WhatsApp ನ ಈ ಅದ್ಭುತ ವೈಶಿಷ್ಟ್ಯ ಶೀಘ್ರದಲ್ಲಿಯೇ ಬಿಡುಗಡೆ, ಬಳಕೆದಾರರಿಗೇನು ಲಾಭ?
Whatsapp New Feature: ಮೆಟಾ ಮಾಲೀಕತ್ವದ ಮೆಸೇಜಿಂಗ್ ಆಪ್ ಆಗಿರುವ ವಾಟ್ಸ್ ಆಪ್, ಶೀಘ್ರದಲ್ಲಿಯೇ ತನ್ನ ಬಳಕೆದಾರರಿಗೆ ಹೊಸ ವೈಶಿಷ್ಟ್ಯವನ್ನು ಬಿಡುಗಡೆ ಮಾಡಲಿದೆ. ಈ ವೈಶಿಷ್ಟ್ಯವನ್ನು ಬಳಸಿ ಬಳಕೆದಾರರು ವಿಡಿಯೋ ಕಾಲ ಮೇಲೆ ಇರುವಾಗಲೂ ಕೂಡ ಇತರ ಆಪ್ ಗಳನ್ನು ಬಳಸಬಹುದು. ಮುಂದಿನ ವರ್ಷ ಈ ವೈಶಿಷ್ಟ್ಯ ಬಿಡುಗಡೆಯಾಗಲಿದೆ.
WhatsApp Latest Feature: ಜನಪ್ರೀಯ ಕಿರುಸಂದೇಶ ರವಾನಿಸುವ ಆಪ್ ಆಗಿರುವ ವಾಟ್ಸ್ ಆಪ್ ನಿರಂತರವಾಗಿ ತನ್ನ ಬಳಕೆದಾರರಿಗಾಗಿ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಲೇ ಇರುತ್ತದೆ ಮತ್ತು ಹೊಸ ವೈಶಿಷ್ಟ್ಯವನ್ನು ಆಪ್ ನ ಭಾಗವಾಗಿಸುವ ಮುನ್ನ ಅದರ ಬೀಟಾ ಟೆಸ್ಟ್ ನಡೆಸುತ್ತದೆ. ಆದರೆ, ಬೀಟಾ ಟೆಸ್ಟ್ ನಡೆಸಲಾದ ಎಲ್ಲಾ ವೈಶಿಷ್ಟ್ಯಗಳನ್ನು ಅದು ಆಪ್ ನ ಭಾಗವಾಗಿಸುತ್ತದೆ ಎಂಬುದು ಇದರ ಅರ್ಥವಲ್ಲ. ಪ್ರಸ್ತುತ ವಾಟ್ಸ್ ಆಪ್ ಒಂದು ಹೊಸ ವೈಶಿಷ್ಟ್ಯವನ್ನು ಶಾಮೀಲುಗೊಳಿಸಲಾಗುವುದು ಎಂಬುದನ್ನು ಸ್ಪಷ್ಟಪಡಿಸಿದೆ.
ತನ್ನ ಬ್ಲಾಗ್ ಸೈಟ್ ನಲ್ಲಿ ಈ ಕುರಿತು ಬರೆದುಕೊಂಡಿರುವ ವಾಟ್ಸ್ ಆಪ್, ಶೀಘ್ರದಲ್ಲಿಯೇ ಐಫೋನ್ ಬಳಕೆದಾರರಿಗೆ ಪಿಕ್ಚರ್ ಇನ್ ಪಿಕ್ಚರ್ ಮೋಡ್ ವೈಶಿಷ್ಟ್ಯ ಸಿಗಲಿದೆ ಎಂಬುದನ್ನು ಸ್ಪಷ್ಟಪಡಿಸಿದೆ. ಈ ವೈಶಿಷ್ಟ್ಯದಿಂದ ಬಳಕೆದಾರರು ವಿಡಿಯೋ ಕರೆಯ ವೇಳೆಯೂ ಕೂಡ ಇತರ ಕೆಲಸಗಳಿಗಾಗಿ ತಮ್ಮ ಫೋನ್ ಬಳಸಬಹುದು. ಈ ಅವಧಿಯಲ್ಲಿ ವಿಡಿಯೋ ಕಾಲ್ ನಲ್ಲಿರುವ ವ್ಯಕ್ತಿಯ ಮುಖ ಒಂದು ಚಿಕ್ಕ ಕಿಟಕಿಗೆ ಸೀಮಿತವಾಗಲಿದೆ.
