ಏನಿದು TruthGPT? ಇದಕ್ಕೆ ಚಾಲನೆ ನೀಡುವುದಾಗಿ ಎಲೋನ್ ಮಾಸ್ಕ್ ಹೇಳಿದ್ದೇಕೆ?
ಈಗಾಗಲೇ ಟ್ವಿಟ್ಟರ್ ಖರೀದಿಸುವ ಮೂಲಕ ಸಾಕಷ್ಟು ಸುದ್ದಿಯಲ್ಲಿರುವ ಬಿಲಿಯನೇರ್ ಎಲೋನ್ ಮಸ್ಕ್ ಅವರು ಕೃತಕ ಬುದ್ಧಿಮತ್ತೆಯನ್ನು ಪ್ರಾರಂಭಿಸುವುದಾಗಿ ಹೇಳಿದ್ದಾರೆ, ಇದಕ್ಕೆ ಅವರು `TruthGPT` ಎಂದು ಹೆಸರಿಟ್ಟಿದ್ದಾರೆ.ಆ ಮೂಲಕ ಅವರು OpenAI ನ ಜನಪ್ರಿಯ ಚಾಟ್‌ಬಾಟ್ ChatGPT ಗೆ ನೇರ ಸವಾಲನ್ನು ಒಡ್ಡಿದ್ದಾರೆ.
ನ್ಯೂಯಾರ್ಕ್: ಈಗಾಗಲೇ ಟ್ವಿಟ್ಟರ್ ಖರೀದಿಸುವ ಮೂಲಕ ಸಾಕಷ್ಟು ಸುದ್ದಿಯಲ್ಲಿರುವ ಬಿಲಿಯನೇರ್ ಎಲೋನ್ ಮಸ್ಕ್ ಅವರು ಕೃತಕ ಬುದ್ಧಿಮತ್ತೆಯನ್ನು ಪ್ರಾರಂಭಿಸುವುದಾಗಿ ಹೇಳಿದ್ದಾರೆ, ಇದಕ್ಕೆ ಅವರು "TruthGPT" ಎಂದು ಹೆಸರಿಟ್ಟಿದ್ದಾರೆ.ಆ ಮೂಲಕ ಅವರು OpenAI ನ ಜನಪ್ರಿಯ ಚಾಟ್‌ಬಾಟ್ ChatGPT ಗೆ ನೇರ ಸವಾಲನ್ನು ಒಡ್ಡಿದ್ದಾರೆ.
ಈ ಕುರಿತಾಗಿ ಅವರು FOX ನ್ಯೂಸ್ ಚಾನೆಲ್‌ನ ಟಕರ್ ಕಾರ್ಲ್ಸನ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಾ "ನಾನು 'TruthGPT' ಎಂದು ಕರೆಯುವ ಯಾವುದನ್ನಾದರೂ ಪ್ರಾರಂಭಿಸಲಿದ್ದೇನೆ ಅಥವಾ ಬ್ರಹ್ಮಾಂಡದ ಸ್ವರೂಪವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವ ಗರಿಷ್ಠ ಸತ್ಯ-ಶೋಧಕ AI ಇದಾಗಲಿದೆ " ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಗಾಗಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಸೀಟು ಮೀಸಲಿಟ್ಟ ಕಾಂಗ್ರೆಸ್...!
"ಮತ್ತು ಇದು ಸುರಕ್ಷತೆಗೆ ಉತ್ತಮ ಮಾರ್ಗವಾಗಿದೆ ಎಂದು ನಾನು ಭಾವಿಸುತ್ತೇನೆ, ಇದು ನಿಜ ಅರ್ಥದಲ್ಲಿ ಬ್ರಹ್ಮಾಂಡವನ್ನು ಅರ್ಥಮಾಡಿಕೊಳ್ಳುವ ಬಗ್ಗೆ ಕಾಳಜಿ ವಹಿಸುವ AI ಆಗಲಿದೆ, ನಾವು ವಿಶ್ವದ ಆಸಕ್ತಿದಾಯಕ ಭಾಗವಾಗಿರುವುದರಿಂದ ಮಾನವನ್ನು ಇದು ನಾಶಮಾಡುವುದಿಲ್ಲ" ಎಂದು ಅವರು ಹೇಳಿದರು.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.