WhatsApp Lock Chats: ತನ್ನ ಬಳಕೆದಾರರಿಗಾಗಿ ಆಗಾಗ್ಗೆ ಹೊಸ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುವ  ಜನಪ್ರಿಯ ಮೆಸೇಜಿಂಗ್ ಪ್ಲಾಟ್ಫಾಮ್ ವಾಟ್ಸಾಪ್ ಶೀಘ್ರದಲ್ಲೇ ಅತ್ಯಾಕರ್ಷಕ ಫೀಚರ್‌ ಅನ್ನು ಪರಿಚಯಿಸಲಿದೆ. WhatsApp Android ಬೀಟಾಗಾಗಿ ಹೊಸ ಲಾಕ್ ಚಾಟ್ಸ್ ವೈಶಿಷ್ಟ್ಯದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ವರದಿಯಾಗಿದ್ದು, ಈ ಫೀಚರ್ ಬಳಕೆದಾರರಿಗೆ ಚಾಟ್‌ಗಳನ್ನು ಲಾಕ್ ಮಾಡಲು ಮತ್ತು ಅವುಗಳನ್ನು ಮರೆಮಾಡಲು ಅನುಮತಿಸುತ್ತದೆ ಎಂದು ತಿಳಿದುಬಂದಿದೆ. 


COMMERCIAL BREAK
SCROLL TO CONTINUE READING

Wabetainfo ವರದಿಯ ಪ್ರಕಾರ, ಈ ಹೊಸ ವೈಶಿಷ್ಟ್ಯವು ಬಳಕೆದಾರರ ಗೌಪ್ಯತೆಯನ್ನು ಸುಧಾರಿಸುತ್ತದೆ. ಏಕೆಂದರೆ ಇದು ಬಳಕೆದಾರರಿಗೆ ಪಾಸ್‌ಕೋಡ್ ಅಥವಾ ಫಿಂಗರ್‌ಪ್ರಿಂಟ್ ಬಳಸಿ ಚಾಟ್‌ಗಳನ್ನು ಲಾಕ್ ಮಾಡಲು ಅನುಮತಿಸುತ್ತದೆ. ಇದು ಗೌಪ್ಯ ಮತ್ತು ಸೂಕ್ಷ್ಮ ಮಾಹಿತಿ ಸೋರಿಕೆಯಾಗುವ ಅಪಾಯವನ್ನು ತಪ್ಪಿಸುವ ಮೂಲಕ ಬಳಕೆದಾರರ ಗೌಪ್ಯತೆಯನ್ನು ಹೆಚ್ಚಿಸುತ್ತದೆ.  


ಇದನ್ನೂ ಓದಿ- ನಿಮ್ಮ ಸ್ಮಾರ್ಟ್‌ಫೋನ್ ಸ್ಪೀಕರ್‌ನಿಂದ ಸೌಂಡ್ ಕಡಿಮೆ ಬರ್ತಿದ್ಯಾ? ಈ ರೀತಿ ಸರಿಪಡಿಸಿ


ವಾಟ್ಸಾಪ್ ಸಂಬಂಧಿತ  ಎಲ್ಲಾ ಇತ್ತೀಚಿನ ಬೆಳವಣಿಗೆಗಳನ್ನು ಟ್ರ್ಯಾಕ್ ಮಾಡುವ ವೆಬ್‌ಸೈಟ್ WaBetaInfo ನ ವರದಿಯ ಪ್ರಕಾರ, ಗೂಗಲ್ ಪ್ಲೇ ಸ್ಟೋರ್ನಲ್ಲಿ ಲಭ್ಯವಿರುವ ಆಂಡ್ರಾಯ್ಡ್ 2.23.8.2 ನವೀಕರಣಕ್ಕಾಗಿ ಇತ್ತೀಚಿನ  ವಾಟ್ಸಾಪ್ ಬೀಟಾದಲ್ಲಿ ವೈಶಿಷ್ಟ್ಯವನ್ನು ಗುರುತಿಸಲಾಗಿದೆ. ಭವಿಷ್ಯದ ಅಪ್‌ಡೇಟ್‌ನಲ್ಲಿ ಇದನ್ನು ಶೀಘ್ರದಲ್ಲೇ ಎಲ್ಲಾ ಬಳಕೆದಾರರಿಗೆ ಹೊರತರಲಾಗುವುದು ಎಂದು ವರದಿಯಾಗಿದೆ. 


