WhatsApp Scam - ಎಚ್ಚರ! WhatsApp ನಲ್ಲಿ ನಿಮಗೂ ಈ ಸಂದೇಶ ಬಂದಿದ್ದರೆ ಈಗಲೇ ಎಚ್ಚೆತ್ತುಕೊಳ್ಳಿ
WhatsApp International Womens Day Scam - ತ್ವರಿತ ಸಂದೇಶಗಳನ್ನು ಕಳುಹಿಸಲು ಅತಿ ಹೆಚ್ಚಾಗಿ ಬಳಕೆಯಾಗುವ ಆಪ್ ಅಂದರೆ ಅದು WhatsApp. ಇದೆ ಕಾರಣದಿಂದ ಸೈಬರ್ ಖದೀಮರು ವಂಚನೆ ಎಸಗಲು ಈ ಆಪ್ ನ ಬಳಕೆ ಮಾಡುತ್ತಿದ್ದಾರೆ.
ನವದೆಹಲಿ: WhatsApp International Womens Day Scam - ತ್ವರಿತ ಸಂದೇಶಗಳನ್ನು ಕಳುಹಿಸಲು ಅತಿ ಹೆಚ್ಚಾಗಿ ಬಳಕೆಯಾಗುವ ಆಪ್ ಅಂದರೆ ಅದು WhatsApp. ಇದೆ ಕಾರಣದಿಂದ ಸೈಬರ್ ಖದೀಮರು ವಂಚನೆ ಎಸಗಲು ಈ ಆಪ್ ನ ಬಳಕೆ ಮಾಡುತ್ತಿದ್ದಾರೆ. ಇದೆ ಪಟ್ಟಿಯಲ್ಲಿ ಇದೀಗ ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ವಾಟ್ಸ್ ಆಪ್ ಮೇಲೆ ಫ್ರಾಡ್ ಸಂದೇಶಗಳನ್ನು ಹಂಚಿಕೊಳ್ಳಲಾಗುತ್ತಿದೆ. ಈ ಸಂದೇಶದ ಪ್ರಕಾರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಖ್ಯಾತ ಶೂ ತಯಾರಕ ಕಂಪನಿ ಅಡಿಡಾಸ್ ಉಚಿತವಾಗಿ ಶೂ ನೀಡುತ್ತಿದೆ ಎನ್ನಲಾಗಿದೆ.
ವಂಚನೆ ಎಸಗುವ ಈ ಸಂದೇಶದಿಂದ ಹೀಗೆ ಪಾರಾಗಿ
ಇತ್ತೀಚಿಗೆ ಕಳೆದ ಹಲವು ದಿನಗಳಿಂದ ವಾಟ್ಸ್ ಆಪ್ ಮೇಲೆ ಇಂತಹ ವಂಚನೆ ಎಸಗುವ ಸಂದೇಶಗಳನ್ನು ಹಂಚಿಕೊಳ್ಳಲಾಗುತ್ತಿದೆ. ಈ ಸಂದೇಶಗಳ ಹೇಳಿಕೆಗಳಲ್ಲಿ ಯಾವುದೇ ನಿಜಾಂಶ ಇರುವುದಿಲ್ಲ. ಬಳಕೆದಾರರನ್ನು ವಂಚಿಸಿ ಅವರ ಬಳಿಯಿಂದ ವೈಯಕ್ತಿಕ ಮಾಹಿತಿಯನ್ನು ಕದಿಯುವುದು ಹಾಗೂ ಅವರಿಗೆ ಹಾನಿ ತಲುಪಿಸುವ ಉದ್ದೇಶ ವಂಚಕರದ್ದಾಗಿರುತ್ತದೆ. ಹೀಗಾಗಿ ಒಂದು ವೇಳೆ ನಿಮ್ಮ ಬಳಿಯೂ ಕೂಡ ಫ್ರೀ Adidas Shoe ಖರೀದಿಸಲು ಸಂದೇಶ ಬಂದಿದ್ದರೆ, ಅಂತಹ ಸಂದೇಶವನ್ನು ಇಗ್ನೋರ್ ಮಾಡಿ ಇಲ್ಲದಿದ್ದರೆ ಅಳಿಸಿ ಹಾಕಿ.
