Whatsapp Scam: ಜಗತ್ತಿನ ಪ್ರಸಿದ್ಧ ಮೆಸೇಜಿಂಗ್ ಪ್ಲಾಟ್ಫಾರ್ಮ್ ಆಗಿರುವ ವಾಟ್ಸಾಪ್ ಇದೀಗ ವಂಚಕರ ಸ್ವರ್ಗವಾಗಿ ಮಾರ್ಪಟ್ಟಿದೆ. ಮೊದಲೆಲ್ಲಾ, ಬಹುಮಾನ ಬಂದಿದೆ ಎಂಬ ಕರೆ, ಸಂದೇಶಗಳ ಮೂಲಕ ಜನರನು ವಂಚಿಸುತ್ತಿದ್ದ ವಂಚಕರು ಇದೀಗ ನಕಲಿ ಉದ್ಯೋಗಾವಕಾಶಗಳ ಹೆಸರಿನಲ್ಲಿ ವಂಚಿಸುತ್ತಿದ್ದಾರೆ. ಮಾತ್ರವಲ್ಲ, ಮನರಂಜನೆಗೆ ಹೆಸರುವಾಸಿ ಆಗಿರುವ ಯೂಟ್ಯೂಬ್ ಅನ್ನು ಕೂಡ ಅವರು ಬಿಡುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ  ಯೂಟ್ಯೂಬ್‌ನಲ್ಲಿ ವೀಡಿಯೊ ಲೈಕ್ ಮಾಡಿ 50 ರೂಪಾಯಿ ಗಳಿಸಬಹುದು ಎಂಬ ಸುದ್ದಿ ಸಖತ್ ಸದ್ದು ಮಾಡುತ್ತಿದೆ. ಆದರೆ, ಇದು ಎಷ್ಟು ಸತ್ಯ ಎಂದು ಎಂದಾದರೂ ಯೋಚಿಸಿದ್ದೀರಾ?


COMMERCIAL BREAK
SCROLL TO CONTINUE READING

ವಾಸ್ತವವಾಗಿ, ವಾಟ್ಸಾಪ್  ಚಾಟ್‌ನಲ್ಲಿ  ಉದ್ಯೋಗಾವಕಾಶಗಳ ಸಂದೇಶ ಕಳುಹಿಸುವ ಮೂಲಕ ಅದರ ಮೇಲೆ ಕ್ಲಿಕ್ ಮಾಡಿದಾಗ ಯೂಟ್ಯೂಬ್ ವಿಡಿಯೋಗಳನ್ನು ಲೈಕ್ ಮಾಡಿ ಹಣ ಗಳಿಸಬಹುದು ಎಂಬ ಸಂದೇಶ ಗೋಚರಿಸುತ್ತದೆ. ಇದು ಕೇಳಲು ಎಷ್ಟು ಸುಲಭವೋ, ಲೈಕ್ ಮಾಡುವುದು ಕೂಡ ಅಷ್ಟೇ ಸುಲಭದ ಕೆಲಸ. ಒಂದು ಲೈಕ್ ಬಟನ್ ಒತ್ತಿದರೆ 50 ರೂ. ಸಿಗುತ್ತೆ ಎಂದರೆ ಯಾರು ತಾನೇ ಈ ಕೆಲಸ ಮಾಡಲ್ಲ ಹೇಳಿ. ಹಾಗಂತ, ನೀವೂ ಹೀಗೆ ಮಾಡಲು ಹೊರಟರೆ ಹುಷಾರ್! ವಂಚನೆಗೆ ಬಲಿಯಾಗುತೀರಿ. 


ಇದನ್ನೂ ಓದಿ- Zomatoದಲ್ಲಿ ಫುಡ್ ಆರ್ಡರ್ ಮಾಡುವ ಮುನ್ನ ಎಚ್ಚರ! ಎಚ್ಚರ!


ಇತ್ತೀಚಿನ ವರದಿಗಳ ಪ್ರಕಾರ, ವಂಚಕರು ಸುಲಭವಾಗಿ ಹಣ ಗಳಿಸಿ ಎಂಬ ಭರವಸೆ ನೀಡಿ ಜನರನ್ನು ವಂಚಿಸಲು WhatsApp, LinkedIn ಮತ್ತು Facebook ನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಬಳಸುತ್ತಾರೆ. 


ಇದನ್ನೂ ಓದಿ- ಹೊಂಡಾ ಇಂಡಿಯಾ ದಿಂದ ಹೊಸ ಸುಧಾರಿತ ʼಆಕ್ಟಿವಾ 2023ʼ ಬಿಡುಗಡೆ..!


ಇವುಗಳಲ್ಲಿ ಚಾಟ್ ಮೂಲಕ ಉದ್ಯೋಗಾವಕಾಶದ ಆಫರ್ ನೀಡಲಾಗುತ್ತದೆ. ಇದಲ್ಲದೆ, ನೀವು ಯೂಟ್ಯೂಬ್ ವಿಡಿಯೋಗಳನ್ನು ಲೈಕ್ ಮಾಡಿ ಹಣ ಗಳಿಸಬಹುದು. ಇದಕ್ಕಾಗಿ ನೀವು ಅರ್ಜಿ ಸಲ್ಲಿಸಲು ಬಯಸಿದರೆ, ಕ್ಲಿಕ್ ಮಾಡುವ ಮೂಲಕ ನೀವು ಸ್ಲಾಟ್ ಅನ್ನು ಕಾಯ್ದಿರಿಸಬೇಕು ಎಂದು ಹೇಳಲಾಗುತ್ತದೆ. ನಂತರ ಗಮನ ಸೆಳೆಯಲು ಕೆಲವೊಮ್ಮೆ ಹಣವನ್ನೂ ನೀಡಬಹುದು. ಬಳಿಕ ಹಣವನ್ನು ಸುಲಭವಾಗಿ ನಿಮ್ಮ ಖಾತೆಗೆ ವರ್ಗಾಯಿಸಲು ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಲು ಕೇಳಲಾಗುತ್ತದೆ. ಇದರಲ್ಲಿ ನಿಮ್ಮ ಹಣಕಾಸಿನ ವಿವರಗಳ ಜೊತೆಗೆ ಪಾಸ್‌ವರ್ಡ್ ಮತ್ತು ಒಟಿಪಿ ಎಲ್ಲವನ್ನೂ ಪಡೆಯುತ್ತಾರೆ. ಹಣ ಗಳಿಸುವ ಆಸೆಯಿಂದ ನೀವು ಈ ಎಲ್ಲಾ ಮಾಹಿತಿಯನ್ನು ಹಂಚಿಕೊಂಡರೆ ನಿಮ್ಮ ಖಾತೆ ಸಂಪೂರ್ಣವಾಗಿ ಖಾಲಿ ಆಗುತ್ತದೆ. ಇಂತಹ ವಂಚನೆಯನ್ನು ತಪ್ಪಿಸಲು ನಿಮ್ಮ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.