WhatsApp ಬಳಕೆದಾರರಿಗೊಂದು ಶಾಕಿಂಗ್ ನ್ಯೂಸ್, 19 ಲಕ್ಷ ಭಾರತೀಯರ ಖಾತೆ ಮೇಲೆ ನಿಷೇಧ!
WhatsApp ಮೇ 2022 ರಲ್ಲಿ 19 ಲಕ್ಷಕ್ಕೂ ಅಧಿಕ ಬಳಕೆದಾರರ ಖಾತೆಯನ್ನು ನಿರ್ಬಂಧಿಸಿದೆ. ಇದಕ್ಕೂ ಮೊದಲು ಕೂಡ ಕಂಪನಿ ಲಕ್ಷಾಂತರ ಖಾತೆಗಳನ್ನು ಬ್ಯಾನ್ ಮಾಡಿದೆ. ಕಾರಣ ಏನು ತಿಳಿದುಕೊಳ್ಳೋಣ ಬನ್ನಿ
WhatsApp Ban: ಹೊಸ IT ನಿಯಮ, 2021 ರ ಅಡಿಯಲ್ಲಿ WhatsApp ತನ್ನ ಮಾಸಿಕ ವರದಿಯನ್ನು ಪ್ರಸ್ತುತಪಡಿಸಿದೆ. ಇದರಲ್ಲಿ ಮೇ 2022 ರಲ್ಲಿ ಕಂಪನಿಯು ಭಾರತದಲ್ಲಿ 19 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ನಿರ್ಬಂಧಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಮೇ ತಿಂಗಳಲ್ಲಿ ಮಾತ್ರವಲ್ಲದೆ ಈ ತ್ವರಿತ ಸಂದೇಶ ಕಳುಹಿಸುವ ಅಪ್ಲಿಕೇಶನ್ ಏಪ್ರಿಲ್‌ನಲ್ಲಿ ಭಾರತದಲ್ಲಿ 16.6 ಲಕ್ಷ ಖಾತೆಗಳನ್ನು ನಿರ್ಬಂಧಿಸಿರುವುದಾಗಿ ಹೇಳಿದೆ. ಇತ್ತೀಚಿನ ವರದಿಯಲ್ಲಿ, ಕಂಪನಿಯು ಮೇ 1 ಮತ್ತು ಮೇ 31 ರ ನಡುವೆ 19 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ನಿಷೇಧಿಸಿದೆ ಎಂದು ಬಹಿರಂಗಪಡಿಸಿದೆ. ಈ ಕುರಿತು ವಿಸ್ತ್ರತ ಮಾಹಿತಿ ತಿಳಿದುಕೊಳ್ಳೋಣ ಬನ್ನಿ,
ಹಲವು ಖಾತೆಗಳನ್ನು ಬ್ಯಾನ್ ಮಾಡಿದ ವಾಟ್ಸಾಪ್
ಜನಪ್ರಿಯ ಮೆಟಾ-ಮಾಲೀಕತ್ವದ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಮೇ 1 ಮತ್ತು ಮೇ 31 ರ ನಡುವೆ ಒಟ್ಟು 303 ನಿಷೇಧದ ವಿನಂತಿಗಳನ್ನು ಸ್ವೀಕರಿಸಲಾಗಿದೆ ಎಂದು ಹೇಳಿಕೊಂಡಿದೆ, ಇದರಲ್ಲಿ ಒಟ್ಟು 23 ವಿನಂತಿಗಳ ಕುರಿತು ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿಕೊಂಡಿದೆ. ಇದಲ್ಲದೆ, ಕಂಪನಿಯು ಒಟ್ಟು 149 ಖಾತೆ ಬೆಂಬಲ ವಿನಂತಿಗಳನ್ನೂ ಕೂಡ ಸ್ವೀಕರಿಸಲಾಗಿದ್ದು, ಅವುಗಳಲ್ಲಿ 34 ಉತ್ಪನ್ನ ಸುರಕ್ಷತೆ ವಿನಂತಿ ಮತ್ತು 13 ಸುರಕ್ಷತಾ ವಿನಂತಿಗಿವೆ ಎಂದು ಹೇಳಿಕೊಂಡಿದೆ.
