New WhatsApp Feature: ವಿಶ್ವದ ಅತ್ಯಂತ ಜನಪ್ರೀಯ ತ್ವರಿತ ಸಂದೇಶ ರವಾನಿಸುವ ವೇದಿಕೆಯಾಗಿರ್ವ ವಾಟ್ಸ್ ಆಪ್  ಲಕ್ಷಾಂತರ ಬಳಕೆದಾರರಿಗೆ ಹೊಸ ವೈಶಿಷ್ಟ್ಯವನ್ನು ಪರಿಚಯಿಸಲಿದೆ ಎನ್ನಲಾಗಿದೆ.  ಇತ್ತೀಚಿಗೆ ಪ್ರಕಟಗೊಂಡ ವರದಿಯೊಂದರ ಪ್ರಕಾರ, ಇನ್ಮುಂದೆ ಆಂಡ್ರಾಯ್ಡ್ ಬಳಕೆದಾರರು ಯಾರೊಬ್ಬರ ಪ್ರೊಫೈಲ್ ಚಿತ್ರದ ಸ್ಕ್ರೀನ್‌ಶಾಟ್ ತೆಗೆದುಕೊಳ್ಳಲು (whatsapp screen shot profile picture notification) ಇದರಿಂದ ಸಾಧ್ಯವಾಗುವುದಿಲ್ಲ. ಬಳಕೆದಾರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಂಪನಿಯು ಈ ಹೊಸ ಅಪ್ಡೇಟ್ ಪರಿಚಯಿಸಲಿದೆ.  ಆದರೆ ಐಫೋನ್ ಬಳಕೆದಾರರು WhatsApp ನಲ್ಲಿ ಬೇರೆಯವರ ಪ್ರೊಫೈಲ್ ಚಿತ್ರದ ಸ್ಕ್ರೀನ್‌ಶಾಟ್ ಅನ್ನು ತೆಗೆದುಕೊಳ್ಳಬಹುದು. ಆದಾಗ್ಯೂ, ಬಳಕೆದಾರರು ಸೇವ್ ಸಂಪರ್ಕಗಳಿಂದ ಪ್ರೊಫೈಲ್ ಚಿತ್ರಗಳನ್ನು ಮರೆಮಾಚುವ ಆಯ್ಕೆಯನ್ನು ಹೊಂದಿರುತ್ತಾರೆ. ಆದರೆ ವಾಟ್ಸಾಪ್‌ನ ಹೊಸ ಅಪ್‌ಡೇಟ್‌ನಿಂದ ಇನ್ಮುಂದೆ ಯಾರ ಚಿತ್ರವೂ ದುರ್ಬಳಕೆಯಾಗುವುದಿಲ್ಲ.


