Moon mission 2023 : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ [ಇಸ್ರೋ] ಮಹತ್ವಾಕಾಂಕ್ಷೆಯ 'ಚಂದ್ರಯಾನ-3' ಬುಧವಾರ ಸಂಜೆ ಚಂದ್ರನ ದಕ್ಷಿಣ ಧ್ರುವದ ಮೇಲ್ಮೈಯಲ್ಲಿ ಇಳಿಯಲಿದೆ. ಚಂದ್ರಯಾನ-3 ಯಶಸ್ವಿಯಾಗಿ ದಕ್ಷಿಣ ಧ್ರುವದ ಮೇಲೆ ಲ್ಯಾಂಡ್ ಆದರೆ ಬಾಹ್ಯಾಕಾಶದಲ್ಲಿ ಭಾರತಕ್ಕೆ ದೊಡ್ಡ ಯಶಸ್ಸು ಸಿಕ್ಕಿದಂತೆಯೇ. ಏಕೆಂದರೆ ವಿಶ್ವದ ಯಾವುದೇ ದೇಶವು ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡುವುದು ಇಲ್ಲಿಯವರೆಗೆ ಸಾಧ್ಯವಾಗಿಲ್ಲ. 


COMMERCIAL BREAK
SCROLL TO CONTINUE READING

ಈ ಮಿಷನ್ ನ ಯಶಸ್ಸು ಚಂದ್ರನ ಮೇಲೈಯಲ್ಲಿ ಇರುವ ನೀರು ಮತ್ತು ಮಂಜು ಗಡ್ಡೆಯ  [Lunar Water Ice] ಬಗೆಗಿನ ಹೆಚ್ಚಿನ ಮಾಹಿತಿ ಕಲೆ ಹಾಕುವುದಕ್ಕೆ ಸಹಾಯವಾಗಲಿದೆ. ಇದು ಚಂದ್ರನ ಅತ್ಯಮೂಲ್ಯ ಸಂಪನ್ಮೂಲಗಳಲ್ಲಿ ಒಂದಾಗಿದೆ. ಪ್ರಪಂಚದ ಅನೇಕ ಬಾಹ್ಯಾಕಾಶ ಸಂಸ್ಥೆಗಳು ಮತ್ತು ಖಾಸಗಿ ಕಂಪನಿಗಳು ಇದನ್ನು ಚಂದ್ರನ  ಕಾಲೋನಿ, ಗಣಿಗಾರಿಕೆ ಮತ್ತು ಮಂಗಳ ಗ್ರಹಕ್ಕೆ ಸಂಭಾವ್ಯ ಕಾರ್ಯಾಚರಣೆಗಳ ಕೀಲಿಯಾಗಿ ನೋಡುತ್ತಿವೆ. 


ಇದನ್ನೂ ಓದಿ : ಬಹಳ ಮುಖ್ಯ ಚಂದ್ರಯಾನ 3 ರ ಕೊನೆಯ 17 ನಿಮಿಷ ! ಹೇಗಿರಲಿದೆ ಗೊತ್ತಾ ಆ ರೋಚಕ ಕ್ಷಣ