ವಾಟ್ಸಾಪ್ ಚಾಟ್ ಲಾಕ್ ಫೀಚರ್ ಹೇಗೆ ಕಾರ್ಯನಿರ್ವಹಿಸುತ್ತದೆ? 
ವಾಟ್ಸಾಪ್ ಚಾಟ್ ಲಾಕ್ ಇದರ ಹೆಸರೇ ಸೂಚಿಸುವಂತೆ ಈ ವೈಶಿಷ್ಟ್ಯವು ನಿಮ್ಮ ವೈಯಕ್ತಿಕ ಚಾಟ್‌ಗಳನ್ನು " ಲಾಕ್ ಮತ್ತು ಮರೆಮಾಡಲು " ಸಹಾಯ ಮಾಡುತ್ತದೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಲಾಕ್ ಆಗಿರುವ ಚಾಟ್‌ಗಳನ್ನು ತೆರೆಯಲು ಮತ್ತು ಅಧಿಸೂಚನೆಗಳನ್ನು ಓದಲು ನಿಮ್ಮ ಫಿಂಗರ್‌ಪ್ರಿಂಟ್ ಅಥವಾ ಪಾಸ್‌ಕೋಡ್ ಅನ್ನು ಬಳಸಬೇಕಾಗುತ್ತದೆ. ಇದಲ್ಲದೆ, ವಾಟ್ಸಾಪ್ ನಲ್ಲಿ ಆರ್ಕೈವ್ ಮಾಡಿದ ಚಾಟ್‌ಗಳಂತೆ , ಈ ಲಾಕ್ ಮಾಡಿದ ಚಾಟ್‌ಗಳನ್ನು ಪ್ರತ್ಯೇಕ ವಿಭಾಗಕ್ಕೆ ಸರಿಸಲಾಗುತ್ತದೆ. ಆ ಮೂಲಕವೇ ನೀವು ಲಾಕ್ ಮಾಡಿದ ಚಾಟ್‌ಗಳನ್ನು ಪ್ರವೇಶಿಸಬಹುದು. 


ಇದನ್ನೂ ಓದಿ- ಬೇಸಿಗೆಯಲ್ಲಿ ಫ್ರಿಡ್ಜ್ ಅನ್ನು ಯಾವ ತಾಪಮಾನದಲ್ಲಿ ಚಲಾಯಿಸಬೇಕು? ಇಲ್ಲಿದೆ ಮಹತ್ವದ ಮಾಹಿತಿ


ವಿಶೇಷವೆಂದರೆ ಈ ವಾಟ್ಸಾಪ್ ಚಾಟ್ ಲಾಕ್ ವೈಶಿಷ್ಟ್ಯವನ್ನು ವೈಯಕ್ತಿಕ ಚಾಟ್ ಮಾತ್ರವಲ್ಲದೆ, ಗ್ರೂಪ್ ಚಾಟ್‌ಗಳಿಗೂ ಬಳಸಬಹುದಾಗಿದೆ. ಇದು ನಿಮ್ಮ ಸಂದೇಶಗಳನ್ನು ಮರೆಮಾಡುವುದು ಮಾತ್ರವಲ್ಲ, ನಿಮ್ಮ ಮೀಡಿಯಾ ಫೈಲ್‌ಗಳನ್ನು ಖಾಸಗಿಯಾಗಿ ಇರಿಸುತ್ತದೆ. ಅರ್ಥಾತ್, ಲಾಕ್ ಮಾಡಿದ ಚಾಟ್‌ಗಳಲ್ಲಿ ನೀವು ಕಳುಹಿಸುವ ಫೋಟೋಗಳು, ವೀಡಿಯೊಗಳು ಅಥವಾ ಆಡಿಯೊವನ್ನು ಸಾಧನದ ಗ್ಯಾಲರಿಯಲ್ಲಿ ಸ್ವಯಂಚಾಲಿತವಾಗಿ ಉಳಿಸಲಾಗುವುದಿಲ್ಲ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.