WhatsApp Features: ಇನ್ಮುಂದೆ ಎರಡು ಸ್ಮಾರ್ಟ್ ಫೋನ್ ಗಳಲ್ಲಿ ಒಂದೇ ವಾಟ್ಸ್ ಆಪ್ ಖಾತೆಯನ್ನು ಬಳಸಬಹುದು!
How to Use same whatsapp account on two phones: ವಾಟ್ಸ್ ಆಪ್ ಹೊಸ ವೈಶಿಷ್ಟ್ಯವೊಂದರ ಮೇಲೆ ಕೆಲಸ ಮಾಡುತ್ತಿದೆ. ಇದರಿಂದ ನೀವು ನಿಮ್ಮ ಒಂದೇ ವಾಟ್ಸ್ ಆಪ್ ಖಾತೆಯನ್ನು ಎರಡು ವಿಭಿನ್ನ ಸ್ಮಾರ್ಟ್ ಫೋನ್ ಗಳಲ್ಲಿ ಬಳಸಬಹುದು. ಈ ಹೊಸ ವೈಶಿಷ್ಟ್ಯ ಏನು ಮತ್ತು ಇದು ಹೇಗೆ ಕಾರ್ಯನಿರ್ವಹಿಸುತ್ತದೆ ತಿಳಿದುಕೊಳ್ಳೋಣ ಬನ್ನಿ.
WhatsApp Update Use One Account on Two Smartphones: WhatsApp ವಿಶ್ವದ ಅತ್ಯಂತ ಜನಪ್ರೀಯ ಮತ್ತು ಅತ್ಯುತ್ತಮ ಚಾಟ್ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಈ ವೇದಿಕೆಯು ಬಳಕೆದಾರರ ಅನುಕೂಲಕ್ಕಾಗಿ ಅಗತ್ಯವಿರುವ ಎಲ್ಲಾ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಆದರೆ ಇನ್ನೂ ಅನೇಕ ಬಳಕೆದಾರರು ಒಂದಕ್ಕಿಂತ ಹೆಚ್ಚು ಸಾಧನಗಳಲ್ಲಿ ಒಂದು WhatsApp ಖಾತೆಯನ್ನು ಬಳಸಲು ಸಾಧ್ಯವಾಗುವುದಿಲ್ಲ ಎಂದು ದೂರುತ್ತಿದ್ದಾರೆ. ಅಧಿಕೃತವಾಗಿ ಇದುವರೆಗೆ ಅಂತಹ ಯಾವುದೇ ವೈಶಿಷ್ಟ್ಯ ವಾಟ್ಸ್ ಆಪ್ ಬಿಡುಗಡೆ ಮಾಡಿಲ್ಲ. ಆದರೆ ಇದೀಗ WhatsApp ಹೊಸ ವೈಶಿಷ್ಟ್ಯವೊಂದರ ಮೇಲೆ ಕೆಲಸಮಾಡುತ್ತಿದ್ದು, ಈ ವೈಶಿಷ್ಟ್ಯದಿಂದ ನೀವು ನಿಮ್ಮ ಒಂದೇ ಖಾತೆಯನ್ನು ಏಕಕಾಲದಲ್ಲಿ ಎರಡು ಸ್ಮಾರ್ಟ್‌ಫೋನ್‌ಗಳಲ್ಲಿ ಬಳಸಲು ಅನುವು ಮಾಡಿಕೊಡಲಿದೆ. ಈ ವೈಶಿಷ್ಟ್ಯದ ಬಗ್ಗೆ ವಿಸ್ತೃತ ಮಾಹಿತಿ ತಿಳಿದುಕೊಳ್ಳೋಣ ತಿಳಿದುಕೊಳ್ಳೋಣ ಬನ್ನಿ,
ಏಕಕಾಲಕ್ಕೆ ಎರಡು ಸ್ಮಾರ್ಟ್‌ಫೋನ್‌ಗಳಲ್ಲಿ ಒಂದೇ WhatsApp ಖಾತೆಯನ್ನು ಬಳಸಿ!
