WhatsApp ತನ್ನ ಬಳಕೆದಾರರಿಗೆ ಮತ್ತೊಂದು ದೊಡ್ಡ ನವೀಕರಣನೀಡಲು ಮುಂದಾಗಿದೆ. ಇತ್ತೀಚಿನ ವರದಿಯ ಪ್ರಕಾರ, ತ್ವರಿತ ಸಂದೇಶ ಅಪ್ಲಿಕೇಶನ್ ಹೊಸ  ವೈಶಿಷ್ಟ್ಯವೊಂದರ ಮೇಲೆ ಕಾರ್ಯನಿರ್ವಹಿಸುತ್ತಿದೆ, ಇದರ ಅಡಿಯಲ್ಲಿ ಬಳಕೆದಾರರು ತಮ್ಮ ಪ್ರೊಫೈಲ್‌ನಲ್ಲಿ ಕವರ್ ಫೋಟೋವನ್ನು ಹೊಂದಿಸುವ ಸೌಲಭ್ಯ ಪಡೆಯಲಿದ್ದಾರೆ. ಸದ್ಯ ಪ್ರೊಫೈಲ್ ಫೋಟೋ ಹಾಕುವ ಸೌಲಭ್ಯ ಮಾತ್ರ ಸಿಗುತ್ತಿದೆ. ವಾಟ್ಸ್ ಆಪ್ ನೀಡಲು ಹೊರಟಿರುವ ಈ ಹೊಸ  ವೈಶಿಷ್ಟ್ಯವು ನಿಮಗೆ Facebook ಅನ್ನು ನೆನಪಿಸಲಿದೆ. ಹೊಸ ವೈಶಿಷ್ಟ್ಯ ಪ್ರಸ್ತುತ ಪರೀಕ್ಷೆಯ ಹಂತದಲ್ಲಿದೆ.


COMMERCIAL BREAK
SCROLL TO CONTINUE READING

ಆದರೆ,  ಈ ವೈಶಿಷ್ಟ್ಯವು WhatsApp Business ಅಪ್ಲಿಕೇಶನ್‌ನ ಬಳಕೆದಾರರಿಗೆ ಮಾತ್ರ ಸೀಮಿತವಾಗಿರಲಿದೆ ಎನ್ನಲಾಗಿದೆ.  WABetaInfo ವರದಿಯ ಪ್ರಕಾರ, ಕಂಪನಿಯು WhatsApp ಕ್ಯಾಟಲಾಗ್ ಅನ್ನು ನಿರ್ವಹಿಸಲು ಹೊಸ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. "WhatsApp ಈಗ WhatsApp ವ್ಯಾಪಾರ ಖಾತೆಗಳಿಗಾಗಿ ಮತ್ತೊಂದು ವೈಶಿಷ್ಟ್ಯದ ಮೇಲೆ ಕಾರ್ಯನಿರ್ವಹಿಸುತ್ತಿದೆ: ಕವರ್ ಫೋಟೋವನ್ನು ಹೊಂದಿಸುವ ಸಾಮರ್ಥ್ಯ: ಇದು ಭವಿಷ್ಯದ ನವೀಕರಣದಲ್ಲಿ ಲಭ್ಯವಿರುತ್ತದೆ" ಎಂದು ವರದಿ ಹೇಳಿದೆ.


ಇದನ್ನೂ ಓದಿ-Valentine’s Day: ಆನ್ಲೈನ್ ಡೇಟಿಂಗ್ ನಲ್ಲಿ ಈ ತಪ್ಪುಗಳನ್ನು ಮಾಡಬೇಡಿ, ಇಲ್ಲದಿದ್ರೆ ಭಾರಿ ಹಾನಿ ಎದುರಿಸಬೇಕಾಗಬಹುದು?


