WhatsApp New Feature: ವಾಟ್ಸಾಪ್ ಈ ವರ್ಷ ತನ್ನ ಬಳಕೆದಾರರಿಗಾಗಿ ಹಲವು ರೋಮಾಂಚಕ ವೈಶಿಷ್ಟ್ಯಗಳನ್ನು ಪರಿಚಯಿಸಲಿದೆ. ಈ ವೈಶಿಷ್ಟ್ಯಗಳಿಂದ  ಚಾಟ್ ಮಾಡುವ ವಿಧಾನವನ್ನು ಬದಲಾಗಲಿದ್ದು, ಇದರಲ್ಲಿ ಹೆಚ್ಚಿನ ಟೈಪಿಂಗ್ ಅವಶ್ಯಕತೆ ಇರುವುದಿಲ್ಲ. ಮಾತ್ರವಲ್ಲ, ಬಳಕೆದಾರರು ಹೊಸ ರೀತಿಯಲ್ಲಿ ಚಾಟಿಂಗ್ ಅನುಭವವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಲಾಗುತ್ತಿದೆ. 


COMMERCIAL BREAK
SCROLL TO CONTINUE READING

ವಾಸ್ತವವಾಗಿ, ವಾಟ್ಸಾಟ್ ತನ್ನ ಬಳಕೆದಾರರ ಅನುಭವವನ್ನು ಇನ್ನಷ್ಟು ಉತ್ತಮಗೊಳಿಸಲು  'ಸ್ಟಿಕ್ಕರ್ ಮೇಕರ್ ಟೂಲ್' ಎಂಬ ಹೊಸ ವೈಶಿಷ್ಟ್ಯದ ಮೇಲೆ ಕಾರ್ಯ ನಿರ್ವಹಿಸುತ್ತಿದೆ. ಈ ವೈಶಿಷ್ಟ್ಯವು  iOS ನಲ್ಲಿ ಅಪ್ಲಿಕೇಶನ್‌ನಲ್ಲಿ ಸ್ಟಿಕ್ಕರ್‌ಗಳನ್ನು ರಚಿಸಲು ಅನುಮತಿಸುತ್ತದೆ ಎಂದು ಹೇಳಲಾಗಿದೆ. 


ಏನಿದು  'ಸ್ಟಿಕ್ಕರ್ ಮೇಕರ್ ಟೂಲ್' ? 
Wabetainfo ಪ್ರಕಾರ, ವಾಟ್ಸಾಪ್ ಕಂಪನಿಯು ಚಾಟ್ ಶೇರ್ ಆಕ್ಷನ್ ಶೀಟ್‌ನಲ್ಲಿ 'ಹೊಸ ಸ್ಟಿಕ್ಕರ್' ಆಯ್ಕೆಯನ್ನು ಪರಿಚಯಿಸಲು ಯೋಜಿಸುತ್ತಿದೆ. ಈ ವೈಶಿಷ್ಟ್ಯವು ಬಳಕೆದಾರರು ತಮ್ಮ ಲೈಬ್ರರಿಯಿಂದ ಫೋಟೋಗಳನ್ನು ಆಯ್ಕೆ ಮಾಡಲು ಮತ್ತದರ  ಬಾಕ್ಗ್ರೌಂಡ್ ಅನ್ನು ತೆಗೆದುಹಾಕುವಂತಹ ಸಾಧನಗಳೊಂದಿಗೆ ಅವುಗಳನ್ನುಎಡಿಟ್ ಮಾಡಲು ಅನುಮತಿಸುತ್ತದೆ. ಇದು ಬಳಕೆದಾರರ ಅನುಭವವನ್ನು ಇನ್ನಷ್ಟು ಹೆಚ್ಚಿಸುತ್ತದೆ ಎನ್ನಲಾಗಿದೆ. 


ಇದನ್ನೂ ಓದಿ- ಕಾರ್ ಡ್ರೈವಿಂಗ್ ಕಲಿಯುವ ಮುನ್ನ ಅದರ ABCD ಬಗ್ಗೆ ನಿಮಗೂ ತಿಳಿದಿರಲಿ


ಥರ್ಡ್ ಪಾರ್ಟಿ ಆ್ಯಪ್ ಡೌನ್‌ಲೋಡ್ ಮಾಡಬೇಕಾಗಿಲ್ಲ, ಮತ್ತೆ ಮತ್ತೆ ಟೈಪ್ ಮಾಡುವ ಅವಶ್ಯಕತೆ ಇಲ್ಲ!
ಈ ಹೊಸ ವೈಶಿಷ್ಟ್ಯದ ಹೊರತಾಗಿ, ಬಳಕೆದಾರರು ಭವಿಷ್ಯದಲ್ಲಿ ಕೆಲವು ವಿಶೇಷ ಚಾಟಿಂಗ್ ಅನುಭವಕ್ಕಾಗಿ ಥರ್ಡ್ ಪಾರ್ಟಿ ಆ್ಯಪ್ ಡೌನ್‌ಲೋಡ್ ಮಾಡಬೇಕಾಗಿಲ್ಲ, ಮತ್ತೆ ಮತ್ತೆ ಟೈಪ್ ಮಾಡುವ ಅವಶ್ಯಕತೆ ಇಲ್ಲ. ಬದಲಿಗೆ ವಾಟ್ಸಾಪ್ ವೆಬ್ ಮತ್ತು ಡೆಸ್ಕ್‌ಟಾಪ್‌ನಲ್ಲಿ ಈ ರೀತಿಯ ವೈಶಿಷ್ಟ್ಯಗಳನ್ನು ಒದಗಿಸಲಾಗುವುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 
ಆದಾಗ್ಯೂ, ಐಒಎಸ್‌ನಲ್ಲಿ ಅಭಿವೃದ್ಧಿಪಡಿಸಿದ ಉಪಕರಣವು ಬಳಕೆದಾರರಿಗೆ ಹೆಚ್ಚಿನ ಅನುಕೂಲವನ್ನು ನೀಡುತ್ತದೆ ಎನ್ನಲಾಗಿದೆ. 


ಇದನ್ನೂ ಓದಿ- Chandrayaan 3: ಚಂದ್ರಯಾನ್ 3 ಉಡಾವಣೆ ದಿನಾಂಕಕ್ಕೆ ಸಂಬಂಧಿಸಿದಂತೆ ಮಹತ್ವದ ಅಪ್ಡೇಟ್ ಪ್ರಕಟ


ವಾಟ್ಸಾಪ್ ಅಪ್ಲಿಕೇಶನ್‌ನಲ್ಲಿನ ಸ್ಟಿಕ್ಕರ್ ತಯಾರಕ ಸಾಧನವನ್ನು ಬಳಸಿಕೊಂಡು ಸ್ಟಿಕ್ಕರ್‌ಗಳನ್ನು ರಚಿಸುವ ಹೊಸ ವೈಶಿಷ್ಟ್ಯದ ಕೆಲಸ ಸದ್ಯ ಪ್ರಗತಿಯಲ್ಲಿದ್ದು ಭವಿಷ್ಯದ ಅಪ್ಲಿಕೇಶನ್ ನವೀಕರಣಗಳಲ್ಲಿ ಇದು ಲಭ್ಯವಾಗಿದೆ ಎಂದು ವರದಿಯಾಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