ನವದೆಹಲಿ: WhatsApp Latest Feature - ತ್ವರಿತ ಸಂದೇಶ ರವಾನಿಸುವ ಅಪ್ಲಿಕೇಶನ್ ವಾಟ್ಸಾಪ್ (WhatsApp) ತನ್ನ ಬಳಕೆದಾರರಿಗೆ ಉತ್ತಮ ಅನುಭವಗಳನ್ನು ನೀಡಲು ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಇದೇ ಸಂಚಿಕೆಯಲ್ಲಿ, ವಾಟ್ಸಾಪ್ ಸ್ಟಿಕ್ಕರ್‌ಗಳಿಗೆ ಸಂಬಂಧಿಸಿದ ವಿಶೇಷ ವೈಶಿಷ್ಟ್ಯವನ್ನು ತಂದಿದೆ. ಈ ಮೆಸೇಜಿಂಗ್ ಅಪ್ಲಿಕೇಶನ್‌ನಲ್ಲಿ WhatsApp Sticker ಹೆಚ್ಚು ಇಷ್ಟಪಡುವ ಸಂಗತಿಗಳಾಗಿವೆ.  ಹಾಗೆ ನೋಡಿದರೆ, ವಾಟ್ಸಾಪ್ ಹೊಸ ಸ್ಟಿಕ್ಕರ್‌ಗಳನ್ನು ಕೇವಲ  ಅಲ್ಪಾವಧಿಗೆ ಮಾತ್ರ ಬಿಡುಗಡೆ ಮಾಡುತ್ತದೆ, ಇದನ್ನು ಆಂಡ್ರಾಯ್ಡ್ (WhatsApp Android Users) ಮತ್ತು ಐಒಎಸ್ (WhatsApp iOS Users ಬಳಕೆದಾರರು ಅಪ್ಲಿಕೇಶನ್‌ನಿಂದ ಡೌನ್‌ಲೋಡ್ ಮಾಡಬಹುದು. ಆದರೆ, ಐಒಎಸ್ ಬೀಟಾ (WhatsApp iOS Beta Users) ಬಳಕೆದಾರರಿಗಾಗಿ ಕಂಪನಿಯು ಹೊಸ ಸ್ಟಿಕ್ಕರ್ ವೈಶಿಷ್ಟ್ಯವನ್ನು ಇಂದು ಬಿಡುಗಡೆ ಮಾಡಿದೆ  ವಾಟ್ಸಾಪ್ ಪ್ರಸ್ತುತ ಈ ವೈಶಿಷ್ಟ್ಯದ ಪರೀಕ್ಷೆಯನ್ನು ನಡೆಸುತ್ತಿದೆ, ಇದರ ಮೂಲಕ ಬಳಕೆದಾರರು ಸ್ಟಿಕ್ಕರ್ ಪ್ಯಾಕ್‌ಗಳನ್ನು ಫಾರ್ವರ್ಡ್ ಮಾಡಬಹುದು. WABetaInfo ಪ್ರಕಾರ, ಈ ಹೊಸ ವೈಶಿಷ್ಟ್ಯವು ಐಒಎಸ್ 2.21.120.13 ಗಾಗಿ ವಾಟ್ಸಾಪ್ ಬೀಟಾ ಆವೃತ್ತಿಯೊಂದಿಗೆ ಲಭ್ಯವಿದೆ.


COMMERCIAL BREAK
SCROLL TO CONTINUE READING

WhatsApp Sticker Pack ಅನ್ನು ಹೇಗೆ ಫಾರ್ವರ್ಡ್ ಮಾಡಬೇಕು (WhatsApp Latest News)
>> ಪ್ರಸ್ತುತ ವಾಟ್ಸ್ ಆಪ್ ಬಳಕೆದಾರರಿಗೆ ವಾಟ್ಸ್ ಆಪ್ ಪ್ರತ್ಯೇಕ ಸ್ಟಿಕ್ಕರ್ ಗಳನ್ನು ಮಾತ್ರ ಫಾರ್ವರ್ಡ್ ಮಾಡುವ ಅವಕಾಶ ನೀಡಿದೆ. ಆದರೆ, ಇಡೀ ಸ್ಟಿಕರ್ ಪ್ಯಾಕ್ ಅನ್ನು ಫಾರ್ವರ್ಡ್ ಮಾಡುವ ಅವಕಾಶ ಕಂಪನಿ ಬಳಕೆದಾರರಿಗೆ ನೀಡಿಲ್ಲ. ಆದರೆ ಹೊಸ ಅಪ್ಡೇಟ್ ಪ್ರಕಾರ, ಹೊಸ ವೈಶಿಷ್ಟ್ಯವನ್ನು ಬಳಸಿ ಬಳಕೆದಾರರು ಏಕಕಾಲಕ್ಕೆ ಸಂಪೂರ್ಣ ಸ್ಟಿಕರ್ ಪ್ಯಾಕ್ ಅನ್ನು ಫಾರ್ವರ್ಡ್ ಮಾಡಬಹುದು.


