Google search : ನಮ್ಮ ಮನಸ್ಸಿನಲ್ಲಿ ಯಾವುದೇ ವಿಚಾರದ ಬಗ್ಗೆ ಸಂದೇಹ ಮೂಡಿದರೂ ನಾವು ಅದರ ಪರಿಹಾರಕ್ಕೆ ನಾವು ಗೂಗಲ್ ಮೊರೆ ಹೋಗುವುದೇ ಹೆಚ್ಚು. ದೈನಂದಿನ ವಿಷಯಗಳೇ ಇರಲಿ, ವಿಜ್ಞಾನ, ವೈದ್ಯಕೀಯ, ಸ್ಪೋರ್ಟ್ಸ್, ಸಿನಿಮಾ ಹೀಗೆ ಯಾವ ವಿಚಾರದ ಬಗ್ಗೆ ಹೆಚ್ಚಿಣ ಮಾಹಿತಿ ಬೇಕಾಗಿದ್ದರೂ ಗೂಗಲ್ ಸಹಾಯ ಪಡೆದುಕೊಳ್ಳುತ್ತೇವೆ. ಅದೆ ವೇಳೆ ಜನರು ಯಾವ ವಿಚಾರದ ಬಗ್ಗೆ ಹೆಚ್ಚು ಸರ್ಚ್ ಮಾಡುತ್ತಾರೆ ಎನ್ನುವ ಮಾಹಿತಿಯನ್ನು ಕೂಡಾ ಗೂಗಲ್ ಕಾಲ ಕಾಲಕ್ಕೆ ಬಿಡುಗಡೆ ಮಾಡುತ್ತದೆ. ಅದರ ಪ್ರಕಾರ ಜನರು ಒಬ್ಬ ವ್ಯಕ್ತಿಯ ಬಗ್ಗೆ ಅತಿ ಹೆಚ್ಚು ಸರ್ಚ್ ಮಾಡಿದ್ದಾರೆ ಎಂದು ಹೇಳಲಾಗಿದೆ. 


COMMERCIAL BREAK
SCROLL TO CONTINUE READING

ಕಳೆದ ಡಿಸೆಂಬರ್ ವರೆಗೆ ಗೂಗಲ್‌ನಲ್ಲಿ ಅತಿ ಹೆಚ್ಚು ಸರ್ಚ್ ಮಾಡಿರುವ ವ್ಯಕ್ತಿ ಯಾರು ಎನ್ನುವ ಮಾಹಿತಿ ಹೊರ ಬಿದ್ದಿದೆ. ಆ ಹೆಸರು ಕೇಳಿದಾಗ ಒಂದು ಕ್ಷಣಕ್ಕೆ ಆಶ್ಚರ್ಯವಾಗಬಹುದು. ಆದರೆ ಜನರು ನಿಜವಾಗಿಯೂ ಆ ವ್ಯಕ್ತಿಯ ಬಗ್ಗೆ ಬಹಳವಾಗಿ ಸರ್ಚ್ ಮಾಡಿ ತಿಳಿದುಕೊಂಡಿದ್ದಾರೆ. ಹಾಗಿದ್ದರೆ ಜನರು ಅತಿ ಹೆಚ್ಚು ತಿಳಿದುಕೊಳ್ಳಲು ಬಯಸಿರುವುದು ಯಾವ ವ್ಯಕ್ತಿಯ ಬಗ್ಗೆ ಎಂದು ನೋಡೋಣ. 


ಇದನ್ನೂ ಓದಿ : Facebook-Instagram Down ಆಗಲು ಕಾರಣವೇನು? ಮೆಟಾ ಕಂಪನಿಗೆ ಆದ ನಷ್ಟವೆಷ್ಟು?


