Virtual World - ಇಂಟರ್ನೆಟ್ (Internet) ನಮ್ಮ ಜೀವನವನ್ನು ಸುಲಭಗೊಳಿಸಿದೆ. ಕೋವಿಡ್-19 ನಿರ್ಬಂಧಗಳಿಂದಾಗಿ ಜನರು ತಮ್ಮ ಮನೆಗಳಲ್ಲಿ ಬಂಧಿಯಾಗಿರುವಾಗಲೂ ವರ್ಚುವಲ್ ಸೆಮಿನಾರ್ಗಳ ಮೂಲಕ ತಮ್ಮ ಕಾರ್ಯನಿರ್ವಹಿಸಿದ್ದಾರೆ. ಇಂಟರ್ನೆಟ್ ಜಗತ್ತು ಎಷ್ಟು ಸುಲಭವೋ ಅಷ್ಟೇ ಅಪಾಯಕಾರಿ. ಡಾರ್ಕ್ ವೆಬ್ (Dark Web) ಆ ಅಪಾಯಕಾರಿ ಪ್ರಪಂಚದ ಒಂದು ಭಾಗವಾಗಿದೆ. ಡಾರ್ಕ್ ವೆಬ್ ಒಂದು ನಿಗೂಢ ಪದದಂತೆ ತೋರುತ್ತದೆ. ಅದರ ಹಿಂದಿನ ಸತ್ಯಾಸತ್ಯತೆ ಏನು ತಿಳಿದುಕೊಳ್ಳೋಣ ಬನ್ನಿ.

COMMERCIAL BREAK
SCROLL TO CONTINUE READING

ವರ್ಚುವಲ್ ಪ್ರಪಂಚದ (Virtual World) ವೇಗವಾಗಿ ಹೆಚ್ಚುತ್ತಿರುವ ವ್ಯಾಪ್ತಿಯು ಆನ್‌ಲೈನ್ ವಂಚನೆ ಪ್ರಕರಣಗಳಲ್ಲಿ ಏರಿಕೆಗೆ ಕಾರಣವಾಗಿದೆ. ನಾವು ಬಳಸುವ ಮತ್ತು ನೀವು ಬಳಸುವ ಅಂತರ್ಜಾಲದ ಪ್ರಮಾಣವು ಈ ವರ್ಚುವಲ್ ಪ್ರಪಂಚದ ಶೇಕಡಾ 5 ರಿಂದ 10 ರಷ್ಟು ಮಾತ್ರ. ಇಂಟರ್ನೆಟ್‌ನ ದೊಡ್ಡ ಪ್ರಪಂಚವಿದೆ, ಹೆಚ್ಚಿನ ಭಾಗದಲ್ಲಿ ನಾವು ತಲುಪಲು ಸಾಧ್ಯವಾಗುತ್ತಿಲ್ಲ ಮತ್ತು ಆ ಜಗತ್ತನ್ನು ಡಾರ್ಕ್ ವೆಬ್ ಎಂದು ಕರೆಯಲಾಗುತ್ತದೆ.

ಡಾರ್ಕ್ ವೆಬ್‌ನಲ್ಲಿ ಏನಾಗುತ್ತದೆ?
ಡಾರ್ಕ್ ವೆಬ್ ಎನ್ನುವುದು ನಾವು ಟ್ರ್ಯಾಕ್ ಮಾಡಲು ಸಾಧ್ಯವಾಗದ ಇಂಟರ್ನೆಟ್‌ನ ಭಾಗವಾಗಿದೆ. Google Chrome, Internet Explorer, Firefox ನಂತಹ ಸಾಂಪ್ರದಾಯಿಕ ವೆಬ್ ಬ್ರೌಸರ್‌ಗಳ ಮೂಲಕ ಅವುಗಳನ್ನು ಎಂದಿಗೂ ಹುಡುಕಲಾಗುವುದಿಲ್ಲ. ವಿಶೇಷವಾಗಿ ವಿನ್ಯಾಸಗೊಳಿಸಿದ ವೆಬ್ ಬ್ರೌಸರ್‌ಗಳು ಮತ್ತು ಸರ್ಚ್ ಇಂಜಿನ್‌ಗಳ ಮೂಲಕ ಮಾತ್ರ ಅವುಗಳನ್ನು ಹುಡುಕಬಹುದು. ಡಾರ್ಕ್ ವೆಬ್ ಎಂದರೆ ಡ್ರಗ್ಸ್, ಶಸ್ತ್ರಾಸ್ತ್ರಗಳು, ಭೂಗತ ಜಗತ್ತು, ಹ್ಯಾಕಿಂಗ್ ಮತ್ತು ಕಾನೂನುಬಾಹಿರ ಚಟುವಟಿಕೆಗಳು ನಡೆಯುವ ಸ್ಥಳವಾಗಿದೆ.

