WhatsApp Helpline: ಇನ್ಮುಂದೆ ನೀವು ಡೀಪ್ ಫೇಕ್ ಕುರಿತು ವರದಿ ಮಾಡಬಹುದು, ಸಹಾಯವಾಣಿ ಸಂಖ್ಯೆ ಜಾರಿಗೊಳಿಸಲಿದೆ ವಾಟ್ಸ್ ಆಪ್!
WhatsApp New Feature: ಶೀಘ್ರದಲ್ಲಿಯೇ ವಾಟ್ಸಾಪ್ ಸಹಾಯವಾಣಿ ಸಂಖ್ಯೆಯೊಂದನ್ನು ಬಿಡುಗಡೆ ಮಾಡುತ್ತಿದ್ದು, ತನ್ಮೂಲಕ, ಬಳಕೆದಾರರು ಡೀಪ್‌ಫೇಕ್ ವಿಷಯವನ್ನು ವರದಿ ಮಾಡಲು ಸಾಧ್ಯವಾಗಲಿದೆ. ಈ ಸಹಾಯವಾಣಿ ಸಂಖ್ಯೆಯು ಚಾಟ್‌ಬಾಟ್‌ನಂತೆ ಕಾರ್ಯನಿರ್ವಹಿಸುತ್ತದೆ. WhatsApp ನ ಈ ಹೊಸ ವೈಶಿಷ್ಟ್ಯಕ್ಕೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ತಿಳಿದುಕೊಳ್ಳೋಣ ಬನ್ನಿ (Techology News In Kannada).
WhatsApp ಶೀಘ್ರದಲ್ಲೇ ತನ್ನ ಬಳಕೆದಾರರಿಗೆ ಹೊಸ ಸುರಕ್ಷತಾ ವೈಶಿಷ್ಟ್ಯವನ್ನು ಜಾರಿಗೆ ತರಲಿದೆ. ತನ್ಮೂಲಕ ಬಳಕೆದಾರರು ಕೃತಕ ಬುದ್ಧಿಮತ್ತೆಯ(ಎಐ) ಮೂಲಕ ರಚಿಸಲಾದ ಡೀಪ್‌ಫೇಕ್ ಫೋಟೋಗಳು ಮತ್ತು ವೀಡಿಯೊಗಳನ್ನು ವರದಿ ಮಾಡಲು ಸಾಧ್ಯವಾಗಲಿದೆ. ಸೋಮವಾರ, ಮೆಟಾ ಮತ್ತು ಮಿಸ್ ಇನ್ಫರ್ಮೇಷನ್ ಕಂಬ್ಯಾಟ್ ಆಲೈನ್ಸ್((ಎಂಸಿಎ) ) ಡೀಪ್‌ಫೇಕ್ ಫೋಟೋಗಳು ಮತ್ತು ವೀಡಿಯೊಗಳನ್ನು ಎದುರಿಸಲು ಸಹಾಯವಾಣಿ ಸಂಖ್ಯೆಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಘೋಷಿಸಿವೆ. ಈ ಸಹಾಯವಾಣಿ ಸಂಖ್ಯೆಯು ಚಾಟ್‌ಬಾಟ್‌ನಂತಹ ಸೌಲಭ್ಯವನ್ನು ಹೊಂದಿರಲಿದೆ, ಇದರಲ್ಲಿ ಬಳಕೆದಾರರು ನಕಲಿ ಫೋಟೋಗಳು ಮತ್ತು ವೀಡಿಯೊಗಳನ್ನು ವರದಿ ಮಾಡಲು ಸಾಧ್ಯವಾಗಲಿದೆ. ಇದಕ್ಕೆ ಸಂಬಂಧಿಸಿದ ವಿವರಗಳನ್ನು ತಿಳಿದುಕೊಳ್ಳೋಣ ಬನ್ನಿ. (Techology News In Kannada)
ಈ ಸುರಕ್ಷತಾ ವೈಶಿಷ್ಟ್ಯಕ್ಕಾಗಿ ಮಿಸ್ ಇನ್ಫರ್ಮೇಷನ್ ಕಂಬ್ಯಾಟ್ ಆಲೈನ್ಸ್(ಎಂಸಿಎ) ಮೆಟಾದೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಹೊಸ ವೈಶಿಷ್ಟ್ಯದ ಅಡಿಯಲ್ಲಿ, ತ್ವರಿತ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸ್ ಆಪ್ ನಲ್ಲಿ ಬಳಕೆದಾರರಿಗೆ ಸಹಾಯವಾಣಿ ಸಂಖ್ಯೆಯನ್ನು ಜಾರಿಗೊಳಿಸಲಾಗುತ್ತಿದೆ. ಈ ಸಂಖ್ಯೆಯನ್ನು ಬಳಸಿ, ಬಳಕೆದಾರರು ವಿಶೇಷವಾಗಿ ಡೀಪ್‌ಫೇಕ್ ಫೋಟೋಗಳು ಮತ್ತು ವೀಡಿಯೊಗಳು ಅಥವಾ ತಪ್ಪು ಮಾಹಿತಿಯನ್ನು ಹರಡುವ ಸಂದೇಶಗಳನ್ನು ವರದಿ ಮಾಡಬಹುದು. ಈ ವೈಶಿಷ್ಟ್ಯವನ್ನು ಮಾರ್ಚ್ 2024 ರೊಳಗೆ ಪರಿಚಯಿಸುವ ಸಾಧ್ಯತೆ ವರ್ತಿಸಲಾಗುತ್ತಿದೆ.
