ನವದೆಹಲಿ : ಲಕ್ಷಾಂತರ ಜನರು ಟಚ್ ಸ್ಕ್ರೀನ್ ಫೋನ್‌ಗಳನ್ನು ಬಳಸುತ್ತಾರೆ. ಇಲ್ಲಿ  ಟಚ್ ಮೂಲಕ ಫೋನ್ ಆಪರೇಟ್ ಆಗುತ್ತದೆ. ಆದರೆ ನಿಮ್ಮ ಫೋನ್ ಸ್ಪರ್ಶಿಸಿದ ಕೂಡಲೇ ಚಾರ್ಜ್ ಆಗಲು ಪ್ರಾರಂಭವಾದರೆ ಹೇಗಿರುತ್ತದೆ? ಹೌದು,  ವಿಜ್ಞಾನಿಗಳು ಇಂಥಹ ಸಾಧನವನ್ನು ವಿನ್ಯಾಸಗೊಳಿಸಿದ್ದಾರೆ. ಈ ಡಿವೈಸ್ ಅನ್ನು ಬೆರಳುಗಳ ಮೇಲೆ ಧರಿಸಿದ ನಂತರ ಮೊಬೈಲ್ ಚಾರ್ಜ್(Mobile charge) ಆಗಲು ಆರಂಭವಾಗುತ್ತದೆ. ವಿಶೇಷವೆಂದರೆ ಇಲ್ಲಿ ಬೆವರಿನಿಂದ ವಿದ್ಯುತ್ ಉತ್ಪತ್ತಿಯಾಗುತ್ತದೆ. ಈ ಸಾಧನವನ್ನು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ತಯಾರಿಸಲಾಗಿದೆ. 


COMMERCIAL BREAK
SCROLL TO CONTINUE READING

ಕ್ಯಾಲಿಫೋರ್ನಿಯಾದಲ್ಲಿ ತಯಾರಾಗಿರುವ ಡಿವೈಸ್ : 
ಈ  ಡಿವೈಸ್ ಅನ್ನು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸ್ಯಾನ್ ಡಿಯಾಗೋ ತಂಡವು ಸಿದ್ಧಪಡಿಸಿದೆ. ಅವರ ಪ್ರಕಾರ, ನಿದ್ದೆ ಮಾಡುವಾಗ ಸಾಧನವನ್ನು ಕೈಗೆ ಹಾಕಿಕೊಂಡ ನಂತರ, ಬರುವ ಬೆವರಿನಿಂದ ವಿದ್ಯುತ್ (Power from sweaty finger) ಉತ್ಪಾದಿಯಾಗುತ್ತದೆ. ಇದರಿಂದ  ಮೊಬೈಲ್ ಫೋನ್ (mobile phone) ಮತ್ತು ಸ್ಮಾರ್ಟ್ ವಾಚ್‌ಗಳನ್ನು (smart watch) ಚಾರ್ಜ್ ಮಾಡಲು ಸಾಧ್ಯವಾಗುತ್ತದೆ. ಈ ಡಿವೈಸ್ ಅನ್ನು 10 ಗಂಟೆಗಳ ಕಾಲ ಧರಿಸಿದರೆ, ಅದರಿಂದ ಸಾಕಷ್ಟು ವಿದ್ಯುತ್ ಉತ್ಪತ್ತಿಯಾಗುತ್ತದೆ. ಇದರಿಂದ 24 ಗಂಟೆಗಳವರೆಗೆ  ಸ್ಮಾರ್ಟ್ ವಾಚ್‌ ಅನ್ನು ಚಾರ್ಜ್ ಮಾಡಬಹುದಾಗಿದೆ. 


