗಳಿವೆ ಎಂದು ನಿಮಗೆ ಅನುಮಾನ ಬಂದರೆ, ನಿಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಭೌತಿಕವಾಗಿ ಪರಿಶೀಲಿಸುವುದು ಒಳ್ಳೆಯದು. ಅಸಾಮಾನ್ಯವಾಗಿ ತೋರುವ ಯಾವುದೇ ವಸ್ತುಗಳ ಬಗ್ಗೆ ಜಾಗರೂಕರಾಗಿರಿ. ವಿಶೇಷವಾಗಿ ಗಡಿಯಾರಗಳು, ಹೊಗೆ ಶೋಧಕಗಳು, ಗೋಡೆಯ ಅಲಂಕಾರ ವಸ್ತುಗಳು, ಯುಎಸ್‌ʼಬಿ ಚಾರ್ಜಿಂಗ್ ಬ್ಲಾಕ್‌ʼಗಳನ್ನು ಸಾಮಾನ್ಯವಾಗಿ ರಹಸ್ಯ ಕ್ಯಾಮೆರಾಗಳಿಗಾಗಿ ಬಳಸಲಾಗುತ್ತದೆ. ಸಂದೇಹವಿದ್ದರೆ, ಸಾಧನವನ್ನು ಅನ್‌ಪ್ಲಗ್ ಮಾಡಿ. ಬ್ಯಾಟರಿ ಚಾಲಿತವಾಗಿದ್ದರೆ ಬ್ಯಾಟರಿಯನ್ನು ತೆಗೆದುಹಾಕಿ.


ರಹಸ್ಯ ಕ್ಯಾಮರಾವನ್ನು ಪತ್ತೆಹಚ್ಚಲು ಪರಿಣಾಮಕಾರಿ ವಿಧಾನವೆಂದರೆ ಲೈಟ್‌ʼಗಳನ್ನು ಪರಿಶೀಲಿಸುವುದು. ಕೋಣೆಯಲ್ಲಿ ಲೈಟ್‌ʼಗಳನ್ನು ಆಫ್ ಮಾಡಿ. ರಹಸ್ಯ ಕ್ಯಾಮೆರಾಗಳು ಕತ್ತಲೆಯಲ್ಲಿಯೂ ಕೆಲಸ ಮಾಡಲು ಸಾಧ್ಯವಾಗುವಂತೆ ಅತಿಗೆಂಪು ಮತ್ತು ಎಲ್ʼಇಡಿಗಳನ್ನು ಹೊಂದಿರುತ್ತತವೆ. ಆ ಕ್ಯಾಮೆರಾಗಳನ್ನು ಹುಡುಕಲು ಮೊದಲು ಕೋಣೆಯಲ್ಲಿನ ಎಲ್ಲಾ ದೀಪಗಳನ್ನು ಆಫ್ ಮಾಡಿ. ಪರದೆಗಳನ್ನು ಮುಚ್ಚಿ ಮತ್ತು ಕೋಣೆಯನ್ನು ಸಾಧ್ಯವಾದಷ್ಟು ಕತ್ತಲೆಯಾಗಿ ಮಾಡಿ. ನಂತರ ಮೊಬೈಲ್ ಕ್ಯಾಮೆರಾವನ್ನು ಆನ್ ಮಾಡಿ ಮತ್ತು ಇಡೀ ಕೋಣೆಯನ್ನು ಸ್ಕ್ಯಾನ್ ಮಾಡಿ. ಮೊಬೈಲ್ ಕ್ಯಾಮರಾದಲ್ಲಿ ಅದು ಅತಿಗೆಂಪು  ಬೆಳಕು ಕಂಡುಬಂದರೆ ಅಲ್ಲಿ ಹಿಡನ್‌ ಕ್ಯಾಮರಾ ಇದೆ ಎಂದರ್ಥ.


ಕೆಲವು ಸಂದರ್ಭಗಳಲ್ಲಿ ಫ್ಲ್ಯಾಷ್‌ʼಲೈಟ್ ಅನ್ನು ಬಳಸುವುದರಿಂದ ರಹಸ್ಯ ಕ್ಯಾಮೆರಾಗಳನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ. ಕೊಠಡಿ ಸಂಪೂರ್ಣವಾಗಿ ಕತ್ತಲೆಯಾಗಿರಬೇಕು. ಸೆಲ್ ಫೋನ್‌ʼನಲ್ಲಿ ಬ್ಯಾಟರಿ ಲೈಟ್‌ ಅನ್ನು ಆನ್ ಮಾಡಿ ಕೋಣೆಯ ಸುತ್ತಲೂ ಸರಿಸಿ. ಯಾವುದಾದರೂ ಸಣ್ಣ ನೀಲಿ ಅಥವಾ ನೇರಳೆ ಗ್ಲೋ ಆಗಿ ಕಾಣಿಸಬಹುದು. ಆ ಬೆಳಕು ಮಿನಿ ಕ್ಯಾಮೆರಾ ಲೆನ್ಸ್‌ʼನಿಂದ ಬರುವಂತಹದ್ದಾಗಿರುತ್ತದೆ. ಅದರ ಬಗ್ಗೆ ಜಾಗೃತರಾಗಿರಿ.


ಇದನ್ನೂ ಓದಿ:  ಒಂದು ಬಾರಿ ಈ ಚಟ್ನಿ ತಿಂದರೆ ಸಾಕು ಹೈ ಬ್ಲಡ್ ಶುಗರ್ ಕೂಡ ತಕ್ಷಣ ನಾರ್ಮಲ್ ಆಗಿಬಿಡುತ್ತದೆ! ಒಂದು ತಿಂಗಳವರೆಗೆ ಹೆಚ್ಚಾಗಲ್ಲ ಮಧುಮೇಹ


ಇದಲ್ಲದೆ, ಗೂಗಲ್ ಪ್ಲೇಸ್ಟೋರ್ ಮತ್ತು ಆಪಲ್ ಸ್ಟೋರ್‌ʼನಲ್ಲಿ ಹಲವು ಹಿಡನ್ ಕ್ಯಾಮೆರಾ ಡಿಟೆಕ್ಟರ್ ಆಪ್‌ʼಗಳಿವೆ. ಅವುಗಳು ರಹಸ್ಯ ಕ್ಯಾಮೆರಾಗಳನ್ನು ಸುಲಭವಾಗಿ ಸ್ಕ್ಯಾನ್ ಮಾಡುತ್ತವೆ. ಹಾಗಾಗಿ ಈ ಆಪ್ ಗಳನ್ನು ಡೌನ್ ಲೋಡ್ ಮಾಡಿ ಹಿಡನ್‌ ಕ್ಯಾಮರಾಗಳನ್ನು ಸುಲಭವಾಗಿ ಪತ್ತೆ ಮಾಡುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.