ಚಂದ್ರನಲ್ಲಿ ನೀರಿನ ಅಸ್ತಿತ್ವದ ಸಾಧ್ಯತೆ : 
1960 ರ ದಶಕದ ಆರಂಭದಲ್ಲಿ, ಮೊದಲ ಅಪೊಲೊ ಇಳಿಯುವ ಮೊದಲು, ವಿಜ್ಞಾನಿಗಳು ಚಂದ್ರನ ಮೇಲೆ ನೀರು ಅಸ್ತಿತ್ವದಲ್ಲಿರಬಹುದು ಎಂದು ಊಹಿಸಿದ್ದರು. ಆದರೆ, 1960 ರ ದಶಕದ ಉತ್ತರಾರ್ಧದಲ್ಲಿ ಮತ್ತು 1970 ರ ದಶಕದ ಆರಂಭದಲ್ಲಿ ಅಪೊಲೊ ಸಿಬ್ಬಂದಿಯಿಂದ ವಿಶ್ಲೇಷಣೆಗಾಗಿ ಮರಳಿದ ಮಾದರಿಗಳು ಶುಷ್ಕವಾಗಿ ಕಂಡುಬಂದವು. 2008 ರಲ್ಲಿ, ಬ್ರೌನ್ ವಿಶ್ವವಿದ್ಯಾನಿಲಯದ ಸಂಶೋಧಕರು ಚಂದ್ರನ  ಆ ಮಾದರಿಗಳನ್ನು ಹೊಸ ತಂತ್ರಗಳೊಂದಿಗೆ ಮರು-ಪರಿಶೀಲಿಸಿದರು.  ಆಗ ಜ್ವಾಲಾಮುಖಿ ಗಾಜಿನ ಸಣ್ಣ ಮಣಿಗಳ ಒಳಗೆ ಹೈಡ್ರೋಜನ್ ಇರುವುದು ಪತ್ತೆಯಾಯಿತು. 2009 ರಲ್ಲಿ, ಇಸ್ರೋದ ಚಂದ್ರಯಾನ-1 ನಲ್ಲಿದ್ದ ನಾಸಾ ಉಪಕರಣವು ಚಂದ್ರನ ಮೇಲ್ಮೈಯಲ್ಲಿ ನೀರೂ ಇರುವುದನ್ನು ಪತ್ತೆ ಮಾಡಿತು.


ಅದೇ ವರ್ಷದಲ್ಲಿ, NASA  ನಡೆಸಿದ ಪರಿಶೀಲನೆಯಲ್ಲಿ ಚಂದ್ರನ ಮೇಲ್ಮೈ ಮಂಜುಗಡ್ಡೆ ಇರುವುದನ್ನು ಕಂಡುಹಿಡಿದಿದೆ. ಮುಂಚಿನ NASA ಮಿಷನ್, 1998 ರಲ್ಲಿ ಲೂನಾರ್ ಪ್ರಾಸ್ಪೆಕ್ಟರ್, ದಕ್ಷಿಣ ಧ್ರುವದ ನೆರಳಿನ ಕುಳಿಗಳಲ್ಲಿ ನೀರಿನ ಮಂಜುಗಡ್ಡೆಯ ಹೆಚ್ಚಿನ ಸಾಂದ್ರತೆಯಿದೆ ಎನ್ನುವುದಕ್ಕೆ ಪುರಾವೆ ಒದಗಿಸಿತ್ತು. ಇಲ್ಲಿ ನೀರಿನ ಮಂಜುಗಡ್ಡೆಯು ಸಾಕಷ್ಟು ಪ್ರಮಾಣದಲ್ಲಿದ್ದರೆ, ಅದು ಕುಡಿಯುವ ನೀರಿನ ಮೂಲವಾಗಿರಬಹುದು. ಮಾತ್ರವಲ್ಲ ಉಪಕರಣಗಳನ್ನು ತಂಪಾಗಿಡಲು  ಸಹಾಯ ಮಾಡುತ್ತದೆ. ಇಂಧನಕ್ಕಾಗಿ ಹೈಡ್ರೋಜನ್ ಮತ್ತು ಉಸಿರಾಟಕ್ಕಾಗಿ ಆಮ್ಲಜನಕವನ್ನು ಉತ್ಪಾದಿಸಲು ಇದನ್ನು ಒಡೆಯಬಹುದು. 


