YouTube ನಲ್ಲಿ ಎಲ್ಲಾ ಬಹುತೇಕ ರೀತಿಯ ವೀಡಿಯೊಗಳು ಲಭ್ಯವಿದೆ. ಇದು ಎಲ್ಲಾ ರೀತಿಯ ಮಾಹಿತಿಯನ್ನು ವೀಡಿಯೊ ವಿಡಿಯೋ ರೂಪದಲ್ಲಿ ಹೊಂದಿರುವ ಒಂದು ವೇದಿಕೆಯಾಗಿದೆ. ಎಲ್ಲಾ ಪ್ರಕಾರದ  ಮತ್ತು ವಲಯಗಳಾದ್ಯಂತ ತೊಡಗಿಸಿಕೊಳ್ಳುವ ವೀಡಿಯೊಗಳಿಗೆ YouTube ಜನರ ಮೊದಲ ಆಯ್ಕೆಯಾಗಿರುತದೆ. ಸ್ಥಳೀಯ ಗಾಯಕರಿಂದ ಹಿಡಿದು ಅಂತರರಾಷ್ಟ್ರೀಯ ಗ್ಲೋಬ್‌ಟ್ರೋಟರ್‌ಗಳವರೆಗೆ, ನೀವು ಈ ವೇದಿಕೆಯಲ್ಲಿ ಎಲ್ಲರ ವಿಡಿಯೋಗಳನ್ನು ನೀವು ಈ ವೇದಿಕೆಯಲ್ಲಿ ನೋಡಬಹುದು.


COMMERCIAL BREAK
SCROLL TO CONTINUE READING

ಎಲ್ಲವೂ YouTube ನಲ್ಲಿದೆ
ಸಾಮಾನ್ಯವಾಗಿ ನಾವು ಖುಷಿಯಲ್ಲಿರಲಿ ಅಥವಾ ಹತಾಶೆಯಲ್ಲಿರಲಿ ಯುಟ್ಯೂಬ್ ನೋಡುವುದನ್ನು ಬಿಡುವುದಿಲ್ಲ. ಸಂಕ್ಷಿಪ್ತವಾಗಿ ಹೇಳುವುದಾದರೆ, ಪ್ರತಿಯೊಂದು ಸಂದರ್ಭದಲ್ಲೂ ಇಲ್ಲಿ ನಿಮಗಾಗಿ ಎಲ್ಲವೂ ಇದೆ. ಇದೆ ಕಾರಣದಿಂದ YouTube ನಲ್ಲಿನ ವಿಡಿಯೋಗಳು ಹೆಚ್ಚಿನ ಸಂಖ್ಯೆಯ ವೀಕ್ಷಣೆಗಳನ್ನು ಪಡೆಯುತ್ತವೆ, ಇದು ಜಾಹೀರಾತುದಾರರನ್ನು ಕೂಡ ಆಕರ್ಷಿಸುವ ಒಂದು ಅತ್ಯುತ್ತಮ ಮಾಧ್ಯಮವಾಗಿದೆ. ಆದರೆ ಯೂಟ್ಯೂಬ್‌ನಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ವೀಡಿಯೊ ಯಾವುದು ಮತ್ತು ಅದನ್ನು ಎಷ್ಟು ಬಾರಿ ವೀಕ್ಷಿಸಲಾಗಿದೆ ಎಂಬುದು ನಿಮಗೆ ತಿಳಿದಿದೆಯೇ? ಬನ್ನಿ ತಿಳಿದುಕೊಳ್ಳೋಣ.


ಇದನ್ನೂ ಓದಿ-New Rules: ನಾಳೆಯಿಂದ ಬೆಂಗಳೂರು ಸೇರಿದಂತೆ 3 ವಿಮಾನ ನಿಲ್ದಾಣಗಳಲ್ಲಿ ನಿಮ್ಮ ಮುಖವೇ ನಿಮ್ಮ ಗುರುತು


