Helmet tips : ಹೆಲ್ಮೆಟ್ ಜೀವ ರಕ್ಷಾ ಕವಚ ಎಂದು ಸಾಕಷ್ಟು ಜಾಗೃತಿ ಮೂಡಿಸಲಾಗುತ್ತಿದ್ದು, ಹೆಲ್ಮೆಟ್ ಧರಿಸದವರಿಗೆ ದಂಡ ವಿಧಿಸಲಾಗುತ್ತದೆ. ನಿಮ್ಮ ಜೀವದ ಮೇಲೆ ಕಾಳಜಿ ಮತ್ತು ಸಮಾಜದ ಸ್ವಾಸ್ಥ್ಯವನ್ನು ಗೌರವಿಸುವವರು ನೀವಾಗಿದ್ದರೆ ದ್ವಿಚಕ್ರ ವಾಹನ ಓಡಿಸುವಾಗ ಹೆಲ್ಮೆಟ್ ಧರಿಸಿ. ಎಂದಿಗೂ ನಿರ್ಲಕ್ಷಿಸಬೇಡಿ. ಆ ವಿಚಾರ ಆಗಿರಲಿ ಕೆಲವು ಜನ ತಮ್ಮ ಹೆಲ್ಮೆಟ್‌ ಚನ್ನಾಗಿದ್ದಾಗಲೇ ಹೊಸ ಹೆಲ್ಮೆಟ್‌ಗಳನ್ನು ಖರೀದಿಸುತ್ತಾರೆ, ಕೆಲವರು ಪೊಲೀಸರ ಕಾಟಕ್ಕೆಂದು ಒಂದನ್ನೇ ದೀರ್ಘಕಾಲದವರೆಗೆ ಬಳಸುತ್ತಿರುತ್ತಾರೆ. ಅದು ಒಳ್ಳೆಯದಲ್ಲ. ಹಾಗಿದ್ರೆ ಹಳೆಯ ಹೆಲ್ಮೆಟ್ ಅನ್ನು ಯಾವಾಗ ಬದಲಾಯಿಸಬೇಕು ಎಂಬುದನ್ನು ತಿಳಿದುಕೊಳ್ಳಿ.


  1. COMMERCIAL BREAK
    SCROLL TO CONTINUE READING

    ನಿಮ್ಮ ಹೆಲ್ಮೆಟ್‌ ಹಳೆಯದಾಗಿದ್ರೆ, ಅದರ ಗಡುವು ದಿನಾಂಕ ಮುಕ್ತಾಯವಾಗಿದೆಯಾ ಇಲ್ಲವೆ ಎಂದು ಪರಿಶೀಲಿಸುವುದು. ಅಲ್ಲದೆ, ಈಗಿನ ಹೆಲ್ಮೆಟ್‌ಗಳು ಸುರಕ್ಷತಾ ತಂತ್ರಜ್ಞಾನವು ತ್ವರಿತ ಗತಿಯಲ್ಲಿ ವಿಕಸನಗೊಳ್ಳುತ್ತಿದೆ. ಆದ್ದರಿಂದ ಪ್ರತಿ ಮೂರರಿಂದ ಐದು ವರ್ಷಗಳಿಗೊಮ್ಮೆ ಹೆಲ್ಮೆಟ್‌ಗಳು ವಿಭಿನ್ನ ಸುರಕ್ಷತೆ ಮತ್ತು ಸೌಕರ್ಯದ ವೈಶಿಷ್ಟ್ಯಗಳೊಂದಿಗೆ ಬರಬಹುದು. ನಿಮ್ಮ ಹೆಲ್ಮೆಟ್ ಅದಕ್ಕಿಂತ ಹಳೆಯದಾಗಿದ್ದರೆ, ಹೊಸ ಅಪ್‌ಡೇಟ್‌ಗಳಿಲ್ಲದಿದ್ದರೆ ತಕ್ಷಣ ಹೆಲ್ಮೆಟ್ ಅನ್ನು ಬದಲಾಯಿಸಿ.

  2. ಹೆಲ್ಮೆಟ್‌ ಬಳಕೆ ಮಾಡುವಾಗ ಲೈನಿಂಗ್ ಮತ್ತು ಪ್ಯಾಡಿಂಗ್‌ ಸವೆತದಿಂದ ಪುಡಿಯಂತ ವಸ್ತು ಬಿದ್ದು ಕಣ್ಣಿಗೆ ಹಾನಿಗೆ ಕಾರಣವಾಗುತ್ತದೆ. ಸ್ವಲ್ಪ ಸಮಯದ ಅವಧಿಯಲ್ಲಿ ಹೆಲ್ಮೆಟ್‌ನ ಒಳಭಾಗದ ಮೇಲ್ಮೈ ಸಿಪ್ಪೆ ಸುಲಿಯಬಹುದು ಅಥವಾ ಕೆಡಬಹುದು. ನೀವು ಈ ರೀತಿ ಹಾನಿಗೊಳಗಾದ ಹೆಲ್ಮೆಟ್ ಅನ್ನು ಬಳಸಿದಾಗ, ಅದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬಿರುತ್ತದೆ. ಕಿವಿ, ಮೂಗೂ ಅದರ ಪೌಡರ್‌ನಿಂದ ಸಮಸ್ಯೆಗಳುಂಟಾಗುತ್ತವೆ. ಕೂಡಲೇ ಅದನ್ನು ಬದಲಾಯಿಸಿ ಹೊಸದನ್ನು ಖರೀದಿಸಿ.

