WhatsApp New Feature: ಶೀಘ್ರದಲ್ಲೇ ಸ್ಟೇಟಸ್ ನಲ್ಲಿ ನೀವು ಈ ಕೆಲಸ ಮಾಡಬಹುದು! ಸಿಗಲಿದೆ ಜಬರ್ದಸ್ತ್ ವೈಶಿಷ್ಟ್ಯ!
WhatsApp Video Status Update: ಸ್ಟೇಟಸ್ ಅಪ್ಡೇಟ್ ಗೆ ಸಂಬಂಧಿಸಿದಂತೆ ಶೀಘ್ರದಲ್ಲೇ ವಾಟ್ಸ್ಆಪ್ ಹೊಸ ವೈಶಿಷ್ಟ್ಯವೊಂದನ್ನು ಬಿಡುಗಡೆ ಮಾಡಲಿದೆ. ಈ ವೈಶಿಷ್ಟ್ಯದ ಮೂಲಕ ಬಳಕೆದಾರರು ಇನ್ಮುಂದೆ ಸ್ಟೇಟಸ್ ನಲ್ಲಿಯೂ ಕೂಡ ದೊಡ್ಡ ವಿಡಿಯೋಗಳನ್ನು ಹಂಚಿಕೊಳ್ಳಬಹುದು, ಶೀಘ್ರದಲ್ಲಿಯೇ ಈ ವೈಶಿಷ್ಟ್ಯ ಎಲ್ಲಾ ಬಳಕೆದಾರರಿಗೆ ಬಿಡುಗಡೆಯಾಗಲಿದೆ. (Technology News In Kannada)
WhatsApp Long Video Status Update: ವಾಟ್ಸಾಪ್ ಒಂದರ ನಂತರ ಒಂದರಂತೆ ಹೊಸ ವೈಶಿಷ್ಟ್ಯಗಳ ಮೇಲೆ ಕಾರ್ಯನಿರ್ವಹಿಸುತ್ತಿದೆ. ಸ್ಕ್ರೀನ್ ಶಾಟ್ ಬ್ಲಾಕ್ ನಿಂದ ಅವತಾರ್ ವೈಶಿಷ್ಟ್ಯದವರೆಗೆ. ವಾಟ್ಸಾಪ್ ಇತ್ತೀಚೆಗೆ ಹಲವು ಹೊಸ ವೈಶಿಷ್ಟ್ಯಗಳನ್ನು ಜಾರಿಗೆ ತಂದಿದೆ. ಈ ಸರಣಿಯಲ್ಲಿ, ಸ್ಟೇಟಸ್ ಅಪ್‌ಡೇಟ್‌ಗಾಗಿ ಕಂಪನಿಯು ಇದುವರೆಗಿನ ಅತ್ಯಂತ ಪವರ್ಫುಲ್ ವೈಶಿಷ್ಟ್ಯವನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ (long video status for whatsapp). ಈ ಹೊಸ ವೈಶಿಷ್ಟ್ಯದಿಂದ ಬಳಕೆದಾರರು ಸ್ಟೇಟಸ್ ಅಪ್ಡೇಟ್ ನಲ್ಲಿ ಒಂದು ನಿಮಿಷದ ವೀಡಿಯೊ ಕೂಡ ಹಂಚಿಕೊಳ್ಳಬಹುದು. (Technology News In Kannada)
ಇದುವರೆಗೆ, WhatsApp ನಲ್ಲಿ ನೀವು ಕೇವಲ 30 ಸೆಕೆಂಡುಗಳ ವೀಡಿಯೊವನ್ನು ಮಾತ್ರ ಸ್ಟೇಟಸ್‌ನಲ್ಲಿ ಪೋಸ್ಟ್ ಮಾಡಬಹುದಾಗಿತ್ತು, ಆದರೆ ಹೊಸ ವೈಶಿಷ್ಟ್ಯ ಬಂದ ಬಳಿಕ, ಸ್ಟೇಟಸ್ ಸಮಯದ ಮಿತಿಯನ್ನು ಹೆಚ್ಚಿಸಲಾಗಿದೆ. WABetaInfo ಈ ಹೊಸ ವೈಶಿಷ್ಟ್ಯದ ಬಗ್ಗೆ ಮಾಹಿತಿಯನ್ನು ನೀಡಿದೆ. ಅಷ್ಟೇ ಅಲ್ಲ, WABetaInfo ಹೊಸ ವೈಶಿಷ್ಟ್ಯದ ಸ್ಕ್ರೀನ್‌ಶಾಟ್ ಅನ್ನು ಕೂಡ ಹಂಚಿಕೊಂಡಿದೆ (whatsapp removes thirty second limit for video status update).
