ಬೆಂಗಳೂರು : WhatsApp Latest Update : ಈ ದಿನಗಳಲ್ಲಿ WhatsApp ಅನ್ನು ಧ್ವನಿ ಮತ್ತು ವೀಡಿಯೊ ಕರೆಗಳಿಗಾಗಿ ಬಳಸಲಾಗುತ್ತದೆ. WhatsApp ಕರೆಗಳನ್ನು ಮಾಡುತ್ತಿದ್ದರೆ, ಈ Meta ಅಪ್ಲಿಕೇಶನ್ ಹೊಸ ವೈಶಿಷ್ಟ್ಯವನ್ನು ತಂದಿದೆ.  ಈ ಹೊಸ ವೈಶಿಷ್ಟ್ಯವು WhatsApp ಕರೆಗಳಿಗೆ ಸಂಬಂಧಿಸಿದ್ದಾಗಿದೆ. 


COMMERCIAL BREAK
SCROLL TO CONTINUE READING

ಹೊಸ ವೈಶಿಷ್ಟ್ಯವನ್ನು ಬಿಡುಗಡೆ ಮಾಡಿದೆ WhatsApp : 
ಇತ್ತೀಚೆಗೆ, WhatsApp ಕೆಲವು ಹೊಸ ವೈಶಿಷ್ಟ್ಯಗಳನ್ನು ಪ್ರಕಟಿಸಿದೆ. ಎಲ್ಲರ ಗಮನ ಸೆಳೆದಿರುವ ಈ ಫೀಚರ್ ಗಳು ವಾಟ್ಸಾಪ್ ಕರೆಗಳಿಗೆ ಸಂಬಂಧಿಸಿದ್ದಾಗಿದೆ. ಈ ವೈಶಿಷ್ಟ್ಯದ ಅಡಿಯಲ್ಲಿ, ಬಳಕೆದಾರರಿಗೆ WhatsApp ಕರೆಗಳ ಸಮಯದಲ್ಲಿ ಬೇರೆ ಆಯ್ಕೆಯನ್ನು ನೀಡಲಾಗುತ್ತಿದೆ.  


ಇದನ್ನೂ ಓದಿ : Nokia ಪವರ್ ಫುಲ್ ಸ್ಮಾರ್ಟ್ ಫೋನ್ ಅನ್ನು ಕೇವಲ 2,000 ರೂ.ಗೆ ಮನೆಗೆ ತನ್ನಿ


ಈಗ ನೀವು WhatsApp ಕಾಲ್ ನಲ್ಲಿದ್ದಾಗಲೂ ಈ ಕೆಲಸವನ್ನು ಮಾಡಬಹುದು :
ಈ ವೈಶಿಷ್ಟ್ಯದೊಂದಿಗೆ, ನೀವು ಗ್ರೂಪ್ ವಾಯ್ಸ್ ಅಥವಾ ವೀಡಿಯೊ ಕರೆಗಳಲ್ಲಿ ಇತರರನ್ನು ಮ್ಯೂಟ್ ಮಾಡಬಹುದು. ಒಂದು ವೇಳೆ  ಗ್ರೂಪ್ ನಲ್ಲಿರುವವರು ಕರೆಯ ಸಮಯದಲ್ಲಿ ಮ್ಯೂಟ್ ಮಾಡಲು ಮರೆತರೆ, ನೀವೇ ಅವರನ್ನು ಮ್ಯೂಟ್ ಮಾಡಬಹುದು. ಹೀಗೆ ಮಾಡಿದಾಗ ಧ್ವನಿ ಪ್ರತಿಧ್ವನಿಸುವುದಿಲ್ಲ. ಮೀಟಿಂಗ್ ನಲ್ಲಿನ ಕಾಲ್ ಗಳಿಗೆ ಈ ವೈಶಿಷ್ಟ್ಯ ಹೆಚ್ಚಿನ ಪ್ರಯೋಜನವಾಗುತ್ತದೆ. 


ನೀವು ಈ ಹೊಸ ವೈಶಿಷ್ಟ್ಯಗಳನ್ನು ಸಹ ಬಳಸಬಹುದು :
ಕರೆಗಳನ್ನು ಮ್ಯೂಟ್ ಮಾಡುವುದರ ಜೊತೆಗೆ, ಕರೆಗಳ ಸಮಯದಲ್ಲಿ ಇತರ ಸದಸ್ಯರಿಗೆ ಪ್ರತ್ಯೇಕವಾಗಿ ಮೆಸೇಜ್ ಕೂಡಾ ಮಾಡಬಹುದು. ಅನೇಕ ಬಾರಿ ಗ್ರೂಪ್ ಕಾಲ್ ವೇಳೆ, ಕೇವಲ ಒಬ್ಬರಿಗೆ ಮಾತ್ರ ಯಾವುದೋ ಮೆಸೇಜ್ ನೀಡಬೇಕಾಗಿ ಬರಬಹುದು. ಆ ಸಂದರ್ಭದಲ್ಲಿ ಇದು ಸಹಾಯಕ್ಕೆ ಬರುತ್ತದೆ. WhatsApp ಇತ್ತೀಚೆಗೆ ಅಪ್ಡೇಟೆಡ್ ಪ್ರೈವಸಿ  ಸೆಟ್ಟಿಂಗ್‌ಗಳನ್ನು ಸಹ ಘೋಷಿಸಿದೆ. ಇದರಲ್ಲಿ ಬಳಕೆದಾರರು ತಮ್ಮ ಪ್ರೊಫೈಲ್ ಫೋಟೋ ವನ್ನು ಕೊನೆಯದಾಗಿ ಯಾರು ನೋಡಿರುವುದು ಮತ್ತು ಸ್ಟೇಟಸ್ ಅಪ್ಡೇಟ್ ಗಳನ್ನು ಯಾರು ನೋಡಬಹುದು ಮತ್ತು ನೋಡಬಾರದು ಎಂಬುದನ್ನು ಕೂಡಾ ಆಯ್ಕೆ ಮಾಡಬಹುದು.  


ಇದನ್ನೂ ಓದಿ : LAVA 5G Smartphone: ಲಾವಾ ತರುತ್ತಿದೆ ಇದುವರೆಗಿನ ಅತ್ಯಂತ ಅಗ್ಗದ 5G ಸ್ಮಾರ್ಟ್‌ಫೋನ್


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.