  3. ನೀವು ಹಲವಾರು ಬಾರಿ ಹೆಲ್ಮೆಟ್ ಧರಿಸಿ ಕೆಳಗೆ ಬಿದ್ದಿದ್ದರೆ ಅಥವಾ ಹೆಲ್ಮೆಟ್ ಅಪಘಾತಕ್ಕೀಡಾಗಿದ್ದರೆ, ಹೆಲ್ಮೆಟ್‌ನ ಸುರಕ್ಷತಾ ವೈಶಿಷ್ಟ್ಯಗಳು ಹದಗೆಡುವ ಸಾಧ್ಯತೆ ಸ್ವಲ್ಪ ಹೆಚ್ಚು. ಆದ್ದರಿಂದ ನಿಮ್ಮ ಹೆಲ್ಮೆಟ್‌ನ ಹೊರಭಾಗದಲ್ಲಿ ಯಾವುದೇ ಸವೆತ ಮತ್ತು ಗೀರುಗಳಿದ್ದರೆ ಗಮನಿಸಿ. ಅದಕ್ಕೆ ಹಾನಿಯಾಗಿದ್ದರೆ ಹೆಲ್ಮೆಟ್ ಬದಲಾಯಿಸಲು ಇದು ಸೂಕ್ತ ಸಮಯ ಎಂದು ತಿಳಿದುಕೊಳ್ಳುತ್ತೀರಿ.

  4. ಭಾರತದಂತಹ ಉಷ್ಣವಲಯದ ದೇಶಗಳಲ್ಲಿ ವಾಸಿಸುವ ಜನರು ಹೊರಾಂಗಣದಲ್ಲಿ ಪ್ರಯಾಣಿಸುವಾಗ ಹೆಚ್ಚು ಬೆವರುತ್ತಾರೆ. ಹೆಲ್ಮೆಟ್ ಹಾಕಿಕೊಂಡು ದ್ವಿಚಕ್ರ ವಾಹನ ಓಡಿಸುವವರು ತುಸು ಹೆಚ್ಚೇ ಬೆವರುತ್ತಾರೆ. ಸಾಮಾನ್ಯವಾಗಿ ನಿಮ್ಮ ಬೆವರು ಹೆಲ್ಮೆಟ್‌ನ ಮೃದುವಾದ ಹೈಪೋಲಾರ್ಜನಿಕ್ ಲೈನಿಂಗ್ ಮತ್ತು ಪ್ಯಾಡಿಂಗ್‌ನಿಂದ ಹೀರಲ್ಪಡುತ್ತದೆ. ಅದ್ದರಿಂದ ಹೆಲ್ಮೆಟ್ ಅನ್ನು ಆರು ತಿಂಗಳಿಗೊಮ್ಮೆ ಚೆನ್ನಾಗಿ ತೊಳೆಯುವುದು ಉತ್ತಮ. ಏನೇ ಮಾಡಿದರೂ ಹೆಲ್ಮೆಟ್ ವಾಸನೆ ಹೋಗದಿದ್ದರೆ ಹೊಸ ಹೆಲ್ಮೆಟ್ ಖರೀದಿಸಿ.

  5. ರಸ್ತೆಯಲ್ಲಿ ವಾಹನ ಚಲಾಯಿಸುವಾಗ ನೀವು ಧರಿಸಬಹುದಾದ ಹೆಲ್ಮೆಟ್ ಗಾಳಿಗೆ ವೇಗವಾಗಿ ತೂಗಾಡುತ್ತಿದ್ದರೆ ಅದು ಒಳ್ಳೆಯದಲ್ಲ. ಇತ್ತೀಚಿನ ದಿನಗಳಲ್ಲಿ ಲಭ್ಯವಿರುವ ಹೆಲ್ಮೆಟ್‌ಗಳು ಏರೋಡೈನಾಮಿಕ್ ವಿನ್ಯಾಸದೊಂದಿಗೆ ಬಂದಿದ್ದು, ಎಷ್ಟೇ ಗಾಳಿ ಬೀಸಿದರೂ ಅದು ಸ್ಥಿರವಾಗಿರುತ್ತದೆ. ಇದನ್ನು ಧರಿಸುವುದರಿಂದ ನಿಮ್ಮ ಕತ್ತಿನ ಸ್ನಾಯುಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಅಪಘಾತದ ಸಂದರ್ಭದಲ್ಲಿ ಹೆಲ್ಮೆಟ್ ಹಾರಿಹೋಗುವುದನ್ನು ತಡೆಯುತ್ತದೆ. ಆದ್ದರಿಂದ ಈ ವೈಶಿಷ್ಟ್ಯ-ಸಮೃದ್ಧ ಹೆಲ್ಮೆಟ್‌ಗಳನ್ನು ಬಳಸುವುದರಿಂದ ರಕ್ಷಣೆ ನೀಡುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.