Whats AppMistakes: ತ್ವರಿತ ಸಂದೇಶ ರವಾನಿಸುವ ವೇದಿಕೆಯಾಗಿರುವ WhatsApp ಇಂದು ಪ್ರತಿಯೊಬ್ಬರ ಜೀವನದ ಪ್ರಮುಖ ಭಾಗವಾಗಿದೆ. ಇದಕ್ಕೆ ಕಾರಣ ಈ ಆಪ್ ನಮ್ಮೆಲ್ಲರ ವೈಯಕ್ತಿಕ ಬದುಕಿನಲ್ಲಿ ಸ್ಥಾನ ಪಡೆದಿದೆ. WhatsApp ನ ಹಲವು ಪ್ರಯೋಜನಗಳಿವೆ. ಆದರೆ, ಈ ಆಪ್ ಕೆಲ ಅನಾನುಕೂಲಗಳನ್ನು ಕೂಡ ಹೊಂದಿದೆ. ವಾಟ್ಸಾಪ್‌ಗೆ ಸಂಬಂಧಿಸಿದ ಅನುಕೂಲಗಳ ಬಗ್ಗೆ ನಮಗೆ ಬಹಳಷ್ಟು ತಿಳಿದಿದೆ ಆದರೆ ಅನಾನುಕೂಲಗಳ ಬಗ್ಗೆ ಬಹಳ ಕಡಿಮೆ ಜನರಿಗೆ ತಿಳಿದಿದೆ. ಇಂತಹ ಪರಿಸ್ಥಿತಿಯಲ್ಲಿ, ವಾಟ್ಸಾಪ್ ಬಳಸುವಾಗ ನೀವು ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ಇಂದು ನಾವು ವಾಟ್ಸಾಪ್‌ಗೆ ಸಂಬಂಧಿಸಿದ ಇಂತಹ ಕೆಲವು ತಪ್ಪುಗಳ ಬಗ್ಗೆ ತಿಳಿದುಕೊಳ್ಳೋಣ. ವಾಟ್ಸ್‌ಆ್ಯಪ್‌ನಲ್ಲಿಈ ತಪ್ಪುಗಳನ್ನು ಮಾಡದೆ, ನೀವು ನಿಮ್ಮ ವೈಯಕ್ತಿಕ ವಿವರಗಳನ್ನು ಸೋರಿಕೆಯಾಗದಂತೆ ತಡೆಯಬಹುದು ಹಾಗೂ ಜೈಲಿಗೆ ಹೋಗುವುದನ್ನು ತಪ್ಪಿಸಬಹುದು. ಈ ತಪ್ಪುಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.


COMMERCIAL BREAK
SCROLL TO CONTINUE READING

ಅಪರಿಚಿತರ ಸಂಖ್ಯೆಯನ್ನು ಎಂದಿಗೂ ಸೇವ್ ಮಾಡಬೇಡಿ (WhatsApp Latest News)
ಹಲವು ಬಾರಿ ನಾವು ಕ್ಯಾಬ್ ಡ್ರೈವರ್, ಡಿಲೆವರಿ ಬಾಯ್ ಅಥವಾ ಯಾವುದೇ ಇತರ ಸೇವೆ ಒದಗಿಸುವವರ ಸಂಖ್ಯೆಯನ್ನು ಕೆಲಸದ ನಿಮಿತ್ತ ಸೇವ್ ಮಾಡುತ್ತೇವೆ. ಆದರೆ, ನಂತರ ಅದನ್ನು ಡಿಲೀಟ್ ಮಾಡಲು ಮರೆಯುತ್ತೇವೆ. ಇಂತಹ ಸಂದರ್ಭದಲ್ಲಿ ಆ ವ್ಯಕ್ತಿ WhatsApp ನಲ್ಲಿ ನಮ್ಮ ಪ್ರೊಫೈಲ್ ಪಿಕ್ಚರ್ ಹಿಡಿದು ನಮ್ಮ ಸ್ಟೇಟಸ್ ಕೂಡ ನೋಡಬಹುದು. ಇದರಿಂದ ನಮ್ಮ ಇಂತಹ ಮಾಹಿತಿ ಅಪರಿಚಿತ ವ್ಯಕ್ತಿಗಳ ಕೈಸೇರುತ್ತದೆ. ಹೀಗಾಗಿ ಎಂದಿಗೂ ಕೂಡ ಅಪರಿಚಿತರ ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ ಉಳಿಸಿಕೊಳ್ಳಬೇಡಿ. 