ಇದನ್ನೂ  ಓದಿ : WhatsApp- ನಿಮ್ಮ ಫೋನ್ ಕಳವುಗೊಂಡಿದೆಯೇ? ಈ ಟ್ರಿಕ್‌ನೊಂದಿಗೆ ನಿಮ್ಮ ವಾಟ್ಸಾಪ್ ಖಾತೆಯನ್ನು ರಕ್ಷಿಸಿ


ಮೂರು ವಾರಗಳವರೆಗೆ ಧರಿಸಿದರೆ ಸ್ಮಾರ್ಟ್ಫೋನ್ ಚಾರ್ಜ್ ಆಗುತ್ತದೆ : 
ಈ ಸಾಧನವನ್ನು ಬೆರಳುಗಳಿಗೆ ಹಾಕಿ ಕೊಳಬಹುಡು. ನಿದ್ದೆ ಮಾಡುವ ವೇಳೆಯಲ್ಲಿ, ಉಂಟಾಗುವ ಬೆವರಿನಿಂದ ವಿದ್ಯುತ್ ಉತ್ಪತ್ತಿಯಾಗುತ್ತದೆ. ಮೂರು ವಾರಗಳ ಕಾಲ ನಿರಂತರವಾಗಿ ಈ ಡಿವೈಸ್ ಅನ್ನು ಕೈಗೆ ಹಾಕಿಕೊಂಡ ನಂತರ, ಸ್ಮಾರ್ಟ್‌ಫೋನ್ ಚಾರ್ಜ್ (smartphone charge) ಮಾಡುವುದು ಸಾಧ್ಯವಾಗುತ್ತದೆ. ಇದರ ಸಾಮರ್ಥ್ಯ ಶೀಘ್ರದಲ್ಲೇ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ರಿಸರ್ಚ್ ಟೀಂ ಹೇಳಿದೆ.


ಹೇಗೆ ಕೆಲಸ ಮಾಡಲಿದೆ ಈ ಡಿವೈಸ್ : 
ಈ ಡಿವೈಸ್ ಬಹಳ ತೆಳುವಾಗಿದ್ದು, ಅದನ್ನು ಪ್ಲ್ಯಾಸ್ಟರ್‌ನಂತೆ ಬೆರಳುಗಳ ಸುತ್ತಲೂ ಸುತ್ತಿಕೊಳ್ಳಬಹುದು. ಕಾರ್ಬನ್ ಫೋಮ್ ಎಲೆಕ್ಟ್ರೋಡ್ ಗಳ ಪ್ಯಾಡಿಂಗ್ ಬೆವರನ್ನು ಹೀರಿಕೊಳ್ಳುತ್ತದೆ ಮತ್ತು ಅದನ್ನು ವಿದ್ಯುತ್ ಆಗಿ ಪರಿವರ್ತಿಸುತ್ತದೆ. ಎಲೆಕ್ಟ್ರೋಡ್ ಗಳು  ಕಿಣ್ವಗಳನ್ನು ಹೊಂದಿದ್ದು, ವಿದ್ಯುತ್ ಉತ್ಪಾದಿಸಲು ಬೆವರಿನ ಲ್ಯಾಕ್ಟೇಟ್ ಮತ್ತು ಆಮ್ಲಜನಕದ ಅಣುಗಳ ನಡುವೆ ರಾಸಾಯನಿಕ ಪ್ರತಿಕ್ರಿಯೆಗಳನ್ನು ಪ್ರಚೋದಿಸುತ್ತದೆ. ಡಿವೈಸ್ ಧರಿಸಿದವನಿಗೆ ಬೆವರು ಬಂದಾಗ ಅಥವಾ ಬ್ಯಾಂಡೇಜ್ ಮೇಲೆ ಒತ್ತಡ ಹೇರಿದ ತಕ್ಷಣ ವಿದ್ಯುತ್ ಉತ್ಪತ್ತಿಯಾಗುತ್ತದೆ.


ಇದನ್ನೂ  ಓದಿ : BSNL ಗ್ರಾಹಕರಿಗೆ ಪ್ರತಿ ದಿನ ರಾತ್ರಿ ಫ್ರೀ ಇಂಟರ್ನೆಟ್ ಜೊತೆಗೆ ಸಿಗಲಿದೆ ಭರ್ಜರಿ ಆಫರ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.