ನವದೆಹಲಿ: ಇತ್ತೀಚಿನ WhatsApp ಅಪ್‌ಗ್ರೇಡ್(Whatsapp Update) ನಾಳೆ(ನ.1)ಯಿಂದ ಲೈವ್ ಆಗಲಿದ್ದು, ಅನೇಕ ಸ್ಮಾರ್ಟ್‌ಫೋನ್‌ಗಳಲ್ಲಿ ಕಾರ್ಯನಿರ್ವಹಿಸುವುದಿಲ್ಲ. ಇದು ಹೆಚ್ಚಿನ ಸಂಖ್ಯೆಯ ಬಳಕೆದಾರರಿಗೆ ಶಾಕಿಂಗ್ ಸುದ್ದಿಯಾಗಿದೆ. ನೂತನ ವಾಟ್ಸ್ಆ್ಯಪ್​ ಅಪ್‌ಗ್ರೇಡ್ ಬಹಳಷ್ಟು ಬದಲಾವಣೆಗಳನ್ನು ತರಲಿದೆ. ಇದು ಹಳೆಯ ಫೋನ್‌ಗಳಲ್ಲಿ ಹಳೆಯ ಆಪರೇಟಿಂಗ್ ಸಿಸ್ಟಮ್‌ ಹೊಂದಿರುವ ಬಳಕೆದಾರರ ಮೇಲೆ ನೇರ ಪರಿಣಾಮ ಬೀರಲಿದೆ.


COMMERCIAL BREAK
SCROLL TO CONTINUE READING

ಈ ರೀತಿಯ ಫೋನ್ ಹೊಂದಿರುವವರ ಸಾಧನಗಳಲ್ಲಿ WhatsApp ವರ್ಕ್ ಆಗಲ್ಲ. ಇಂತವರು ಹೊಸ ಸ್ಮಾರ್ಟ್‌ಫೋನ್(SmartPhone) ಖರೀದಿಸಬೇಕಾಗುತ್ತದೆ. ಇದನ್ನು ಬಿಟ್ಟು ಅವರಿಗೆ ಬೇರೆ ಆಯ್ಕೆ ಇರುವುದಿಲ್ಲ. ಇವರ ಹಳೆಯ ಫೋನ್ ಚೆನ್ನಾಗಿ ಕೆಲಸ ಮಾಡುತ್ತಿದ್ದರೂ ಸಹ ಜನಪ್ರಿಯ ಮೆಸೆಂಜಿಂಗ್​ ಆ್ಯಪ್​ ಆದ ವಾಟ್ಸ್​ಆ್ಯಪ್​ ಕೆಲಸ ಮಾಡುವುದಿಲ್ಲ. ಹೀಗಾಗಿ ಇಂತಹವರು ಹೊಸ ಫೋನ್ ಖರೀದಿಸುವುದು ಅನಿವಾರ್ಯ. ಈ ಗ್ರಾಹಕರಿಗಿರುವ ಮತ್ತೊಂದು ಆಯ್ಕೆಯೆಂದರೆ WhatsAppನ ಮಾನದಂಡಗಳನ್ನು ಅನುಸರಿಸುವ ಹೆಚ್ಚಿನ OS ಆವೃತ್ತಿಗೆ ತಮ್ಮ ಫೋನ್‌ಗಳನ್ನು ನವೀಕರಿಸಲು ಪ್ರಯತ್ನಿಸುವುದು.


ಇದನ್ನೂ ಓದಿ: Facebook New Name: ಫೇಸ್‌ಬುಕ್‌ನ ಹೆಸರು ಬದಲಾವಣೆ


ಕೆಲವು ಫೋನ್‌(Android Smartphones)ಗಳು ಈ ಸಾಮರ್ಥ್ಯವನ್ನು ಹೊಂದಿದ್ದರೂ, ಹೆಚ್ಚಿನವುಗಳನ್ನು ಅಪ್ ಗ್ರೇಡ್ ಮಾಡಲು ಸಾಧ್ಯವಾಗುವುದಿಲ್ಲ. ಇದರಿಂದ WhatsApp ನಿರ್ಬಂಧಕ್ಕೆ ಕಾರಣವಾಗುತ್ತದೆ. ಇದು ಆಂಡ್ರಾಯ್ಡ್ ಫೋನ್ ಬಳಕೆದಾರರಿಗೆ ಮಾತ್ರವಲ್ಲ ಆಪಲ್ ಐಫೋನ್ ಬಳಕೆದಾರರಿಗೂ ಸಮಸ್ಯೆಯನ್ನುಂಟು ಮಾಡಲಿದೆ. ಈಗ ನೀವು ಯಾವ ಫೋನಿನಲ್ಲಿ ವಾಟ್ಸ್​ಆ್ಯಪ್ ಕೆಲಸ ಮಾಡುವುದಿಲ್ಲವೆಂದು ತಲೆಕೆಡಿಸಿಕೊಂಡಿರಬಹುದು. ವಾಟ್ಸ್​ಆ್ಯಪ್ ಯಾವ ಫೋನಿನಲ್ಲಿ ವರ್ಕ್ ಆಗುತ್ತೆ? ಯಾವ ಫೋನಿನಲ್ಲಿ ವರ್ಕ್ ಆಗಲ್ಲ? ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.


