ನವದೆಹಲಿ: ಜನಪ್ರಿಯ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಾಪ್(WhatsApp) ತನ್ನ ಬಳಕೆದಾರರಿಗೆ ಟೈಪ್ ಮಾಡದೆಯೇ ಸಂದೇಶಗಳನ್ನು ಕಳುಹಿಸುವ ಅವಕಾಶವನ್ನು ನೀಡಿದೆ. ಇದು ಅದರ ಡಿಜಿಟಲ್ ಅಸಿಸ್ಟೆಂಟ್ ಫೀಚರ್ಸ್ ನಿಂದ ಕೆಲಸ ಮಾಡುತ್ತದೆ. ಗೂಗಲ್ ಅಸಿಸ್ಟೆಂಟ್​ ಮಾದರಿಯಲ್ಲಿರುವ ನೂತನ ಆಯ್ಕೆ ಮೂಲಕ ಟೈಪ್​ ಮಾಡದೆಯೇ ಬೇರೊಬ್ಬರಿಗೆ ಸಂದೇಶವನ್ನು​ ಕಳುಹಿಸಬಹುದು. ಈ ಹೊಸ ಫೀಚರ್​ ಇನ್​ಬಿಲ್ಟ್​ ಆಗಿರಲಿದ್ದು, ಬಳಕೆದಾರರು ಸಂದೇಶವನ್ನು​ ಧ್ವನಿ​ ಮೂಲಕ ನಿರ್ದೇಶಿಸಬಹುದು. ಈ ಸಂದರ್ಭದಲ್ಲಿ ಸಂದೇಶ ಸ್ವಯಂಚಾಲಿತವಾಗಿ ಟೈಪ್​ ಆಗಲಿದೆ. ಇದಕ್ಕಾಗಿ ನೀವು ವರ್ಚುವಲ್ ಅಸಿಸ್ಟೆಂಟ್(Virtual Assistant) ಅನ್ನು ವಾಟ್ಸಾಪ್ ಸಂದೇಶ ಕಳುಹಿಸಲು ಕೇಳಿದರೆ ಸಾಕು ಅದು ಕೆಲಸ ಮಾಡಲಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Cosmic Ghosts: ಬ್ರಹ್ಮಾಂಡದಲ್ಲಿ ಕುಣಿಯುತ್ತಿರುವ ಈ ದೆವ್ವಗಳನ್ನು ನೀವೆಂದಾದರೂ ನೋಡಿದ್ದೀರಾ?


ಸಂದೇಶಗಳನ್ನು ಕಳುಹಿಸಲು ಆಂಡ್ರಾಯ್ಡ್ ಬಳಕೆದಾರರು ಗೂಗಲ್ ಅಸಿಸ್ಟೆಂಟ್(Google Assistant)ಅನ್ನು ಸುಲಭವಾಗಿ ಬಳಸಬಹುದು, iOS ಬಳಕೆದಾರರು ವಾಟ್ಸಾಪ್ ಸಂದೇಶಗಳನ್ನು ಕಳುಹಿಸಲು ಸಿರಿಯ ಸಹಾಯವನ್ನು ತೆಗೆದುಕೊಳ್ಳಬಹುದು. ನೀವು ಕೆಲಸದಲ್ಲಿರುವಾಗ ಅಥವಾ ಕಾರ್ಯನಿರ್ವಹಿಸುವಾಗ ಮತ್ತು ಸಂದೇಶಗಳನ್ನು ಕಳುಹಿಸಲು ಸಾಧ್ಯವಾಗದಿದ್ದಾಗ ಇದು ನಿಮಗೆ ಸಹಕಾರಿಯಾಗುತ್ತದೆ.  ಸಂದೇಶವನ್ನು ಓದಿ ಹೇಳುವಂತೆ ಕೂಡ ಬಳಕೆದಾರರು ಈ ಡಿಜಿಟಲ್ ಅಸಿಸ್ಟೆಂಟ್ ಅನ್ನು ಕೇಳಬಹುದು. ಆದರೆ ಅದಕ್ಕೆ ಅಗತ್ಯ ಅನುಮತಿಗಳು ನೀಡಬೇಕಾಗುತ್ತದೆ. ಆದ್ದರಿಂದ ನಿಮ್ಮ ಫೋನ್‌ನ ಅಧಿಸೂಚನೆಗಳಿಗೆ ಪ್ರವೇಶ ಅಥವಾ ಅನುಮತಿ ನೀಡುವಂತೆ ಬಳಕೆದಾರರನ್ನು ಕೇಳಲಾಗುತ್ತದೆ.


