ಬೆಂಗಳೂರು : ವೆಸ್ಟಿಂಗ್‌ಹೌಸ್ ಕೆಲವು ತಿಂಗಳ ಹಿಂದೆ ಭಾರತದಲ್ಲಿ Pi  ಮತ್ತು Quantum series ಟಿವಿಗಳನ್ನು ಬಿಡುಗಡೆ ಮಾಡಿದೆ.  ಹೊಸ ಬೆಲೆಯೊಂದಿಗೆ, ವೆಸ್ಟಿಂಗ್‌ಹೌಸ್ ಈಗ ಎರಡು ಹೊಸ ಸರಣಿ ಟಿವಿಗಳನ್ನು ಬಿಡುಗಡೆ ಮಾಡಿದೆ. ಅದುವೇ W2 ಸರಣಿ ಟಿವಿ ಮತ್ತು ಕ್ವಾಂಟಮ್ ಸರಣಿ ಟಿವಿ. ಈ ಹೊಸ ಸ್ಮಾರ್ಟ್ ಟಿವಿ ಮಾದರಿಗಳ ವೈಶಿಷ್ಟ್ಯಗಳು, ವಿಶೇಷಣಗಳು ಮತ್ತು ಬೆಲೆಯ ಸಂಪೂರ್ಣ ಮಾಹಿತಿಯನ್ನು ಇಲ್ಲಿದೆ. 


COMMERCIAL BREAK
SCROLL TO CONTINUE READING

ವೆಸ್ಟಿಂಗ್‌ಹೌಸ್ W2 ಸರಣಿ ಟಿವಿಗಳು : 
ವೆಸ್ಟಿಂಗ್‌ಹೌಸ್‌ನ W2 ಸರಣಿಯ ಟಿವಿಗಳು 32-ಇಂಚಿನ (HD), 40-ಇಂಚಿನ (FHD) ಮತ್ತು 43-ಇಂಚಿನ (FHD) ನಂತಹ ಬ ಬೇರೆ ಬೇರೆ ಸ್ಕ್ರೀನ್ ಸೈಜ್ ಆಯ್ಕೆಗಳಲ್ಲಿ ಬರುತ್ತವೆ. ಈ ಮಾದರಿಗಳು 10,499, ರೂ 16,999 ಮತ್ತು  17,999 ರೂಪಾಯಿ ಬೆಲೆಗಳಲ್ಲಿ ಲಭ್ಯವಿದೆ. ಈ ಟಿವಿ ಮಾದರಿಗಳಲ್ಲಿ Realtek ಪ್ರೊಸೆಸರ್ ಮತ್ತು 1 GB RAM ಅನ್ನು ಬಳಸಲಾಗಿದೆ. ಈ ಟಿವಿಗಳು 8 GB  ಇಂಟರ್ನಲ್ ಸ್ಟೋರೇಜ್ ನೊಂದಿಗೆ ಬರುತ್ತದೆ.  ಇದು Android TV 11 ಅನ್ನು ಆಧರಿಸಿವೆ.


ಇದನ್ನೂ ಓದಿ : ಫೇಸ್ ಬುಕ್-ಇನ್ಸ್ಟಾಗ್ರಾಮ್ ಬಳಕೆದಾರರಿಗೆ ಮೇಟಾದಿಂದ ಭಾರಿ ಉಡುಗೊರೆ!


W2 ಸರಣಿ ಟಿವಿಯು ವಾಯ್ಸ್ ಎನೇಬಲ್ ರಿಮೋಟ್ ಕಂಟ್ರೋಲ್ ನೊಂದಿಗೆ ಬರುತ್ತದೆ. ಇದು ಪ್ರೈಮ್ ವಿಡಿಯೋ, Zee5, Sony LIV ಮತ್ತು Voot ನಂತಹ ಪ್ರಮುಖ OTT ಪ್ಲಾಟ್‌ಫಾರ್ಮ್‌ಗಳಿಗಾಗಿ ವಿಶೇಷ ಬಟನ್‌ಗಳನ್ನು ಹೊಂದಿದೆ. ಕನೆಕ್ಟಿವಿಟಿ ವಿಷಯಕ್ಕೆ ಬಂದರೆ 3 HDMI ಪೋರ್ಟ್‌ಗಳು ಮತ್ತು 2 USB ಪೋರ್ಟ್‌ಗಳಂತಹ ಆಯ್ಕೆಗಳು ಇದರಲ್ಲಿ ಲಭ್ಯವಿದೆ. ಸರೌಂಡ್ ಸೌಂಡ್ ತಂತ್ರಜ್ಞಾನದೊಂದಿಗೆ 2 x 36W ಬಾಕ್ಸ್ ಸ್ಪೀಕರ್‌ಗಳನ್ನು ಹೊಂದಿದೆ.