ಇದನ್ನೂ ಓದಿ : ಚಂದ್ರನಿಗೆ ಮತ್ತಷ್ಟು ಸನಿಹದಲ್ಲಿ ಚಂದ್ರಯಾನ 3 ! ಹೊಸ ವಿಡಿಯೋ ಬಿಡುಗಡೆ ಮಾಡಿದ ಇಸ್ರೋ


ಯಾವುದೇ ದೇಶವು ಚಂದ್ರನ ಮೇಲಿನ ಮಾಲೀಕತ್ವವನ್ನು ಪಡೆದುಕೊಳ್ಳಬಹುದೇ? : 
1967 ರ ವಿಶ್ವಸಂಸ್ಥೆಯ ಬಾಹ್ಯಾಕಾಶ ಒಪ್ಪಂದವು ಯಾವುದೇ ದೇಶವು ಚಂದ್ರನ ಮಾಲೀಕತ್ವವನ್ನು ಕ್ಲೈಮ್ ಮಾಡುವುದನ್ನು ನಿಷೇಧಿಸುತ್ತದೆ. ಆದರೆ ವಾಣಿಜ್ಯ ಕಾರ್ಯಾಚರಣೆಗಳನ್ನು ತಡೆಯುವ ಯಾವುದೇ ನಿಬಂಧನೆ ಇಲ್ಲ.


ದಕ್ಷಿಣ ಧ್ರುವದ ಮಹತ್ವ ಏನು ? :  
ಚಂದ್ರನ ದಕ್ಷಿಣ ಧ್ರುವವು ಚಂದ್ರನ ಇತರ ಭಾಗಕ್ಕಿಂತ ವಿಭಿನ್ನವಾಗಿದೆ ಮತ್ತು ನಿಗೂಢವಾಗಿದೆ. ಅಲ್ಲಿ ಇದುವರೆಗೆ ಪ್ರಪಂಚದಾದ್ಯಂತದ ಅನೇಕ ದೇಶಗಳು ಬಾಹ್ಯಾಕಾಶ ನೌಕೆಗಳನ್ನು ಕಳುಹಿಸಿವೆ. ದಕ್ಷಿಣ ಧ್ರುವವು ಕುಳಿಗಳು ಮತ್ತು ಆಳವಾದ ಕಂದಕಗಳಿಂದ ತುಂಬಿದೆ.


ರಷ್ಯಾದ ಲೂನಾ-25 ಬಾಹ್ಯಾಕಾಶ ನೌಕೆ ಈ ವಾರ ದಕ್ಷಿಣ ಧ್ರುವದಲ್ಲಿ ಇಳಿಯಬೇಕಿತ್ತು. ಆದರೆ ಸಾಫ್ಟ್ ಲ್ಯಾಂಡಿಂಗ್ ಸಾಧ್ಯವಾಗದೆ ಅದು ಭಾನುವಾರ ನಿಯಂತ್ರಣ ತಪ್ಪಿ ಪತನಗೊಂಡಿದೆ.


ಇದನ್ನೂ ಓದಿ : ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಹೊಸ ಅಗ್ಗದ ಎಲೆಕ್ಟ್ರಿಕ್ ಸ್ಕೂಟರ್, ಫುಲ್ ಚಾರ್ಜ್‌ನಲ್ಲಿ ನೀಡುತ್ತೆ 110 ಕಿ.ಮೀ. ಮೈಲೇಜ್


ಇಸ್ರೋದ ಚಂದ್ರಯಾನ-3 ಮಿಷನ್ ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡುವ ಮೂಲಕ ಇತಿಹಾಸವನ್ನು ಸೃಷ್ಟಿಸಬಹುದೇ ಎನ್ನುವ ಕುತೂಹಲ ಪ್ರತಿಯೊಬ್ಬರದ್ದಾಗಿದೆ. ಇದೇ ವೇಳೆ ಯುನೈಟೆಡ್ ಸ್ಟೇಟ್ಸ್ ಮತ್ತು ಚೀನಾ ಎರಡೂ ದಕ್ಷಿಣ ಧ್ರುವ ಮಿಷನ್ ನ ಯೋಜನೆಯಲ್ಲಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್