YouTube ನಲ್ಲಿ ಹೆಚ್ಚು ಬಾರಿ ವೀಕ್ಷಣೆಗೊಳಗಾದ ವೀಡಿಯೊಗಳು
ಯೂಟ್ಯೂಬ್‌ನಲ್ಲಿ ಅತಿ ಹೆಚ್ಚು ಬಾರಿ ವೀಕ್ಷಣೆಗೆ ಒಳಗಾದ ವೀಡಿಯೊ ಮತ್ತು ವಿಶ್ವದಲ್ಲಿಯೇ ಅತಿ ಹೆಚ್ಚು ಇಷ್ಟಪಡುವ ವೀಡಿಯೊ ಮಕ್ಕಳ ಹಾಡು 'ಬೇಬಿ ಶಾರ್ಕ್' ಆಗಿದೆ. ಆರು ವರ್ಷಗಳ ಹಿಂದೆ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಆಗಿರುವ ಈ ಹಾಡಿನ ವಿಡಿಯೋ ಇದುವರೆಗೆ 11.76 ಬಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಈ ಹಾಡು ಪ್ರಪಂಚದಾದ್ಯಂತ ಮಕ್ಕಳ ಗೀತೆಯಾಗಿದೆ. ಯೂಟ್ಯೂಬ್‌ನಲ್ಲಿ ವೀಡಿಯೊದ ಕೆಳಗೆ ನೀಡಲಾದ ಮಾಹಿತಿಯ ಪ್ರಕಾರ, ಹಾಡಿನ ಸಂಗೀತ ಸಂಯೋಜನೆಯನ್ನು ಪಿಂಕ್‌ಫಾಂಗ್, ಕಿಜ್‌ಕ್ಯಾಸಲ್ ಮಾಡಿದ್ದಾರೆ. ಈ ಹಾಡಿಗೆ ಗಾಯಕರಾದ ಬೊಮ್ಮಿ ಕ್ಯಾಥರೀನ್ ಹಾನ್, ಹೋಪ್ ಮೇರಿ ಸೆಗೋಯಿನ್, ಅನಿಪೆನ್ ಮ್ಯಾಥ್ಯೂ ಡಿಜಿಯಾಕೊಮೊ, ರಾಬರ್ಟ್ ವಿಲಿಯಂ ಗಾರ್ಡಿನರ್ ಮತ್ತು ಚಾರಿಟಿ ವೈನ್ ಸೆಗೋಯಿನ್ ಅವರು ಧ್ವನಿ ನೀಡಿದ್ದಾರೆ.


Alert! 90 ಸಾವಿರ ರೂ.ಬೆಲೆಯ ಈ ಆಪಲ್ ವಾಚ್ ಅಲ್ಟ್ರಾ ಕೇವಲ ರೂ.2,500ಕ್ಕೆ ಸಿಗುತ್ತಿದೆ !

'ಶೇಪ್ ಆಫ್ ಯು' ಕೂಡ ದಾಖಲೆ ಬರೆದಿದೆ
ವೈರಲ್ ಆಗಿರುವ ಈ ಹಾಡು ಹಲವು ಭಾಷೆಗಳಿಗೆ ಅನುವಾದಗೊಂಡಿದ್ದು, ಹಲವು ದೇಶಗಳಲ್ಲಿ ಮಕ್ಕಳನ್ನು ರಂಜಿಸುತ್ತಿದೆ. ಯೂಟ್ಯೂಬ್‌ನಲ್ಲಿ ಎರಡನೇ ಅತಿ ಹೆಚ್ಚು ವೀಕ್ಷಣೆಗೆ ಒಳಗಾದ ವೀಡಿಯೊ ಎಂದರೆ ಡ್ಯಾಡಿ ಯಾಂಕೀ ಒಳಗೊಂಡ ಲೂಯಿಸ್ ಫೋನ್ಸಿಯ ಹಿಟ್ ಹಾಡು ಡೆಸ್ಪಾಸಿಟೊ. ಇದನ್ನು ಸುಮಾರು ಎಂಟು ಬಿಲಿಯನ್ ಬಾರಿ ವೀಕ್ಷಿಸಲಾಗಿದೆ. ಮೂರನೇ ಅತಿ ಹೆಚ್ಚು ವೀಕ್ಷಣೆಗೆ ಒಳಗಾದ ವೀಡಿಯೊ ಕೂಡ ಒಂದು ಹಾಡಿನ ವಿಡಿಯೋ ಆಗಿದೆ. ಇದು ಎಡ್ ಶೀರನ್ ಅವರ 'ಶೇಪ್ ಆಫ್ ಯು' ಹಾಡು. ಇದನ್ನು 5.8 ಬಿಲಿಯನ್ ಬಾರಿ ವೀಕ್ಷಿಸಲಾಗಿದೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.