ನವದೆಹಲಿ: ಆಧುನಿಕ ಯುಗದಲ್ಲಿ ಎಲ್ಲವು ಡಿಜಿಟಲ್ ಮಯವಾಗಿದೆ. ಇಂದು ಜನರು ಇಂಟರ್​ನೆಟ್​ನ ಬಳಕೆಯನ್ನು ತಮ್ಮ ಜೀವನದ ಭಾಗವನ್ನಾಗಿಸಿಕೊಂಡಿದ್ದಾರೆ.ಅದರಲ್ಲೂ ಗೂಗಲ್ ಅನ್ನು ಬಳಸದವರೇ ಇಲ್ಲ ಎಂದು ಹೇಳಬಹುದು. 


COMMERCIAL BREAK
SCROLL TO CONTINUE READING

ಜಿ-ಮೇಲ್, ಗೂಗಲ್ ಡ್ರೈವ್, ಗೂಗಲ್​ ಮ್ಯಾಪ್, ಗೂಗಲ್ ಫೋಟೋಸ್ ಅನ್ನು ಬಳಸಲು ಸಾಮಾನ್ಯವಾಗಿ ಒಂದು ಗೂಗಲ್ ಖಾತೆ ತೆರೆಯಲೇಬೇಕಿರುತ್ತದೆ.ಎಲ್ಲಾ ಗೂಗಲ್ ಉತ್ಪನ್ನಗಳಲ್ಲಿ ಸಾಕಷ್ಟು ಡೇಟಾವನ್ನು ಸಂಗ್ರಹ ಮಾಡಿರುತ್ತೇವೆ. ಇವುಗಳನ್ನು ಬಳಸಲು ಪಾಸ್​ವರ್ಡ್ ಕೂಡಾ ಇಟ್ಟಿರುತ್ತೇವೆ.ಒಂದು ವೇಳೆ ನಾವು ಸಾವನ್ನಪ್ಪಿದರೆ ಅದರಲ್ಲಿನ ಮಾಹಿತಿ ಏನಾಗುತ್ತವೆ? ಈ ಕುತೂಹಲ ಎಲ್ಲರನ್ನು ಕಾಡುವುದು ಸಹಜ.ಅದಕ್ಕೆ ಉತ್ತರ ಇಲ್ಲಿದೆ ನೋಡಿ.


ಇದನ್ನೂ ಓದಿ: ರೂಪ ಬದಲಿಸುವ ಮೂಲಕ ವಿನಾಶವನ್ನುಂಟು ಮಾಡುತ್ತಿರುವ ಕೊರೊನಾ ವೈರಸ್!: ಕೇಂದ್ರದ ಸಿದ್ಧತೆ ಹೇಗಿದೆ..?


ಬಳಕೆದಾರರು ಮೃತಪಟ್ಟ ನಂತರ ದೀರ್ಘಕಾಲದವರೆಗೆ ಬಳಸದೇ ಇರುವ ಖಾತೆಗಳನ್ನು ಅಥವಾ ಬದುಕಿದ್ದರೂ ದೀರ್ಘಕಾಲದವರೆಗೆ ಬಳಸದ ಖಾತೆಗಳನ್ನು ಗೂಗಲ್ ನಿಷ್ಕ್ರಿಯಗೊಳಿಸುತ್ತದೆ. ಆದಾಗ್ಯೂ, ನಿಮ್ಮ ಖಾತೆಯನ್ನು ಯಾವಾಗ ನಿಷ್ಕ್ರಿಯ ಎಂದು ಪರಿಗಣಿಸಬೇಕು ಮತ್ತು ನಂತರ ನಿಮ್ಮ ಡೇಟಾ ಏನಾಗಬೇಕು ಎಂಬುದನ್ನು ನಿರ್ಧರಿಸಲು ಕಂಪನಿಯು ನಿಮಗೆ ಅನುಮತಿಸುತ್ತದೆ.


ಗೂಗಲ್ ಉತ್ಪನ್ನಗಳ ಡೇಟಾವನ್ನು ನೋಡಲು ಬೇರೆ ವ್ಯಕ್ತಿಯನ್ನು ನೇಮಿಸುವ ಅವಕಾಶದ ಜೊತೆಗೆ ಗೂಗಲ್​​ ಉತ್ಪನ್ನಗಳಲ್ಲಿನ ಪೂರ್ತಿ ಡೇಟಾವನ್ನು ಡಿಲೀಟ್ ಮಾಡುವ ಅವಕಾಶವನ್ನೂ ಗೂಗಲ್ ಬಳಕೆದಾರನಿಗೆ ನೀಡುತ್ತದೆ. 


