Whatsapp New Feature: ಬದಲಾದ Voice Message ಪದ್ಧತಿ, ಭಾರಿ ಉತ್ಸಾಹದಲ್ಲಿ ಬಳಕೆದಾರರು
Whatsapp New Feature Update: ವಾಟ್ಸಾಪ್ ಆಡಿಯೋ ಸಂದೇಶಗಳನ್ನು (WhatsApp Voice Message) ರೆಕಾರ್ಡ್ ಮಾಡುವ ಪ್ರಕ್ರಿಯೆಯನ್ನು ಅತ್ತಷ್ಟು ಸುಲಭಗೊಳಿಸುವ ಹೊಸ ಫೀಚರ್ ಮೇಲೆ ಕೆಲಸ ಮಾಡುತ್ತಿದೆ. ಈ ಕುರಿತು ಹೆಚ್ಚಿನ ಮಾಹಿತಿ ಪಡೆದುಕೊಳ್ಳೋಣ ಬನ್ನಿ.
ನವದೆಹಲಿ : Whatsapp New Feature Update: WhatsApp ವಿಶ್ವಾದ್ಯಂತ ಬಳಸಲಾಗುವ ಅತಂತ್ಯ ಜನಪ್ರಿಯ ಸಂದೇಶ ಅಪ್ಲಿಕೇಶನ್ ಆಗಿದೆ. ಹೀಗಾಗಿ ವಾಟ್ಸ್ ಆಪ್ ಕೂಡ ತನ್ನ ಬಳಕೆದಾರರಿಗೆ ನಿತ್ಯ ನೂತನ ವೈಶಿಷ್ಟ್ಯಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತದೆ. ಇದೆ ಕಾರಣದಿಂದಾಗಿ ವೈಶಿಷ್ಟ್ಯಗಳಲ್ಲಿ ಬದಲಾವಣೆಗಳನ್ನು ಕಾಣಲಾಗುತ್ತಿದೆ. ಇದೀಗ ವಾಟ್ಸಾಪ್ ಆಡಿಯೋ ಸಂದೇಶಗಳನ್ನು (Voice Message Feature) ರೆಕಾರ್ಡ್ ಮಾಡುವ ಪ್ರಕ್ರಿಯೆಯನ್ನು ಸುಲಭಗೊಳಿಸುವ ಹೊಸ ವೈಶಿಷ್ಟ್ಯದ (WhatsApp Update)ಮೇಲೆ ಕೆಲಸ ಮಾಡುತ್ತಿದೆ.
ಈ ಮೊದಲು ಹೀಗೆ ಕೆಲಸ ಮಾಡುತ್ತಿತ್ತು ಆಡಿಯೋ ನೋಟ್
ಪ್ರಸ್ತುತ ವಾಟ್ಸ್ ಆಪ್ ನಲ್ಲಿ (WhatsApp) ಬಳಕೆದಾರರು ಒಂದೇ ಪ್ರಯತ್ನದಲ್ಲಿ ಆಡಿಯೋ ಸಂದೇಶ (WhatsApp Message) ಅನ್ನು ರೆಕಾರ್ಡ್ ಮಾಡಿ ಕಳುಹಿಸಬೇಕಾಗುತ್ತದೆ. ಬಳಕೆದಾರರು ವಾಯ್ಸ್ ರೆಕಾರ್ಡ್ ಗಳಿಗೆ ಅನುಮತಿ ನೀಡಬೇಕು ಅಥವಾ ಅದನ್ನು ಸಂಪೂರ್ಣ ರೆಕಾರ್ಡ್ ಮಾಡಬಹದು. ಇದೀಗ ವಾಟ್ಸ್ ಆಪ್ ಸಂದೇಶವನ್ನು ರೆಕಾರ್ಡ್ ಮಾಡುವ ಹೊಸ ಪದ್ಧತಿಯ ಮೇಲೆ ಕಾರ್ಯನಿರ್ವಹಿಉಸುತ್ತಿದೆ. ಇದರಲ್ಲಿ ಬಳಕೆದಾರರು ವಾಯ್ಸ್ ಸಂದೇಶವನ್ನು ಪಾಸ್ ಮಾಡಿ ಮತ್ತೆ ಮುಂದೆ ಆರಂಭಿಸಬಹುದು.