ಈ ವೈಶಿಷ್ಟ್ಯವನ್ನು ಸಕ್ರಿಯಗೊಳಿಸಿದಾಗ WhatsApp ಬಿಸಿನೆಸ್ ಅಪ್ಲಿಕೇಶನ್‌ನ ಬೀಟಾ ಪರೀಕ್ಷಕರು ಕೆಲವು ಬದಲಾವಣೆಗಳನ್ನು ಗಮನಿಸಲಿದ್ದಾರೆ ಎಂದು ಮಾಧ್ಯಮ ವರದಿಗಳು ಹೇಳುತ್ತವೆ. ವ್ಯಾಪಾರ ಸೆಟ್ಟಿಂಗ್‌ಗಳ ಅಡಿಯಲ್ಲಿ ಬಳಕೆದಾರರು ಹೆಚ್ಚುವರಿ ಕ್ಯಾಮರಾ ಬಟನ್ ಅನ್ನು ಪಡೆಯಲಿದ್ದಾರೆ. ಹೊಸ ಕ್ಯಾಮರಾ ಬಟನ್ ಬಳಕೆದಾರರಿಗೆ ತಮ್ಮ ಪ್ರೊಫೈಲ್‌ಗಳಿಗೆ ಕವರ್ ಫೋಟೋಗಳನ್ನು ಹೊಂದಿಸಲು ಅನುಮತಿ ನೀಡಲಿದೆ. ವರದಿಯ ಪ್ರಕಾರ, "ವ್ಯಾಪಾರ ಸೆಟ್ಟಿಂಗ್‌ಗಳಿಗೆ ಕ್ಯಾಮೆರಾ ಬಟನ್ ಅನ್ನು ಸೇರಿಸಲಾಗುತ್ತಿದೆ. ಈ ಬಟನ್‌ನೊಂದಿಗೆ, ನೀವು ಕವರ್‌ನಲ್ಲಿ ಅನ್ವಯಿಸಲು ಅಥವಾ ಹೊಸ ಫೋಟೋ ತೆಗೆದುಕೊಳ್ಳಲು ಫೋಟೋವನ್ನು ಆಯ್ಕೆ ಮಾಡಬಹುದು."


ಇದನ್ನೂ ಓದಿ-Jio Best Plan! ಉಚಿತ Netflix, Amazon Prime ಸೇರಿದಂತೆ 100 GB ಡೇಟಾ ಮತ್ತು ಹಲವು ಲಾಭ


ಯಾವುದೇ WhatsApp ಬಳಕೆದಾರರು WhatsApp ವ್ಯಾಪಾರ ಬಳಕೆದಾರರ ಪ್ರೊಫೈಲ್‌ಗೆ ಭೇಟಿ ನೀಡಿದಾಗ, ಅವರು ಪ್ರೊಫೈಲ್ ಫೋಟೋ ಜೊತೆಗೆ ಕವರ್ ಫೋಟೋವನ್ನು ಸಹ ಕಾಣಬಹುದಾಗಿದೆ. ಇದು ಬಳಕೆದಾರರಿಗೆ ಅವರ ವ್ಯಾಪಾರವನ್ನು ಉತ್ತಮವಾಗಿ ಪ್ರದರ್ಶಿಸಲು ಸಹಾಯ ಮಾಡುತ್ತದೆ. iOS ಮತ್ತು Android ಎರಡಕ್ಕೂ WhatsApp ವ್ಯಾಪಾರಕ್ಕಾಗಿ ವೈಶಿಷ್ಟ್ಯವನ್ನು ಪ್ರಾರಂಭಿಸಲು WhatsApp ಯೋಜಿಸುತ್ತಿದೆ.


ಇದನ್ನೂ ಓದಿ-ಮನೆಯ ಸುರಕ್ಷತೆಗಾಗಿ ಮೊಬೈಲ್ ಅಪ್ಲಿಕೇಶನ್‌: ತಕ್ಷಣವೇ ಡೌನ್‌ಲೋಡ್ ಮಾಡಿ.. ಕಳ್ಳಕಾಕರ ಭಯದಿಂದ ನಿಶ್ಚಿಂತರಾಗಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.