ಅಶ್ಲೀಲ ವಿಡಿಯೋಗಳನ್ನು ಹಂಚಿಕೊಳ್ಳಬೇಡಿ, ಜೈಲು ಶಿಕ್ಷೆ ಆಗುವ ಸಾಧ್ಯತೆ (WhatsApp Latest Feature)
ವಾಟ್ಸ್ ಆಪ್ ಮೇಲೆ ಅಶ್ಲೀಲ ಕಂಟೆಂಟ್ ಹಂಚಿಕೊಳ್ಳುವುದು ನಿಮ್ಮನ್ನು ಅಪಾಯಕ್ಕೆ ದೂಡಬಹುದು. ಯಾವುದೇ ಓರ್ವ ವ್ಯಕ್ತಿ ನಿಮ್ಮ ಖಾತೆಯ ಕುರಿತು ವಾಟ್ಸ್ ಆಪ್ ಗೆ ದೂರು ನೀಡಿದರೆ, ವಾಟ್ಸ್ ಆಪ್ ನಿಮ್ಮ ಖಾತೆಯನ್ನು ಬ್ಯಾನ್ ಮಾಡಬಹುದು. ಜೊತೆಗೆ ವಾಟ್ಸ್ ಆಪ್ ನೀತಿಯ ಪ್ರಕಾರ, ನಿಮ್ಮ ಮೇಲೆ ಪ್ರಕರಣ ಕೂಡ ದಾಖಲಾಗಬಹುದು. ಹೀಗಿರುವಾಗ ಒಂದು ಪಾರ್ನ್ ಕ್ಲಿಪ್ ನಿಮ್ಮನ್ನು ಜೈಲಿಗೂ ಅಟ್ಟಬಹುದು.


ಪ್ರೊಫೈಲ್ ಚಿತ್ರದಲ್ಲಿ ಹೆಚ್ಚಿನ ಮಾಹಿತಿ ನೀಡಬೇಡಿ
ನಿಮ್ಮ ಕಾಂಟಾಕ್ಟ್ ಪಟ್ಟಿಯಲ್ಲಿರಲಿ ಅಥವಾ ಇರದೇ ಇರಲಿ ಪ್ರತಿಯೊಬ್ಬರೂ ನಿಮ್ಮ ಪ್ರೊಫೈಲ್ ಫೋಟೋ ನೋಡಬಹುದಾಗಿದೆ. ಹೀಗಿರುವಾಗ ವಾಟ್ಸ್ ಆಪ್ ಮೇಲೆ ಪ್ರೊಫೈಲ್ ಚಿತ್ರ ಅಪ್ಲೋಡ್ ಮಾಡುವಾಗ ಎಚ್ಚರಿಕೆ ವಹಿಸಿ. ಉದಾಹರಣೆಗೆ ಪ್ರೊಫೈಲ್ ಚಿತ್ರದಲ್ಲಿ  ನಿಮ್ಮ ಸೊಸೈಟಿ ಅಥವಾ ಯಾವುದೇ ಇತರ ಸೊಸೈಟಿ ಹೆಸರು ಬಾರದೆ ಇರುವಂತೆ ಎಚ್ಚರಿಕೆವಹಿಸಿ. ಜೊತೆಗೆ ಕಾರು ಅಥವಾ ಬೈಕ್ ಮುಂಭಾಗದಿಂದ ಕ್ಲಿಕ್ಕಿಸಿದ ಫೋಟೋ ಬಳಸಬೇಡಿ. ಏಕೆಂದರೆ ಅದರಲ್ಲಿ ನಿಮ್ಮ ಬೈಕ್ ಅಥವಾ ವಾಹನದ ಸಂಖ್ಯೆ ಇರುತ್ತದೆ.


ಅವಶ್ಯಕತೆ ಎನಿಸಿದರೆ Two-step verification ಸಕ್ರೀಯಗೊಳಿಸಿ
ನಿಮ್ಮ ಗೌಪ್ಯತೆ ಕಾಪಾಡಿಕೊಳ್ಳಲು ವಾಟ್ಸ್ ಆಪ್ (WhatsApp) ನಿಮಗೆ ಒಂದು ಅದ್ಭುತ ವೈಶಿಷ್ಟ್ಯ ಒದಗಿಸಿದೆ.  Two-step verification ನಲ್ಲಿ ನೀವು ವಾಟ್ಸ್ ಆಪ್ ಮೇಲೆ 6 ಅಂಕಿಗಳ ಪಿನ್ ಸೆಟ್ ಮಾಡಬಹುದು. ಯಾವುದೇ ಡಿವೈಸ್ ನಲ್ಲಿ ನಿಮ್ಮ ಅಧಿಕೃತ ನಂಬರ್ ಮೂಲಕ ವಾಟ್ಸ್ ಆಪ್ ನಲ್ಲಿ ಲಾಗಿನ್ ಆಗಲು ಈ ಪಿನ್ ಅವಶ್ಯಕ. ಅಷ್ಟೇ ಅಲ್ಲ ವಾಟ್ಸ್ ಆಪ್ ಮಧ್ಯದಲ್ಲಿಯೂ ಕೂಡ ನಿಮಗೆ ಈ ಸಂಖ್ಯೆ ನಮೂದಿಸಲು ಸೂಚಿಸುತ್ತದೆ. ಸೈಬರ್ ಫ್ರಾಡ್ ನ ಈ ಕಾಲದಲ್ಲಿ Two-step verification ಸಕ್ರೀಯಗೊಳಿಸುವುದು ತುಂಬಾ ಅಗತ್ಯವಾಗಿದೆ.