ಇದನ್ನೂ ಓದಿ-Reliance Jio ಗ್ರಾಹಕರಿಗೆ ಸಂತಸದ ಸುದ್ದಿ, Quizನಲ್ಲಿ ಪಾಲ್ಗೊಂಡು Free Internet ಹಾಗೂ ಇತರ ಬಹುಮಾನಗಳನ್ನು ಗೆಲ್ಲಿ
ಮೊದಲು ಅಂಡ್ರಾಯಿಡ್ ಬಳಕೆದಾರರಿಗೆ ಬಿಡುಗಡೆ ಮಾಡಲಾಗುವುದು
ಸ್ಮಾರ್ಟ್‌ಫೋನ್‌ಗಳಲ್ಲಿನ ಹೆಚ್ಚಿನ ಧ್ವನಿ ರೆಕಾರ್ಡರ್‌ಗಳು ಸಹ ಇದೆ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ. ವಾಟ್ಸ್ ಆಪ್ ನ ಎಲ್ಲಾ ಹೊಸ ಅಪ್ಡೇಟ್ ಗಳನ್ನು ಟ್ರ್ಯಾಕ್ ಮಾಡುವ WABetaInfo iOS ಬೀಟಾ ಆವೃತ್ತಿಯಲ್ಲಿ ವೈಶಿಷ್ಟ್ಯವನ್ನು ಗುರುತಿಸಿದೆ. ಆದರೆ, ಅಂಡ್ರಾಯಿಡ್ ಬಳಕೆದಾರರಿಗೂ ಕೂಡ ಈ ರೀತಿಯ ವೈಶಿಷ್ಟ್ಯ ಜಾರಿಗೊಳಿಸಲು ವಾಟ್ಸ್ ಆಪ್ ಕಾರ್ಯ ನಿರ್ವಹಿಸುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಇದನ್ನೂ ಓದಿ-Vivo X70 Pro+ ಸ್ಮಾರ್ಟ್ಫೋನ್ ಖರೀದಿಯ ಮೇಲೆ ಬಂಪರ್ ಡಿಸ್ಕೌಂಟ್
ಚಾಟ್ ಬ್ಯಾಕಪ್‌ಗಾಗಿ ವಾಟ್ಸಾಪ್ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ವೈಶಿಷ್ಟ್ಯವನ್ನು ಪುನಃ ಪರಿಚಯಿಸಿದೆ. ಈ ವೈಶಿಷ್ಟ್ಯವನ್ನು ಮೊದಲು ಆಂಡ್ರಾಯ್ಡ್ ಮತ್ತು ಐಒಎಸ್ ಎರಡರ ಬೀಟಾ ಆವೃತ್ತಿಗಳಲ್ಲಿ ಪರಿಚಯಿಸಲಾಗಿತ್ತು, ಆದರೆ ನಂತರ ಅದನ್ನು ಹಿಂಪಡೆಯಲಾಗಿತ್ತು. ಆದರೆ ಇದೀಗ ಪುನಃ ವಾಟ್ಸಾಪ್ ಕಳೆದ ವಾರ ಬೀಟಾ ಪರೀಕ್ಷಕರಿಗೆ ಇದನ್ನು ಮರು ಪರಿಚಯಿಸಿತು.
ಇದನ್ನು ಓದಿ-Amazon Great Indian Festivalನಲ್ಲಿ 58 ಸಾವಿರ ರೂಪಾಯಿಗಳ ರಿಯಾಯಿತಿ ದರದಲ್ಲಿ ಸಿಗಲಿದೆ 65 ಇಂಚಿನ Smart TV
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.