ಡಾರ್ಕ್ ವೆಬ್ ಎಂದರೇನು?
'ಡಾರ್ಕ್ ವೆಬ್' ಎಂಬುದು ಇಂಟರ್ನೆಟ್‌ನ ವರ್ಚುವಲ್ ಪ್ರಪಂಚದ ಅಸ್ಪೃಶ್ಯ ಭಾಗವಾಗಿದೆ, ಅದನ್ನು ಇಂಟರ್ನೆಟ್‌ನಲ್ಲಿರುವ ಪ್ರತಿಯೊಬ್ಬರೂ ಪ್ರವೇಶಿಸಲಾಗುವುದಿಲ್ಲ. ಈ ಹಿನ್ನೆಲೆ ಅನೇಕ ಕಾನೂನುಬಾಹಿರ ಚಟುವಟಿಕೆಗಳು ಅಲ್ಲಿ ನಡೆಸಲಾಗುತ್ತದೆ ಮತ್ತು ಅನೇಕ ಕಪ್ಪು ವ್ಯವಹಾರಗಳನ್ನು ಅಲ್ಲಿ ನಡೆಸಲಾಗುತ್ತದೆ. ನಾವು ಬಳಸುವ ವೆಬ್‌ನ ಭಾಗವನ್ನು ಮೇಲ್ಮೈ ವೆಬ್ (Surface Web) ಎಂದು ಕರೆಯಲಾಗುತ್ತದೆ. ಡಾರ್ಕ್ ವೆಬ್ ಮೇಲ್ಮೈ ವೆಬ್‌ಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ಡಾರ್ಕ್ ವೆಬ್‌ನಲ್ಲಿರುವ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ನಿಯಂತ್ರಣವಿಲ್ಲ. ಡಾರ್ಕ್ ವೆಬ್ ಅನ್ನು ಪ್ರವೇಶಿಸಲು, ವಿಶೇಷ ಅನುಮತಿಗಳ ಅಗತ್ಯವಿದೆ. ವಿಶ್ವಾದ್ಯಂತ ನಡೆಯುವ ಅಕ್ರಮ ಮತ್ತು ತಪ್ಪು ವಿಷಯಗಳ ಯೋಜನೆ ಇಲ್ಲಿ ನಡೆಯುತ್ತದೆ ಎಂದು ಹೇಳಲಾಗುತ್ತದೆ.

ಡಾರ್ಕ್ ವೆಬ್ ಪ್ರಪಂಚದ ಸುದ್ದಿಗಳನ್ನು ಹೊರತರುವ ಮಾಹಿತಿದಾರರು ಸಹ ಇದನ್ನು ಬಳಸುತ್ತಾರೆ. ಸರ್ಕಾರಿ-ಕಾರ್ಪೊರೇಟ್ ಹಗರಣಗಳನ್ನು ಬಯಲಿಗೆಳೆಯಲು ತನಿಖಾ ಪತ್ರಕರ್ತರು ಡಾರ್ಕ್ ವೆಬ್ ಅನ್ನು ಬಳಸುತ್ತಾರೆ. ಡಾರ್ಕ್ ವೆಬ್ ಅನ್ನು ಬಳಸುವುದು ಕಾನೂನುಬಾಹಿರವಲ್ಲ. ಯಾರು ಬೇಕಾದರೂ ಕೂಡ ಇದನ್ನು ಪ್ರವೇಶಿಸಬಹುದು, ಆದರೆ ಡಾರ್ಕ್ ವೆಬ್ ಅನ್ನು ಕಾನೂನುಬಾಹಿರ ಉದ್ದೇಶಗಳಿಗಾಗಿ ಬಳಸಬಾರದು.

ಡಾರ್ಕ್ ವೆಬ್ ಅಕ್ರಮ ವ್ಯವಹಾರಗಳ ತಾಣವಾಗಿದೆ
ಲಂಡನ್‌ನ ಕಿಂಗ್ಸ್ ಕಾಲೇಜಿನ ಸಂಶೋಧಕರಾದ ಡೇನಿಯಲ್ ಮೂರ್ ಮತ್ತು ಥಾಮಸ್ ರಿಡ್ ಅವರು 2016 ರಲ್ಲಿ ವರದಿಯೊಂದನ್ನು ಸಿದ್ಧಪಡಿಸಿದ್ದಾರೆ. ಸಂಶೋಧಕರು ಡಾರ್ಕ್ ವೆಬ್‌ನಲ್ಲಿ 5,205 ಲೈವ್ ಸೈಟ್‌ಗಳನ್ನು ನೋಡಿದ್ದಾರೆ. ಈ ಪೈಕಿ 2,723 ವೆಬ್‌ಸೈಟ್‌ಗಳಲ್ಲಿ ಅಕ್ರಮ ನಡೆದಿವೆ. ಡಾರ್ಕ್ ವೆಬ್‌ನಲ್ಲಿ ಪೈರಸಿಯಂತಹ ಅಪರಾಧಗಳು ತುಂಬಾ ಸಾಮಾನ್ಯವಾಗಿದೆ. ಡಾರ್ಕ್ ವೆಬ್‌ಗೆ ಭೇಟಿ ನೀಡುವ ಜನರು ಬಂದೂಕುಗಳು, ಡ್ರಗ್ಸ್, ನಕಲಿ ಕರೆನ್ಸಿಗಳನ್ನು ಖರೀದಿಸುತ್ತಾರೆ ಮತ್ತು ಮಾರಾಟ ಮಾಡುತ್ತಾರೆ.


