WhatsApp Scam: ಕರೆ, ಸಂದೇಶದ ಮೂಲಕ ಜನರನ್ನು ಮೋಸದ ಜಾಲದಲ್ಲಿ ಬೀಳಿಸುತ್ತಿದ್ದ ವಂಚಕರು ಇತ್ತೀಚಿನ ದಿನಗಳಲ್ಲಿ ವಾಟ್ಸಾಪ್‌ ಅನ್ನು ಬಳಸುತ್ತಿದ್ದಾರೆ. ವಾಟ್ಸಾಪ್‌ನಲ್ಲಿ ನಕಲಿ ಅಥವಾ ಅಪಾಯಕಾರಿ ಹೂಡಿಕೆಗಳ ಹೆಸರಿನಲ್ಲಿ ಜನರನ್ನು ಆಕರ್ಷಿಸಿ ಅವರನ್ನು ಮೋಸದ ಜಾಲದಲ್ಲಿ ಬೀಳಿಸುತ್ತಿದ್ದಾರೆ. ನೀವೂ ಕೂಡ ಇಂತಹ ವಾಟ್ಸಾಪ್ ಹೂಡಿಕೆ ಹಗರಣದ ಸಂದೇಶಗಳನ್ನು ಸ್ವೀಕರಿಸಿದ್ದರೆ ಶ್ರೀಮಂತರಾಗುವ ಆಸೆಯಲ್ಲಿ ಮೋಸ ಹೋಗಬೇಡಿ. 


COMMERCIAL BREAK
SCROLL TO CONTINUE READING

ತಂತ್ರಜ್ಞಾನವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ವಂಚಕರು ನಿಮ್ಮ ಹಣವನ್ನು ಕದಿಯಲು ವಿವಿಧ ವಿಧಾನಗಳನ್ನು ಬಳಸುತ್ತಾರೆ.  ವಾಟ್ಸಾಪ್‌ನಲ್ಲಿ ಒಂದೆಡೆ ಉಡುಗೊರೆ ಹೆಸರಿನಲ್ಲಿ ವಂಚನೆಗಳು ಹೆಚ್ಚಾಗುತ್ತಿದ್ದರೆ, ಮತ್ತೊಂದೆಡೆ ಹೂಡಿಕೆ ಹೆಸರಿನಲ್ಲಿಯೂ ವಂಚನೆಗಳು ಹೆಚ್ಚಾಗುತ್ತಿವೆ.  ಅಂತಹ ಹಗರಣಗಳಲ್ಲಿ ವಾಟ್ಸಾಪ್ ಹೂಡಿಕೆ ಹಗರಣವೂ ಒಂದು. 


ಇದನ್ನೂ ಓದಿ- WhatsApp: ವಾಟ್ಸಾಪ್‌ನಲ್ಲಿ ಯಾರಾದ್ರೂ ನಿಮ್ಮನ್ನ ಬ್ಲಾಕ್ ಮಾಡಿದ್ದಾರಾ? ಈ ರೀತಿ ಪತ್ತೆ ಹಚ್ಚಿ


ಏನಿದು ವಾಟ್ಸಾಪ್ ಹೂಡಿಕೆ ಹಗರಣ? 
ಇದರಲ್ಲಿ ಅಪರಿಚಿತ ಸಂಖ್ಯೆಯಿಂದ ನಿಮಗೆ ಸಂದೇಶ ಕಳುಹಿಸುವ ವಂಚಕರು ನಿಮಗೆ ತುಂಬಾ ಪರಿಚಯಸ್ಥರಂತೆ ಮಾತನಾಡುವ ಮೂಲಕ ಸ್ನೇಹಿತ ಅಥವಾ ಆರ್ಥಿಕ ಸಲಹೆಗಾರರಾಗುವ ಮೂಲಕ ನಿಮ್ಮ ನಂಬಿಕೆಯನ್ನು ಗೆಲ್ಲಲು ಪ್ರಯತ್ನಿಸುತ್ತಾರೆ. ಈ ಸಂದರ್ಭದಲ್ಲಿ ನೀವು ಕೆಲವು ಹೂಡಿಕೆಗಳನ್ನು ಮಾಡುವ ಮೂಲಕ "ತ್ವರಿತವಾಗಿ ಶ್ರೀಮಂತರಾಗಬಹುದು" ಎಂಬ ಸುಳ್ಳು ಭರವಸೆಗಳನ್ನು ನೀಡುತ್ತಾರೆ. ಇದಕ್ಕಾಗಿ, ಕೆಲವು ಫೇಕ್ ಡೇಟಾಗಳನ್ನು ಕೂಡ ಅವರು ನಿಮ್ಮೊಂದಿಗೆ ಹಂಚಿಕೊಳ್ಳಬಹುದು. ಆದರೆ, ಇಂತಹ ಸಂದೇಶಗಳಿಗೆ ಮಾರುಹೋಗಿ ನೀವೇನಾದರೂ ಹೂಡಿಕೆ ಮಾಡಲು ನಿಮ್ಮ ಕ್ರೆಡಿಟ್ ಕಾರ್ಡ್ ಮಾಹಿತಿ ಅಥವಾ ಬ್ಯಾಂಕ್ ಪಾಸ್‌ವರ್ಡ್‌ನಂತಹ ಸೂಕ್ಷ್ಮ ಮಾಹಿತಿಯನ್ನು ಬೇರೆಯವರೊಂದಿಗೆ ಹಂಚಿಕೊಂಡರೆ ನಿಮ್ಮ ಖಾತೆ ಖಾಲಿಯಾಗುವುದಂತೂ ನಿಶ್ಚಿತ. 


