WhatsApp Update: ವಾಟ್ಸ್ ಆಪ್ ನಿಂದ ಜಬರ್ದಸ್ತ್ ಸೆಕ್ಯೂರಿಟಿ ಅಪ್ಡೇಟ್ ಬಿಡುಗಡೆ
Whatsapp New Update - ವರದಿಗಳ ಪ್ರಕಾರ, WhatsApp ಬಳಕೆದಾರರ ಸುರಕ್ಷತೆಗೆ ಸಂಬಂಧಿಸಿದ ಪ್ರಮುಖ ಮಾಹಿತಿಯನ್ನು ಒಳಗೊಂಡಿರುವ ಹೊಸ ನವೀಕರಣವನ್ನು ಬಿಡುಗಡೆ ಮಾಡಲಿದೆ. ಈ ಹೊಸ ನವೀಕರಣದ ಕುರಿತು ಹೆಚ್ಚಿನ ವಿವರ ತಿಳಿದುಕೊಳ್ಳೋಣ ಬನ್ನಿ,
ನವದೆಹಲಿ: WhatsApp Update - WhatsApp ವಿಶ್ವದ ಅತ್ಯಂತ ಜನಪ್ರಿಯ ಸಂದೇಶ ಕಳುಹಿಸುವ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಪಠ್ಯ ಸಂದೇಶದಿಂದ ಧ್ವನಿ ಮತ್ತು ವೀಡಿಯೊ ಕರೆಗಳವರೆಗೆ, ಈ ಅಪ್ಲಿಕೇಶನ್‌ನಲ್ಲಿ ನಿಮಗೆ ಹಲವು ಆಸಕ್ತಿದಾಯಕ ವೈಶಿಷ್ಟ್ಯಗಳನ್ನು ನೀಡುತ್ತದೆ. ಕಾಲಕಾಲಕ್ಕೆ, WhatsApp ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿರುವ ಹೊಸ ನವೀಕರಣಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತದೆ. ಇತ್ತೀಚಿಗೆ ಪ್ರಕಟಗೊಂಡ ವರದಿಯೊಂದರ ಪ್ರಕಾರ, WhatsApp ಅದ್ಭುತ ಭದ್ರತೆಯ ಹೊಸ ನವೀಕರಣವನ್ನು ಬಿಡುಗಡೆ ಮಾಡಲಿದೆ, ಈ ನವೀಕರಣದ ಬಗ್ಗೆ ತಿಳಿಯೋಣ ಬನ್ನಿ,
WhatsAppನ ಹೊಸ ಅಪ್ಡೇಟ್
WABetaInfo ನಲ್ಲಿ ಪ್ರಕಟಗೊಂಡ ಒಂದು ಹೊಸ ವರದಿಯ ಪ್ರಕಾರ WhatsApp ಹೊಸ ನವೀಕರಣವೊಂದನ್ನು ಬಿಡುಗಡೆ ಮಾಡುತ್ತಿದೆ. ಈ ಅಪ್‌ಡೇಟ್ ಮೂಲಕ, WhatsApp 2.22.8.7 ಆವೃತ್ತಿಯನ್ನು ತಲುಪಲಿದೆ ಮತ್ತು ಈ ನವೀಕರಣವನ್ನು Google Play ಬೀಟಾ ಪ್ರೋಗ್ರಾಂ ಮೂಲಕ ಜಾರಿಗೆ ಬರುತ್ತಿದೆ. ಈ ಅಪ್‌ಡೇಟ್‌ನಲ್ಲಿ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಗೆ ಒಂದು ಹೊಸ ಸೇರ್ಪಡೆ ಮಾಡಲಾಗುತ್ತಿದೆ.
ಇದನ್ನೂ ಓದಿ-Jio Cricket Pack: ಐಪಿಎಲ್ ಅಭಿಮಾನಿಗಳಿಗೆ ₹279 ರ ಹೊಸ ಕ್ರಿಕೆಟ್ ಪ್ಯಾಕ್ ಪರಿಚಯಿಸಿದ Jio
WhatsApp ನಲ್ಲಿ ಈ ಬದಲಾವಣೆಯಾಗಲಿದೆ (Whatsapp Latest Update)
WABetaInfo ಪ್ರಕಾರ, ಈ ಹೊಸ ನವೀಕರಣದ ಹೆಸರು ಎಂಡ್-ಟು-ಎಂಡ್ ಇಂಡಿಕೇಟರ್ಸ್ (End To End Indicators) ಆಗಿದೆ. ಇದರ ಅಡಿಯಲ್ಲಿ, ಈಗ WhatsApp ಬಳಕೆದಾರರಿಗೆ ಅವರ ಕರೆ ಲಾಗ್‌ಗಳ ಪುಟದ ಕೆಳಭಾಗದಲ್ಲಿ ಪ್ರಮುಖ ಅಧಿಸೂಚನೆಯನ್ನು ತೋರಿಸಲಾಗುತ್ತದೆ, ಇದರಲ್ಲಿ ಅವರ ಫೋನ್ ಕರೆಗಳು ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ (WhatsApp Calls End To End Encrypted) ಆಗಿವೆ. WhatsApp ಆಗಲಿ ಅಥವಾ Meta ಆಗಲಿ ಅವುಗಳನ್ನು ಕೇಳಲು ಅಥವಾ ನೋಡಲು ಸಾಧ್ಯವಿಲ್ಲ ಎಂದು ಬರೆಯಲಾಗುತ್ತದೆ. ಚಾಟ್‌ಗಳು ಮತ್ತು ಸ್ಟೇಟಸ್ ಅಪ್‌ಡೇಟ್‌ಗಳಿರುವ ಪುಟಕ್ಕೂ ಈ ಮಾಹಿತಿಯನ್ನು ಶೀಘ್ರದಲ್ಲೇ ನೀಡಲಾಗುವುದು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ-Flipkart ಮೇಲೆ ಬಂಪರ್ ಕೊಡುಗೆ! 43 ಇಂಚಿನ ಡಿಸ್ಪ್ಲೇ ಇರುವ Smart TV ಮೇಲೆ ಜಬರ್ದಸ್ತ್ ರಿಯಾಯ್ತಿ
WhatsApp New Update ಮೊದಲು ಯಾರಿಗೆ ಸಿಗಲಿದೆ
WhatsApp ಬೀಟಾ ಬಳಕೆದಾರರಿಗೆ ವಾಟ್ಸ್ ಆಪ್ ನ ಈ ನೂತನ ನವೀಕರಣ ಮೊದಲು ಬಿಡುಗಡೆ ಮಾಡಲಾಗುತ್ತಿದೆ. ಆದರೆ, iPhone ಬಳಕೆದಾರರಿಗಾಗಲಿ ಅಥವಾ ಬೀಟಾ ಹೊರತುಪಡಿಸಿದ ಬಳಕೆದಾರರಿಗಾಗಲಿ ಈ ಹೊಸ ಅಪ್ಡೇಟ್ ಯಾವಾಗ ಬಿಡುಗಡೆಯಾಗುತ್ತಿದೆ ಎಂಬುದರ ಮಾಹಿತಿ ಇನ್ನೂ ಲಭ್ಯವಾಗಿಲ್ಲ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.