WhatsApp ನ ಈ ಸಿಕ್ರೆಟ್ ವೈಶಿಷ್ಟ್ಯಗಳನ್ನು ನೀವು ಎಂದಾದರೂ ಬಳಸಿದ್ದೀರಾ? ಅದ್ಭುತವಾಗಿವೆ!
WhatsApp Secret Features: ಸಾಮಾಜಿಕ ಮಾಧ್ಯಮಗಳ ಇಂದಿನ ಯುಗದಲ್ಲಿ ಎಲ್ಲರೂ ವಾಟ್ಸಾಪ್ ಬಳಸುತ್ತಿದ್ದಾರೆ. ಚಾಟ್ನಿಂದ ವೀಡಿಯೋ ಕರೆಗಳವರೆಗೆ... ಸಂದೇಶ ಹಂಚಿಕೆಯನ್ನು ವಾಟ್ಸಾಪ್ ಸುಲಭಗೊಳಿಸಿದೆ. ಆದಾಗ್ಯೂ, ಈ 5 ರಹಸ್ಯ ವೈಶಿಷ್ಟ್ಯಗಳ ಬಗ್ಗೆ ನಿಮಗೆ ತಿಳಿದಿದೆಯೇ? (Technology News In Kannada)
ಬೆಂಗಳೂರು: ಇನ್‌ಸ್ಟಂಟ್ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸ್ ಆಪ್ ನಲ್ಲಿ ಪ್ರತಿದಿನ ಹೊಸ ವೈಶಿಷ್ಟ್ಯಗಳು ಕಂಡು ಬರುತ್ತಲೇ ಇರುತ್ತವೆ . ಬಳಕೆದಾರರ ಅನುಭವವನ್ನು ಸುಧಾರಿಸಲು ಮತ್ತು ಸುರಕ್ಷತೆಯನ್ನು ಪರಿಶೀಲಿಸಲು ಮೆಟಾ ಹಲವಾರು ರೀತಿಯ ನವೀಕರಣಗಳನ್ನು ತರುತ್ತಲೇ ಇರುತ್ತದೆ. ಆದಾಗ್ಯೂ, ಪ್ರತಿದಿನ ವಾಟ್ಸ್ ಆಪ್ ಅನ್ನು ಬಳಸುತ್ತಿದ್ದರೂ, ನಿಮಗೆ ಹೆಚ್ಚಿನ ವೈಶಿಷ್ಟ್ಯಗಳು ತಿಳಿದಿರುವುದಿಲ್ಲ. ವಾಟ್ಸ್ ಆಪ್ ನ ಈ ಸಿಕ್ರೆಟ್ ವೈಶಿಷ್ಟ್ಯಗಳು ಅದ್ಭುತವಾಗಿವೆ, ಆದರೆ ಬಹುತೇಕ ಜನರಿಗೆ ಅವುಗಳ ಬಗ್ಗೆ ಮಾಹಿತಿ ಇಲ್ಲಿ. ಈ ಲೇಖನದಲ್ಲಿ, ನಾವು ಅಂತಹ ಕೆಲವು ರಹಸ್ಯ ವೈಶಿಷ್ಟ್ಯಗಳ ಬಗ್ಗೆ ನಿಮಗೆ ಮಾಹಿತಿಯನ್ನು ನೀಡುತ್ತಿದ್ದು, ಅವು ತುಂಬಾ ಅದ್ಭುತವಾಗಿವೆ. (Technology News In Kannada)
ಸ್ಕ್ರೀನ್ ಶೈರಿಂಗ್
