WhatsApp Account Hack: ತ್ವರಿತ ಮೆಸೇಜಿಂಗ್ ಆಪ್ ವಾಟ್ಸಾಪ್ ವೈಯಕ್ತಿಕವಾಗಿ ಸಂದೇಶ, ವಾಯ್ಸ್ ನೋಟ್, ಫೋಟೋ, ವಿಡಿಯೋಗಳನ್ನು ಕಳುಹಿಸಲು ಮಾತ್ರವಲ್ಲದೆ, ಇತ್ತೀಚಿನ ದಿನಗಳಲ್ಲಿ ಕಚೇರಿ ಸಂಬಂಧಿತ ಕೆಲಸಗಳಿಗೂ ತುಂಬಾ ಪ್ರಯೋಜನಕಾರಿಯಾದ ಅಪ್ಲಿಕೇಷನ್ ಆಗಿದೆ. ವಾಟ್ಸಾಪ್ ಆಪ್ ಮೂಲಕ ಹಲವು ಪ್ರಮುಖ ಡಾಕ್ಯುಮೆಂಟ್ ಗಳನ್ನು ಕೂಡ ಹಂಚಿಕೊಳ್ಳಲಾಗುತ್ತದೆ. ಆದರೆ, ನಿಮ್ಮ ವಾಟ್ಸಾಪ್ ಖಾತೆ ಸುರಕ್ಷಿತವಾಗಿದೆಯೇ? 


COMMERCIAL BREAK
SCROLL TO CONTINUE READING

ವಾಟ್ಸಾಪ್‌ನಲ್ಲಿ ಕೆಲವು ಬದಲಾವಣೆಗಳು ನಿಮ್ಮ ಅಕೌಂಟ್ ಹ್ಯಾಕ್ ಆಗಿದೆ ಎಂಬುದರ ಎಚ್ಚರಿಕೆ ಗಂಟೆಯಾಗಿದೆ. ಅದರಲ್ಲೂ ವಾಟ್ಸಾಪ್‌ನಲ್ಲಿ ಕಂಡು ಬರುವ ಮೂರು ಬದಲಾವಣೆಗಳು ನಿಮ್ಮ ವಾಟ್ಸಾಪ್ ಖಾತೆ ಹ್ಯಾಕ್ ಆಗಿದೆ ಎಂಬುದನ್ನು ಅರ್ಥೈಸುತ್ತವೆ ಎನ್ನಲಾಗುತ್ತದೆ. 


ಹೌದು, ವಾಟ್ಸಾಪ್ ಖಾತೆ ಹ್ಯಾಕ್ ಆಗಿದ್ದರೆ, ಕೆಲವು ಚಿಹ್ನೆಗಳು ಕಾಣಿಸಿಕೊಳ್ಳುತ್ತವೆ. ಇದು ನಿಮ್ಮ ವಾಟ್ಸಾಪ್ ಖಾತೆಯ ಮೇಲೆ   ಹ್ಯಾಕರ್‌ಗಳು ಕಣ್ಣಿಟ್ಟಿರಬಹುದು ಅಥವಾ ಅವರು ಅದನ್ನು ಹ್ಯಾಕ್ ಮಾಡಲು ಪ್ರಯತ್ನಿಸಬಹುದು ಎಂಬುದರ ಸಂಕೇತವಾಗಿದೆ. 


ಇದನ್ನೂ ಓದಿ- ಅತ್ಯಂತ ಕಡಿಮೆ ಬೆಲೆಯಲ್ಲಿ ಅತ್ಯಧಿಕ 3300 GB ಡೇಟಾ ನೀಡುತ್ತಿದೆ ಬಿ‌ಎಸ್‌ಎನ್‌ಎಲ್


ವಾಟ್ಸಾಪ್ ಹ್ಯಾಕ್ ಆಗಿದ್ರೆ ಕಾಣುತ್ತೆ ಈ 3 ಬದಲಾವಣೆಗಳು: 
* ಹೊಸ ಸಂಪರ್ಕಗಳು: 

ವಾಟ್ಸಾಪ್‌ನಲ್ಲಿ ನೀವು ಇದುವರೆಗೂ ಸೇವ್ ಮಾಡದೇ ಇರುವ ಹೊಸ ಸಂಪರ್ಕಗಳನ್ನು ನೋಡುತ್ತಿದ್ದರೆ ನಿಮ್ಮ ಖಾತೆಯನ್ನು ಬೇರೆಯವರು ಬಳಸುತ್ತಿದ್ದಾರೆ ಎಂದರ್ಥ. 


* ವಾಟ್ಸಾಪ್ ಲಾಗಿನ್ ನಲ್ಲಿ ತೊಂದರೆ: 
ನೀವು ಎಷ್ಟೇ ಪ್ರಯತ್ನಿಸಿದರೂ ನಿಮ್ಮ ವಾಟ್ಸಾಪ್ ಖಾತೆಗೆ ಲಾಗಿನ್ ಆಗಲು ಸಾಧ್ಯವಾಗುತ್ತಲೇ ಇಲ್ಲ ಎಂದಾದರೆ ಇದು ಕೂಡ ಹ್ಯಾಕರ್‌ಗಳು ನಿಮ್ಮ ವಾಟ್ಸಾಪ್ ಹ್ಯಾಕ್ ಮಾಡಿರಬಹುದು ಎಂಬುದರ ಸಂಕೇತವಾಗಿದೆ. 


* ವೇರಿಫಿಕೇಶನ್ ಕೋಡ್: 
ನಿಮ್ಮ ವಾಟ್ಸಾಪ್ ಖಾತೆಯನ್ನು ಬೇರೆಯವರು ಬಳಸುತ್ತಿದ್ದರೆ, ಯಾರಾದರೂ ಟ್ಯಾಂಪರಿಂಗ್ ಮಾಡುತ್ತಿದ್ದರೆ ಪದೇ ಪದೇ ಲಾಗಿನ್ ಗಾಗಿ ವೇರಿಫಿಕೇಶನ್ ಕೋಡ್ ಕೇಳುತ್ತಲೇ ಇರುತ್ತದೆ. 


ಇದನ್ನೂ ಓದಿ- ಇವೇ ನೋಡಿ ಭಾರತದಲ್ಲಿ ಅತ್ಯಂತ ಜನಪ್ರಿಯ ಮೊಬೈಲ್ ಗೇಮ್‌ಗಳು.. ಎಂದಾದರೂ ಆಡಿದ್ದೀರಾ?


ನಿಮ್ಮ ವಾಟ್ಸಾಪ್ ಖಾತೆಯಲ್ಲೂ ಈ ರೀತಿಯ ಸಂಕೇತಗಳು ಕಾಣಿಸುತ್ತಿದ್ದರೆ ಕೂಡಲೇ ಎಚ್ಚೆತ್ತುಕೊಳ್ಳಿ. ಹ್ಯಾಕರ್‌ಗಳು ನಿಮ್ಮ ಖಾತೆಯನ್ನು ದುರುಪಯೋಗಪಡಿಸಿಕೊಳ್ಳದಂತೆ ತಡೆಯಲು ಈಗಲೇ ನಿಮ್ಮ ಖಾತೆ ಅನ್ಇನ್ಸ್ಟಾಲ್ ಮಾಡಿ ಮತ್ತೆ ಇನ್ಸ್ಟಾಲ್ ಮಾಡಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.