ಮೊಬೈಲ್ ಒಳಗಡೆ ಮಳೆ ನೀರು ಹೋದರೆ ತಕ್ಷಣಕ್ಕೆ ಏನು ಮಾಡಬೇಕು?
Smartphone Hacks: ಮಳೆಗಾಲದಲ್ಲಿ ಸ್ಮಾರ್ಟ್‌ಫೋನ್ ಬಳಕೆ ಸ್ವಲ್ಪ ಕಷ್ಟಸಾಧ್ಯದ ಕೆಲಸವೇ ಹೌದು, ಅದರಲ್ಲೂ ವಿಶೇಷವಾಗಿ ಕೆಲಸದ ನಿಮಿತ್ತ ಹೊರಗಡೆ ಇರುವಾಗ. ಹೀಗಾಗಿ ಸ್ಮಾರ್ಟ್‌ಫೋನ್ ಅನ್ನು ಮಳೆ ನೀರಿನಿಂದ ರಕ್ಷಿಸಲು ಮತ್ತು ಒಳಗೆ ಸೇರಿಕೊಂಡಿರುವ ನೀರನ್ನು ಕ್ಷಣಾರ್ಧದಲ್ಲಿ ಹೇಗೆ ಹೊರತೆಗೆಯಬೇಕು ಎಂಬುದರ ವಿಧಾನವನ್ನು ಹೇಳಲಿದ್ದೇವೆ. ಇದಕ್ಕಾಗಿ ನೀವು ಮೆಕ್ಯಾನಿಕ್ ಅಂಗಡಿಗೆ ಭೇಟಿ ನೀಡುವ ಅವಶ್ಯಕತೆ ಇಲ್ಲ. Technology News In Kannada
ಬೆಂಗಳೂರು: ಸಾಮಾನ್ಯವಾಗಿ ಮಳೆಗಾಲದಲ್ಲಿ ಹೊರಗೆ ಹೋಗುವ ವೇಳೆ, ಮಳೆ ಯಾವಾಗ ಬರುತ್ತದೆ ಎಂಬುದನ್ನು ಊಹಿಸುವುದು ಕಷ್ಟ. ಏಕೆಂದರೆ, ಮಳೆಗಾಲದಲ್ಲಿ ಯಾವುದೇ ಸಮಯದಲ್ಲಿ ಮಳೆ ಬರಬಹುದು ಮತ್ತು ಇಂತಹ ಪರಿಸ್ಥಿತಿಯಲ್ಲಿ ನೀವು ಕಾಳಜಿ ವಹಿಸದಿದ್ದರೆ, ನಿಮ್ಮ ಸ್ಮಾರ್ಟ್‌ಫೋನ್‌ನ ಸೂಕ್ಷ್ಮ ಭಾಗಗಳಿಗೆ ನೀರು ಯಾವಾಗ ಪ್ರವೇಶಿಸುತ್ತದೆ ಎಂಬುದು ನಿಮಗೆ ಗೊತ್ತಾಗುವುದಿಲ್ಲ. ಮಳೆಯ ಸಂಪರ್ಕದಲ್ಲಿರುವ ಕಾರಣ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿಯೂ ಕೂಡ ನೀರು ಸೇರಿಕೊಂಡಿದ್ದರೆ, ನಿಮ್ಮ ಸ್ಮಾರ್ಟ್‌ಫೋನ್‌ನಿಂದ ಮಳೆಯ ನೀರನ್ನು ಕೆಲವೇ ನಿಮಿಷಗಳಲ್ಲಿ ಹೇಗೆ ಹೊರಹಾಕಬಹುದು ಎಂಬುದನ್ನು ಹೇಳಿಕೊಡಲಿದ್ದೇವೆ. ಇದಕ್ಕಾಗಿ ನೀವು ಮೆಕ್ಯಾನಿಕ್ ಅಂಗಡಿಗೆ ಹೋಗುವ ಅವಶ್ಯಕತೆ ಇಲ್ಲ. Technology News In Kannada
ಈ ವಿಧಾನಗಳು ತುಂಬಾ ಪರಿಣಾಮಕಾರಿಯಾಗಿವೆ
>> ಸ್ಮಾರ್ಟ್‌ಫೋನ್‌ಗೆ ಸ್ವಲ್ಪ ನೀರು ಹೋಗಿದ್ದರೆ, ನೀವು ಅದನ್ನು ಸ್ವಲ್ಪ ಸಮಯದವರೆಗೆ ಹವಾನಿಯಂತ್ರಣ ಕೊಠಡಿಯಲ್ಲಿ ಇಡಬಹುದು, ಏರ್ ಕಂಡಿಷನರ್ ಕೋಣೆ ತೇವಾಂಶವನ್ನು ಎಳೆದುಕೊಳ್ಳುತ್ತದೆ ಮತ್ತು ಸ್ಮಾರ್ಟ್‌ಫೋನ್‌ಗೆ ಹೋದ ನೀರು ಕೆಲವೇ ನಿಮಿಷಗಳಲ್ಲಿ ಹೊರಹೋಗುತ್ತದೆ.
>> ಬಹುಶಃ ನಿಮ್ಮಲ್ಲಿ ಕೆಲವರಿಗೆ ಅಕ್ಕಿಯ ಬಳಕೆಯ ಬಗ್ಗೆ ತಿಳಿದಿರಬೇಕು. ಸ್ಮಾರ್ಟ್‌ಫೋನ್‌ನಲ್ಲಿರುವ ನೀರು ಹೋದಾಗ ನೀವು ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಅಕ್ಕಿ ತುಂಬಿದ ಜಾರ್‌ನಲ್ಲಿ ಸುಮಾರು ಒಂದು ದಿನ ಇಟ್ಟು ನಂತರ ಅದನ್ನು ಬಳಸಬೇಕು. ಈ ಟ್ರಿಕ್‌ನಿಂದ ಸ್ಮಾರ್ಟ್‌ಫೋನ್‌ಗೆ ಹೋಗಿರುವ ನೀರು ಹೊರಬರುತ್ತದೆ.
