WhatsApp New Feature :  WhatsApp ಕೆಲವು ತಿಂಗಳ ಹಿಂದೆ  ಮೆಸೇಜ್ ರಿಯಾಕ್ಷನ್ ವೈಶಿಷ್ಟ್ಯವನ್ನು ಪರಿಚಯಿಸಿದೆ. ಇದರಲ್ಲಿ 6  ರಿಯಾಕ್ಷನ್  ಸೇರಿಸಲಾಗಿತ್ತು. ಈಗ ಕಂಪನಿಯು ಇದರ ಸಂಖ್ಯೆಗಳನ್ನು ಹೆಚ್ಚಿಸಿದೆ. ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್ ಅವರು ರೋಬೋಟ್ ಫೇಸ್, ಫ್ರೆಂಚ್ ಫ್ರೈಸ್, ಮೆನ್ ಸರ್ಫಿಂಗ್, ಸನ್‌ಗ್ಲಾಸ್ ಸ್ಮೈಲಿ, 100 ಪ್ರತಿಶತ ಚಿಹ್ನೆ ಮತ್ತು ಫಿಸ್ಟ್ ಬಂಪ್ ಎಮೋಜಿಗಳನ್ನು ಹಂಚಿಕೊಂಡಿದ್ದಾರೆ. ಅಲ್ಲದೆ, ವಾಟ್ಸಾಪ್‌ನಲ್ಲಿ  ಯಾವುದೇ ರೀತಿಯ ರಿಯಾಕ್ಷನ್ ಇಮೋಜಿಯನ್ನು ಬಳಸುವ ಸಾಧ್ಯವಾಗುವಂಥಹ ಕ್ಷಮತೆಯನ್ನು  ಹೊರತರುತ್ತಿರುವುದಾಗಿ ತಿಳಿಸಿದ್ದಾರೆ.  ಮೊದಲು ಈ ವೈಶಿಷ್ಟ್ಯವು ಪ್ರೀತಿ, ನಗು, ಆಶ್ಚರ್ಯ, ದುಃಖ ಮತ್ತು ಧನ್ಯವಾದಗಳಂತಹ 6 ಪ್ರತಿಕ್ರಿಯೆಗಳಿಗೆ ಸೀಮಿತವಾಗಿತ್ತು.   ಆದರೆ ಈಗ ಬಳಕೆದಾರರು ಸಂದೇಶಕ್ಕೆ ಪ್ರತಿಕ್ರಿಯಿಸುವಾಗ ಯಾವ ಇಮೊಜಿ ಬೇಕಾದರೂ ಬಳಸುವುದು ಸಾಧ್ಯವಾಗುತ್ತದೆ.


Flipkart ಸಿಗುತ್ತಿರುವ ಈ ಕೊಡುಗೆ ಮತ್ತೆ ಸಿಗಲ್ಲ, ಕೇವಲ ರೂ.149ಕ್ಕೆ ಖರೀದಿಸಿ ರಿಯಲ್ ಮೀ ಕಂಪನಿಯ ಈ ಜಬರ್ದಸ್ತ್ ಸ್ಮಾರ್ಟ್ ಫೋನ್


COMMERCIAL BREAK
SCROLL TO CONTINUE READING

ಎಲ್ಲಾ WhatsApp ಬಳಕೆದಾರರೂ ಶೀಘ್ರದಲ್ಲೇ ಬಳಸಬಹುದು :
ವಿಸ್ತರಿತ ಎಮೋಜಿ ಪ್ರತಿಕ್ರಿಯೆ ವೈಶಿಷ್ಟ್ಯವು ಈ ಹಿಂದೆ iOS ಮತ್ತು Android ಎರಡರಲ್ಲೂ ಸೇವೆಯ ಬೀಟಾ ಆವೃತ್ತಿಗಳಲ್ಲಿ ಕಂಡುಬಂದಿದೆ.  ವಿಸ್ತರಿತ ಎಮೋಜಿ ಪ್ರತಿಕ್ರಿಯೆ ವೈಶಿಷ್ಟ್ಯವು ಇದೀಗ ಹೊರಬರುತ್ತಿದ್ದು, ಮುಂಬರುವ ವಾರಗಳಲ್ಲಿ ಎಲ್ಲಾ WhatsApp ಬಳಕೆದಾರರಿಗೂ ಇದು ಲಭ್ಯವಿರಲಿದೆ. 

 


Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...