WhatsApp ತನ್ನ ಮೊಬೈಲ್ ಅಪ್ಲಿಕೇಶನ್ ಮತ್ತು ವೆಬ್ ಆವೃತ್ತಿಯನ್ನು ಬಳಕೆದಾರರ ಮತ್ತಷ್ಟು ಸ್ನೇಹಿಯಾಗಿಸಲು ಹೊಸ ವೈಶಿಷ್ಟ್ಯವನ್ನು ಬಿಡುಗಡೆ ಮಾಡಲಿದೆ. ತನ್ಮೂಲಕ ಬಳಕೆದಾರರಿಗೆ  ಚಾಟ್ ಪಟ್ಟಿಯಲ್ಲಿರುವ QR Code ಅನ್ನು ಸ್ಕ್ಯಾನ್ (Whatsapp upi qr code scan feature android) ಮಾಡುವ ಮೂಲಕ Online Payment ಮಾಡಲು ಸಾಧಯ್ವಾಗಲಿದೆ. ಇದಕ್ಕಾಗಿ, ಅವರು WhatsApp ಅಪ್ಲಿಕೇಶನ್ ಬಿಟ್ಟು ಹೊರಹೊಗಬೇಕಾಗಿಲ್ಲ ಮತ್ತು ಬೇರೆ ಆಪ್ ಸಹಾಯ ತೆಗೆದುಕೊಳ್ಳಬೇಕಾಗಿಲ್ಲ. ಇದು ಬಳಕೆದಾರರ ಸಮಯ ಉಳಿತಾಯವಾಗಲಿದೆ ಮತ್ತು ಹೊಸ ವೈಶಿಷ್ಟ್ಯವು ಅವರಿಗೆ ತುಂಬಾ ಉಪಯುಕ್ತ ಸಾಬೀತಾಗಲಿದೆ ಎಂದು ವಾಟ್ಸ್ ಆಪ್ ನಂಬುತ್ತದೆ. ಇದು ಪಾವತಿ ಮಾಡುವ ಬಳಕೆದಾರರ ಅನುಭವವೂ ಸುಧಾರಿಸಲಿದೆ. WhatsApp ವೈಶಿಷ್ಟ್ಯಗಳ ಮೇಲ್ವಿಚಾರಣೆ ಮಾಡುವ ವೆಬ್‌ಸೈಟ್ wabetainfo ನಿಂದ ಈ ಮಾಹಿತಿ ಲಭ್ಯವಾಗಿದೆ. (Technology News In Kannada)


COMMERCIAL BREAK
SCROLL TO CONTINUE READING

Google Play Store ನಲ್ಲಿ ಲಭ್ಯವಿರುವ Android 2.24.7.3 ಬೀಟಾ ಅಪ್‌ಡೇಟ್‌ನಲ್ಲಿ ಹೊಸ UPI QR Code ವೈಶಿಷ್ಟ್ಯವನ್ನು ಗಮನಿಸಲಾಗಿದೆ ಎಂದು wabetainfo ತನ್ನ ವರದಿಯಲ್ಲಿ ಹೇಳಿದೆ. ಈ ವೈಶಿಷ್ಟ್ಯವು ಚಾಟ್ ಪಟ್ಟಿಯ ಮೇಲ್ಭಾಗದಲ್ಲಿದೆ. ಅಲ್ಲಿಂದ, ಪ್ಲಾಟ್‌ಫಾರ್ಮ್‌ನಲ್ಲಿ ಯಾವುದೇ QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಬಳಕೆದಾರರು UPI ಪಾವತಿಗಳನ್ನು ಮಾಡಲು ಸಾಧ್ಯವಾಗುತ್ತದೆ. ಈ ಮೊದಲು, ಬಳಕೆದಾರರು ಕೋಡ್ ಅನ್ನು ಸ್ಕ್ಯಾನ್ ಮಾಡಲು ಸುದೀರ್ಘ ಪ್ರಕ್ರಿಯೆಯನ್ನು ಅನುಸರಿಸಬೇಕಾಗುತಿತ್ತು.