ವಾಟ್ಸ್ ಆಪ್ ಮೂಲಕ ನೀವು ಯಾವಾಗ ಬೇಕಾದರೂ ಯಾರಿಗಾದರೂ ವೀಡಿಯೊ ಕರೆ ಮಾಡಬಹುದು. ನಿಮ್ಮ ಸ್ನೇಹಿತರು ಅಥವಾ ಕುಟುಂಬವು ನಿಮ್ಮಿಂದ ದೂರವಿದ್ದರೆ, ನಾವು ವೀಡಿಯೊ ಕರೆಗಳ ಮೂಲಕ ಕ್ಷಣಾರ್ಧದಲ್ಲಿ ಅವರೊಂದಿಗೆ ಸಂಪರ್ಕ ಸಾಧಿಸಬಹುದು. ಆದಾಗ್ಯೂ, ನೀವು ವೀಡಿಯೊ ಕರೆಗಳಲ್ಲಿ ನೀವು ಸ್ಕ್ರೀನ್ ಕೂಡ ಹಂಚ್ಕೊಳ್ಳಬಹುದು ಎಂಬ ಸಂಗತಿ ನಿಮಗೆ ತಿಳಿದಿದೆಯೇ? ನೀವು ಕೆಲಸದ ಪ್ರೊಫೈಲ್ ಹೊಂದಿದ್ದರೆ, ಇದು ನಿಮಗೆ ತುಂಬಾ ಉಪಯುಕ್ತ ಸಾಬೀತಾಗುತ್ತದೆ. WhatsApp ನಲ್ಲಿ ಪರದೆಯನ್ನು ಹಂಚಿಕೊಳ್ಳಲು, ಮೊದಲು ಯಾರಿಗಾದರೂ ವೀಡಿಯೊ ಕರೆ ಮಾಡಿ. ಅದರ ನಂತರ ನಿಮಗೆ ಸ್ಕ್ರೀನ್ ಹಂಚಿಕೆ ಬಟನ್ ಕಾಣಿಸಿಕೊಳ್ಳುತ್ತದೆ. ಆನ್ ಮಾಡಿದಾಗ, ಸ್ಕ್ರೀನ್ ಹಂಚಿಕೆ ಪ್ರಾರಂಭವಾಗುತ್ತದೆ ಮತ್ತು ಅದನ್ನು ನಿಲ್ಲಿಸಲು ಸ್ಟಾಪ್ ಶೇರಿಂಗ್ ಬಟನ್ ಕ್ಲಿಕ್ ಮಾಡಿ.
ಕಿರು ವೀಡಿಯೊ ಸಂದೇಶ
ವಾಟ್ಸಾಪ್ ಬಳಕೆದಾರರು 60 ಸೆಕೆಂಡ್‌ಗಳಿಗಿಂತ ಕಡಿಮೆ ಅವಧಿಯ ಕಿರು ವೀಡಿಯೊವನ್ನು ಕಳುಹಿಸಬಹುದು. ಇದು ತ್ವರಿತ ಸಂದೇಶದಂತಿರುತ್ತದೆ. ಈ ವೈಶಿಷ್ಟ್ಯವನ್ನು ಬಳಸಲು, ವಾಟ್ಸ್ ಆಪ್ ಚಾಟ್‌ನಲ್ಲಿರುವ ಕ್ಯಾಮರಾ ಬಟನ್ ಅನ್ನು ಮೇಲಕ್ಕೆ ಸ್ಲೈಡ್ ಮಾಡಿ. ಈ ವೀಡಿಯೊ 59 ಸೆಕೆಂಡುಗಳಲ್ಲಿ ಕೊನೆಗೊಳ್ಳುತ್ತದೆ. ಇದು ತುಂಬಾ ಖುಷಿ ಕೊಡುತ್ತದೆ.
ಸುರಕ್ಷತೆ ವೈಶಿಷ್ಟ್ಯ
ವಾಟ್ಸ್ ಆಪ್ ನಲ್ಲಿ ಸುರಕ್ಷತೆಯು ತುಂಭಾ ಮುಖ್ಯವಾದ ಸಂಗತಿಯಾಗಿದೆ. ಆದ್ದರಿಂದ ಮೆಟಾದ ಹೊಸ ನವೀಕರಣದಲ್ಲಿ, ಬಳಕೆದಾರರು ಒಂದೇ ಸ್ಥಳದಲ್ಲಿ ಎಲ್ಲಾ ಸುರಕ್ಷತಾ ವೈಶಿಷ್ಟ್ಯಗಳಿಗೆ ಪ್ರವೇಶಿಸಬಹುದು. ಇದಕ್ಕಾಗಿ ನೀವು ಸೆಟ್ಟಿಂಗ್‌ಗಳ ಟ್ಯಾಬ್‌ನ ಗೌಪ್ಯತೆ ವಿಭಾಗಕ್ಕೆ ಹೋಗಬೇಕಾಗುತ್ತದೆ. ನಿಮ್ಮನ್ನು ಯಾರು ಸಂಪರ್ಕಿಸಬಹುದು ಎಂಬುದನ್ನು ಇಲ್ಲಿ ನೀವು ಆಯ್ಕೆ ಮಾಡಬಹುದು. ಇಲ್ಲಿ ಕಣ್ಮರೆಯಾಗುವ ಸಂದೇಶವನ್ನು ಆನ್ ಅಥವಾ ಆಫ್ ಮಾಡಬಹುದು.