>> ನಿಮ್ಮ ಸ್ಮಾರ್ಟ್‌ಫೋನ್ ಒಳಗೆ ನೀರು ಹೋಗಿದ್ದರೆ, ನೀವು ಪ್ಲೇ ಸ್ಟೋರ್‌ನಿಂದ ಬ್ಲೋವರ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು, ಈ ಅಪ್ಲಿಕೇಶನ್ ಬಳಸಿದಾಗ, ಸ್ಮಾರ್ಟ್‌ಫೋನ್‌ನಿಂದ ಜೋರಾಗಿ ಸದ್ದು ಬರುತ್ತದೆ ಮತ್ತು ಸ್ಪೀಕರ್‌ಗೆ ಹೋದ ನೀರು ಸ್ವಯಂಚಾಲಿತವಾಗಿ ಹೊರಬರುತ್ತದೆ. ಈ ವಿಧಾನದ ಬಗ್ಗೆ ಬಹುತೇಕ ಜನರಿಗೆ ತಿಳಿದಿಲ್ಲ. ಈ ವಿಧಾನದ ಬಗ್ಗೆ ನಿಮಗೆ ಹೆಚ್ಚು ತಿಳಿದಿಲ್ಲದಿದ್ದರೆ, ಸ್ಮಾರ್ಟ್‌ಫೋನ್‌ಗೆ ಸೇರಿಕೊಂಡಾಗ ನೀವು ಈ ಟ್ರಿಕ್ ಅನ್ನು ಬಳಸಬಹುದು ಮತ್ತು ನಿಮ್ಮ ಸ್ಮಾರ್ಟ್‌ಫೋನ್ ಅನ್ನು ನೀರಿನಿಂದಾಗುವ ಹಾನಿಯಿಂದ ರಕ್ಷಿಸಬಹುದು.
ಸ್ಮಾರ್ಟ್ ಫೋನ್ ಅನ್ನು ಮಳೆಯಿಂದ ರಕ್ಷಿಸುವುದು ಹೇಗೆ?
>> ಜಿಪ್ ಲಾಕ್ ಕವರ್ ಬಳಸಿ ನೀವು ಸ್ಮಾರ್ಟ್‌ಫೋನ್ ಅನ್ನು ಮಳೆ ನೀರಿನಿಂದ ರಕ್ಷಿಸಬಹುದು.
>> ಸ್ಮಾರ್ಟ್‌ಫೋನ್‌ಗೆ ವಿಶೇಷ ಲ್ಯಾಮಿನೇಷನ್ ಮಾಡಿಸುವ ಮೂಲಕ ನೀವು ಅದನ್ನು ಜಲನಿರೋಧಕವಾಗಿರಿಸಬಹುದು.
>> ಇತ್ತೀಚಿನ ದಿನಗಳಲ್ಲಿ ಗ್ಲಾಸ್ ಕವರ್‌ಗಳು ಮಾರುಕಟ್ಟೆಯಲ್ಲಿ ಸಾಕಷ್ಟು ಟ್ರೆಂಡಿಂಗ್ ಆಗಿದ್ದು, ಅವು ಸ್ಮಾರ್ಟ್‌ಫೋನ್ ಅನ್ನು ಮಳೆ ನೀರಿನಿಂದ ರಕ್ಷಿಸುತ್ತವೆ.
ಇದನ್ನೂ ಓದಿ-ಭಾರತದಲ್ಲಿ ಬಿಡುಗಡೆಯಾಗಿವೆ ಈ ಎರಡು ಜಬರ್ದಸ್ತ್ ಬೈಕ್ ಗಳು, ಬೆಲೆ ಕೇವಲ ಇಷ್ಟೇ, ಇಲ್ಲಿವೆ ವೈಶಿಷ್ಟ್ಯಗಳು!
>> ಸಿಲಿಕಾನ್ ಕವರ್‌ಗಳು ಕೂಡ ಸ್ಮಾರ್ಟ್‌ಫೋನ್‌ನ ಸೂಕ್ಷ್ಮ ಭಾಗಗಳನ್ನು ನೀರಿನಿಂದ ರಕ್ಷಿಸುವಲ್ಲಿ ಪರಿಣಾಮಕಾರಿಯಾಗಿರುತ್ತವೆ ಮತ್ತು ಇವು ಅಗ್ಗದ ದರದಲ್ಲಿಯೂ ಕೂಡ ಸಿಗುತ್ತವೆ.
ಇದನ್ನೂ ಓದಿ-Royal Enfield 350 ಪ್ರಿಯರಿಗೆ ಹಬ್ಬದ ಉಡುಗೊರೆ ನೀಡಿದೆ ಕಂಪನಿ!
>> ವಾಟರ್‌ಪ್ರೂಫ್ ಬ್ಯಾಗ್‌ಗಳು ಕೂಡ ಮಾರುಕಟ್ಟೆಗೆ ಬರುತ್ತಿವೆ. ಇವು ಮಾರ್ನಿಂಗ್ ವಾಕ್ ಅಥವಾ ಇವಿನಿಂಗ್ ವಾಕ್ ಸಮಯದಲ್ಲಿ ಸ್ಮಾರ್ಟ್‌ಫೋನ್ ಅನ್ನು ನೀರಿನಿಂದ ಸುರಕ್ಷಿತವಾಗಿರಿಸುತ್ತವೆ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