ತನ್ನ ಬಳಕೆದಾರರಿಗೆ ಮತ್ತೊಂದು ಜಬ್ಬರ್ದಸ್ತ್ ವೈಶಿಷ್ಟ್ಯ ಬಿಡುಗಡೆ ಮಾಡಿದ ವಾಟ್ಸ್ ಆಪ್!
WABetaInfo ವರದಿಯಲ್ಲಿ ನೀಡಿರುವ ಮಾಹಿತಿಯ ಪ್ರಕಾರ, `ಕೆಲವು WhatsApp ಬೀಟಾ ಪರೀಕ್ಷಕರು Google Play Store ನಿಂದ Android 2.23.16.19 ನ ಇತ್ತೀಚಿನ WhatsApp ಬೀಟಾ ಅಪ್‌ಡೇಟ್‌ನಲ್ಲಿ ಈ ವೈಶಿಷ್ಟ್ಯವನ್ನು ಪಡೆಯಲು ಪ್ರಾರಂಭಿಸಿದ್ದಾರೆ ಎನ್ನಲಾಗಿದೆ (Technology News In Kannada).
ಬೆಂಗಳೂರು: ಇನ್‌ಸ್ಟಂಟ್ ಮೆಸೇಜಿಂಗ್ ಪ್ಲಾಟ್‌ಫಾರ್ಮ್ WhatsApp ನಿಮ್ಮ ಗುಂಪುಗಳಲ್ಲಿ ಸಂವಹನ ನಡೆಸಲು 'ವಾಯ್ಸ್ ಚಾಟ್' ಎಂಬ ಹೊಸ ವೈಶಿಷ್ಟ್ಯದೊಂದಿಗೆ ಬಂದಿದೆ. ವೈಶಿಷ್ಟ್ಯವನ್ನು ನಿಮ್ಮ ಖಾತೆಗೆ ನೀಡಲಾಗಿದ್ದು ಮತ್ತು ಗುಂಪುಗಳೊಂದಿಗೆ ಸಕ್ರೀಯಗೊಳಿಸಲಾಗಿದ್ದರೆ ಅದನ್ನು ನೀವು ಬಳಸಬಹುದು, WABetaInfo ಹಂಚಿಕೊಂಡ ಸ್ಕ್ರೀನ್‌ಶಾಟ್ ಪ್ರಕಾರ ನೀವು ಗುಂಪು ಚಾಟ್‌ನಲ್ಲಿ ಹೊಸ ಧ್ವನಿ ತರಂಗರೂಪದ ಐಕಾನ್ ಅನ್ನು ನೋಡಬಹುದು. ಈ ಐಕಾನ್ ಅನ್ನು ಟ್ಯಾಪ್ ಮಾಡುವುದರಿಂದ ಧ್ವನಿ ಚಾಟ್ ಪ್ರಾರಂಭವಾಗುತ್ತದೆ ಮತ್ತು ನೀವು ಅದಕ್ಕಾಗಿಯೇ ಮೀಸಲಾಗಿಟ್ಟಿರುವ ಇಂಟರ್ಫೇಸ್ ಅನ್ನು ನೋಡಬಹುದು (Technology News In Kannada).
ಏನಿದು ಹೊಸ ವೈಶಿಷ್ಟ್ಯ
WABetaInfo ವರದಿಯಲ್ಲಿ ನೀಡಿರುವ ಮಾಹಿತಿಯ ಪ್ರಕಾರ, "ಕೆಲವು WhatsApp ಬೀಟಾ ಪರೀಕ್ಷಕರು Google Play Store ನಿಂದ Android 2.23.16.19 ಇತ್ತೀಚಿನ WhatsApp ಬೀಟಾ ಅಪ್‌ಡೇಟ್‌ನಲ್ಲಿ ಈ ವೈಶಿಷ್ಟ್ಯವನ್ನು ಪಡೆಯಲು ಪ್ರಾರಂಭಿಸಿದ್ದಾರೆ ಎನ್ನಲಾಗಿದೆ. ಇದನ್ನು ಧ್ವನಿ ಚಾಟ್ ವೈಶಿಷ್ಟ್ಯ ಎಂದು ಕರೆಯಲಾಗುತ್ತಿದೆ. ಪ್ರಸ್ತುತ ಇದನ್ನು ಕೆಲ ಬೀಟಾ ಪರೀಕ್ಷಕರಿಗೆ ನೀಡಲಾಗಿದ್ದು ಕೆಲವೇ ದಿನಗಳಲ್ಲಿ ಇತರ ಬಳಕೆದಾರರೂ ಇದನ್ನು ಬಳಸಲು ಸಾಧ್ಯವಾಗಲಿದೆ.