COMMERCIAL BREAK
SCROLL TO CONTINUE READING

ಇತ್ತೀಚಿನ ವರದಿಯ ಪ್ರಕಾರ, WhatsApp ಫೆಬ್ರವರಿ 2024 ರಿಂದ ಈ ವೈಶಿಷ್ಟ್ಯದ ಮೇಲೆ ಕಾರ್ಯನಿರ್ವಹಿಸುತ್ತಿದೆ ಎನ್ನಲಾಗಿದೆ. ಆದರೆ ಇದುವರೆಗೆ ಮೆಟಾದಿಂದ ಯಾವುದೇ ಅಧಿಕೃತ ಪ್ರಕಟಣೆ ಬಂದಿಲ್ಲ. ಆದರೆ ಕಂಪನಿಯು ಅದನ್ನು ಪರೀಕ್ಷಿಸುವ ಹಂತದಲ್ಲಿದೆ ಎನ್ನಲಾಗಿದೆ. ನೀವು ಯಾವುದೇ ಆಂಡ್ರಾಯ್ಡ್ ಫೋನ್‌ನಲ್ಲಿ ಪ್ರೊಫೈಲ್ ಚಿತ್ರದ ಸ್ಕ್ರೀನ್ ಶಾಟ್ ತೆಗೆದುಕೊಳ್ಳಲು ಪ್ರಯತ್ನಿಸಿದರೆ, ಅದು ವಿಫಲಗೊಳ್ಳುತ್ತದೆ. ಆದರೆ ನೀವು ಅದರ ಚಿತ್ರವನ್ನು ಕ್ಲಿಕ್ ಮಾಡಿದರೆ, ನಿಮಗೆ ಸಂದೇಶವೊಂದು ಬರಲಿದ್ದು, ಅದರಲ್ಲಿ 'ನೀವು ಸ್ಕ್ರೀನ್‌ಶಾಟ್ ತೆಗೆದುಕೊಳ್ಳಲು ಸಾಧ್ಯವಿಲ್ಲ' ಎಂದು ಬರೆದಿರುತ್ತದೆ. ಆದರೆ ಐಫೋನ್‌ನಲ್ಲಿ ನೀವು ಸ್ಕ್ರೀನ್ ಶಾಟ್ ತೆಗೆದುಕೊಳ್ಳಬಹುದು.ಈ ವೈಶಿಷ್ಟ್ಯವನ್ನು ಪೂರ್ವನಿಯೋಜಿತವಾಗಿ ಆನ್ ಆಗಿರಲಿದೆ ಎಂಬುದನ್ನು ನೆನಪಿನಲ್ಲಿಡಿ, ನೀವು ಅದನ್ನು ಮ್ಯಾನುವಲಿ ಆನ್-ಆಫ್ ಮಾಡಲು ಸಾಧ್ಯವಿಲ್ಲ. (whatsapp screenshot notification)


ಈ ಹೊಸ ವೈಶಿಷ್ಟ್ಯದ ಬಗ್ಗೆ WhatsApp ಇನ್ನೂ ಮಾಹಿತಿಯನ್ನು ನೀಡಿಲ್ಲ (Whatsapp profile photo screenshot notification android)
ನಿಮ್ಮ WhatsApp ಪ್ರೊಫೈಲ್ ಚಿತ್ರವನ್ನು ಕೆಲ ಜನರೊಂದಿಗೆ ಅಥವಾ ಎಲ್ಲರೊಂದಿಗೆ ಮರೆಮಾಚಲು ನೀವು ಬಯಸಿದರೆ, ಆ ಆಯ್ಕೆ ನಿಮಗೆ ಲಭ್ಯವಿರಲಿದೆ. ಇದನ್ನು ಮಾಡಲು ನೀವು ಕೆಳಗೆ ನೀಡಲಾದ ಹಂತಗಳನ್ನು ಅನುಸರಿಸಬಹುದು. ನೆನಪಿನಲ್ಲಿಡಿ, ನೀವು ಪಟ್ಟಿಗೆ ಸಂಪರ್ಕವನ್ನು ಸೇರಿಸುವಾಗಲೆಲ್ಲಾ ನೀವು ಈ ಹಂತಗಳನ್ನು ಪುನರಾವರ್ತಿಸಬೇಕಾಗುತ್ತದೆ. ಹೊಸ ವೈಶಿಷ್ಟ್ಯವು iOS-Android ಎರಡರಲ್ಲೂ ಕಾರ್ಯನಿರ್ವಹಿಸುತ್ತದೆ.