ಇದನ್ನೂ ಓದಿ-Recharge Plan: 90 ದಿನಗಳ ವ್ಯಾಲಿಡಿಟಿ ಜೊತೆಗೆ ಜಿಯೋಗಿಂತ 2.5 ಪಟ್ಟು ಹೆಚ್ಚು 4G Internet Data ನೀಡುತ್ತಿದೆ ಈ ಕಂಪನಿ


>> Sticker Pack ಅನ್ನು ಫಾರ್ವರ್ಡ್ ಮಾಡಲು ನೀವು ಮೊದಲು ವಾಟ್ಸ್ ಆಪ್ ಸ್ಟಿಕರ್ ಸ್ಟೋರ್ ಗೆ ಭೇಟಿ ನೀಡಿ, ಅಲ್ಲಿ ನಿಮಗೆ ಫಾರ್ವರ್ಡ್ ಬಟನ್ ನೀಡಲಾಗಿದೆಯೋ ಅಥವಾ ಇಲ್ಲವೋ ಎಂಬುದನ್ನೊಮ್ಮೆ ನೋಡಿ (WhatsApp New Feature).


>> ವಾಟ್ಸ್ ಆಪ್ ಸ್ಟಿಕರ್ ಸ್ಟೋರ್ ಗೆ ಭೇಟಿ ನೀಡಲು, ಆಪ್ ನ ಯಾವುದಾದರೊಂದು ಚಾಟ್ ಓಪನ್ ಮಾಡಿ ಹಾಗೂ ಇಮೊಜಿ ಬಟನ್ ಮೇಲೆ ಕ್ಲಿಕ್ಕಿಸಿ . ಬಳಿಕ ಅದರಲ್ಲಿ ಸ್ಟಿಕರ್ ಐಕಾನ್ ಆಯ್ಕೆ ಮಾಡಿ ಮತ್ತು ವಾಟ್ಸ್ ಆಪ್ ಸ್ಟಿಕರ್ ಸ್ಟೋರ್ ತೆರೆಯಲು + ಐಕಾನ್ ಮೇಲೆ ಟ್ಯಾಪ್ ಮಾಡಿ (WhatsApp Sticker Pack Forward).


ಇದನ್ನೂ ಓದಿ-ಈ ಕೆಲಸ ಮಾಡಿದರೆ ನಾನ್ ಸ್ಮಾರ್ಟ್ ಟಿವಿಯಲ್ಲೂ ವೀಕ್ಷಿಸಬಹುದು Netflix


>> ವಾಟ್ಸ್ ಆಪ್ ಸ್ಟಿಕರ್ ಪ್ಯಾಕ್ ಅನ್ನು ಫಾರ್ವರ್ಡ್ ಮಾಡಲು, ಫಾರ್ವರ್ಡ್ ಬಟನ್ ಮೇಲೆ ಕ್ಲಿಕ್ಕಿಸಿ ಹಾಗೂ ನಂತರ ನಿಮ್ಮ ಕಾಂಟಾಕ್ಟ್ ಲಿಸ್ಟ್ ನಿಂದ ನೀವು ಸ್ಟಿಕರ್ ಪ್ಯಾಕ್ ಅನ್ನು ಕಳುಹಿಸಬಯಸುವವರ ಹೆಸರನ್ನು ಆಯ್ಕೆ ಮಾಡಿ.


>> ಇದರಿಂದ ವಾಟ್ಸ್ ಆಪ್ ಒಂದು ಡೀಪ್ ಲಿಂಕ್ ಕಳುಹಿಸಲಿದ್ದು, ಇದರಿಂದ ನೀವು ಸ್ಟಿಕರ್ ಪ್ಯಾಕ್ ಅನ್ನು ನೋಡಿ ಡೌನ್ಲೋಡ್ ಮಾಡಬಹುದು.


>> WABetaInfo ನಲ್ಲಿ ನೀಡಿರುವ ಮಾಹಿತಿ ಪ್ರಕಾರ, ಪ್ರಸ್ತುತ ಈ ಸೌಲಭ್ಯ ಕೇವಲ ಅಧಿಕೃತ ವಾಟ್ಸ್ ಆಪ್ ಸ್ಟಿಕರ್ ಪ್ಯಾಕ್ ಗಾಗಿ ಮಾತ್ರ ಲಭ್ಯವಿದೆ. ಪ್ರಸ್ತುತ ಇದು ವಾಟ್ಸ್ ಆಪ್ ನ ಐಓಎಸ್ ಬೀಟಾ ಬಳಕೆದಾರರಿಗೆ ಮಾತ್ರ ಲಭ್ಯವಿದ್ದು , ಶೀಘ್ರದಲ್ಲಿಯೇ ಇದನ್ನು ಇತರ ಬಳಕೆದಾರರಿಗೂ ಕೂಡ ಜಾರಿಯಾಗುವ ನಿರೀಕ್ಷೆ ಇದೆ. 


ಇದನ್ನೂ ಓದಿ-International Yoga Day 2021: PM Modiಯಿಂದ mYoga App ಬಿಡುಗಡೆ, ನಿಮ್ಮ ಈ Yoga Buddy ಕುರಿತಾದ ಡೀಟೇಲ್ಸ್ ಇಲ್ಲಿದೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.