Why Dogs Do Not Sleep In Night: ನಾಯಿಗಳು ಅತ್ಯಂತ ನಿಷ್ಠಾವಂತ ಪ್ರಾಣಿಗಳು ಎಂದು ಹೇಳಲಾಗುತ್ತದೆ ಮತ್ತು ಅವು ಮನೆಯನ್ನು ಕಾವಲು ಮಾಡುವಲ್ಲಿ ಜನರಿಗೆ ಬಹಳಷ್ಟು ಸಹಾಯ ಮಾಡುತ್ತವೆ. ನಾಯಿಗಳು ರಾತ್ರಿಯ ಹೊತ್ತು ಎಚ್ಚೆತ್ತುಕೊಂಡೇ ಇರುತ್ತವೆ ಮತ್ತು ಅವು ಮಲಗುವುದಿಲ್ಲ ಎಂಬುದನ್ನು ನೀವೂ ಕೂಡ ಗಮನಿಸಿರಬಹುದು. ಆದರೆ ನಾಯಿಗಳು ರಾತ್ರಿಯಲ್ಲಿ ಏಕೆ ಮಲಗುವುದಿಲ್ಲ ಎಂಬುದನ್ನು ನೀವು ಎಂದಾದರೂ ಯೋಚಿಸಿದ್ದೀರಾ? ನಾಯಿಗಳು ರಾತ್ರಿಯಲ್ಲಿ ಏಕೆ ಹೆಚ್ಚು ಬೊಗಳುತ್ತವೆ? ಇದರ ಹಿಂದೆ ಒಂದು ದೊಡ್ಡ ರಹಸ್ಯ ಅಡಗಿದೆ. ನಿಮಗೆ ಗೊತ್ತಿಲ್ಲದಿದ್ದರೆ, ಈ ಲೇಖನದ ಮೂಲಕ ತಿಳಿದುಕೊಳ್ಳಿ. ರಾತ್ರಿ ಹೊತ್ತು ತಿರುಗಾಡುವ ದೆವ್ವಗಳನ್ನು ಕಂಡು ನಾಯಿಗಳು ಭಯಪಡುತ್ತವೆ ಮತ್ತು ಆದ್ದರಿಂದ ಎಚ್ಚರವಾಗಿರುತ್ತವೆ ಎಂದು ಹೇಳಲಾಗುತ್ತದೆ. ಆದರೆ ಈ ವಿಷಯಕ್ಕೆ ಸಂಬಂಧಿಸಿದ ತಜ್ಞರು ಏನು ಹೇಳುತ್ತಾರೆ ತಿಳಿದುಕೊಳ್ಳೋಣ ಬನ್ನಿ.


COMMERCIAL BREAK
SCROLL TO CONTINUE READING

ರಾತ್ರಿ ಇಡೀ ನಾಯಿಗಳು ಬೊಗಳುತ್ತಲೇ ಇರುತ್ತವೆ
ವಾಸ್ತವದಲ್ಲಿ, ನಾಯಿಗಳು ರಾತ್ರಿಯಲ್ಲಿ ಒಂಟಿಯಾಗಿದ್ದಾಗ, ಅವು ಸ್ವಲ್ಪ ಭಯಪಡುತ್ತವೆ ಎಂದು ತಜ್ನರು ಹೇಳುತ್ತಾರೆ, ಅಂತಹ ಪರಿಸ್ಥಿತಿಯಲ್ಲಿ ಅವು ನಿರಂತರವಾಗಿ ಬೊಗಳುತ್ತವೆ ಮತ್ತು ಕೆಲವೊಮ್ಮೆ ಕೆಲ ನಾಯಿಗಳು ಅಳುವುದನ್ನು ಕೂಡ ನೀವು ಕೇಳಿರಬಹುದು. ಆಗಾಗ್ಗೆ ಅವು ಭಯದಿಂದ ಈ ರೀತಿ ವರ್ತನೆ ಮಾಡುತ್ತವೆ. ಹೀಗಾಗಿ ಅವುಗಳಿಗೆ ರಾತ್ರಿಯಲ್ಲಿ ಮಲಗಲು ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ನಾಯಿಗಳು ಹಸಿವಿನಿಂದ ಅಳುತ್ತವೆ ಮತ್ತು ಇದು ಅವರ ಭಾವನೆಗಳನ್ನು ವ್ಯಕ್ತಪಡಿಸುವ ಏಕೈಕ ಮಾರ್ಗವಾಗಿದೆ.


