ಜಗತ್ತಿನಾದ್ಯಂತ ಸಾವಿರಾರು ಬಳಕೆದಾರರಿಗೆ ದಿಢೀರ್ ಸ್ಥಗಿತಗೊಂಡ ವಾಟ್ಸಾಪ್, ಇನ್‌ಸ್ಟಾಗ್ರಾಮ್, ಫೇಸ್‌ಬುಕ್!
WhatsApp, Instagram, Facebook Down: ಜನ ಈಗ ಊಟ-ತಿಂಡಿ ಇಲ್ಲದೆ ಇದ್ದುಬಿಡುತ್ತಾರೆ. ಆದರೆ ಇಂಟರ್ನೆಟ್ ಮತ್ತು ಸೋಶಿಯಲ್ ಮೀಡಿಯಾ ಇಲ್ಲದೆ ಇರಲು ಸಾಧ್ಯವಿಲ್ಲ. ಅಂಥದ್ದರಲ್ಲಿ ಜಗತ್ತಿನಾದ್ಯಂತ ಸೋಶಿಯಲ್ ಮೀಡಿಯಾ ಪ್ಲಾಟಫಾರ್ಮ್ ಗಳಾದ ವಾಟ್ಸಾಪ್, ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಇದ್ದಕ್ಕಿದ್ದಂತೆ ಸ್ಥಗಿತಗೊಂಡರೆ ಹೇಗಿರುತ್ತೆ...
WhatsApp, Instagram, Facebook Down: ನಿನ್ನೆ (ಬುಧವಾರ)ರಾತ್ರಿ 10:58ರ ಸುಮಾರಿಗೆ ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್, ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಗಳು ಇದ್ದಕ್ಕಿದ್ದಂತೆ ಡೌನ್ ಆದವು. ಪರಿಣಾಮವಾಗಿ ಇವುಗಳನ್ನೇ ನಂಬಿಕೊಂಡಿದ್ದ ಜಗತ್ತಿನಾದ್ಯಂತ ಕೋಟ್ಯಂತರ ಬಳಕೆದಾರರಿಗೆ ಸಮಸ್ಯೆ ಉಂಟಾಯಿತು. ಇಂಟರ್ನೆಟ್ ಮತ್ತು ಸೋಶಿಯಲ್ ಮೀಡಿಯಾ ಅಂದರೆ ಕೇವಲ ಟೈಮ್ ಪಾಸ್ ಅಷ್ಟೆಯಲ್ಲ. ಇಂದು ಬಹುತೇಕ ಕೆಲಸಗಳು ಅವುಗಳ ಮುಖಾಂತರವೇ ಆಗುವುದರಿಂದ ನಿಜಕ್ಕೂ ಸಮಸ್ಯೆಯನ್ನು ಉಂಟುಮಾಡಿತ್ತು.
ವಿವಿಧ ವರದಿಗಳ ಪ್ರಕಾರ ಇದ್ದಕ್ಕಿದ್ದಂತೆ ಇಂಟರ್ನೆಟ್ ಡೌನ್ ಆಗಿದ್ದರಿಂದ ವಾಟ್ಸಾಪ್ ಬಳಕೆದಾರರಿಗೆ ಸಂದೇಶಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು ಸಾಧ್ಯವಾಗದೆ ಪರದಾಡುವಂತಾಯಿತು. ಫೇಸ್ ಬುಕ್ ಮತ್ತು ಇನ್ಸ್ಟಾಗ್ರಾಮ್ ಬಳಕೆದಾರರಿಗೆ ತಮ್ಮ ಖಾತೆಗಳಲ್ಲಿ ಏನನ್ನೂ ಅಪ್ಲೋಡ್ ಮಾಡಲಾಗದಂತಹ ಸ್ಥಿತಿ ನಿರ್ಮಾಣವಾಗಿತ್ತು. ಜೊತೆಗೆ ಯಾವ ಕಾರಣಕ್ಕಾಗಿ ಹೀಗಾಗುತ್ತಿದೆ ಎನ್ನುವ ಮಾಹಿತಿಯನ್ನು ಪಡೆಯಲು ಸಾಧ್ಯವಾಗುತ್ತಿರಲಿಲ್ಲ.