ಈ ಯಾವುದೇ ವಿನಂತಿಗಳ ವಿರುದ್ಧ ಕಂಪನಿಯು ಯಾವುದೇ ಕ್ರಮ ಕೈಗೊಂಡಿಲ್ಲ. ಒಟ್ಟಾರೆಯಾಗಿ, ಮೇ 2022 ತಿಂಗಳಿನಲ್ಲಿ WhatsApp 528 ವಿನಂತಿಗಳನ್ನು ಸ್ವೀಕರಿಸಿದೆ. ಈ ಪೈಕಿ 23 ವಿನಂತಿಗಳನ್ನು ಪರಿಗಣಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿಕೊಂಡಿದೆ. ಈ ಕ್ರಮದ ಭಾಗವಾಗಿ ವೇದಿಕೆಯು 19,10,000 ಖಾತೆಗಳನ್ನು ನಿಷೇಧಿಸಿದೆ. ಹೊಸ ಐಟಿ ನಿಯಮವನ್ನು ಅನುಸರಿಸಿ, ಕಂಪನಿಯು ಈ ಖಾತೆಗಳನ್ನು ನಿಷೇಧಿಸಿದೆ
ಏಪ್ರಿಲ್ ನಲ್ಲಿಯೂ ಕೂಡ ಹಲವು ಖಾತೆಗಳನ್ನು ಬ್ಯಾನ್ ಮಾಡಲಾಗಿದೆ
ಇದೇ ವೇಳೆ ಏಪ್ರಿಲ್‌ನಲ್ಲಿ, ಕಂಪನಿಯು ಒಟ್ಟು 844 ವಿನಂತಿಗಳನ್ನು ಸ್ವೀಕರಿಸಿದ್ದು, ಅವುಗಳಲ್ಲಿ 123 ವಿನಂತಿಗಳನ್ನು ಪರಿಗಣಿಸಿ ಅವುಗಳ ವಿರುದ್ಧ ಕ್ರಮ ಕೈಗೊಂಡಿದೆ. ಈ ವಿನಂತಿಗಳು ಕೂಡ ಹೊಸ ಐಟಿ ನಿಯಮಗಳು, 2021 ರ ಭಾಗವಾಗಿವೆ. ಹೊಸ ನೀತಿಯ ಅಡಿಯಲ್ಲಿ, ಐದು ಮಿಲಿಯನ್‌ಗಿಂತಲೂ ಹೆಚ್ಚು ಚಂದಾದಾರರನ್ನು ಹೊಂದಿರುವ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು ಭಾರತದಲ್ಲಿ ಮಾಸಿಕ ಅನುಸರಣಾ ವರದಿಗಳನ್ನು ಪ್ರಕಟಿಸುವ ಅನಿವಾರ್ಯತೆ ಇದೆ.
ಮೇ ತಿಂಗಳಲ್ಲಿ ಮಾತ್ರವಲ್ಲದೆ ಏಪ್ರಿಲ್‌ನಲ್ಲಿಯೂ ಕಂಪನಿಯು ಹಲವು ಖಾತೆಗಳನ್ನು ನಿಷೇಧಿಸಿದೆ. ಏಪ್ರಿಲ್ 1, 2022 ಮತ್ತು ಏಪ್ರಿಲ್ 30, 2022 ರ ನಡುವೆ ಭಾರತದಲ್ಲಿ ಒಟ್ಟು 16,66,000 ಖಾತೆಗಳನ್ನು WhatsApp ನಿಷೇಧಿಸಿದೆ. ಇದೇ ಅವಧಿಯಲ್ಲಿ ಕಂಪನಿಯು ಒಟ್ಟು 670 ನಿಷೇಧದ ಕೋರಿಕೆಗಳನ್ನು ಸ್ವೀಕರಿಸಿತ್ತು. ಈ ಪೈಕಿ 122 ವರದಿಗಳ ಮೇಲೆ ಕ್ರಮ ಕೈಗೊಂಡಿರುವುದಾಗಿ ಕಂಪನಿ ಹೇಳಿಕೊಂಡಿದೆ.
WhatsApp 90 ಖಾತೆ ಬೆಂಬಲ ವಿನಂತಿಗಳು, 34 ಉತ್ಪನ್ನ ಬೆಂಬಲ ವಿನಂತಿಗಳು ಮತ್ತು 13 ಸುರಕ್ಷತೆ ವಿನಂತಿಗಳನ್ನು ಸ್ವೀಕರಿಸಿದೆ. ಈ ಯಾವುದೇ ವಿನಂತಿಗಳನ್ನು ಪ್ರಕ್ರಿಯೆಗೊಳಿಸಲಾಗಿಲ್ಲ. ಈ ವರ್ಷದ ಏಪ್ರಿಲ್ ತಿಂಗಳಲ್ಲಿ ಕಂಪನಿಯು ಒಟ್ಟು 844 ವಿನಂತಿಗಳನ್ನು ಸ್ವೀಕರಿಸಲಾಗಿದ್ದು, ಅವುಗಳಲ್ಲಿ ಒಟ್ಟು 123 ವಿನಂತಿಗಳನ್ನು ಮಾತ್ರ ಪ್ರಕ್ರಿಯೆಗೊಳಿಸಿದೆ.
ಇದನ್ನೂ ಓದಿ-Online Job ಹುಡುಕುವ ವೇಳೆ ಇರಲಿ ಎಚ್ಚರ.. ! ಖಾತೆಗೆ ಬೀಳಬಹುದು ಕನ್ನ
ಅದೇ ರೀತಿ ಮಾರ್ಚ್ 1 ರಿಂದ ಮಾರ್ಚ್ 31 ರ ನಡುವೆ ಭಾರತದಲ್ಲಿ ಒಟ್ಟು 18,05,000 ಖಾತೆಗಳನ್ನು WhatsApp ನಿಷೇಧಿಸಿತ್ತು.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.