ಈ ರೀತಿ ಮೋಸ ಹೋಗುವುದನ್ನು ತಪ್ಪಿಸಲು ಹಗರಣಗಳಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಕೆಲವು ಸುರಕ್ಷಿತ ಕ್ರಮಗಳನ್ನು ತೆಗೆದುಕೊಳ್ಳುವುದು ತುಂಬಾ ಅಗತ್ಯ. 


ಇದನ್ನೂ ಓದಿ- WhatsAppನಲ್ಲಿ ಬಂದಿದೆ ಹೊಸ ವೈಶಿಷ್ಟ್ಯ! ಫೋಟೋವನ್ನು ಸುಲಭವಾಗಿ ಸ್ಟಿಕರ್ ಆಗಿ ಬದಲಿಸಬಹುದು !


ವಾಟ್ಸಾಪ್ ಹೂಡಿಕೆ ಹಗರಣ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಈ ವಿಷಯಗಳನ್ನು ನೆನಪಿನಲ್ಲಿಡಿ: 
>> ಯಾವುದೇ ಅಪರಿಚಿತ ವ್ಯಕ್ತಿಯಿಂದ ಹೂಡಿಕೆಯಿಂದ ಹಠಾತ್ ಶ್ರೀಮಂತರಾಗಬಹುದು ಎಂಬ ಸಂದೇಶದ ಬಗ್ಗೆ ಜಾಗರೂಕರಾಗಿರಿ. ಅದರಲ್ಲೂ ಮುಖ್ಯವಾಗಿ ವಾಟ್ಸಾಪ್‌ನಲ್ಲಿ ಅಪರಿಚಿತ ನಂಬರ್‌ಗಳಿಂದ ಬರುವ ಯಾವುದೇ ರೀತಿಯ ಸಂದೇಶಗಳನ್ನು ನಂಬದಿರಿ. 
>> ಕಡಿಮೆ ಹೂಡಿಕೆ ಮಾಡಿ ಹೆಚ್ಚು ಹಣ ಗಳಿಸಲು ಈ ಮಾರ್ಗಗಳನ್ನು ಅನುಸರಿಸಿ ಎಂಬಿತ್ಯಾದಿ ಸಂದೇಶಗಳನ್ನು ನಿರ್ಲಕ್ಷಿಸಿ. ಇಲ್ಲವೇ ನೀವು ವಂಚನೆಗೆ ಬಲಿಯಾಗಬಹುದು. 
>> ಸಾಮಾಜಿಕ ಮಾಧ್ಯಮಗಳ ಮೂಲಕ ನೀಡುವ ಹೂಡಿಕೆ ಸಲಹೆಗಳನ್ನು ಅನುಸರಿಸಿ ಯಾವುದೇ ರೀತಿಯ ಹಠಾತ್ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. 
>> ನೀವು ಒಂದೊಮ್ಮೆ ಹೂಡಿಕೆ ಮಾಡಲು ಬಯಸಿದರೆ ಸಂಬಂಧಿತ ಕ್ಷೇತ್ರದ ತಜ್ಞರಿಂದ ಸಲಹೆ ಪಡೆದು ಸುರಕ್ಷಿತ ವಿಧಾನಗಳಲ್ಲಷ್ಟೇ ಹೂಡಿಕೆ ಮಾಡುವುದನ್ನು ಪರಿಗಣಿಸಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.