ಬಳಕೆದಾರರಿಗೆ ಯಾವಾಗ ಈ ಪಿಐಪಿ ವೈಶಿಷ್ಟ್ಯ ಸಿಗಲಿದೆ
ಈ ಕುರಿತು ತನ್ನ ಬ್ಲಾಗ್ ನಲ್ಲಿ ಬರದುಕೊಂಡಿರುವ ಮೆಟಾ ಮಾಲೀಕತ್ವದ ಕಂಪನಿ, "ಐಓಎಸ್ ನಲ್ಲಿ ಪಿಕ್ಚರ್ ಇನ್ ಪಿಕ್ಚರ್ ವೈಶಿಷ್ಟ್ಯ ಇನ್ನೂ ಬೀಟಾ ಟೆಸ್ಟಿಂಗ್ ಹಂತದಲ್ಲಿದ್ದು, 2023 ರಲ್ಲಿ ಅದನ್ನು ಬಳಕೆದಾರರಿಗಾಗಿ ಬಿಡುಗಡೆ ಮಾಡಲಾಗುವುದು. ಮಿನಿಮೈಸ್ದ್ ಇನ್ ಕಾಲ್ ವಿಡಿಯೋ ಸ್ಕ್ರೀನ್ ಜೊತೆಗೆ ಮಲ್ಟಿಟಾಸಕಿಂಗ್ ಮಾಡುವುದು ಇದರಿಂದ ಸುಲಭವಾಗಲಿದೆ" ಎಂದಿದೆ. ಪ್ರಸ್ತುತ ವಿಡಿಯೋ ಕಾಲ್ ವೇಳೆ ಮಿನಿಮಿಸ್ ಮಾಡಿದಾಗ ವಿಡಿಯೋ ಕಾಣಿಸಿಕೊಳ್ಳುವುದು ನಿಂತುಹೋಗುತ್ತದೆ.
ಈ ರೀತಿ ಕೆಲಸ ಮಾಡುತ್ತದೆ ಹೊಸ ಪಿಐಪಿ ಮೋಡ್
ವಾಟ್ಸ್ ಆಪ್ ವೈಶಿಷ್ಟ್ಯಗಳನ್ನು ಟ್ರಾಕ್ ಮಾಡುವ ವೇದಿಕೆಯಾಗಿರುವ WABetaInfo ಪ್ರಕಾರ, ಫೇಸ್ ಬುಕ್ ಹಾಗೂ ಯುಟ್ಯೂಬ್ ಗಳಲ್ಲಿ ಇರುವ ವೈಶಿಷ್ಟ್ಯಗಳಂತೆಯೇ ಈ ವೈಶಿಷ್ಟ್ಯ ಕೂಡ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ. ಈ ಆಪ್ ಗಳ ಮೇಲೆ ಕಾಣಿಸುವ ವಿಡಿಯೋಗಳು ಸ್ಕ್ರೀನ್ ನ ಒಂದು ಭಾಗದಲ್ಲಿ ಫ್ಲೋಟಿಂಗ್ ವಿಂಡೋನಲ್ಲಿ ಕಾಣಿಸಿಕೊಳ್ಳುತ್ತವೆ ಹಾಗೂ ಇದೆ ರೀತಿ ಇನ್ಮುಂದೆ ವಾಟ್ಸ್ ಆಪ್ ವಿಡಿಯೋ ಕರೆಯ ವೇಳೆಯೂ ಕೂಡ ಸಂಭವಿಸಲಿದೆ.
ಅಂದರೆ, ಪರದೆಯ ಮೇಲೆ ನೀವು ಯಾವುದೇ ಆಪ್ ಬಳಸುತ್ತಿದ್ದರೆ, ವಾಟ್ಸ್ ಆಪ್ ವಿಡಿಯೋ ಕಾಲ್ ಯಾವುದಾದರೊಂದು ಭಾಗದಲ್ಲಿ ಫ್ಲೋಟಿಂಗ್ ವಿಂಡೋ ರೂಪ ಪಡೆದುಕೊಳ್ಳಲಿದೆ. ಇಂತಹ ಆಯ್ಕೆ ಇದುವರೆಗೆ ಮೈಕ್ರೋಸಾಫ್ಟ್ ಟೀಮ್ಸ್ ಗಳಂತಹ ಆಪ್ಗಳಿಗೆ ಮಾತ್ರ ಇಂತಹ ಆಯ್ಕೆ ಲಭ್ಯವಿತ್ತು.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.