ಇದನ್ನೂ ಓದಿ-Data Leak: 10 ಕೋಟಿ ಭಾರತೀಯರ Debit/Credit ಕಾರ್ಡ್ ಮಾಹಿತಿ ಸೋರಿಕೆ

ಡಾರ್ಕ್ ವೆಬ್ ಮೂಲಕ, ಯಾರು ಬೇಕಾದರೂ ಕೂಡ ಬೇರೆಯವರ ನೆಟ್‌ಫ್ಲಿಕ್ಸ್ ಖಾತೆ, ಕ್ರೆಡಿಟ್ ಕಾರ್ಡ್ ಸಂಖ್ಯೆಯನ್ನು ಸಹ ಹ್ಯಾಕ್ ಮಾಡಬಹುದು. ಜನರ ಖಾಸಗಿತನಕ್ಕೂ ಧಕ್ಕೆಯಾಗಬಹುದು. ಡಾರ್ಕ್ ವೆಬ್‌ನಲ್ಲಿ ಇಂತಹ ಹಲವು ಸಾಫ್ಟ್‌ವೇರ್‌ಗಳಿದ್ದು, ಅವುಗಳ ಮೂಲಕ ಇತರರ ಕಂಪ್ಯೂಟರ್ ಅನ್ನು ಹ್ಯಾಕ್ ಮಾಡಬಹುದು. 


ಇದನ್ನೂ ಓದಿ-2.9 ಕೋಟಿ ಭಾರತೀಯರ ವೈಯಕ್ತಿಕ ಡೇಟಾ ಸೋರಿಕೆ

ಡಾರ್ಕ್ ವೆಬ್ ಅನ್ನು ಕೆಟ್ಟ ಕಾರ್ಯಗಳಿಗೆ ಮಾತ್ರ ಬಳಸಲಾಗುವುದಿಲ್ಲ
ಡಾರ್ಕ್ ವೆಬ್ ಅನ್ನು ಸಹ ಸದುಪಯೋಗಪಡಿಸಿಕೊಳ್ಳಬಹುದು. ಕೆಲವು ಕಾಣೆಯಾದ ವಸ್ತುಗಳ ಹುಡುಕಾಟವನ್ನು ಕೂಡ ನೀವು ಇಲ್ಲಿ ನಡೆಸಬಹುದು. ದೀರ್ಘಕಾಲದವರೆಗೆ ಮುದ್ರಿಸದ ಪುಸ್ತಕಗಳ ಆನ್‌ಲೈನ್ ಆವೃತ್ತಿಗಳನ್ನು ನೀವು ಇಲ್ಲಿ ಪಡೆಯಬಹುದು. ಮುಖ್ಯ ಸ್ಟ್ರೀಮ್ ಮಾಧ್ಯಮದ ಇಂತಹ ಹಲವು ವರದಿಗಳನ್ನು ತೆಗೆದುಹಾಕಲಾದ ಡಾರ್ಕ್ ವೆಬ್‌ನಲ್ಲಿಯೂ ಓದಬಹುದು. ರಾಜಕೀಯ ವರದಿಗಾರಿಕೆಯ ಅನ್ಟೋಲ್ಡ್ ಟೇಲ್ಸ್ ಕೂಡ ಡಾರ್ಕ್‌ವೆಬ್‌ನಲ್ಲಿ ಕಾಣಬಹುದು. ಆದರೆ, ಅವುಗಳ ಬಳಕೆಯಲ್ಲಿ ತೀವ್ರವಾದ ಎಚ್ಚರಿಕೆ ವಹಿಸುವ ಅವಶ್ಯಕತೆ ಇದೆ.

ಇದನ್ನೂ ಓದಿ-5 ಲಕ್ಷ ಕ್ಕೂ ಅಧಿಕ Zoom ಬಳಕೆದಾರರ ಅಕೌಂಟ್ ಹ್ಯಾಕ್, 10-15 ಪೈಸೆಗೆ ಪಾಸ್ವರ್ಡ್ ಗಳ ಮಾರಾಟ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