Whatsapp: ಈ ಟ್ರಿಕ್ ಮೂಲಕ ಸಮಯ ಮಿತಿ ಮುಗಿದ ನಂತರವೂ ವಾಟ್ಸಾಪ್ ಸಂದೇಶಗಳನ್ನು Delete ಮಾಡಬಹುದು
Whatsapp Tips And Tricks: ಹಲವು ಬಾರಿ ನಾವು ಆಕಸ್ಮಿಕವಾಗಿ ವಾಟ್ಸಾಪ್‌ನಲ್ಲಿ ಯಾರಿಗಾದರೂ ಸಂದೇಶ ಕಳುಹಿಸುತ್ತೇವೆ. ವಾಟ್ಸಾಪ್ ವೈಶಿಷ್ಟ್ಯದ ಸಹಾಯದಿಂದ, ಒಂದು ಗಂಟೆಯ ಸಮಯ ಮಿತಿ ಒಳಗೆ ಅದನ್ನು ಅಳಿಸಬಹುದು ಎಂದು ಎಲ್ಲರಿಗೂ ತಿಳಿದೇ ಇದೆ. ಆದರೆ ಸಮಯದ ಮಿತಿ ಮುಗಿದ ನಂತರವೂ ಸಂದೇಶವನ್ನು ಅಳಿಸಬಹುದು ಎಂದು ನಿಮಗೆ ತಿಳಿದಿದೆಯೇ.
ನವದೆಹಲಿ: Whatsapp Tips And Tricks- ಜನಪ್ರಿಯ ಮೆಸೇಜಿಂಗ್ ಆಪ್ ವಾಟ್ಸಾಪ್ ಅನ್ನು ಭಾರತದಲ್ಲಿ ಕೋಟ್ಯಾಂತರ ಜನರು ಬಳಸುತ್ತಾರೆ. ಮೆಸೇಜಿಂಗ್ ಆಪ್‌ಗಳ ವಿಷಯದಲ್ಲಿ ವಾಟ್ಸಾಪ್‌ನ ಹೆಸರು ಅಗ್ರ ಸ್ಥಾನದಲ್ಲಿದೆ. ಬಳಕೆದಾರರಿಗೆ ಚಾಟಿಂಗ್ ಅನ್ನು ಇನ್ನೂ ವಿಶೇಷವಾಗಿಸುವ ಸಲುವಾಗಿ ಕಂಪನಿಯು ಆಗಾಗ್ಗೆ ಹೊಸ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಲೇ ಇರುತ್ತದೆ. ವಾಟ್ಸಾಪ್‌ನಲ್ಲಿ ಒಮ್ಮೆಗೆ ಹಲವರಿಗೆ ಸಂದೇಶ ರವಾನಿಸಲು ಗ್ರೂಪ್ ಗಳನ್ನೂ ರಚಿಸಬಹುದು. ಇಂತಹ ಸಂದರ್ಭದಲ್ಲಿ ಹಲವು ಬಾರಿ ನಾವು ಆಕಸ್ಮಿಕವಾಗಿ ವಾಟ್ಸಾಪ್‌ನಲ್ಲಿ ಯಾರಿಗಾದರೂ ಸಂದೇಶ ಕಳುಹಿಸುತ್ತೇವೆ. ಆದರೆ ವಾಟ್ಸಾಪ್ ವೈಶಿಷ್ಟ್ಯದ ಸಹಾಯದಿಂದ, ಒಂದು ಗಂಟೆಯ ಸಮಯ ಮಿತಿ ಒಳಗೆ ಅದನ್ನು ಅಳಿಸಬಹುದು ಎಂದು ಎಲ್ಲರಿಗೂ ತಿಳಿದೇ ಇದೆ. ಆದರೆ ಸಮಯದ ಮಿತಿ ಮುಗಿದ ನಂತರ ಅದನ್ನು ಹೇಗೆ ಮರೆ ಮಾಡಬಹುದು ಎಂಬ ಬಗ್ಗೆ ಎಂದಾದರೂ ಯೋಚಿಸಿದ್ದೀರಾ... ಸಮಯದ ಮಿತಿ ಮುಗಿದ ನಂತರವೂ ವಾಟ್ಸಾಪ್‌ನಲ್ಲಿ ಕಲುಹಿಸಲಾಗಿರುವ ಸಂದೇಶವನ್ನು ಅಳಿಸಬಹುದು ಎಂದು ನಿಮಗೆ ತಿಳಿದಿದೆಯೇ. ಅಂತಹ ಒಂದು ಟ್ರಿಕ್ ಬಗ್ಗೆ ನಾವಿಂದು ನಿಮಗೆ ಮಾಹಿತಿ ನೀಡಲಿದ್ದೇವೆ.
