WhatsApp Channel: ಜನಪ್ರಿಯ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಆಗಿರುವ ವಾಟ್ಸಾಪ್ ತನ್ನ ಬಳಕೆದಾರರಿಗಾಗಿ ಆಗಾಗ್ಗೆ ಹೊಸ ಹೊಸ ವೈಶಿಷ್ಟ್ಯವನ್ನು ಬಿಡುಗಡೆ ಮಾಡುತ್ತಲೇ ಇರುತ್ತದೆ. ಕಳೆದ ಕೆಲ ತಿಂಗಳುಗಳಿಂದ ವಾಟ್ಸಾಪ್ ಚಾನಲ್ ವೈಶಿಷ್ಟ್ಯವನ್ನು ನವೀಕರಿಸುವಲ್ಲಿ ಕಾರ್ಯನಿರ್ವಹಿಸುತ್ತಿರುವ ವೇದಿಕೆಯು ಚಾನಲ್ ಪಿನ್ನಿಂಗ್ ವೈಶಿಷ್ಟ್ಯವನ್ನು ಪರೀಕ್ಷಿಸಲು ಪ್ರಾರಂಭಿಸಿದೆ. ಈಗ ಅಪ್ಲಿಕೇಶನ್ ಚಾನಲ್ ಪಟ್ಟಿಗಾಗಿ ಹೊಸ ಇಂಟರ್ಫೇಸ್ ಅನ್ನು ಬಿಡುಗಡೆ ಮಾಡಿದೆ.


COMMERCIAL BREAK
SCROLL TO CONTINUE READING

ವಾಟ್ಸಾಪ್ ವೈಶಿಷ್ಟ್ಯಗಳನ್ನು ಟ್ರ್ಯಾಕ್ ಮಾಡುವ ವೆಬ್‌ಸೈಟ್ wabetainfo ವರದಿಯಿಂದ ಈ ಅಪ್‌ಡೇಟ್ ಕುರಿತು ಮಾಹಿತಿಯನ್ನು ಸ್ವೀಕರಿಸಲಾಗಿದೆ. ವಾಟ್ಸಾಪ್ ನ ಈ ನವೀಕರಣವು ಬಳಕೆದಾರರ ಅನುಭವವನ್ನು ಸುಧಾರಿಸುತ್ತದೆ ಎಂದು ನಂಬಲಾಗಿದೆ. 


ಆಂಡ್ರಾಯ್ಡ್ ಬಳಕೆದಾರರಿಗೆ ಗುಡ್ ನ್ಯೂಸ್: ಈಗ ಮೊದಲಿಗಿಂತಲೂ ಸ್ಟ್ರಾಂಗ್ ಆಗಿರಲಿದೆ ಭದ್ರತೆ


ಈ ಕುರಿತಂತೆ wabetainfo ತನ್ನ ಅಧಿಕೃತ X (ಟ್ವಿಟ್ಟರ್) ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದೆ. ಇದರಲ್ಲಿ ಲಗತ್ತಿಸಲಾದ ಇಮೇಜ್ ಅನ್ನು ಗಮನಿಸಿದರೆ ವಾಟ್ಸಾಪ್  ಚಾನಲ್ ಪಟ್ಟಿಗಾಗಿ ಬಿಡುಗಡೆ ಮಾಡಲಾದ ಹೊಸ ಇಂಟರ್ಫೇಸ್ ಹಳೆಯ ವಿನ್ಯಾಸವನ್ನು ಹೋಲುತ್ತದೆ ಎಂದು ಸ್ಪಷ್ಟವಾಗುತ್ತದೆ. 


ವಾಟ್ಸಾಪ್ ಚಾನಲ್ ವೈಶಿಷ್ಟ್ಯವನ್ನು ಸುಧಾರಿಸಲು ಬಿಡುಗಡೆಗೊಳಿಸಿರುವ ಈ ಹೊಸ ವೈಶಿಷ್ಟ್ಯವು ಬಳಕೆದಾರರಿಗೆ ಅದನ್ನು ನಿರ್ವಹಿಸಲು ಸುಲಭವಾಗುತ್ತದೆ. ಆದಾಗ್ಯೂ, ಚಾನಲ್‌ಗಳನ್ನು ಪಿನ್ ಮಾಡುವ ಸಾಮರ್ಥ್ಯವನ್ನು ಇದಕ್ಕೆ ಸೇರಿಸಲಾಗಿಲ್ಲ. ಸ್ಥಿರ ಬಳಕೆದಾರರಿಗಾಗಿ ಪಿನ್ ಚಾನಲ್ ವೈಶಿಷ್ಟ್ಯವನ್ನು ಶೀಘ್ರದಲ್ಲೇ ಪ್ರಾರಂಭಿಸಬಹುದು ಎಂದು ಇದು ಸೂಚಿಸುತ್ತದೆ. 


ಇದನ್ನೂ ಓದಿ- ಫೋನ್‌ನ ಪರದೆಯ ಮೇಲೆ ಸಿಂಬಲ್ ಡ್ರಾ ಮಾಡಿದರೆ ತೆರೆಯುತ್ತೆ ಅಪ್ಲಿಕೇಶನ್! ಇಲ್ಲಿದೆ ಅದ್ಭುತ ಟ್ರಿಕ್!


ಗಮನಾರ್ಹ ವಿಷಯವೆಂದರೆ, ಈ ಹೊಸ ವೈಶಿಷ್ಟ್ಯಗಳನ್ನು ಕುರಿತಂತೆ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ಯಾವುದೇ ರೀತಿಯ ಅಧಿಕೃತ ಮಾಹಿತಿಯನ್ನು ಬಹಿರಂಗ ಪಡಿಸಿಲ್ಲ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.