ಇದನ್ನೂ ಓದಿ-ಹೊಸ ವರ್ಷದಲ್ಲಿ ಜಿಯೋ ಕಂಪನಿಯ ಈ ರೀಚಾರ್ಜ್ ಪ್ಲಾನ್ ನಲ್ಲಿ ಸಿಗುತ್ತಿದೆ 24 ದಿನಗಳ ಹೆಚ್ಚುವರಿ ವ್ಯಾಲಿಡಿಟಿ!
ಚಾಟ್ ಲಾಕ್
ತಮ್ಮ ಗೌಪ್ಯತೆಯನ್ನು ಕಾಪಾಡಿಕೊಳ್ಳಲು, ಅಂಡ್ರಯಿಡ್ ಹಾಗೂ ಐಒಎಸ್ ಬಳಕೆದಾರರು ವಾಟ್ಸ್ ಆಪ್ ಮೂಲಕ ಯಾವುದೇ ವ್ಯಕ್ತಿಯ ಚಾಟ್ ಅನ್ನು ಲಾಕ್ ಮಾಡಬಹುದು. ನೀವು ಲಾಕ್ ಮಾಡಲು ಪಾಸ್ವರ್ಡ್ ಅನ್ನು ಹೊಂದಿಸಬಹುದು. ಇದೇ ವೇಳೆ, ಆಂಡ್ರಾಯ್ಡ್ ಬಳಕೆದಾರರು ಫಿಂಗರ್‌ಪ್ರಿಂಟ್ ಸಂವೇದಕವನ್ನು ಬಳಸಬಹುದು ಮತ್ತು ಐಫೋನ್ ಬಳಕೆದಾರರು ಅಪ್ಲಿಕೇಶನ್ ಅನ್ನು ಲಾಕ್ ಮಾಡಲು ಫೇಸ್ ಐಡಿ ಬಳಸಬಹುದು.
ಇದನ್ನೂ ಓದಿ-ಇನ್ಮುಂದೆ ವಾಟ್ಸ್ ಆಪ್ ನ ಈ ವೈಶಿಷ್ಟ್ಯ ಉಚಿತ ಬಳಸುವ ಹಾಗಿಲ್ಲ,2024ರಲ್ಲಿ ಅದಕ್ಕೆ ಹಣ ಪಾವತಿಸಬೇಕು!
ಚಾಟ್ ಪಿನ್
ವಾಟ್ ಶಾಪ್ ನ ಇತ್ತೀಚಿನ ನವೀಕರಣದಲ್ಲಿ, ಬಳಕೆದಾರರು ಈಗ ಚಾಟ್‌ಗಳನ್ನು ಪಿನ್ ಮಾಡಬಹುದು. ಸಂದೇಶವನ್ನು ಆಯ್ಕೆ ಮಾಡಿದ ನಂತರ, ಮೇಲಿನ ಬಲಭಾಗದಲ್ಲಿರುವ 3 ಚುಕ್ಕೆಗಳಿಗೆ ಹೋಗಿ ಮತ್ತು ನಂತರ ನೀವು "ಪಿನ್" ಆಯ್ಕೆಯನ್ನು ನೋಡಬಹುದು. ಅದರ ಮೇಲೆ ಕ್ಲಿಕ್ ಮಾಡಿ. ಈಗ ನಿಮ್ಮ ಸಂದೇಶವನ್ನು ಚಾಟ್‌ನಲ್ಲಿ ಪಿನ್ ಮಾಡಲಾಗುತ್ತದೆ. ಇದರಲ್ಲಿ ನೀವು ಉಲ್ಲೇಖಗಳು, ಪ್ರಮುಖ ವಿಷಯಗಳು ಅಥವಾ ಇಚ್ಛೆಯ ಪಟ್ಟಿಯನ್ನು ಪಿನ್ ಮಾಡಬಹುದು.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