ಇದನ್ನೂ ಓದಿ- ಯೂಟ್ಯೂಬ್, ವಾಟ್ಸಾಪ್ ಬಳಕೆದಾರರೇ ಎಚ್ಚರ, ಎಚ್ಚರ! ಸಣ್ಣ ತಪ್ಪಿನಿಂದ ಮಹಾ ದೋಖ, ಅಕೌಂಟ್ ಫುಲ್ ಖಾಲಿ!
ಆನ್‌ಲೈನ್ ಸ್ಥಗಿತ-ಚಾಲನೆ ಬಗ್ಗೆ ಮೇಲ್ವಿಚಾರಣೆ ಮಾಡುವ ಡೌನ್‌ಡೆಕ್ಟರ್ ವೆಬ್ ಸೈಟ್ ಪ್ರಕಾರ, ಇಂಟರ್ನೆಟ್ ಡೌನ್ ಪರಿಣಾಮ ಮೆಟಾ-ಮಾಲೀಕತ್ವದ ಪ್ಲಾಟ್‌ಫಾರ್ಮ್‌ಗಳಿಗೆ ಒಟ್ಟಾರೆ 130,000ಕ್ಕೂ ಹೆಚ್ಚು ದೂರುಗಳು ಬಂದಿವೆ. ಅಮೇರಿಕಾ, ಯುರೋಪ್, ಏಷ್ಯಾ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಅಮೆರಿಕಾದ ಕೆಲವು ಭಾಗಗಳು ಬಳಕೆದಾರರು ಇಂಟರ್ನೆಟ್ ಡೌನ್ ಆಗಿದ್ದರಿಂದ ತಮಗೆ ಏನೇನು ಸಮಸ್ಯೆ ಆಯಿತು ಎಂಬುದನ್ನು ಹೇಳಿಕೊಂಡಿದ್ದಾರೆ ಎನ್ನಲಾಗಿದೆ.
Google Top Trending Search: 2024ರಲ್ಲಿ ಜನ ಗೂಗಲ್‌ನಲ್ಲಿ ಹೆಚ್ಚಾಗಿ ಸರ್ಚ್ ಮಾಡಿದ್ದು ಏನನ್ನ ಗೊತ್ತಾ?
ವಾಟ್ಸಾಪ್, ಇನ್ಸ್ಟಾಗ್ರಾಮ್ ಮತ್ತು ಫೇಸ್ ಬುಕ್ ಸ್ಥಗಿತ ಆದ ಕೂಡಲೇ ಸಾಮಾಜಿಕ ಜಾಲತಾಣದ ಬಳಕೆದಾರರು ತಮ್ಮ ಕಹಿ ಅನುಭವಗಳನ್ನು ಹಂಚಿಕೊಳ್ಳಲು ‘X’ ಮೋರೆ ಹೋದರು. ಒಬ್ಬರು ‘ಕೇವಲ ವಾಟ್ಸಾಪ್, ಇನ್ಸ್ಟಾಗ್ರಾಮ್ ಮತ್ತು ಫೇಸ್ ಬುಕ್ ಏಕೆ ‘X’ ಅನ್ನು ಡೌನ್ ಮಾಡಿ, ನಾವೆಲ್ಲರೂ ಒಂದೇ’ ಎಂದು ವ್ಯಂಗ್ಯವಾಡಿದರು. ಮತ್ತೊಬ್ಬ ಬಳಕೆದಾರರು, ‘ಬೇರೆಯವರಿಗೂ ವಾಟ್ಸಾಪ್, ಇನ್ಸ್ಟಾಗ್ರಾಮ್ ಮತ್ತು ಫೇಸ್ ಬುಕ್ ಸ್ಥಗಿತ ಆಗಿದೆಯೇ ಎಂದು ಖಾತರಿ ಪಡಿಸಿಕೊಳ್ಳಲು ಟ್ವಿಟರ್ ನೋಡುತ್ತಿದ್ದಾರೆ’ ಎಂದು ಹೇಳಿದ್ದಾರೆ. ಇಷ್ಟೆಲ್ಲಾ ಆದರೂ ಪೋಷಕ ಕಂಪನಿ ಮೆಟಾ ಏನನ್ನೂ ಹೇಳಿಲ್ಲ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.