WhatsAppನ ಪ್ರಕಾರ JioPhone ಮತ್ತು JioPhone 2 ಸೇರಿದಂತೆ Android 4.1 ಮತ್ತು ಹೆಚ್ಚಿನ ಆವೃತ್ತಿಗಳು, KaiOS 2.5.0 ಮತ್ತು ಹೊಸ ಆವೃತ್ತಿಗಳು, iPhone ಚಾಲನೆಯಲ್ಲಿರುವ iOS 10 ಮತ್ತು ಹೊಸ KaiOS 2.5.0 & ಹೊಸ Os ಹೊಂದಿರುವ ಫೋನಿನಲ್ಲಿ ವಾಟ್ಸ್​ಆ್ಯಪ್ ಕೆಲಸ ಮಾಡುತ್ತದೆ.


ಇದನ್ನೂ ಓದಿ: Micromax: ಫ್ಲಿಪ್‌ಕಾರ್ಟ್‌ನ ಕ್ರೇಜಿ ಡೀಲ್! ಮೈಕ್ರೋಮ್ಯಾಕ್ಸ್ ಸ್ಟೈಲಿಶ್ ಫೋನ್ ಅನ್ನು 500 ರೂ.ಗೆ ಖರೀದಿಸಲು ಉತ್ತಮ ಅವಕಾಶ


ಈ ಸ್ಮಾರ್ಟ್‌ಫೋನ್‌ಗಳಲ್ಲಿ WhatsApp ವರ್ಕ್ ಆಗಲ್ಲ:


Samsung ಸ್ಮಾರ್ಟ್‌ಫೋನ್‌ಗಳು: Galaxy Trend Lite, Galaxy Trend II, Galaxy SII, Galaxy S3 mini, Galaxy Xcover 2, Galaxy Core and Galaxy Ace 2.


ZTE ಸ್ಮಾರ್ಟ್‌ಫೋನ್‌ಗಳು: Grand S Flex, ZTE V956, Grand X Quad V987 and Grand Memo.


Sony ಸ್ಮಾರ್ಟ್‌ಫೋನ್‌ಗಳು: Xperia Miro, Xperia Neo L, and Xperia Arc S.


LG ಸ್ಮಾರ್ಟ್‌ಫೋನ್‌ಗಳು: Lucid 2, Optimus F7, Optimus F5, Optimus L3 II, Dual Optimus L5, Best L5 II, Optimus L5, Dual Best L3 II, Optimus L7, Optimus L7, Dual Best L7 II, Optimus F6, Enact Optimus F3, Best L4 II, Best L2 II, Optimus Nitro HD, Optimus 4X HD and Optimus F3Q.


Huawei ಸ್ಮಾರ್ಟ್‌ಫೋನ್‌ಗಳು: Ascend G740, Ascend Mate, Ascend D Quad XL, Ascend D1 Quad XL, Ascend P1 S, and Ascend D2.


Apple ಸ್ಮಾರ್ಟ್‌ಫೋನ್‌ಗಳು: iPhone 6, iPhone 6s plus, iPhone SE


ಇತರ ಸ್ಮಾರ್ಟ್‌ಫೋನ್‌ಗಳು: Alcatel, Archos 53 Platinum, HTC Desire 500, Caterpillar Cat B15, Wiko Cink Five, and Wiko Darknight, Lenovo A820 UMi X2, Run F1, THL W8.


ಇದನ್ನೂ ಓದಿ: Jio Smartphone: ಜಬರ್ದಸ್ತ್ ಫೋನ್ ಬಿಡುಗಡೆ ಮಾಡಿದ Reliance Jio, ಬೆಲೆ ನಿಮ್ಮ ಬಜೆಟ್ ನಲ್ಲಿ, EMI ಆಪ್ಶನ್ ಕೂಡ ಇದೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