ಮೊದಲು ವಾಟ್ಸಾಪ್ ತೆರೆಯಿರಿ
ಈಗ ಸೆಟ್ಟಿಂಗ್‌ಗಳ ಟ್ಯಾಬ್‌ನ ಕೆಳಗಿನ ಬಲ ಮೂಲೆಯಲ್ಲಿ ಕ್ಲಿಕ್ ಮಾಡಿ.
ಅಲ್ಲಿ ಗೌಪ್ಯತೆಯನ್ನು ಆಯ್ಕೆಮಾಡಿ.
ಪ್ರೊಫೈಲ್ ಚಿತ್ರದ ಮೇಲೆ ಟ್ಯಾಪ್ ಮಾಡಿ.
"ನನ್ನ ಸಂಪರ್ಕಗಳನ್ನು ಹೊರತುಪಡಿಸಿ" ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಈಗ ನೀವು ಪ್ರೊಫೈಲ್ ಚಿತ್ರವನ್ನು ಮರೆಮಾಚಲು ಬಯಸುವ ಸಂಪರ್ಕಗಳನ್ನು ಆಯ್ಕೆಮಾಡಿ.
ಮೇಲಿನ ಬಲ ಮೂಲೆಯಲ್ಲಿರುವ ಫಿನಿಶ್ ಆಯ್ಕೆಯ ಮೇಲೆ ಟ್ಯಾಪ್ ಮಾಡಿ.


ಇದನ್ನೂ ಓದಿ-Phone 15ರ ಖರೀದಿಯ ಮೇಲೆ ₹42,702 ಭರ್ಜರಿ ರಿಯಾಯಿತಿ, ತ್ವರೆ ಮಾಡಿ, ಕೊಡುಗೆ ಸೀಮಿತಾವಧಿಗೆ ಮಾತ್ರ!


ನಿಮ್ಮ ಪ್ರೊಫೈಲ್ ಚಿತ್ರವನ್ನು ಎಲ್ಲರೊಂದಿಗೆ ಮರೆಮಾಡಲು ನೀವು ಬಯಸಿದರೆ ಕೆಳಗಿನ ಹಂತಗಳನ್ನು ಅನುಸರಿಸಿ.
WhatsApp ತೆರೆಯಿರಿ.
ಸೆಟ್ಟಿಂಗ್ಸ್ ಟ್ಯಾಬ್ ಮೇಲೆ ಟ್ಯಾಪ್ ಮಾಡಿ.
ಈಗ ಗೌಪ್ಯತೆಗೆ ಹೋಗಿ.
ಪ್ರೊಫೈಲ್ ಚಿತ್ರವನ್ನು ಆಯ್ಕೆಮಾಡಿ.
"ಯಾರೂ ಇಲ್ಲ" ಆಯ್ಕೆಯನ್ನು ಆಯ್ದುಕೊಳ್ಳಿ.


ಇದನ್ನೂ ಓದಿ-WhatsApp Hacks: ವಾಟ್ಸ್ ಆಪ್ ವೇದಿಕೆಯಲ್ಲಿ ಲಾಕ್ ಮಾಡಲಾದ ಚಾಟ್ ಫೋಲ್ಡರ್ ಅನ್ನು ಕೂಡ ಮರೆಮಾಚಬಹುದು!


WhatsApp ಅಪ್ಲಿಕೇಶನ್ ಲಾಕ್ ವೈಶಿಷ್ಟ್ಯ
WhatsApp ನ ಮುಂಬರುವ ವೈಶಿಷ್ಟ್ಯಗಳ ಕುರಿತು ಮಾಹಿತಿ ನೀಡುವ ವೆಬ್‌ಸೈಟ್ WABetainfo ನ ಇತ್ತೀಚಿನ ವರದಿಯೊಂದರಲ್ಲಿ, ಬಯೋಮೆಟ್ರಿಕ್‌ಗಳ ಹೊರತಾಗಿ, ಇನ್ಮುಂದೆ ಬಳಕೆದಾರರು ಸಾಧನದ ಪಾಸ್‌ಕೋಡ್ ಮೂಲಕ ಅಪ್ಲಿಕೇಶನ್‌ನಲ್ಲಿ ಸ್ಕ್ರೀನ್ ಲಾಕ್ ಅನ್ನು ಹೊಂದಿಸುವಂತಹ ಇತರ ದೃಢೀಕರಣ ಆಯ್ಕೆಗಳನ್ನು ಬಳಸಬಹುದು ಎಂದು ಹೇಳಲಾಗಿದೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