Facebook, Instagram, WhatsApp Paid Features:  ಮೆಟಾ ವೇದಿಕೆಗಳ  ಹೊಸ ಗುಂಪನ್ನು ರಚಿಸುತ್ತಿದೆ, ಅದರ ಮುಖ್ಯ ಉದ್ದೇಶ ಬಳಕೆದಾರರು ಖರೀದಿಸಬಹುದಾದ ಉತ್ಪನ್ನಗಳು ಮತ್ತು ವೈಶಿಷ್ಟ್ಯಗಳನ್ನು ರಚಿಸುವುದರ ಮೇಲೆ ಇರಲಿದೆ. ಇದರರ್ಥ ಮೆಟಾ ಪ್ಲಾಟ್‌ಫಾರ್ಮ್ ಇನ್ ಕಾರ್ಪೋರೇಷನ್ ಶೀಘ್ರದಲ್ಲೇ ಅಂತಹ ವೈಶಿಷ್ಟ್ಯಗಳನ್ನು ತನ್ನ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸಾಪ್‌ ನಲ್ಲಿ ಜಾರಿಗೆ ತರುತ್ತಿದೆ, ಇದಕ್ಕಾಗಿ ಬಳಕೆದಾರರು ಹಣ ಪಾವತಿಸಬೇಕಾಗಲಿದೆ. ರಾಯಿಟರ್ಸ್ ವರದಿ ಪ್ರಕಾರ, ಮೆಟಾದ ವಕ್ತಾರರು ಈ ಮಾಹಿತಿಯನ್ನು ನೀಡಿದ್ದಾರೆ. ವಕ್ತಾರರ ಪ್ರಕಾರ, ಕಂಪನಿಯು ಈ ಹಣ ಪಾವತಿ ಉತ್ಪನ್ನಗಳನ್ನು ಪ್ರತ್ಯೇಕವಾಗಿ ಇರಿಸಲಿದೆ ಮತ್ತು ಅಸ್ತಿತ್ವದಲ್ಲಿರುವ ಉತ್ಪನ್ನಗಳಿಗೆ ಅದು ಅನ್ವಯಿಸುವುದಿಲ್ಲ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಈ ವರ್ಷದ ಜೂನ್‌ನಲ್ಲಿ, ಮೆಟಾದ ಸಿಇಒ ಮಾರ್ಕ್ ಜುಕರ್‌ಬರ್ಗ್ ಅವರು ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ಗೆ ಅಂತಹ ವೈಶಿಷ್ಟ್ಯಗಳನ್ನು ತರುವುದಾಗಿ ಘೋಷಿಸಿದ್ದರು, ಇದರಿಂದಾಗಿ ವಿಷಯ ರಚನೆಕಾರರು ಹಣ ಗಳಿಸುವ ಅವಕಾಶವನ್ನು ಪಡೆಯಬಹುದು.


2024 ರ ವೇಳೆಗೆ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಯಾವುದೇ ರೀತಿಯ ಆದಾಯ ಹಂಚಿಕೆಯನ್ನು ಕಂಪನಿಯು ನಿಷೇಧಿಸಲಿದೆ ಎಂದು ಫೇಸ್‌ಬುಕ್ ಸಿಇಒ ಜುಕರ್‌ಬರ್ಗ್ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಈ ಕುರಿತು ಪೋಸ್ಟ್ ಹಂಚಿಕೊಂಡಿರುವ ಅವರು, 'ನಾವು 2024 ರ ವೇಳೆಗೆ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಎಲ್ಲಾ ಆದಾಯ ಹಂಚಿಕೆಯನ್ನು ನಿಷೇಧಿಸುತ್ತೇವೆ. ಇದು ಪಾವತಿಸಿದ ಆನ್‌ಲೈನ್ ಈವೆಂಟ್‌ಗಳು, ಚಂದಾದಾರಿಕೆಗಳು, ಬ್ಯಾಡ್ಜ್‌ಗಳು ಮತ್ತು ಬುಲೆಟಿನ್‌ಗಳನ್ನು ಒಳಗೊಂಡಿರುತ್ತದೆ ಎಂದಿದ್ದರು.


ಇದನ್ನೂ ಓದಿ-WhatsApp Ban Accounts: ವಾಟ್ಸ್ ಆಪ್ ಬಳಕೆದಾರರಿಗೆ ಬಿಗ್ ಶಾಕ್, ನಿಮ್ಮ ಮೇಲೂ ಈ ಕ್ರಮ ಜರುಗಿದೆಯಾ?

ಇದರೊಂದಿಗೆ, ಜುಕರ್‌ಬರ್ಗ್ ತನ್ನ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಾದ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಎರಡರಲ್ಲೂ ಹಣ ಸಂಪಾದಿಸಲು ವಿಷಯ ರಚನೆಕಾರರಿಗೆ ಹೊಸ ಮಾರ್ಗಗಳನ್ನು ಘೋಷಿಸಿದ್ದರು.


ಇದನ್ನೂ ಓದಿ-WhatsApp Updates : ಇನ್ಮುಂದೆ ವಾಟ್ಸಾಪ್ ತೆರೆಯದೆಯೇ ಆಡಿಯೋ ಕಾಲ್‌ ಮಾಡಬಹುದು

ಅಷ್ಟೇ ಅಲ್ಲ ಈ ಸೌಕರ್ಯಗಳು ರಚನೆಕಾರರಿಗೆ ಮೆಟಾವರ್ಸ್ ಅನ್ನು ಸಿದ್ಧಪಡಿಸಲು ಸಹಕಾರಿಯಾಗಲಿವೆ' ಎಂದು ಜುಕರ್ಬರ್ಗ್ ಹೇಳಿದ್ದರು. ವರದಿಗಳ ಪ್ರಕಾರ ಇನ್ಸ್ಟಾ ಗ್ರಾಮ್ ಹಾಗೂ ಫೇಸ್ ಬುಕ್ ಮೇಲೆ Monetizing Reels, Interoperable Subscriptions, Facebook Stars ಹಾಗೂ  Creator Marketplace ಗಳಂತಹ ವೈಶಿಷ್ಟ್ಯಗಳು ಬರಲಿವೆ ಹಾಗೂ ಇವುಗಳಿಂದ ಕಂಟೆಂಟ್ ರಚನಾಕಾರರಿಗೆ ಸಹಾಯ ಸಿಗಲಿದೆ ಎನ್ನಲಾಗಿದೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.