ವೆಸ್ಟಿಂಗ್‌ಹೌಸ್ ಕ್ವಾಂಟಮ್ ಸರಣಿ ಗೂಗಲ್ ಟಿವಿಗಳು :
ವೆಸ್ಟಿಂಗ್‌ಹೌಸ್ ಕ್ವಾಂಟಮ್ ಸರಣಿ ಟಿವಿಗಳು, ಗೂಗಲ್ ಟಿವಿಯೊಂದಿಗೆ, 50 ಮತ್ತು 55-ಇಂಚಿನ ಆಯ್ಕೆಗಳಲ್ಲಿ ಲಭ್ಯವಿದೆ. ಈ ಟಿವಿ HDR10+ ಅನ್ನು ಸಪೋರ್ಟ್ ಮಾಡುತ್ತದೆ. ಅಲ್ಲದೆ 4K ರೆಸಲ್ಯೂಶನ್ ಅನ್ನು ಬೆಂಬಲಿಸುತ್ತದೆ. ಎರಡೂ ಮಾದರಿಗಳ ಬೆಲೆ 27,999 ಮತ್ತು 32,999 ರೂ. 


ಇದನ್ನೂ ಓದಿ : ಮಳೆಗಾಲದಲ್ಲಿ ಫ್ರಿಡ್ಜ್ ವಿಷಯದಲ್ಲಿ ನೀವೂ ಈ ತಪ್ಪುಗಳನ್ನು ಮಾಡ್ತೀರಾ?


ವೆಸ್ಟಿಂಗ್‌ಹೌಸ್ Google TVಗಳ ಕ್ವಾಂಟಮ್ ಸರಣಿಯು MediaTek MT9062 ಪ್ರೊಸೆಸರ್, 2GB RAM ಮತ್ತು 16GB ಇಂಟರ್ನಲ್ ಸ್ಟೋರೇಜ್ ನೊಂದಿಗೆ ಬರುತ್ತದೆ. ಇದು Google TV ಪ್ಲಾಟ್‌ಫಾರ್ಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ವೈ-ಫೈ, ಬ್ಲೂಟೂತ್, 3 HDMI ಪೋರ್ಟ್‌ಗಳು ಮತ್ತು 2 USB ಪೋರ್ಟ್‌ಗಳ ಸಂಪರ್ಕ ವೈಶಿಷ್ಟ್ಯಗಳನ್ನು ನೀಡುತ್ತದೆ. 48W ಸ್ಟಿರಿಯೊ ಸ್ಪೀಕರ್‌ಗಳನ್ನು ಡಾಲ್ಬಿ ಆಡಿಯೊ ಡಿಟಿಎಸ್ ಟ್ರೂಸರೌಂಡ್ ತಂತ್ರಜ್ಞಾನದೊಂದಿಗೆ ಹೊಂದಿದೆ.


ಜುಲೈ 15 ಮತ್ತು ಜುಲೈ 16 ರಂದು ನಡೆಯಲಿರುವ ಅಮೆಜಾನ್ ಇಂಡಿಯಾ ಪ್ರೈಮ್ ಡೇ ಸೇಲ್‌ನಲ್ಲಿ ಎರಡೂ ಸರಣಿಗಳು ಖರೀದಿಗೆ ಲಭ್ಯವಿರುತ್ತವೆ. ಜುಲೈ 14 ರಂದು  ಅರ್ಲಿ ಅಕ್ಸೆಸ್ ಸೇಲ್ ಇರುತ್ತದೆ.


ಇದನ್ನೂ ಓದಿ : Maruti Ertigaವನ್ನು ಮೀರಿಸುತ್ತದೆ ಈ ಅಗ್ಗದ 7 ಸೀಟರ್ ಕಾರು ! ವೈಶಿಷ್ಟ್ಯ ಕೂಡಾ ಅದ್ಭುತ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.