ಇದು ಯಾವ ವೈಶಿಷ್ಟ್ಯಗಳನ್ನು ಹೊಂದಿದೆ
ವರದಿಯನ್ನು ನಂಬುವುದಾದರೆ, ಗುಂಪು ಚಾಟ್‌ನಲ್ಲಿರುವ ಯಾರಾದರೂ ಯಾವುದೇ ಸಮಯದಲ್ಲಿ ಧ್ವನಿ ಚಾಟ್‌ಗೆ ಸೇರಬಹುದು ಮತ್ತು ಮಾತನಾಡಲು ಪ್ರಾರಂಭಿಸಬಹುದು. ಒಂದು ವೇಳೆ ಧ್ವನಿ ಚಾಟ್ ಖಾಲಿಯಾಗಿದ್ದರೆ, 60 ನಿಮಿಷಗಳ ನಂತರ ಯಾರೂ ಸೇರದಿದ್ದರೆ ಅದು ಸ್ವಯಂಚಾಲಿತವಾಗಿ ಎಂಡ್ ಆಗಲಿದೆ.
ಇದನ್ನೂ ಓದಿ-Best Recharge Plan: 180 ದಿನಗಳ ಮಾನ್ಯತೆ, ಬೆಲೆ ರೂ.500ಕ್ಕೂ ಕಡಿಮೆ!
ಧ್ವನಿ ಚಾಟ್‌ಗಳು ನಿರ್ದಿಷ್ಟ ಗುಂಪುಗಳಿಗೆ ಸೀಮಿತವಾಗಿವೆ. ಸಾಮಾನ್ಯವಾಗಿ 32 ಕ್ಕಿಂತ ಹೆಚ್ಚು ಭಾಗವಹಿಸುವ ಗುಂಪುಗಳಲ್ಲಿ ಪ್ರವೇಶಿಸಬಹುದು, ಆದರೆ ಧ್ವನಿ ಚಾಟ್‌ಗಳು 32 ಭಾಗವಹಿಸುವವರನ್ನು ಮಾತ್ರ ಹೊಂದಿರಬಹುದು. ಆದಾಗ್ಯೂ, ಬಳಕೆದಾರರನ್ನು ಅವಲಂಬಿಸಿ ಸಂರಚನೆಯು ಭಿನ್ನವಾಗಿರಬಹುದು.
ಇದನ್ನೂ ಓದಿ-ಜೋತಿಷ್ಯ ಲೋಕದಲ್ಲಿ AI ಪದಾರ್ಪಣೆ, ಉಚಿತವಾಗಿ ಭವಿಷ್ಯ ಹೇಳಲಿದೆ ಕುಂಡಲಿ ಜಿಪಿಟಿ!
ಧ್ವನಿ ಚಾಟ್ ಬಳಸಿ, ಯಾವುದೇ ಭಾಗವಹಿಸುವವರ ಫೋನ್ ರಿಂಗಿಣಿಸದೆ ಕರೆಯನ್ನು ಆರಂಭಿಸಬಹುದು . ಆದಾಗ್ಯೂ, ಪ್ರತಿ ಗುಂಪಿನ ಸದಸ್ಯರು ಹೊಸ ಧ್ವನಿ ಚಾಟ್ ಅನ್ನು ರಚಿಸಿದಾಗ ಸೈಲೆಂಟ್ ಪುಶ್ ಅಧಿಸೂಚನೆಯನ್ನು ಸ್ವೀಕರಿಸುತ್ತಾರೆ ಮತ್ತು ಚಾಟ್ ಪಟ್ಟಿಯು ಗುಂಪು ಐಕಾನ್‌ನಲ್ಲಿ ಧ್ವನಿ ಚಾಟ್ ಅನ್ನು ಪ್ರತಿನಿಧಿಸುವ ಸಣ್ಣ ಥಂಬ್‌ನೇಲ್ ಅನ್ನು ಪ್ರದರ್ಶಿಸುತ್ತದೆ. ವಾಯ್ಸ್ ಚಾಟ್ ಕೂಡ ಎಂಡ್ ಟು ಎಂಡ್ ಎನ್‌ಕ್ರಿಪ್ಶನ್ ಮೂಲಕ ಸುರಕ್ಷಿತವಾಗಿದೆ, ಅದರಲ್ಲಿರುವ ಜನರು ಮಾತ್ರ ಧ್ವನಿ ಕರೆಯನ್ನು ಆಲಿಸಬಹುದು ಎಂಬುದನ್ನು ಗಮನಿಸುವುದು ಇಲ್ಲಿ ತುಂಬಾ ಮುಖ್ಯ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