 ಈ ಸರ್ಚ್ ಲಿಸ್ಟ್ ನಲ್ಲಿ ಅಗ್ರಸ್ಥಾನದಲ್ಲಿರುವವರು ಬೇರೆ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ. ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ ಜೊತೆಗಿನ ವಿವಾಹದೊಂದಿಗೆ ಗೂಗಲ್ ನಲ್ಲಿ ಕಿಯಾರಾ ಅಡ್ವಾಣಿ  ಜನಪ್ರಿಯತೆ ಕೂಡಾ ಟಾಪ್ 1 ಸ್ಥಾನಕ್ಕೆ ಏರಿದೆ. 


ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮತ್ತು ರಾಷ್ಟ್ರೀಯ ತಂಡದಲ್ಲಿ ಗುಜರಾತ್ ಟೈಟಾನ್ಸ್‌ಗಾಗಿ ತನ್ನ ಅದ್ಭುತ ಪ್ರದರ್ಶನದ ಮೂಲಕ ಅಭಿಮಾನಿಗಳ ಹೃದಯ ಗೆದ್ದ ಶುಭಮನ್ ಗಿಲ್ ನಂತರದ ಸ್ಥಾನದಲ್ಲಿದ್ದಾರೆ. ಮೂರನೇ ಸ್ಥಾನದಲ್ಲಿ ಭಾರತೀಯ ಮೂಲದ ನ್ಯೂಜಿಲೆಂಡ್ ಕ್ರಿಕೆಟಿಗ ರಚಿನ್ ರವೀಂದ್ರ ಪಡೆದುಕೊಂಡಿದ್ದಾರೆ. 


ಇದನ್ನೂ ಓದಿ : IRCTC-Swiggy Deal: ಈಗ ರೈಲು ಪ್ರಯಾಣದ ವೇಳೆ ನಿಮ್ಮ ನೆಚ್ಚಿನ ಆಹಾರವನ್ನು ಆನಂದಿಸಬಹುದು!


2023ರ ಐಸಿಸಿ ವಿಶ್ವಕಪ್‌ನಾದ್ಯಂತ ತನ್ನ ಅಸಾಧಾರಣ ಪ್ರದರ್ಶನದೊಂದಿಗೆ ಅಳಿಸಲಾಗದ ಛಾಪು ಮೂಡಿಸಿದ ಸ್ಟಾರ್ ಭಾರತೀಯ ವೇಗದ ಬೌಲರ್ ಮೊಹಮ್ಮದ್ ಶಮಿ ನಾಲ್ಕನೇ ಸ್ಥಾನವನ್ನು ಅಲಂಕರಿಸಿದ್ದಾರೆ.ಜನಪ್ರಿಯ ಯೂಟ್ಯೂಬರ್ ಮತ್ತು ಬಿಗ್ ಬಾಸ್ OTT ಯ ಎರಡನೇ ಸೀಸನ್ ವಿಜೇತ ಎಲ್ವಿಶ್ ಯಾದವ್  ಟಾಪ್ಸ್ ಐದರಲ್ಲಿ ಸ್ಥಾನ ಪಡೆದಿದ್ದಾರೆ. 


ಇನ್ನುಳಿದಂತೆ ನಟ ಸಿದ್ಧಾರ್ಥ್ ಮಲ್ಹೋತ್ರಾ, ಆಸ್ಟ್ರೇಲಿಯಾದ ಬ್ಯಾಟರ್ ಗ್ಲೆನ್ ಮ್ಯಾಕ್ಸ್‌ವೆಲ್, ಫುಟ್‌ಬಾಲ್ ಐಕಾನ್ ಡೇವಿಡ್ ಬೆಕ್‌ಹ್ಯಾಮ್,  ಟೀಂ ಇಂಡಿಯಾ ಕ್ರಿಕೆಟರ್ ಸೂರ್ಯಕುಮಾರ್ ಯಾದವ್ ಮತ್ತು ಆಸ್ಟ್ರೇಲಿಯಾದ ವಿಶ್ವಕಪ್ ಹೀರೋ ಟ್ರಾವಿಸ್ ಹೆಡ್  ಬಗ್ಗೆಯೂ ಜನ ಹೆಚ್ಚಿ ಮಾಹಿತಿ ಕಲೆ ಹಾಕಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.