ಇದನ್ನೂ ಓದಿ-Covid-19 Research: ಕೊವಿಡ್ ನಿಂದ ಬಳಲುತ್ತಿರುವ ಅಧಿಕ BP ಹಾಗೂ ಮಧುಮೇಹದ ಯುವಕರಲ್ಲಿ Brain Stroke ಅಪಾಯ ಹೆಚ್ಚು- ಅಧ್ಯಯನ


ಈ ರೀತಿಯ ಸಂದೇಶಗಳನ್ನು ಮುಂದಕ್ಕೆ ಕಳುಹಿಸಬೇಡಿ
ನಮ್ಮ ವಾಟ್ಸಾಪ್‌ನಲ್ಲಿ ಹಲವು ರೀತಿಯ ಸಂದೇಶಗಳನ್ನು ಬರುತ್ತಲೇ ಇರುತ್ತವೆ.   ಯಾವುದೇ ಮಾಹಿತಿ ಅಥವಾ ಸುದ್ದಿಯನ್ನು ಫಾರ್ವರ್ಡ್ ಮಾಡುವ ಮುನ್ನ, ಅದು ನಕಲಿ ಸುದ್ದಿಯಲ್ಲ ಎಂದು ಖಚಿತಪಡಿಸಿಕೊಳ್ಳಿ. ಇದರೊಂದಿಗೆ ಉಚಿತ ಕೊಡುಗೆಗಳು ಮತ್ತು ಸರ್ಕಾರಿ ಯೋಜನೆಗಳ ಹೆಸರಿನಲ್ಲಿ ಅನೇಕ ನಕಲಿ ಲಿಂಕ್‌ಗಳನ್ನು ಫಾರ್ವರ್ಡ್ ಮಾಡಲಾಗುತ್ತದೆ. ಅವುಗಳನ್ನು ತಳ್ಳುವುದನ್ನು ತಪ್ಪಿಸಿ. ಇದನ್ನು ಹೊರತುಪಡಿಸಿ, ಯಾವುದೇ ಧರ್ಮ ಅಥವಾ ಸಮುದಾಯದ ವಿರುದ್ಧ ದ್ವೇಷ-ಭಾವವನ್ನು ಉತ್ತೇಜಿಸುವ ಸಂದೇಶಗಳನ್ನು ಕಳುಹಿಸಬೇಡಿ.


ಇದನ್ನೂ ಓದಿ-Alert! Internet ಮೇಲೆ ಕಾಯಿಲೆಯ ಮಾಹಿತಿ ಹುಡುಕಾಟ ಅಪಾಯಕಾರಿ ಸಾಬೀತಾಗಬಹುದು


ನಿಮ್ಮ WhatsApp ಅನ್ನು ಪ್ರೈವೆಸಿ ಸೆಟ್ಟಿಂಗ್ ಅನ್ನು ನೋಡಿ ಅಂಟಿಸಿ. ಏಕೆಂದರೆ ವಾಟ್ಸ್ ಆಪ್ ನಿಮ್ಮ ಸಂದೇಶಗಳ ಬ್ಯಾಕಪ್ ಅನ್ನು ಗೂಗಲ್ ಡ್ರೈವ್ ನಲ್ಲಿ ಅಥವಾ iCloud ನಲ್ಲಿರಿಸುತ್ತದೆ. ಸಂದೇಶ ರವಾನೆಯಾದ ಬಳಿಕ ಒಂದು ವೇಳೆ ನಿಮ್ಮ ವಾಟ್ಸ್ ಆಪ್ ಖಾತೆ ಅಥವಾ ಆಪಲ್ ಖಾತೆಯನ್ನು ಯಾರಾದರು ಹ್ಯಾಕ್ ಮಾಡಿದರೆ, ನಿಮ್ಮ ಚಾಟಿಂಗ್ ಮಾಹಿತಿ ಅವರ ಕೈ ಸೇರುವ ಸಾಧ್ಯತೆ ಇರುತ್ತದೆ. ಹೀಗಿರುವಾಗ ನೀವು ನಿಮ್ಮ ಚಾಟ್ ಅನ್ನು ಎಕ್ಸ್ಪೋರ್ಟ್ ಮಾಡಿ ಸುರಕ್ಷಿತ ಸ್ಥಾನದಲ್ಲಿರಿಸುವುದು ತುಂಬಾ ಮಹತ್ವದ್ದಾಗಿದೆ. 


ಇದನ್ನೂ ಓದಿ-Android 12 New Feature: ಇನ್ಮುಂದೆ ಕೇವಲ ಹಾವಭಾವಗಳ ಮೂಲಕ ನೀವು ನಿಮ್ಮ ಫೋನ್ ನಿಯಂತ್ರಿಸಬಹುದು, ಹೇಗೆ ಅಂತೀರಾ? ಸುದ್ದಿ ಓದಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