ಇದನ್ನೂ ಓದಿ: ಹೊಸ ರೂಪಾಂತರಿ ಕರೋನಾದಿಂದ ಹೆಚ್ಚಿದ ಆತಂಕ , ಪ್ರಧಾನಿ ಮೋದಿ ನೇತೃತ್ವದಲ್ಲಿ ಮಹತ್ವದ ಸಭೆ


ನಿಮ್ಮ Google ಖಾತೆಯ ಡೇಟಾಕ್ಕಾಗಿ ಯೋಜನೆಯನ್ನು ರಚಿಸುವುದು ಮುಖ್ಯವಾಗಿದೆ ಏಕೆಂದರೆ ನೀವು ನಿಧನರಾದ ನಂತರ ಇದನ್ನು ನೋಡಿಕೊಳ್ಳುಲು ಬೇರೆ ವ್ಯಕ್ತಿಯನ್ನು ನೇಮಿಸಬಹುದು. ಅಥವಾ ಇಂತಿಷ್ಟು ದಿನಗಳ ಬಳಿಕ ಖಾತೆಯನ್ನು ನಿಷ್ಕ್ರಿಯಗೊಳಿಸುವಂತೆ ಸೆಟ್ಟಿಂಗ್ಸ್ ಮಾಡಿಕೊಳ್ಳಬಹುದಾಗಿದೆ. 


ಇದಕ್ಕಾಗಿ myaccount.google.com/inactive ವೆಬ್​ಪುಟಕ್ಕೆ ತೆರಳಿ ಬದಲಾವಣೆ ಮಾಡಿಕೊಳ್ಳಬಹುದಾಗಿದೆ. ಈ ಪ್ರಕ್ರಿಯೆಗೆ gmail ಮತ್ತು ಪಾಸ್ವರ್ಡ್​ಗಳನ್ನು ನಮೂದಿಸುವುದು ಕಡ್ಡಾಯವಾಗಿರುತ್ತದೆ.


ಬೇರೊಬ್ಬರೊಂದಿಗೆ ಮಾಹಿತಿ ಹಂಚಿಕೊಳ್ಳಲು ಬಯಸಿದರೆ ಸೆಟ್ಟಿಂಗ್ಸ್ ಮೂಲಕ ಖಾತೆಯನ್ನು ಗರಿಷ್ಠ 18 ತಿಂಗಳವರೆಗೆ ನಿಷ್ಕ್ರಿಯವಾಗಿರಿಸಿಕೊಳ್ಳಬಹುದು.ಅದರ ನಂತರವೂ ಬಳಕೆದಾರ ಗೂಗಲ್ ಖಾತೆಯನ್ನು ಬಳಸದಿದ್ದರೆ, ಯಾರೊಂದಿಗೆ ಡೇಟಾವನ್ನು ಹಂಚಿಕೊಳ್ಳಬಹುದು ಎಂದು ಕೇಳುತ್ತದೆ.ಒಂದು ವೇಳೆ ನಿಮಗೆ ಒಪ್ಪಿಗೆ ಇದ್ದರೆ ಅವರ ಮೇಲ್ ಐಡಿಯನ್ನು ನಮೂದಿಸುವ ಮೂಲಕ  ಸುಮಾರು 10 ಮಂದಿಯೊಂದಿಗೆ ಗೂಗಲ್ ಡ್ರೈವ್, ಗೂಗಲ್​ ಮ್ಯಾಪ್, ಗೂಗಲ್ ಫೋಟೋಸ್ ಮಾಹಿತಿಯನ್ನು ಹಂಚಿಕೊಳ್ಳಬಹುದಾಗಿದೆ.


ಇದನ್ನೂ ಓದಿ: ಕೊರೊನಾದಿಂದ ಮೃತಪಟ್ಟ ಕುಟುಂಬಗಳಿಗೆ 50,000 ರೂ.ಪರಿಹಾರ ಘೋಷಿಸಿದ ಮಹಾರಾಷ್ಟ್ರ ಸರ್ಕಾರ  


​ಮಾಹಿತಿ ಹಂಚಿಕೊಳ್ಳಲು ನೀವು ಬಯಸದಿದ್ದರೆ, ಯಾರ ಇ - ಮೇಲ್ ಐಡಿಯನ್ನೂ ನಮೂದಿಸುವ ಅಗತ್ಯವಿರುವುದಿಲ್ಲ. ಸೆಟ್ಟಿಂಗ್ಸ್​ನಲ್ಲಿ ಡೇಟಾವನ್ನು ಶಾಶ್ವತವಾಗಿ ಅಳಿಸಳು ಆಯ್ಕೆಯನ್ನು ಮಾಡಿಕೊಳ್ಳಬೇಕು. ನೀವು ಖಾತೆಯನ್ನು ನಿಷ್ಕ್ರಿಯಗೊಳಿಸಿದ ಮೂರು ತಿಂಗಳ ಬಳಿಕ ಖಾತೆಗೆ ಸಂಬಂಧಿಸಿದ ಎಲ್ಲಾ ಡೇಟಾವನ್ನು ಅಳಿಸಲಾಗುತ್ತದೆ.


ಹಾಗೊಂದು ವೇಳೆ ಬಳಕೆದಾರ ಇದ್ಯಾವುದೇ ಸೆಟ್ಟಿಂಗ್ ಮಾಡದೇ ಸಾವನ್ನಪ್ಪಿದರೆ ಆಟವಾ ದೀರ್ಘಕಾಲದವರೆಗೆ ಖಾತೆ ಬಳಸದಿದ್ದರೆ ಗೂಗಲ್ ತಾನೇ ಖಾತೆಯನ್ನು ನಿಷ್ಕ್ರಿಯಗೊಳಿಸಿ, ಡೇಟಾವನ್ನು ಅಳಿಸುತ್ತದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.