ಅತ್ಯಂತ ಅಗ್ಗವಾಗಿ ಸ್ಯಾಮ್ಸಂಗ್ನ Flip & Fold ಸ್ಮಾರ್ಟ್ಫೋನ್ ಮಾರಾಟ!?
ನೀವು ಫೋಲ್ಡಬಲ್ ಅಥವಾ ಫ್ಲಿಪ್ ಸ್ಮಾರ್ಟ್ಫೋನ್ ಖರೀದಿಸಲು ಬಯಸಿದರೆ ಮತ್ತು ಬಜೆಟ್ ಕಡಿಮೆಯಿದ್ದರೆ ಸ್ಯಾಮ್ಸಂಗ್ನ ಫ್ಲಿಪ್ 3 ಮತ್ತು ಫೋಲ್ಡ್ 3ಯನ್ನು ಅಗ್ಗದ ಬೆಲೆಗೆ ಖರೀದಿಸಬಹುದು.
ನವದೆಹಲಿ: ಮುಂಬರುವ Flipkart Big Diwali Saleನಲ್ಲಿ Samsung ಕಂಪನಿಯು Galaxy Z Flip 3 ಸ್ಮಾರ್ಟ್‍ಫೋನ್ ಮೇಲೆ ನಂಬಲಾಗದ ಕೊಡುಗೆ ನೀಡಲು ಪ್ಲಾನ್ ಮಾಡಿದೆ. ಇತ್ತೀಚೆಗೆ Galaxy Z ಫ್ಲಿಪ್ 4 ಸ್ಮಾರ್ಟ್‍ಫೋನ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಹೀಗಾಗಿ ಫ್ಲಿಪ್ 3 ಸ್ಮಾರ್ಟ್‍ಫೋನ್ ಬೇಡಿಕೆ ಕೊಂಚ ತಗ್ಗಲಿದೆ. ಹಳೆಯ ಐಫೋನ್ ಮಾಡೆಲ್‌ಗಳಂತೆ ಸ್ಯಾಮ್‌ಸಂಗ್ ಈಗ ತನ್ನ ಕಳೆದ ವರ್ಷದ ಫ್ಲಿಪ್ ಫೋನ್‌ನ ಬೆಲೆಯನ್ನು ಕಡಿತಗೊಳಿಸುತ್ತಿದೆ. ಇದರೊಂದಿಗೆ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟದ ವೇಳೆ Galaxy Z Fold 3 ಬೆಲೆಯಲ್ಲಿ ಹೆಚ್ಚು ಕಡಿತಗೊಳಿಸಲಾಗುತ್ತಿದೆ.
ಅಗ್ಗವಾಗಿ ಖರೀದಿಸಿ Samsung Galaxy Z Flip 3 ಫೋನ್
Galaxy Z ಫ್ಲಿಪ್ 3 ಸ್ಮಾರ್ಟ್‍ಫೋನ್ ಹೆಚ್ಚು ಗಮನ ಸೆಳೆದಿದೆ. ಸ್ಯಾಮ್‌ಸಂಗ್ 60 ಸಾವಿರಕ್ಕಿಂತ ಕಡಿಮೆ ಬೆಲೆಗೆ ಈ ಫೋನ್ ಮಾರಾಟ ಮಾಡಲು ನಿರ್ಧರಿಸಿದೆ. ಹೀಗಾಗಿ ಗ್ಯಾಲಕ್ಸಿ Z ಫ್ಲಿಪ್ 3 ಅಗ್ಗದ ಫೋಲ್ಡಿಂಗ್ ಸ್ಮಾರ್ಟ್‌ಫೋನ್ ಆಗಲಿದೆ. ಇದರ ಬೆಲೆ 60 ಸಾವಿರ ರೂ.ಗಿಂತ ಕಡಿಮೆಯಾಗುತ್ತಾ? ಕಾದು ನೋಡಬೇಕಿದೆ. ಒಂದು ವೇಳೆ ಅಂದುಕೊಂಡಂತೆ ಕಡಿಮೆಯಾದರೆ ಗ್ರಾಹಕರು ಹೆಚ್ಚು ಖರೀದಿಸುವ ಸಾಧ‍್ಯತೆ ಇದೆ.
ಇದನ್ನೂ ಓದಿ: ಬಾಂಬ್‌ನಂತೆ ಸ್ಫೋಟಗೊಂಡ ಆ್ಯಪಲ್ ವಾಚ್! ಮುಂದೇನಾಯ್ತು ಗೊತ್ತಾ..?
