ಬೆಂಗಳೂರು : ಜೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್ (ZEE) ಇಂದು ನಗರದ ಬೆಳ್ಳಂದೂರಿನ ಆರ್ ಎಂಜಿ ಇಕೋ ಸ್ಪೇಸ್ ಟೆಕ್ ಪಾರ್ಕ್ ನಲ್ಲಿ ಸ್ಥಾಪಿಸಿರುವ ಜೀ ತಂತ್ರಜ್ಞಾನ ಮತ್ತು ಸಂಶೋಧನಾ ಕೇಂದ್ರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು. 


COMMERCIAL BREAK
SCROLL TO CONTINUE READING

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯಪಾಲರಾದ ಥಾವರ್ ಚಂದ ಗೆಲ್ಹೋಟ್, ಜೀ ಅಂತಾರಾಷ್ಟ್ರೀಯ ಬ್ರಾಡ್ ಕಾಸ್ಟ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಮಿತ್ ಗೋಯೆಂಕ,  ಜೀ ಟೆಕ್ನಾಲಜಿ ಮತ್ತು ಡೇಟಾ ಅಧ್ಯಕ್ಷ ನಿತಿನ್ ಮಿತ್ತಲ್ ಹೀಗೆ ಇತರರು ಭಾಗವಹಿಸಿದ್ದರು. 


ಇದನ್ನೂ ಓದಿ : ZEE Technology and Innovation Centre : ಜೀ ತಂತ್ರಜ್ಞಾನ ಮತ್ತು ಇನ್ನೋವೇಶನ್ ಕೇಂದ್ರ ಸ್ಥಾಪನೆಗೆ ಅಭಿನಂದನೆ ಸಲ್ಲಿಸಿದ ರಾಜ್ಯಪಾಲರು


ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ದಶಕಗಳಿಂದ ಕರ್ನಾಟಕ ರಾಜ್ಯವು ದೇಶದ ತಂತ್ರಜ್ಞಾನದ ರಾಜಧಾನಿಯಾಗಿ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ ಮತ್ತು ಬೆಂಗಳೂರು ಈಗ ರಾಷ್ಟ್ರದ ಸಿಲಿಕಾನ್ ವ್ಯಾಲಿಯಾಗಿದೆ. ಬೆಂಗಳೂರು ಸೃಷ್ಟಿಸಿದ ಪರಿಸರ ವ್ಯವಸ್ಥೆಯು ಪುನರಾವರ್ತಿಸಲು ಕಷ್ಟಕರವಾಗಿದೆ ಮತ್ತು ಅದನ್ನು ನಗರದ ನಾಗರಿಕರೇ ಹೊರತು ಬೇರೆ ಯಾರೂ ರಚಿಸಿಲ್ಲ. ಜೀ ಸಂಸ್ಥೆಯ ಉಪಕ್ರಮದ ಭಾಗವಾಗಲು ಕರ್ನಾಟಕ ಸರ್ಕಾರವು ಅತ್ಯಂತ ಸಂತೋಷವಾಗಿದೆ ಮತ್ತು ಜೀ ಸ್ಥಾಪಿಸಿದ ತಂತ್ರಜ್ಞಾನ ಮತ್ತು ಸಂಶೋಧನಾ ಕೇಂದ್ರವು ರಾಜ್ಯದ ಬೆಳವಣಿಗೆಯ ಭವಿಷ್ಯವನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ ಎಂದು ನನಗೆ ವಿಶ್ವಾಸವಿದೆ. ಯಾವುದೇ ರಾಜ್ಯದ ಬೆಳವಣಿಗೆ ಮತ್ತು ದೀರ್ಘಾವಧಿಯ ಯಶಸ್ಸಿಗೆ ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಅತ್ಯಗತ್ಯ ಮತ್ತು ಈ ಪ್ರಯಾಣದಲ್ಲಿ ನಾವು ಜೀಯೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಡೆಯುತ್ತೇವೆ ಎಂದು ಹೇಳಿದರು.


ಜೀ ತಂತ್ರಜ್ಞಾನ ಮತ್ತು ಸಂಶೋಧನಾ ಕೇಂದ್ರವನ್ನು ಸುಮಾರು 80,000 ಅಡಿ ವಿಸ್ತಾರವಾದ ಪ್ರದೇಶದಲ್ಲಿ ನಿರ್ಮಿಸಿದೆ. ಈ ಕೇಂದ್ರವು AR, VR ಮತ್ತು NFT ನೇತೃತ್ವದ ವಿತರಣಾ ಮಾದರಿಗಳ ಸಹಾಯದಿಂದ ಕಂಪನಿಗೆ ಮೆಟಾವರ್ಸ್ ನೆಟ್‌ವರ್ಕ್ ಅನ್ನು ನಿರ್ಮಿಸುತ್ತದೆ ಮತ್ತು ಪ್ಲಾಟ್‌ಫಾರ್ಮ್‌ಗಳಾದ್ಯಂತ ಮನರಂಜನೆಗೆ ಸಂಭಂದಿಸಿದಂತೆ ಫ್ಯೂಚರಿಸ್ಟಿಕ್ ಟೆಕ್ ಸ್ಟಾಕ್ ಮೇಲೆ ಕೇಂದ್ರೀಕರಿಸುತ್ತದೆ.


ಇದನ್ನೂ ಓದಿ : ಸಿದ್ದರಾಮಯ್ಯನವರೇ ನನ್ನ ಜೀವನ ತೆರೆದ ಪುಸ್ತಕವಿದ್ದಂತೆ: ಸಚಿವ ಹೆಬ್ಬಾರ್


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.