ಇದನ್ನೂ ಓದಿ-Internet Speed ಕಡಿಮೆಯಾಗಿದೆಯಾ? ಈ ನಾಲ್ಕು ಟಿಪ್ಸ್ ಅನುಸರಿಸಿ, ಸೂಪರ್ ಫಾಸ್ಟ್ ವೇಗದಲ್ಲಿ ಡೌನ್ಲೋಡ್ ಮಾಡಿ!
ಈ ವೈಶಿಷ್ಟ್ಯಕ್ಕಾಗಿ ಬಳಕೆದಾರರು ದೀರ್ಘಾವಧಿಯಿಂದ ಕಾಯುತ್ತಿದ್ದರು
ಕಂಪನಿಯು ಬೀಟಾ ಬಳಕೆದಾರರಿಗಾಗಿ ಈ ಹೊಸ ವೈಶಿಷ್ಟ್ಯವನ್ನು ಈಗಾಗಲೇ ಜಾರಿಗೆ ತಂದಿದೆ. ಬೀಟಾ ಬಳಕೆದಾರರು ಈ ಅಪ್ಡೇಟ್ ಅನ್ನು Android 2.24.7.6 ಗಾಗಿ WhatsApp ಬೀಟಾದಲ್ಲಿ ಪರಿಶೀಲಿಸಬಹುದು. ದೀರ್ಘಾವಧಿಯ ವೀಡಿಯೊಗಳನ್ನು ಸ್ಟೇಟಸ್‌ನಲ್ಲಿ ಹಂಚಿಕೊಳ್ಳುವ ವೈಶಿಷ್ಟ್ಯಕ್ಕಾಗಿ ಬಳಕೆದಾರರು ದೀರ್ಘ ಕಾಲದಿಂದ ಕಾಯುತ್ತಿದ್ದರು. ವಾಟ್ಸ್ ಆಪ್ ನ ಈ ಬಿಡುಗಡೆಯಿಂದ ಅವರ ನಿರೀಕ್ಷೆಗೆ ತೆರೆಬಿದ್ದಂತಾಗಿದೆ. ಬೀಟಾ ಪರೀಕ್ಷೆ ಪೂರ್ಣಗೊಂಡ ಬಳಿಕ ಜಾಗತಿಕವಾಗಿ ಎಲ್ಲಾ ಬಳಕೆದಾರರಿಗೆ ಈ ವೈಶಿಷ್ಟ್ಯವನ್ನು ಪರಿಚಯಿಸಲಾಗುವುದು ಎನ್ನಲಾಗಿದೆ.
WhatsApp Update: ಶೀಘ್ರದಲ್ಲೇ WhatsApp ಬಳಕೆದಾರರಿಗೂ ಸಿಗಲಿದೆ UPI QR Code ಸ್ಕ್ಯಾನ್ ಸೌಲಭ್ಯ!
ಸ್ಟೇಟಸ್ ಅಪ್‌ಡೇಟ್ ವೈಶಿಷ್ಟ್ಯದ ಹೊರತಾಗಿ, ವಾಟ್ಸಾಪ್ ಮತ್ತೊಂದು ವೈಶಿಷ್ಟ್ಯ ಮೇಲೆ ಕಾರ್ಯನಿರ್ವಹಿಸುತ್ತಿದೆ. ಈ ವೈಶಿಷ್ಟ್ಯದಿಂದ ನೀವು ವಾಟ್ಸ್ ಆಪ್ ವೇದಿಕೆಯಲ್ಲಿಯೇ ಇದ್ದುಕೊಂಡು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಯುಪಿಐ ಪೆಮೆಂಟ್ ಮಾಡಬಹುದು. WABetaInfo ನ ವರದಿಯ ಪ್ರಕಾರ ಕಂಪನಿಯು ಈ ವೈಶಿಷ್ಟ್ಯದ ಕುರಿತು ಬೀಟಾ ಪರೀಕ್ಷೆಯನ್ನು ನಡೆಸುತ್ತಿದೆ, ಅದರ ನಂತರವೇ ಈ ವೈಶಿಷ್ಟ್ಯಜಾಗತಿಕವಾಗಿ ಎಲ್ಲಾ ಬಳಕೆದಾರರಿಗೆ ಹೊರಬರಲಿದೆ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