ಈ ರೀತಿ ಮಾಡಲು ಥರ್ಡ್ ಪಾರ್ಟಿ ಅಪ್ಲಿಕೇಶನ್‌ನ ಬಳಕೆಯ ಕುರಿತು ನಾವು ಇಲ್ಲಿ ಉಲ್ಲೇಖಿಸುತ್ತಿದ್ದೇವೆ ಎಂಬುದು ನಿಮ್ಮ ಯೋಚನೆಯಾಗಿದ್ದರೆ, ಅದು ತಪ್ಪು. ನಿಮ್ಮ ಒಂದು WhatsApp ಖಾತೆಯನ್ನು ಎರಡು ಸ್ಮಾರ್ಟ್‌ಫೋನ್‌ಗಳು ಅಥವಾ ಸಾಧನಗಳಲ್ಲಿ ಏಕಕಾಲದಲ್ಲಿ ಬಳಸಲು ಅನುಮತಿಸುವ ವೈಶಿಷ್ಟ್ಯವನ್ನು WhatsApp ಸ್ವತಃ ಬಿಡುಗಡೆ ಮಾಡುತ್ತಿದೆ. ಈ ವೈಶಿಷ್ಟ್ಯದ ಬಗ್ಗೆ ನಾವು ಹೇಗೆ ತಿಳಿದುಕೊಂಡಿದ್ದೇವೆ ಮತ್ತು ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತಿಳಿಸುತ್ತೇವೆ ಬನ್ನಿ
WhatsApp ಹೊಸ ವೈಶಿಷ್ಟ್ಯವನ್ನು ಬಿಡುಗಡೆ ಮಾಡುತ್ತಿದೆ
WABetaInfo ನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ, WhatsApp ಹೊಸ ವೈಶಿಷ್ಟ್ಯವೊಂದರ ಮೇಲೆ ಕಾರ್ಯನಿರ್ವಹಿಸುತ್ತಿದೆ, ಅದು ಬಳಕೆದಾರರು ತಮ್ಮ ಚಾಟ್‌ಗಳನ್ನು ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ಸಾಧನಗಳಲ್ಲಿ ಸಿಂಕ್ ಮಾಡಲು ಅನುಮತಿಸುತ್ತದೆ. ಈ ರೀತಿಯಾಗಿ, ಒಂದೇ WhatsApp ಖಾತೆಯು ಒಂದಕ್ಕಿಂತ ಹೆಚ್ಚು ಸಾಧನಗಳಲ್ಲಿ ಸಕ್ರಿಯವಾಗಿರುತ್ತದೆ. ಈ ವೈಶಿಷ್ಟ್ಯದ ಅಡಿಯಲ್ಲಿ, ನೀವು WhatsApp ನಲ್ಲಿ ಚಾಟ್ ಇತಿಹಾಸವನ್ನು ಸಿಂಕ್ ಮಾಡಬಹುದು ಮತ್ತು ಅದಕ್ಕಾಗಿ ನಿಮಗೆ ಸಕ್ರಿಯ ಇಂಟರ್ನೆಟ್ ಸಂಪರ್ಕದ ಅವಶ್ಯಕತೆ ಇಲ್ಲ.
ಇದನ್ನೂ ಓದಿ-BSNL vs Jio Airtel: ಬಿಎಸ್‌ಎನ್‌ಎಲ್‌ನ ಅಗ್ಗದ, ಅತ್ಯುತ್ತಮ ಯೋಜನೆ ನಿಮಗಾಗಿ!
ಈ ವೈಶಿಷ್ಟ್ಯವು ಈ ರೀತಿ ಕಾರ್ಯನಿರ್ವಹಿಸುತ್ತದೆ
ಈ ವೈಶಿಷ್ಟ್ಯವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ನೀವೂ ಕೂಡ ಯೋಚಿಸುತ್ತಿದ್ದರೆ ಕೇಳಿ, WABetainfo ಪ್ರಕಾರ, ಬಳಕೆದಾರನು ತನ್ನ WhatsApp ಖಾತೆಗೆ ಮತ್ತೊಂದು ಸಾಧನದಲ್ಲಿ ಲಾಗ್ ಇನ್ ಮಾಡಿದಾಗ, ಅವನು ತನ್ನ ಖಾತೆಯನ್ನು ಎರಡನೇ ಸಾಧನದಲ್ಲಿ ಸುಲಭವಾಗಿ ಲಿಂಕ್ ಮಾಡಲು ಸಾಧ್ಯವಾಗಲಿದೆ. ಪ್ರಕ್ರಿಯೆಯು ಪೂರ್ಣಗೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ, ಆದ್ದರಿಂದ WhatsApp ವೆಬ್ ಅಥವಾ ಡೆಸ್ಕ್‌ಟಾಪ್‌ನಲ್ಲಿರುವ ಅದೇ ಸಂದೇಶ ವ್ಯವಸ್ಥೆಯನ್ನು ಒದಗಿಸಲು WhatsApp ಪ್ರಯತ್ನಿಸುತ್ತಿದೆ.
ಪ್ರಸ್ತುತ ಈ ವೈಶಿಷ್ಟ್ಯದ ಕೆಲಸ ನಡೆಯುತ್ತಿದೆ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ, ಆದ್ದರಿಂದ ಅಧಿಕೃತವಾಗಿ ಇದು ಯಾವಾಗ ಬಿಡುಗಡೆಯಾಗಲಿದೆ ಎಂಬುದನ್ನು ಹೇಳುವುದು ಸ್ವಲ್ಪ ಕಷ್ಟ ಎನ್ನಲಾಗಿದೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.