ಇದನ್ನೂ ಓದಿ-WhatsApp New Feature: ಇನ್ನು WhatsApp Web ಮೂಲಕ ಕೂಡ ಆಡಿಯೋ-ವಿಡಿಯೋ ಕರೆ ಸಾಧ್ಯ
ವಾಟ್ಸ್ ಆಪ್ ನ (Whats App Fake Message) ಈ ಸಂದೇಶದಲ್ಲಿ Adidas ಗೆ ಸಂಬಂಧಿಸಿದ ಸಂದೇಶದ ಜೊತೆಗೆ ಲಿಂಕ್ ವೊಂದನ್ನು ಕೂಡ ಹಂಚಿಕೊಳ್ಳಲಾಗುತ್ತಿದೆ. ಈ ಲಿಂಕ್ ಮೇಲೆ ಕ್ಲಿಕ್ಕಿಸುತ್ತಿದ್ದಂತೆ, ನೀವು ಥರ್ಡ್ ಪಾರ್ಟಿ ಪೇಜ್ ಗೆ ಭೇಟಿ ನೀಡುವಿರಿ. 'ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಶೂ ತಯಾರಕ ಕಂಪನಿ ಅಡಿಡಾಸ್ ಒಂದು ಮಿಲಿಯನ್ ಶೂ ಗಳನ್ನು ಉಚಿತವಾಗಿ ವಿತರಿಸುತ್ತಿದೆ' ಎಂದು ಈ ಸಂದೇಶದಲ್ಲಿ ಸುಳ್ಳನ್ನು ಹಬ್ಬಿಸಲಾಗುತ್ತಿದೆ. ಈ ಸಂದೇಶದಲ್ಲಿ ಗಮನಿಸಬೇಕಾದ ಇತರೆ ಸಂಗತಿಗಳೆಂದರೆ, URL ನಲ್ಲಿ 'Adidas' ಸ್ಪೆಲ್ಲಿಂಗ್ ಅನ್ನು 'Adidaass'ಎಂದು ತಪ್ಪಾಗಿ ಬರೆಯಲಾಗಿದೆ.
ಇದನ್ನೂ ಓದಿ- WhatsApp Feature - ಟೈಪ್ ಮಾಡದೆಯೇ WhatsApp ಮೂಲಕ Text ಸಂದೇಶ ಕಳುಹಿಸುವುದು ಹೇಗೆ?
ಈ ಲಿಂಕ್ ಮೇಲೆ ಕ್ಲಿಕ್ಕಇಸಿದ ಬಳಿಕ ನಿಮ್ಮ ಮುಂದೆ ಒಂದು ಪುಟ ತೆರೆದುಕೊಳ್ಳಲಿದೆ ಮತ್ತು ಅದರಲ್ಲಿ ನಿಮಗೆ ಅಭಿನಂದನೆಗಳು... ! ನಿಮ್ಮ ಬಳಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಉಚಿತ ಶೂ ಗೆಲ್ಲುವ ಅವಕಾಶ ಇದೆ ಎಂದು ಹೇಳಲಾಗುತ್ತದೆ. ಈ ಪುಟದಲ್ಲಿ ಅಡಿಡಾಸ್ ಶೂ (Whats App Adidas Offer)ಚಿತ್ರವೂ ನಿಮಗೆ ಕಾಣಿಸಲಿದೆ. ಪುಟದ ಮೇಲ್ಭಾಗದಲ್ಲಿ ಅಡಿಡಾಸ್ ಲೋಗೋ, ಮೇನ್ಯೂ, ಸರ್ಚ್ ಆಪ್ಶನ್ ಹಾಗೂ ಶಾಪಿಂಗ್ ಬ್ಯಾಗ್ ಬಟನ್ ಕೂಡ ಕಾಣಿಸಲಿದೆ. ಆದರೆ, ಇದರಲ್ಲಿನ ಯಾವುದೇ ಗುಂಡಿಗಳನ್ನು ನಿಮಗೆ ಕ್ಲಿಕ್ಕಿಸಲು ಬರುವುದಿಲ್ಲ. ಹೀಗಾಗಿ ಈ ರೀತಿಯ ಉಚಿತ ಸಂದೇಶಗಳ ಮೇಲೆ ಕ್ಲಿಕ್ಕಿಸುವುದರಿಂದ ಬಚಾವಾಗಿ. ಏಕೆಂದರೆ ಬಹುತೇಕ ಹ್ಯಾಕರ್ ಗಳು ಇಂತಹ ಸಂದೇಶಗಳನ್ನು ರಚಿಸುತ್ತಾರೆ. ಇಂತಹ ಸಂದೇಶಗಳನ್ನು ನೀವು ಕ್ಲಿಕ್ಕಿಸಬೇಡಿ ಮತ್ತು ಇತರರಿಗೂ ಕೂಡ ಅವುಗಳನ್ನು ಫಾರ್ವರ್ಡ್ ಮಾಡಬೇಡಿ.
ಇದನ್ನೂ ಓದಿ-WhatsApp ವಿಶಿಷ್ಟ features ಗಳ ಬಗ್ಗೆ ನಿಮಗೆಷ್ಟು ಗೊತ್ತು?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.