WhatsApp: ಶೀಘ್ರದಲ್ಲೇ ಕೆಲವು ಆಂಡ್ರಾಯ್ಡ್ ಮತ್ತು ಐಫೋನ್‌ಗಳಲ್ಲಿ ವಾಟ್ಸಾಪ್ ಸ್ಥಗಿತಗೊಳ್ಳಲಿದೆ. ವಾಟ್ಸಾಪ್ ನಲ್ಲಿರುವ ಯಾವುದೇ ಪ್ರಮುಖ ಸಂದೇಶಗಳು ಮಿಸ್ ಆಗುವುದನ್ನು ತಪ್ಪಿಸಲು ಈಗಲೇ ವಾಟ್ಸಾಪ್ ಬ್ಯಾಕಪ್ ಪಡೆಯುವುದು ಉತ್ತಮವಾಗಿದೆ. 


COMMERCIAL BREAK
SCROLL TO CONTINUE READING

ಲಭ್ಯವಿರುವ ಮಾಹಿತಿಯ ಪ್ರಕಾರ, ಆಂಡ್ರಾಯ್ಡ್ (Android) 4.0 ಗಿಂತ ಹಳೆಯ ಆವೃತ್ತಿಗಳಲ್ಲಿ ಮತ್ತು  ಐಒಎಸ್ (iOS) 11 ಗಿಂತ ಹಳೆಯದಾದ ಸಾಧನಗಳಲ್ಲಿ ವಾಟ್ಸಾಪ್ (Whatsapp) ಕಾರ್ಯನಿರ್ವಹಿಸುವುದಿಲ್ಲ ಎಂದು ತಿಳಿದುಬಂದಿದೆ. ವಾಟ್ಸಾಪ್ ಈ ನಿರ್ಧಾರದಿಂದ ನಿಮ್ಮ ಪ್ರಮುಖ ಸಂದೇಶಗಳು ಮಿಸ್ ಆಗುವುದನ್ನು ತಪ್ಪಿಸಲು ನಿಮ್ಮ ಚಾಟ್‌ಗಳನ್ನು ಗೂಗಲ್ ಡ್ರೈವ್(Google Drive) ಅಥವಾ iCloud ಗೆ ಬ್ಯಾಕಪ್ ಮಾಡಲು ನೀವು ವಾಟ್ಸಾಪ್ ನ ಅಂತರ್ನಿರ್ಮಿತ ಬ್ಯಾಕಪ್ ವೈಶಿಷ್ಟ್ಯವನ್ನು ಬಳಸಬಹುದು.


ಇದನ್ನೂ ಓದಿ- ಎಸ್‌ಬಿ‌ಐ ಗ್ರಾಹಕರಿಗೆ ಗುಡ್ ನ್ಯೂಸ್: ನೆಟ್‌ಬ್ಯಾಂಕಿಂಗ್, ಆ್ಯಪ್‌ ಬಳಸದವರಿಗೂ ಸಿಗುತ್ತೆ ಈ ಸೌಲಭ್ಯ


ಯಾವ್ಯಾವ ಫೋನ್‌ಗಳಲ್ಲಿ ಕಾರ್ಯನಿರ್ವಹಿಸಲ್ಲ ವಾಟ್ಸಾಪ್ (WhatsApp does not work on These Phones): 
ವಾಸ್ತವವಾಗಿ, ವಾಟ್ಸಾಪ್ ಯಾವ್ಯಾವ ಫೋನ್‌ಗಳಲ್ಲಿ ಕಾರ್ಯನಿರ್ವಹಿಸುವುದನ್ನು ಸ್ಥಗಿತಗೊಳಿಸಲಿದೆ ಎಂಬ ಬಗ್ಗೆ ಮೆಟಾ ಕಂಪನಿಯಿಂದ ಯಾವುದೇ ಅಧಿಕೃತ ಹೇಳಿಕೆಗಳು ಕೂಡ ಬಿಡುಗಡೆಯಾಗಿಲ್ಲ. ಆದರೆ, ಕೆಲವು ವರದಿಗಳ ಪ್ರಕಾರ, ವಾಟ್ಸಾಪ್ ಸುಮಾರು 35 ಸ್ಮಾರ್ಟ್‌ಫೋನ್‌ಗಳಲ್ಲಿ (Smartphone) ಶೀಘ್ರದಲ್ಲೇ ಕಾರ್ಯನಿರ್ವಹಿಸುವುದನ್ನು ಸ್ಥಗಿತಗೊಳಿಸಲಿದೆ. ಈ ಪಟ್ಟಿಯಲ್ಲಿ ಸ್ಯಾಮ್‌ಸಂಗ್, ಆಪಲ್, ಲೆನೋವೊ, ಮೊಟೋರೋಲಾ, ಸೋನಿ, ಎಲ್‌ಜಿ, ಹುವಾವೇ ಸೇರಿದಂತೆ ಜನಪ್ರಿಯ ಬ್ರಾಂಡ್‌ಗಳ ಫೋನ್‌ಗಳು ಕೂಡ ಸೇರಿವೆ ಎಂದು ತಿಳಿದುಬಂದಿದೆ. 