ವೈಶಿಷ್ಟ್ಯವು ಈ ಬಳಕೆದಾರರಿಗೆ ಲಭ್ಯವಿದೆ (WhatsApp QR code scanner online)
ಹೊಸ UPI QR ಕೋಡ್ ವೈಶಿಷ್ಟ್ಯವನ್ನು ಬೀಟಾ ಬಳಕೆದಾರರಿಗಾಗಿ ಈಗಾಗಲೇ ಬಿಡುಗಡೆ ಮಾಡಲಾಗಿದೆ. ಒಂದೊಮ್ಮೆ ಪರೀಕ್ಷೆ ಪೂರ್ಣಗೊಂಡ ನಂತರ, ಆಂಡ್ರಾಯ್ಡ್ ಮತ್ತು ಐಒಎಸ್ (Whatsapp qr code scan feature iphone) ಸ್ಥಿರ ಬಳಕೆದಾರರಿಗೆ ಈ ವೈಶಿಷ್ಟ್ಯವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ನಿರೀಕ್ಷಿಸಲಾಗಿದೆ.


ಇದನ್ನೂ ಓದಿ-Wifi Router Install Tips: ಮರೆತೂ ಈ ಐದು ಸ್ಥಳಗಳಲ್ಲಿ ವೈಫೈ ರೌಟರ್ ಇನ್ಸ್ಟಾಲ್ ಮಾಡ್ಬೇಡಿ, ಇಲ್ದಿದ್ರೆ!


ಪಿನ್ ವೈಶಿಷ್ಟ್ಯ ಶೀಘ್ರದಲ್ಲೇ ಅಪ್‌ಗ್ರೇಡ್ 
WhatsApp ಪ್ರಸ್ತುತ UPI ಪಾವತಿಯ ಜೊತೆಗೆ PIN ವೈಶಿಷ್ಟ್ಯವನ್ನು ಅಪ್‌ಗ್ರೇಡ್ ಮಾಡಲು ಸಿದ್ಧತೆ ನಡೆಸುತ್ತಿದೆ. ಈ ನವೀಕರಣದ ಬಂದ ಬಳಿಕ, ಬಳಕೆದಾರರು ಮೂರು ಚಾಟ್‌ಗಳ ಬದಲಿಗೆ ಒಂದೇ ಬಾರಿಗೆ ಐದು ಚಾಟ್‌ಗಳನ್ನು ಅಪ್ಲಿಕೇಶನ್‌ನಲ್ಲಿ ಪಿನ್ ಮಾಡಲು ಸಾಧ್ಯವಾಗುತ್ತದೆ. ಮೊದಲು, ಈ ವೈಶಿಷ್ಟ್ಯವನ್ನು ಚಾನಲ್‌ನಲ್ಲಿ ಸಪೋರ್ಟ್ ನೀಡಲಾಗಿತ್ತು, ಅದರಲ್ಲಿ ನೀವು  ನಿಮ್ಮ ನೆಚ್ಚಿನ ಚಾನಲ್ ಅನ್ನು ಪಿನ್ ಮಾಡಬಹುದಾಗಿದೆ.


ಇದನ್ನೂ ಓದಿ-WhatsApp Update: ಕೋಟ್ಯಾಂತರ ಬಳಕೆದಾರರಿಗೆ ಹೊಸ ಅಪ್ಡೇಟ್ ಬಿಡುಗಡೆಗೆ ಮುಂದಾದ ವಾಟ್ಸ್ ಆಪ್!


ಹೊಸ ವೈಶಿಷ್ಟ್ಯವನ್ನು ಕಳೆದ ವರ್ಷ ಆರಂಭಿಸಲಾಗಿದೆ
ವಾಟ್ಸಾಪ್ ವೈಸ್  ಸಂದೇಶಗಳಿಗಾಗಿ ವಿವ್ಹ್ ಒನ್ಸ್ ವೈಶಿಷ್ಟ್ಯ ಬಿಡುಗಡೆ ಮೇದಿದೆ ಎಂಬುದು ಇಲ್ಲಿ ಉಲ್ಲೇಖನೀಯ.  ಈ ವೈಶಿಷ್ಟ್ಯ ಕಳುಹಿಸಲಾದ ಆಡಿಯೊ ಸಂದೇಶವನ್ನು ಒಮ್ಮೆ ಆಲಿಸಿದ ನಂತರ ಸ್ವಯಂಚಾಲಿತವಾಗಿ ಅಳಿಸಿ ಹಾಕುತ್ತದೆ. ಬಳಕೆದಾರರು ಸಂದೇಶಗಳನ್ನು ಸ್ವತಃ ಅಳಿಸುವ ಅವಶ್ಯಕತೆ ಇಲ್ಲ. ಹಿಂದೆ, ಫೋಟೋಗಳು ಮತ್ತು ವೀಡಿಯೊಗಳಿಗಾಗಿ ವಿವ್ಹ್ ಒನ್ಸ್ ಬೆಂಬಲ ನೀಡಲಾಗಿದೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI