Windows 11 Update: ವಿಂಡೋಸ್ 11 ಆಪರೇಟಿಂಗ್ ಸಿಸ್ಟಂಗಾಗಿ ಮೈಕ್ರೋಸಾಫ್ಟ್ ಮೊಮೆಂಟ್ಸ್ 5 ಎಂಬ ಹೊಸ ಅಪ್ಡೇಟ್ ಬಿಡುಗಡೆ ಮಾಡುತ್ತಿದೆ. ಈ ಅಪ್ಡೇಟ್ ಹಲವು ವೈಶಿಷ್ಟ್ಯಗಳು ಮತ್ತು ಸುಧಾರಣೆಗಳನ್ನು ಒಳಗೊಂಡಿರಲಿದೆ ಮತ್ತು ತನ್ನ ಬಳಕೆದಾರರಿಗೆ ಕಂಪ್ಯೂಟರ್ ಚಲಾಯಿಸಲು ಇದು ಮತ್ತಷ್ಟು ಸುಲಭಗೊಳಿಸಲಿದೆ. ಬಳಕೆದಾರರಿಗೆ ಈ ಹೊಸ ಅಪ್ಡೇಟ್ ಸಾಕಷ್ಟು ಪರಯೋಜನಕಾರಿ ಸಾಬೀತಾಗಲಿದೆ ಎಂದು ಮೈಕ್ರೋಸಾಫ್ಟ್ ಹೇಳಿಕೊಂಡಿದೆ. ಆದರೆ, ಈ ಎಲ್ಲಾ ವೈಶಿಷ್ಟ್ಯಗಳು ಏಕಕಾಲಕ್ಕೆ ಸಕ್ರಿಯಗೊಳಿಸಲು ಸಾಧ್ಯವಿಲ್ಲ. ಏಕೆಂದರೆ, ಕೆಲ ವೈಶಿಷ್ಟ್ಯಗಳಿಗಾಗಿ ಬಳಕೆದಾರರು ನಿರೀಕ್ಷೆ ಮಾಡಬಕಾಗಲಿದೆ. ಪ್ರಸ್ತುತ ಈ ಅಪ್ಡೇಟ್ ನಲ್ಲಿ ಏನೆನಿರಲಿದೆ ತಿಳಿದುಕೊಳ್ಳೋಣ ಬನ್ನಿ, (Technology News In Kannada)

COMMERCIAL BREAK
SCROLL TO CONTINUE READING

ಪ್ರಸ್ತುತ  ಬಳಕೆದಾರರು ಓಪನ್‌ಟೇಬಲ್ ಮತ್ತು ಇನ್‌ಸ್ಟಾಕಾರ್ಟ್‌ನಂತಹ ಥರ್ಡ್ ಪಾರ್ಟಿ ಸೇವೆಗಳನ್ನು ಕಾಪಿಲೋಟ್‌ಗೆ ಸೇರಿಸಲು ಸಾಧ್ಯವಾಗಲಿದೆ. ಅವುಗಳ ಸಹಾಯದಿಂದ, ಬಳಕೆದಾರರು ಡಿನ್ನರ್ ಕಾಯ್ದಿರಿಸುವಿಕೆಯನ್ನು ಮಾಡಲು ಅಥವಾ ಕಾಪಿಲೋಟ್‌ನಿಂದ ನೇರವಾಗಿ ಆಹಾರವನ್ನು ಆರ್ಡರ್ ಮಾಡಲು ಸಾಧ್ಯವಾಗುತ್ತದೆ. Shopify, Klarna ಮತ್ತು Kayak ನಂತಹ ಸೇವೆಗಳಿಗೆ ಪ್ಲಗಿನ್‌ಗಳು ಮುಂಬರುವ ತಿಂಗಳುಗಳಲ್ಲಿ ಬಿಡುಗಡೆಯಾಗಲಿವೆ. ಇದರಿಂದ  ನೀವು ಧ್ವನಿಯ ಮೂಲಕ ಸಹ ಕಾಪಿಲೋಟ್ ಅನ್ನು ನಿಯಂತ್ರಿಸಲು ಸಾಧ್ಯವಾಗಲಿದೆ. ಹಲವು ಸೆಟ್ಟಿಂಗ್‌ಗಳನ್ನು ಆನ್ ಅಥವಾ ಆಫ್ ಮಾಡಲು ನೀವು ಅದನ್ನು ಕೋರಬಹುದು


