ವಾಟ್ಸಾಪ್ ಹೊಸ ವೈಶಿಷ್ಟ್ಯ: ವಾಟ್ಸಾಪ್ ಕಳೆದ ತಿಂಗಳಷ್ಟೇ ತನ್ನ ವೇದಿಕೆಯಲ್ಲಿ ಸಂದೇಶ ಪ್ರತಿಕ್ರಿಯೆ ವೈಶಿಷ್ಟ್ಯವನ್ನು ಪರಿಚಯಿಸಿತು. ಈಗ ಮೆಟಾ-ಮಾಲೀಕತ್ವದ ಮೆಸೇಜಿಂಗ್ ಅಪ್ಲಿಕೇಶನ್ ಅದನ್ನು ಇನ್ನಷ್ಟು ಉತ್ತಮಗೊಳಿಸುವಲ್ಲಿ ಕಾರ್ಯನಿರ್ವಹಿಸುತ್ತಿದೆ. ಸದ್ಯ, ಗ್ರೂಪ್ ಸದಸ್ಯರು ಆಲ್ಬಮ್‌ನಲ್ಲಿರುವ ಚಿತ್ರಕ್ಕೆ ಪ್ರತಿಕ್ರಿಯೆಯನ್ನು ಹಂಚಿಕೊಂಡಾಗ, ಆಲ್ಬಮ್ ತೆರೆಯದೆಯೇ ಯಾವ ಮಾಧ್ಯಮವು ಪ್ರತಿಕ್ರಿಯಿಸಿದೆ ಎಂಬುದನ್ನು ಸ್ವಯಂಚಾಲಿತವಾಗಿ ನೋಡಲು ಸಾಧ್ಯವಿಲ್ಲ. ಇದರರ್ಥ, ಬಳಕೆದಾರರು ಯಾವ ಫೋಟೋಗೆ ಯಾರು ಯಾವ ಪ್ರತಿಕ್ರಿಯೆಯನ್ನು ನೀಡಿದ್ದಾರೆ ಎಂಬುದನ್ನು ತಿಳಿಯಲು ಆಲ್ಬಮ್ ಅನ್ನು ತೆರೆಯಬೇಕು ಮತ್ತು ವಿವರಗಳನ್ನು ತಿಳಿಯಲು ಪ್ರತಿ ಚಿತ್ರವನ್ನು ನೋಡಬೇಕು. ಆದರೆ, ವಾಟ್ಸಾಪ್ ಹೊಸ ನವೀಕರಣವು ಇದನ್ನು ಸುಲಭಗೊಳಿಸಲಿದೆ. 


COMMERCIAL BREAK
SCROLL TO CONTINUE READING

ಹೊಸ ಅಪ್‌ಡೇಟ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ವಾಟ್ಸಾಪ್:
ಈಗ, ಜನಪ್ರಿಯ ಮೆಸೇಜಿಂಗ್ ವಾಟ್ಸಾಪ್ ಅಪ್ಲಿಕೇಶನ್ ಹೊಸ ಅಪ್‌ಡೇಟ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಸರಳವಾಗಿ ಹೇಳುವುದಾದರೆ, ವಾಟ್ಸಾಪ್ ನ ಸಂದೇಶ ಪ್ರತಿಕ್ರಿಯೆ ವೈಶಿಷ್ಟ್ಯದ ಮುಂದಿನ ನವೀಕರಣವು ಬಳಕೆದಾರರು ಆಲ್ಬಮ್‌ನಲ್ಲಿ ಯಾವ ಚಿತ್ರಕ್ಕೆ ಪ್ರತಿಕ್ರಿಯೆಯನ್ನು ಪಡೆದುಕೊಂಡಿದ್ದಾರೆ ಎಂಬುದನ್ನು ಪ್ರತಿ ಚಿತ್ರವನ್ನು ಒಂದೊಂದಾಗಿ ನೋಡದೆಯೇ ತಿಳಿಯಬಹುದು ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ- Google: ಗೂಗಲ್ ವಿಶೇಷ ವೈಶಿಷ್ಟ್ಯ


WABetaInfo ತನ್ನ ಇತ್ತೀಚಿನ ವರದಿಯಲ್ಲಿ, "ಸ್ವಯಂಚಾಲಿತ ಆಲ್ಬಮ್ ಅನ್ನು ತೆರೆಯದೆಯೇ ಯಾವ ಮಾಧ್ಯಮವು ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ ಎಂದು ನಮಗೆ ತಿಳಿಯುವುದಿಲ್ಲ. ಆದರೆ, ಮಾಧ್ಯಮ ಥಂಬ್‌ನೇಲ್‌ಗಳನ್ನು ತೋರಿಸುವ ಮೂಲಕ ಭವಿಷ್ಯದಲ್ಲಿ ವಿವರವಾದ ಪ್ರತಿಕ್ರಿಯೆ ಮಾಹಿತಿಯನ್ನು ನೋಡಲು ವಾಟ್ಸಾಪ್ ನಮಗೆ ಅವಕಾಶ ನೀಡುತ್ತದೆ" ಎಂದು ತಿಳಿಸಿದೆ.