ನಂತರ ನಿಮ್ಮ ಮೊಬೈಲ್ ನಲ್ಲಿ Google ನ ಒಂದು ಸಂದೇಶ ಬರುತ್ತದೆ. ಅದರಲ್ಲಿ ನಿಮ್ಮ ಸಂದೇಶಗಳು, ಕ್ಯಾಲೆಂಡರ್ ಈವೆಂಟ್‌(Calendar Events)ಗಳು ಮತ್ತು ಇತರ ಪ್ರಮುಖ ಮಾಹಿತಿಯನ್ನು ತಿಳಿದುಕೊಳ್ಳಲು ನಿಮ್ಮ ಅಧಿಸೂಚನೆಗಳಿಗೆ Google ಅಪ್ಲಿಕೇಶನ್‌ಗೆ ಪ್ರವೇಶ ನೀಡಿ ಎಂದು ಕೇಳಲಾಗುತ್ತದೆ. ಬಳಿಕ ನೀವು ನಿಮ್ಮ ಮೊಬೈಲ್ ನ ಸೆಟ್ಟಿಂಗ್ಸ್ ನಲ್ಲಿ ಅಪ್ಲಿಕೇಶನ್‌ಗೆ ನೀಡಿರುವ ಅಧಿಸೂಚನೆಯ ಅನುಮತಿಯನ್ನು ನಿಷ್ಕ್ರಿಯಗೊಳಿಸಲೂಬಹುದು.


ಇದನ್ನೂ ಓದಿ: Water Transformed In To Shiny Golden Metal: ನೀರಿನಿಂದ ಚಿನ್ನದಂತಹ ಲೋಹ ತಯಾರಿಸಿದ ವಿಜ್ಞಾನಿಗಳು!


ಟೈಪ್ ಮಾಡದೆ ಸಂದೇಶಗಳನ್ನು ಕಳುಹಿಸುವ ವಿಧಾನ..


ಹಂತ 1: ‘Hey Google’ ಅಥವಾ ‘Okay Google’ ಎಂದು ಹೇಳುವ ಮೂಲಕ ಗೂಗಲ್ ಅಸಿಸ್ಟೆಂಟ್ ಆಪ್ ಅನ್ನು ಇನ್‌ಸ್ಟಾಲ್ ಮಾಡಿ. ಈಗಾಗಲೇ ಇನ್‌ಸ್ಟಾಲ್ ಮಾಡಿದ್ದರೆ ತೊಂದರೆ ಇಲ್ಲ. ಗೂಗಲ್ ಅಸಿಸ್ಟೆಂಟ್ ಅನ್ನು ಸಕ್ರಿಯಗೊಳಿಸಲು ನೀವು ಹೋಮ್ ಬಟನ್ ಅನ್ನು ಒತ್ತಿ ಹಿಡಿಯಬೇಕು.


ಹಂತ 2: ಆಪ್ ಅನ್ನು ಇನ್‌ಸ್ಟಾಲ್ ಮಾಡಿದ ಬಳಿಕ ‘Open’ ಬಟನ್ ಮೇಲೆ ಟ್ಯಾಪ್ ಮಾಡಿ ಮತ್ತು ‘Hey Google’ ಎಂದು ಹೇಳಿ.


ಹಂತ 3: ಬಳಿಕ ಡಿಜಿಟಲ್ ಅಸಿಸ್ಟೆಂಟ್ ನಿಮಗೆ ಪ್ರತಿಕ್ರಿಯಿಸುತ್ತದೆ. ನಂತರ ನೀವು ‘XXXX’ (ಹೆಸರು)ಗೆ WhatsApp ಸಂದೇಶವನ್ನು ಕಳುಹಿಸು ಎಂದು ಹೇಳಬೇಕು. ನಂತರ ನೀವು ಸಂದೇಶ ಕಳುಹಿಸಲು ಬಯಸುವ ಸಂಪರ್ಕದ ಹೆಸರನ್ನು ನಮೂದಿಸಿ.


ಹಂತ 4: ಸಂದೇಶದಲ್ಲಿ ಕಳುಹಿಸಲಾಗುವ ವಿಷಯದ ಬಗ್ಗೆ Google ಅಸಿಸ್ಟೆಂಟ್ ನಿಮ್ಮನ್ನು ಕೇಳುತ್ತದೆ.


ಹಂತ 5: ಅದರ ನಂತರ ವರ್ಚುವಲ್ ಅಸಿಸ್ಟೆಂಟ್ ಸಂದೇಶವನ್ನು ಟೈಪ್ ಮಾಡಿ ತೋರಿಸುತ್ತದೆ. ಸಂದೇಶ ಕಳುಹಿಸಲು ಸಿದ್ಧವಾಗಿದೆ ಎಂದು ಅಸಿಸ್ಟೆಂಟ್ ಹೇಳುತ್ತದೆ. ಬಳಿಕ ನೀವು ‘Okay, send it’ ಎಂದು ಹೇಳಬೇಕು. ನಂತರ ನಿಮ್ಮ ಸಂದೇಶವನ್ನು ಕಳುಹಿಸಲಾಗುತ್ತದೆ. 2ನೇ ಬಾರಿಗೆ ಅಸಿಸ್ಟೆಂಟ್ ನೇರವಾಗಿಯೇ ಸಂದೇಶವನ್ನು ಕಳುಹಿಸಲಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