Samsung Galaxy Z Fold 3 ಮೂಲ ಬೆಲೆ
ಮತ್ತೊಂದೆಡೆ Samsung Galaxy Z Fold 3 ಬೆಲೆ 1 ಲಕ್ಷದ ವ್ಯಾಪ್ತಿಯಲ್ಲಿರುತ್ತದೆ ಎಂದು ಹೇಳಲಾಗುತ್ತಿದೆ. ಇದರ ಮೂಲ ಬಿಡುಗಡೆ ಬೆಲೆ ರೂ 1.5 ಲಕ್ಷಕ್ಕಿಂತ ಹೆಚ್ಚಿತ್ತು. ಈ ಫೋನ್‌ಗಳು 2022ರಲ್ಲಿಯೂ ಬಿಡುಗಡೆಯಾದ ಉತ್ತಮ ಸ್ಮಾರ್ಟ್‍ಫೋನ್‍ಗಳಾಗಿವೆ. Galaxy Z Flip 3 ಕುರಿತು ಕೆಲವು ವಿಷಯಗಳನ್ನು ನೀವು ತಿಳಿದುಕೊಳ್ಳಬೇಕು.
Galaxy Z ಫ್ಲಿಪ್ 3 ಭಾರತದ ಅತ್ಯಂತ ಅಗ್ಗದ ಫೋಲ್ಡಬಲ್
2022ರಲ್ಲಿ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಟ್ಟ Galaxy Z ಫ್ಲಿಪ್ 3 ಸ್ಮಾರ್ಟ್‍ಫೋನ್ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಹೊಸ ಫ್ಲಿಪ್ 4 ವಿನ್ಯಾಸವು ಫ್ಲಿಪ್ 3 ರೀತಿಯೇ ಇರುತ್ತದೆ. ಇದು 2 12MP ಕ್ಯಾಮೆರಾಗಳೊಂದಿಗೆ ಅದೇ 1.9-ಇಂಚಿನ ಕವರ್ ಡಿಸ್ಪ್ಲೇಯನ್ನು ಹೊಂದಿದೆ.
ಇದನ್ನೂ ಓದಿ: ನಿಮ್ಮ ಮೊಬೈಲ್ ನಲ್ಲಿರುವ ಈ ಆಪ್ ಅನ್ನು ತಕ್ಷಣ ಡಿಲೀಟ್ ಮಾಡಿ, ಇಲ್ಲವಾದರೆ ಖಾಲಿಯಾಗಿ ಬಿಡುತ್ತದೆ ಖಾತೆ
ಇದರಲ್ಲಿ 120Hz ರಿಫ್ರೆಶ್ ರೇಟ್‍ನೊಂದಿಗೆ ಫೋಲ್ಡಬಲ್ 6.7-ಇಂಚಿನ AMOLED ಡಿಸ್ಪ್ಲೇ ಇದೆ. ಸ್ನಾಪ್‌ಡ್ರಾಗನ್ 888 ಗ್ಯಾಲಕ್ಸಿ Z ಫ್ಲಿಪ್ 3ಗೆ ಹೆಚ್ಚಿನ ಪವರ್ ನೀಡುತ್ತದೆ. ಅಂದರೆ ಇದರ ಕಾರ್ಯಕ್ಷಮತೆ ಉತ್ತಮವಾಗಿರುತ್ತದೆ. ಆದರೆ ಫ್ಲಿಪ್ 3ಯಲ್ಲಿ ಕೇವಲ 3300mAh ಬ್ಯಾಟರಿ ಇದ್ದು, ಇದರಿಂದ ಇಡೀ ದಿನ ನೀವು ಫೋನ್ ಬಳಸಲು ಸಾಧ್ಯವಾಗುವುದಿಲ್ಲ. ಹೆಚ್ಚುವರಿಯಾಗಿ ಫೋನ್ ತುಂಬಾ ನಿಧಾನವಾದ 15W ವೈರ್ಡ್ ಚಾರ್ಜಿಂಗ್ ಹೊಂದಿದೆ. ಗಮನಿಸಬೇಕಾದ ಮುಖ್ಯ ಅಂಶವೆಂದರೆ ಬಾಕ್ಸ್‌ನಲ್ಲಿ ನಿಮಗೆ ಚಾರ್ಜರ್ ಸಿಗುವುದಿಲ್ಲ. ಅದನ್ನು ನೀವು ಪ್ರತ್ಯೇಕವಾಗಿ ಖರೀದಿಸಬೇಕಾಗುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.