ಈ ವಾಟ್ಸ್ ಆಪ್ ಸಹಾಯವಾಣಿ ಸಂಖ್ಯೆಯು ಚಾಟ್‌ಬಾಟ್‌ನಂತೆ ಕಾರ್ಯನಿರ್ವಹಿಸುತ್ತದೆ, ಇದರಲ್ಲಿ ಬಳಕೆದಾರರು ಡೀಪ್‌ಫೇಕ್ ವಿಷಯವನ್ನು ವರದಿ ಮಾಡಲು ಸಾಧಯ್ವಾಗಲಿದೆ. ಇದಕ್ಕಾಗಿ ಎಂಸಿಎ ‘ಡೀಪ್‌ಫೇಕ್ ಅನಾಲಿಸಿಸ್ ಯೂನಿಟ್’ ಸಿದ್ಧಪಡಿಸಲಿದೆ. ಈ ಘಟಕದ ಸದಸ್ಯರು ಹೆಲ್ಪ್‌ಲೈನ್ ಚಾಟ್‌ಬಾಟ್‌ನಲ್ಲಿ ವರದಿ ಮಾಡಲಾದ ವಿಷಯವನ್ನು ಕೂಲಂಕುಷವಾಗಿ ಪರಿಶೀಲಿಸುತ್ತಾರೆ. ವರದಿ ಮಾಡಿದ ಸಂದೇಶವು ಕೃತಕ ಬುದ್ಧಿಮತ್ತೆ ರಚಿತವಾದ ಡೀಪ್‌ಫೇಕ್ ಎಂದು ಸಾಬೀತಾದ್ರೆ, ಅದನ್ನು ತಕ್ಷಣವೇ ಪ್ಲಾಟ್‌ಫಾರ್ಮ್‌ನಿಂದ ಡಿಲೀಟ್ ಮಾಡಲಾಗುವುದು. ಈ ಚಾಟ್‌ಬಾಟ್ ಇಂಗ್ಲಿಷ್, ಹಿಂದಿ, ತಮಿಳು ಮತ್ತು ತೆಲುಗು ಸೇರಿದಂತೆ ಮೂರು ಪ್ರಾದೇಶಿಕ ಭಾಷೆಗಳಲ್ಲಿ ಕಾರ್ಯನಿರ್ವಹಿಸಲಿದೆ.
ಇದನ್ನೂ ಓದಿ-Amrut Bharat Trains: ದೇಶಾದ್ಯಂತದ ಕೋಟ್ಯಾಂತರ ರೈಲು ಪ್ರಯಾಣಿಕರಿಗೊಂದು ಸಂತಸದ ಸುದ್ದಿ!
ಕೃತಕ ಬುದ್ಧಿಮತ್ತೆ ಮೂಲಕ ನಕಲಿ ವಿಷಯವನ್ನು ರಚಿಸುವ ಫೋಟೋಗಳು ಮತ್ತು ವೀಡಿಯೊಗಳನ್ನು ಡೀಪ್‌ಫೇಕ್‌ಗಳು ಎಂದು ಕರೆಯಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ, ಚೇಷ್ಟೆಯ ಅಂಶಗಳು ಮೂಲ ಫೋಟೋ ಮತ್ತು ವೀಡಿಯೊವನ್ನು ಹಾಳುಮಾಡುತ್ತವೆ ಮತ್ತು ಅದನ್ನು ಬದಲಾಯಿಸುತ್ತವೆ. ಹೆಚ್ಚಿನ ಡೀಪ್‌ಫೇಕ್ ಫೋಟೋಗಳು ಮತ್ತು ವೀಡಿಯೊಗಳಲ್ಲಿ, ಒಬ್ಬ ವ್ಯಕ್ತಿಯ ಫೋಟೋವನ್ನು ಇನ್ನೊಬ್ಬ ವ್ಯಕ್ತಿಯ ಫೋಟೋದಿಂದ ಬದಲಾಯಿಸಲಾಗುತ್ತದೆ.
ಇದನ್ನೂ ಓದಿ-Jio New Feature Phone: ಶೀಘ್ರದಲ್ಲೇ ಯುಪಿಐ ಪೆಮೆಂಟ್ ವೈಶಿಷ್ಟ್ಯದೊಂದಿಗೆ ಜಿಯೋ ಭಾರತ್ ಬಿ2 ಫೋನ್ ಗಳ ಬಿಡುಗಡೆ!
ತ್ವರಿತ ಸಂದೇಶ ಕಳುಹಿಸುವ ವೇದಿಕೆಯು ಅನೇಕ ಹೊಸ ಸುರಕ್ಷತಾ ವೈಶಿಷ್ಟ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಇತ್ತೀಚೆಗೆ, WhatsApp ಬ್ಲಾಕ್ ಸ್ಪ್ಯಾಮ್ ಸಂದೇಶ ವೈಶಿಷ್ಟ್ಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ಬಹಿರಂಗಪಡಿಸಿತ್ತು. ಭವಿಷ್ಯದ ಈ ವೈಶಿಷ್ಟ್ಯದ ಮೂಲಕ ಲಾಕ್-ಸ್ಕ್ರೀನ್‌ನಿಂದ ನೇರವಾಗಿ ಸ್ಪ್ಯಾಮ್ ಸಂದೇಶಗಳನ್ನು ನಿರ್ಬಂಧಿಸಲು ಬಳಕೆದಾರರಿಗೆ ಸಾಧ್ಯವಾಗಲಿದೆ ಎಂದು ಈ ಸೋರಿಕೆಯಲ್ಲಿ ಮಾಹಿತಿ ನೀಡಲಾಗಿದೆ. ಇದಕ್ಕಾಗಿ ಅವರು ಫೋನ್ ಅನ್ನು ಅನ್ಲಾಕ್ ಮಾಡುವ ಅಗತ್ಯವಿಲ್ಲ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.