ಇದನ್ನೂ ಓದಿ- ಮರೆತೂ ಕೂಡ ವಾಟ್ಸಾಪ್ ಗ್ರೂಪ್‌ಗಳಲ್ಲಿ ಈ ಸಂದೇಶಗಳನ್ನು ಕಳುಹಿಸಬೇಡಿ, ನಿರ್ಲಕ್ಷಿಸಿದರೆ ಜೈಲು ಸೇರಬೇಕಾದೀತು ಎಚ್ಚರ!


ಸ್ಯಾಮ್‌ಸಂಗ್ ಕಂಪನಿಯ 11 ಫೋನ್‌ಗಳು: 
Galaxy Ace Plus
Galaxy Core
Galaxy Express 2
Galaxy Grand
Galaxy Note 3 N9005 LTE
Galaxy Note 3 Neo LTE+
Galaxy S II
Galaxy S3 Mini VE
Galaxy S4 Active
Galaxy S4 mini I9190
Galaxy S4 mini I9192 Duos
Galaxy S4 mini I9195 LTE
Galaxy S4 Zoom


ಆಪಲ್ ಕಂಪನಿಯ 4 ಫೋನ್‌ಗಳು:  
iPhone 5
iPhone 6
iPhone 6S
iPhone SE


ಲೆನೋವೊ ಕಂಪನಿಯ 3 ಫೋನ್‌ಗಳು: 
Lenovo A858T
Lenovo P70
S890


ಮೋಟೋರೋಲ ಕಂಪನಿಯ 2 ಫೋನ್‌ಗಳು:
Moto G
Moto


ಹುವಾವೇ ಕಂಪನಿಯ 5 ಫೋನ್‌ಗಳು:
Ascend P6 S
Ascend G525
Huawei C199
Huawei GX1s
Huawei Y625


ಸೋನಿ ಕಂಪನಿಯ 2 ಫೋನ್‌ಗಳು:
Xperia Z1
Xperia E3


ಎಲ್‌ಜಿ ಕಂಪನಿಯ 4 ಫೋನ್‌ಗಳು:
Optimus 4X HD P880
Optimus G
Optimus G Pro
Optimus L7


ನಿಮ್ಮ ಫೋನ್‌ಗಳು ಈ ಪಟ್ಟಿಯಲ್ಲಿದ್ದರೆ ಏನು ಮಾಡಬೇಕು? 
ಒಂದೊಮ್ಮೆ ನಿಮ್ಮ ಫೋನ್‌ಗಳು ಕೂಡ ಈ ಲಿಸ್ಟ್ ನಲ್ಲಿದ್ದರೆ ನೀವು ಹೊಸ ಸ್ಮಾರ್ಟ್‌ಫೋನ್‌ ಖರೀದಿಸಲೇಬೇಕು ಎಂದೆನಿಲ್ಲ. ಬದಲಿಗೆ ನಿಮ್ಮ ಹಳೆಯ ಫೋನ್‌ನಲ್ಲಿ ಹೊಸ ಸಾಫ್ಟ್‌ವೇರ್ ಅನ್ನು ಡೌನ್ಲೋಡ್ ಮಾಡಿ ಅಪ್ಡೇಟ್ ಮಾಡಬೇಕಾಗುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.