ನ.1ರಿಂದ ಈ ಆಂಡ್ರಾಯ್ಡ್ ಫೋನ್ಗಳು, ಐಫೋನ್‌ಗಳಲ್ಲಿ ವಾಟ್ಸಾಪ್ ವರ್ಕ್ ಆಗಲ್ಲ..!
ಈ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ಆಂಡ್ರಾಯ್ಡ್ 4.0.3 ಅಥವಾ ಅದಕ್ಕಿಂತಲೂ ಕಡಿಮೆ ಆವೃತ್ತಿಯ OSಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.
ನವದೆಹಲಿ: ವಾಟ್ಸಾಪ್ ಬಳಕೆದಾರರಿಗೆ ಒಂದು ದೊಡ್ಡ ನಿರಾಶೆಯ ಸುದ್ದಿ ಹೊರಬಿದ್ದಿದೆ. 2021ರ ನವೆಂಬರ್ 1ರಿಂದ ಕೆಲವು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ಮತ್ತು ಐಫೋನ್‌ಗಳಲ್ಲಿವಾಟ್ಸಾಪ್ ಕಾರ್ಯನಿರ್ವಹಿಸುವುದಿಲ್ಲವಂತೆ. ಫೇಸ್‌ಬುಕ್ ಒಡೆತನದ ಜನಪ್ರಿಯ ಮೆಸೇಜಿಂಗ್ ಆ್ಯಪ್ ನ.1ರಿಂದ ವರ್ಕ್ ಆಗದ ಸ್ಮಾರ್ಟ್‌ಫೋನ್‌ಗಳ ಪಟ್ಟಿಯನ್ನು ಬಹಿರಂಗಪಡಿಸಿದೆ. ವಾಟ್ಸಾಪ್ ಇನ್ನು ಮುಂದೆ ಅವುಗಳಲ್ಲಿ ಕಾರ್ಯನಿರ್ವಹಿಸುವುದಿಲ್ಲವೆಂದು ಅದು ಹೇಳಿಕೊಂಡಿದೆ.
ಈ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್(Android Smartphone)ಗಳು ಆಂಡ್ರಾಯ್ಡ್ 4.0.3 ಅಥವಾ ಅದಕ್ಕಿಂತಲೂ ಕಡಿಮೆ ಆವೃತ್ತಿಯ OSಗಳಲ್ಲಿ ಕಾರ್ಯನಿರ್ವಹಿಸುತ್ತಿವೆ ಮತ್ತು ಆಪಲ್ ಐಫೋನ್‌ಗಳಲ್ಲಿ iOS 9 ಅಥವಾ ಅದಕ್ಕಿಂತ ಹಳೆಯ ಆವೃತ್ತಿಯಲ್ಲಿವೆ.
ಇದನ್ನೂ ಓದಿ: INTERNET ಇಲ್ಲದೆಯೂ ಕೂಡ UPI ಮೂಲಕ ಆನ್ಲೈನ್ ಪೇಮೆಂಟ್ ಮಾಡಬಹುದು! ಹೇಗೆ?
ವಾಟ್ಸಾಪ್ ವರ್ಕ್ ಆಗದ ಸ್ಮಾರ್ಟ್‌ಫೋನ್‌ಗಳ ಪಟ್ಟಿ
ಸ್ಯಾಮ್‌ಸಂಗ್, ಎಲ್‌ಜಿ, ZTE, ಹುವಾವೇ, ಸೋನಿ, ಅಲ್ಕಾಟೆಲ್ ಮತ್ತು ಇತರ ಸ್ಮಾರ್ಟ್‌ಫೋನ್‌ಗಳನ್ನು ಒಳಗೊಂಡಿರುವ ಆಂಡ್ರಾಯ್ಡ್ ಫೋನ್‌ಗಳ ಪಟ್ಟಿಯನ್ನು ವಾಟ್ಸಾಪ್ ಬಿಡುಗಡೆ ಮಾಡಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ ಫೋನ್ ಗಳ ಪೈಕಿ Galaxy Trend Lite, Galaxy Trend II, Galaxy SII, Galaxy S3 mini, Galaxy Xcover 2, Galaxy Core, Galaxy Ace 2, ಎಲ್‌ಜಿ ಫೋನ್ ಗಳ ಪೈಕಿ LGs Lucid 2, LG Optimus F7, LG Optimus F5, Optimus L3 II Dual, Optimus F5, Optimus L5, Optimus L5 II, Optimus L5 Dual, Optimus L3 II, Optimus L7, Optimus L7 II Dual, Optimus L7 II, Optimus F6, Enact , Optimus L4 II Dual, Optimus F3, Optimus L4 II, Optimus L2 II, Optimus Nitro HD and 4X HD ಮತ್ತು Optimus F3Q ಪಟ್ಟಿಯಲ್ಲಿರುವ ಸ್ಮಾರ್ಟ್‌ಫೋನ್‌ಗಳಾಗಿವೆ.
ಇದನ್ನೂ ಓದಿ: Hero Splendor ಪ್ರಿಯರಿಗೆ ಸಂತಸದ ಸುದ್ದಿ, ಇನ್ಮುಂದೆ ಪೆಟ್ರೋಲ್ ಇಲ್ಲದೆಯೇ Splendor ದೌಡಾಯಿಸಿ
ಇವುಗಳ ಹೊರತಾಗಿ ಇತರ ಆಂಡ್ರಾಯ್ಡ್ ಫೋನ್‌ಗಳ ಪಟ್ಟಿಯಲ್ಲಿ ZTE Grand S Flex, ZTE V956, Grand X Quad V987 ಮತ್ತು ZTE Grand Memo, Huawei’s Ascend G740, Ascend Mate, Ascend D Quad XL, Ascend D1 Quad XL, Ascend P1 S, and Ascend D2, Sony’s Xperia Miro, Sony Xperia Neo L, and Xperia Arc S, Alcatel, HTC, Lenovo ಸೇರಿದಂತೆ ಇನ್ನು ಕೆಲವು ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಾಪ್ ಇನ್ನುಮುಂದೆ ವರ್ಕ್ ಆಗಲ್ಲ ಎಂದು ಹೇಳಲಾಗುತ್ತಿದೆ.
ಗಮನಿಸಬೇಕಾದ ಅಂಶವೆಂದರೆ ಈ ಸ್ಮಾರ್ಟ್‌ಫೋನ್‌ಗಳು ವಾಟ್ಸಾಪ್ ಆ್ಯಪ್(Whatsapp App) ಗೆ ಬೆಂಬಲ ನೀಡುತ್ತವೆ. ಆದರೆ ಅವು ಭದ್ರತಾ ಅಪ್‌ಡೇಟ್‌ಗಳು, ಹೊಸ ಫೀಚರ್‌ಗಳನ್ನು ಹೊಂದಲು ಸಾಧ್ಯವಾಗುವುದಿಲ್ಲ.ಇದು ಕ್ರಮೇಣ ಹಳೆಯ ಸ್ಮಾರ್ಟ್‌ಫೋನ್‌ಗಳಲ್ಲಿ ಆ್ಯಪ್ ನಿಷ್ಕ್ರಿಯಗೊಳ್ಳಲು ಕಾರಣವಾಗುತ್ತದೆ ಎಂದು ಹೇಳಲಾಗುತ್ತಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.