ಇದನ್ನೂ ಓದಿ-Twitter Update: ನ್ಯೂಸ್ ಲಿಂಕ್ ಮೇಲೆ ಕ್ಲಿಕ್ಕಿಸಿದರೆ ಖಾತೆಯಿಂದ ಹಣ ಕಡಿತ, ಬಳಕೆದಾರರಿಗೆ ಮತ್ತೊಂದು ಶಾಕ್ ನೀಡಿದ ಎಲಾನ್ ಮಸ್ಕ್!


ಅವು ಮಲಗಲು ಸಾಧ್ಯವಿಲ್ಲ
ರಾತ್ರಿಯಲ್ಲಿ ನಾಯಿಗಳು ನಿರಂತರವಾಗಿ ಬೊಗಳುತ್ತವೆ. ಬೇರೆ ನಾಯಿ ಅಥವಾ ಪ್ರಾಣಿ ಅಥವಾ ಅಪರಿಚಿತ ವ್ಯಕ್ತಿ ರಸ್ತೆಯಲ್ಲಿ ಬಂದರೂ ನಾಯಿಗಳು ಬೊಗಳುತ್ತವೆ. ಬೇರೆ ಪ್ರದೇಶದ ನಾಯಿ ತಮ್ಮ ಪ್ರದೇಶಕ್ಕೆ ಬಂದಾಗ ಅಲ್ಲಿನ ನಾಯಿಗಳು ಅಳಲು ಪ್ರಾರಂಭಿಸುತ್ತವೆ ಎಂಬುದು ತಜ್ಞರ ಅಭಿಪ್ರಾಯ. ಈ ಮೂಲಕ ಅಪರಿಚಿತ ನಾಯಿಗಳು ತಮ್ಮ ಪ್ರದೇಶಕ್ಕೆ ನುಗ್ಗಿರುವ ಬಗ್ಗೆ ತಮ್ಮ ಪ್ರದೇಶದ ನಾಯಿಗಳಿಗೆ ಎಚ್ಚರಿಕೆ ನೀಡುತ್ತವೆ. ಹೀಗಾಗಿ ಅವುಗಳಿಗೆ ನಿದ್ದೆ ಬರುವುದಿಲ್ಲ.


ಇದನ್ನೂ ಓದಿ-Neeta Ambani ಬಳಿ ಇದೆ ವಿಶ್ವದ ಅತ್ಯಂತ ದುಬಾರಿ ಸ್ಮಾರ್ಟ್ ಫೋನ್! ಬೆಲೆ ಕೇಳಿದ್ರೆ ದಂಗಾಗುವಿರಿ


ಇದಲ್ಲದೆ, ನಾಯಿಗಳು ಅನಾರೋಗ್ಯ ಅಥವಾ ಗಾಯಗೊಂಡ ನಂತರವೂ ರಾತ್ರಿಯಲ್ಲಿ ಮಲಗುವುದಿಲ್ಲ. ನಾಯಿಗಳು ಅಳುತ್ತವೆ ಮತ್ತು ಅವುಗಳ ಸುತ್ತಲೂ ಹಲ್ಚಲ್ ಇರುವಾಗ ಹೆಚ್ಚು ಎಚ್ಚರಗೊಳ್ಳುತ್ತವೆ ಎಂದು ಕೆಲವರು ನಂಬುತ್ತಾರೆ. ಅಂದರೆ ಜನಸಾಮಾನ್ಯರಿಗೆ ಕಾಣದ ಆತ್ಮವನ್ನು ಕಂಡು ನಾಯಿಗಳು ಅಳುತ್ತವೆ. ನಾಯಿಗಳು ರಾತ್ರಿಯಲ್ಲಿ ದಾರಿ ತಪ್ಪಿದರೆ ಅಥವಾ ತಮ್ಮ ಕುಟುಂಬದಿಂದ ಬೇರ್ಪಟ್ಟರೆ, ಅವು ಕೂಡ ನಿರಾಶೆಗೊಳ್ಳುತ್ತವೆ ಮತ್ತು ರಾತ್ರಿಯಲ್ಲಿ ಎಚ್ಚರವಾಗಿರುತ್ತವೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.