[[{"fid":"240895","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"1":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"1"}}]]


ಪ್ರಸ್ತುತ ಸ್ವಯಂಚಾಲಿತ ಆಲ್ಬಮ್‌ನ ಭಾಗವಾಗಿರುವ ಫೋಟೋಗಳು ಅಥವಾ ವಿಡಿಯೋಗಳಿಗೆ ಯಾರಾದರೂ ಪ್ರತಿಕ್ರಿಯಿಸಿದಾಗ, ಆಲ್ಬಮ್‌ ಅನ್ನು ಓಪನ್ ಮಾದರೆ ಯಾವ ಫೋಟೋ ಅಥವಾ ವಿಡಿಯೋಗೆ ಪ್ರತಿಕ್ರಿಯೆ ಬಂದಿದೆ ಎಂಬುದನ್ನು ವಾಟ್ಸಾಪ್ ತೋರಿಸುವುದಿಲ್ಲ. ಆದರೆ, ಅಭಿವೃದ್ಧಿ ಹಂತದಲ್ಲಿರುವ ಹೊಸ ವೈಶಿಷ್ಟ್ಯವು ಆಲ್ಬಮ್‌ ಅನ್ನು ತೆರೆಯದೆಯೇ ಯಾವ ಚಿತ್ರಕ್ಕೆ ಪ್ರತಿಕ್ರಿಯೆ ಬಂದಿದೆ ಎಂಬುದನ್ನು ನೋಡಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ ಎಂದು ತಿಳಿದುಬಂದಿದೆ. 


ಇದನ್ನೂ ಓದಿ- Dangerous Apps: ಸ್ಮಾರ್ಟ್‌ಫೋನ್‌ನಲ್ಲಿರುವ ಈ 7 ಆ್ಯಪ್‌ಗಳು ನಿಮ್ಮ ಅಕೌಂಟ್ ಖಾಲಿ ಮಾಡಬಹುದು, ಎಚ್ಚರ!


ವರದಿಯಲ್ಲಿ ಹಂಚಿಕೊಳ್ಳಲಾಗಿರುವ ಸ್ಕ್ರೀನ್‌ಶಾಟ್ ಪ್ರಕಾರ, ಪ್ರತಿಕ್ರಿಯೆ ಪಕ್ಕದಲ್ಲಿ ಮಾಧ್ಯಮ ಥಂಬ್‌ನೇಲ್‌ಗಳನ್ನು ತೋರಿಸುವ ಮೂಲಕ ವಿವರವಾದ ಪ್ರತಿಕ್ರಿಯೆ ಮಾಹಿತಿಯನ್ನು ವೀಕ್ಷಿಸಲು ಹೊಸ ವೈಶಿಷ್ಟ್ಯವು ಅನುಮತಿಸುತ್ತದೆ.  ಕಂಪನಿಯು ಆಂಡ್ರಾಯ್ಡ್‌ಗಾಗಿ ಮತ್ತು ಡೆಸ್ಕ್‌ಟಾಪ್ ಅಪ್ಲಿಕೇಶನ್‌ಗಾಗಿ ವಾಟ್ಸಾಪ್ ಗೆ ಇದೇ ರೀತಿಯ ಬದಲಾವಣೆಗಳನ್ನು ತರಲು ಕೆಲಸ ಮಾಡುತ್ತಿದೆ ಎಂದು ವರದಿ ಹೇಳುತ್ತದೆ.  


ಆದಾಗ್ಯೂ, ವಾಟ್ಸಾಪ್ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ. ಈ ವೈಶಿಷ್ಟ್ಯವು ಇನ್ನೂ ಅಭಿವೃದ್ಧಿ ಹಂತದಲ್ಲಿದೆ ಮತ್ತು ಈ ವೈಶಿಷ್ಟ್ಯ ಯಾವಾಗ ಬರುತ್ತದೆ ಎಂಬುದರ ಬಗ್ಗೆ ಯಾವುದೇ ನಿಖರ ಮಾಹಿತಿ ಲಭ್ಯವಿಲ್ಲ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.