ಸಮಯದ ಮಿತಿ ಮುಗಿದ ನಂತರವೂ ಸಂದೇಶಗಳನ್ನು ಅಳಿಸಬಹುದು:
ವಾಸ್ತವವಾಗಿ, ವಾಟ್ಸಾಪ್‌ನಲ್ಲಿ (WhatsApp) ಮಿಸ್ ಆಗಿ ಯಾರಿಗಾದರೂ ಸಂದೇಶ ಕಳುಹಿಸಿದಾಗ ಇದರ ವೈಶಿಷ್ಟ್ಯದ ಸಹಾಯದಿಂದ, ಒಂದು ಗಂಟೆಯ ಸಮಯ ಮಿತಿ ಒಳಗೆ ಅದನ್ನು ಅಳಿಸಬಹುದು. ಆದರೆ ಅದರ ನಂತರವೂ ನೀವು ಒಂದು ಟ್ರಿಕ್ ಮೂಲಕ ಈ ಸಂದೇಶವನ್ನು ಅಳಿಸಬಹುದು. ಇದು ನೀವು ಯಾರಿಗೆ ಸಂದೇಶ ಕಳುಹಿಸಿದ್ದೀರೋ ಆ ಬಳಕೆದಾರರಿಗೆ ನಿಮ್ಮ ಈ ಸಂದೇಶವನ್ನು ಮರೆ ಮಾಡುತ್ತದೆ. ಬೆಳಿಗ್ಗೆ 9 ಗಂಟೆಗೆ ನೀವು ಯಾರಿಗಾದರೂ ಸಂದೇಶ ಕಳುಹಿಸಿದ್ದೀರಿ ಎಂದು ಭಾವಿಸೋಣ. ಅದನ್ನು ಕಳುಹಿಸಿ ನಾಲ್ಕು ಗಂಟೆಗಳು ಕಳೆದಿವೆ, ಅಂದರೆ, ಮಧ್ಯಾಹ್ನ ಒಂದು ಗಂಟೆ. ಆದಾಗ್ಯೂ, ಸಂದೇಶವನ್ನು ಸಂಪೂರ್ಣವಾಗಿ ಅಳಿಸಬಹುದು.
ಇದನ್ನೂ ಓದಿ- IIIF150: 8 ಗಂಟೆಗಳ ಕಾಲ ನೀರಿನಲ್ಲಿ ಕಾರ್ಯನಿರ್ವಹಿಸುತ್ತಂತೆ ಈ ಸ್ಮಾರ್ಟ್‌ಫೋನ್, ಅಗ್ಗದ ದರದಲ್ಲಿ ಹಲವು ವೈಶಿಷ್ಟ್ಯ
ಟೈಮ್ ಲಿಮಿಟ್ ಮುಗಿದಿದ್ದರೂ ಆಕಸ್ಮಿಕವಾಗಿ ಕಳುಹಿಸಿದ WhatsApp ಸಂದೇಶವನ್ನು ಹೇಗೆ ಅಳಿಸುವುದು ಎಂದು ತಿಳಿಯಿರಿ:
ನೀವು ಮೊದಲು ಫೋನ್ ಅನ್ನು ಫ್ಲೈಟ್ ಮೋಡ್‌ಗೆ ಹಾಕಬೇಕು. ಅದರ ನಂತರ WhatsApp ಐಕಾನ್ ಮೇಲೆ ದೀರ್ಘವಾಗಿ ಒತ್ತಿರಿ. ನೀವು ಅನೇಕ ಆಯ್ಕೆಗಳನ್ನು ನೋಡುತ್ತೀರಿ. ನೀವು ಆಪ್ ಮಾಹಿತಿ ಆಯ್ಕೆಗೆ ಹೋಗಬೇಕು. ಇಲ್ಲಿ ನೀವು ಫೋರ್ಸ್ ಸ್ಟಾಪ್ ಅಥವಾ ಫೋರ್ಸ್ ಕ್ಲೋಸ್ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು. ಅದರ ನಂತರ ಫೋನಿನ ಸಮಯ ಮತ್ತು ದಿನಾಂಕವನ್ನು ಬದಲಾಯಿಸಬೇಕಾಗುತ್ತದೆ. ಫೋನ್‌ನ ಸೆಟ್ಟಿಂಗ್ಸ್‌ಗೆ (Phone Settings) ಹೋಗಿ ಮತ್ತು ಸಂದೇಶ ಕಳುಹಿಸಿದ ಒಂದು ಗಂಟೆಯೊಳಗೆ ಸಮಯವನ್ನು ಹೊಂದಿಸಿ. ಸಂದೇಶವನ್ನು ನಿಮಗೆ ಬೆಳಿಗ್ಗೆ 9 ಗಂಟೆಗೆ ಕಳುಹಿಸಿದರೆ, ನಂತರ ಒಂದು ಗಂಟೆಯ ಮಧ್ಯಂತರವನ್ನು (9 ಗಂಟೆಗೆ ಮುಂಚಿತವಾಗಿ) ಹೊಂದಿಸಿ.
ಇದನ್ನೂ ಓದಿ- Whatsapp: ಮೇಕ್ ಓವರ್ ಪಡೆಯುತ್ತಿದೆ ವಾಟ್ಸಾಪ್! ಫೋಟೋ ಎಡಿಟಿಂಗ್ ಪರಿಕರಗಳು ಸೇರಿದಂತೆ ಇವೆಲ್ಲವೂ ಹೊಸದಾಗಿರುತ್ತವೆ
ಅದರ ನಂತರ ನೀವು ವಾಟ್ಸಾಪ್ ಮತ್ತು ನೀವು ಅಳಿಸಲು ಬಯಸುವ ಸಂದೇಶವನ್ನು ತೆರೆದು, ಅದರಲ್ಲಿ ಎಲ್ಲರಿಗೂ ಅಳಿಸಿ ಆಯ್ಕೆಯನ್ನು ಆರಿಸಿ ಡಿಲೀಟ್ ಮಾಡಿ. ಇದರ ನಂತರ, ಫೋನ್ ಸಮಯವನ್ನು ಸರಿಪಡಿಸಿ ಮತ್ತು ಫ್ಲೈಟ್ ಮೋಡ್‌ನಿಂದ ಫೋನ್ ತೆಗೆದುಹಾಕಿ. ಅದರ ನಂತರ ನೀವು ಫೋನಿನ ಡೇಟಾವನ್ನು ಸಹ ಆನ್ ಮಾಡಬಹುದು. ನೀವು ಅಳಿಸಲು ಬಯಸುವ ಸಂದೇಶವು ಅಳಿಸಿದಂತೆ ಗೋಚರಿಸುತ್ತದೆ. ಆಕಸ್ಮಿಕವಾಗಿ ಸಂದೇಶ ಕಳುಹಿಸಿದ ಸಂದರ್ಭದಲ್ಲಿ ನೀವೂ ಸಹ ಈ ಮೋಜಿನ ಟ್ರಿಕ್ ಅನ್ನು ಪ್ರಯತ್ನಿಸಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.