ಫೋಟೋ ಎಡಿಟಿಂಗ್ ಈಗ ಸುಲಭವಾಗಿದೆ
ಈಗ ಫೋಟೋ ಅಪ್ಲಿಕೇಶನ್‌ನಲ್ಲಿ ಹೊಸ ವೈಶಿಷ್ಟ್ಯವು ಬಂದಿದೆ ಅದರ ಹೆಸರು "ಜನರೇಟಿವ್ ಎರೇಸ್". ಅದರ ಸಹಾಯದಿಂದ ನೀವು ಫೋಟೋದಿಂದ ಏನನ್ನಾದರೂ ಸುಲಭವಾಗಿ ತೆಗೆದುಹಾಕಬಹುದು. ಕ್ಲಿಪ್‌ಚಾಂಪ್ ಅಪ್ಲಿಕೇಶನ್ ವೀಡಿಯೊ ಸಂಪಾದನೆಯನ್ನು ಸುಲಭಗೊಳಿಸುತ್ತದೆ. ಈಗ ನೀವು ಈ ಅಪ್ಲಿಕೇಶನ್‌ನ ಸಹಾಯದಿಂದ ವೀಡಿಯೊದಿಂದ ಖಾಲಿ ಸ್ಥಳ ಅಥವಾ ಧ್ವನಿಯನ್ನು ತೆಗೆದುಹಾಕಬಹುದು.


ಧ್ವನಿಯ ಮೂಲಕ ಕಂಪ್ಯೂಟರ್ ಅನ್ನು ನಿಯಂತ್ರಿಸಬಹುದು
"ಧ್ವನಿ ಪ್ರವೇಶ" ವೈಶಿಷ್ಟ್ಯವು ಈಗ ವಿಂಡೋಸ್ 11 ನಲ್ಲಿ ಇನ್ಮುಂದೆ ಮತ್ತಷ್ಟು ಉತ್ತಮವಾಗಲಿದೆ. ಅದರ ಸಹಾಯದಿಂದ, ನೀವು ನಿಮ್ಮ ಕಂಪ್ಯೂಟರ್ ಅನ್ನು ನಿಮ್ಮ ಧ್ವನಿಯಿಂದ ಮಾತ್ರ ನಿಯಂತ್ರಿಸಬಹುದು. ನೀವು ಕೀಬೋರ್ಡ್ ಅನ್ನು ಬಳಸಬಹುದು, ಮೌಸ್ ಕ್ಲಿಕ್ ಮಾಡಿ ಮತ್ತು ನಿಮ್ಮ ಧ್ವನಿಯೊಂದಿಗೆ ಅಪ್ಲಿಕೇಶನ್‌ಗಳನ್ನು ತೆರೆಯಬಹುದು. ನಿಮ್ಮ ಸ್ವಂತ ಕಸ್ಟಮ್ ಧ್ವನಿ ಶಾರ್ಟ್‌ಕಟ್‌ಗಳನ್ನು ಸಹ ನೀವು ರಚಿಸಬಹುದು.


ಇದನ್ನೂ ಓದಿ-WhatsApp New Feature: ವಾಟ್ಸ್ ಆಪ್ ನಲ್ಲಿ ಇನ್ಮುಂದೆ ದಿನಾಂಕ ಆಧರಿಸಿ ನೀವು ಈ ಕೆಲಸ ಮಾಡಬಹುದು, ಹೊಸ ವೈಶಿಷ್ಟ್ಯ ಬಿಡುಗಡೆ!


ಮಲ್ಟಿಪಲ್ ಮಾನಿಟರ್‌ಗಳಲ್ಲಿ ಕೆಲಸ ಮಾಡುವುದು ಸುಲಭವಾಗಿದೆ
ಇದು ಮಲ್ಟಿ ಮಾನಿಟರ್‌ಗಳಲ್ಲಿ ಕೆಲಸ ಮಾಡುವುದನ್ನು ಮತ್ತಷ್ಟು ಸುಲಭಗೊಳಿಸಲಿದೆ.  ಧ್ವನಿ ಆಜ್ಞೆಗಳನ್ನು ನೀಡುವ ಮೂಲಕ ಇನ್ಮುಂದೆ ನೀವು ಮಲ್ಟಿ ಮಾನಿಟರ್‌ಗಳಲ್ಲಿ ಕೆಲಸ ಮಾಡುವಾಗ ಅವುಗಳನ್ನು ನಿಯಂತ್ರಿಸಬಹುದು.


ಇದನ್ನೂ ಓದಿ-Lok Sabha Elections 2024: ಮತದಾನದಲ್ಲಿ ಎರಡು ಹಂತದ ಪರಿಶೀಲನೆ, ಬಿಜೆಪಿಯ ಈ ಬೇಡಿಕೆಯ ಹಿಂದಿನ ಲೆಕ್ಕಾಚಾರ ಏನು?


ಇತರೆ ವೈಶಿಷ್ಟ್ಯಗಳು
>> ಹೊಸ "ಸ್ನ್ಯಾಪ್ ಸಲಹೆಗಳು" ವೈಶಿಷ್ಟ್ಯವು ನೀವು ಏಕಕಾಲದಲ್ಲಿ ತೆರೆಯಲು ಯಾವ ಅಪ್ಲಿಕೇಶನ್‌ಗಳು ಉತ್ತಮವೆಂದು ನಿಮಗೆ ನೀಲಿಸಲಿವೆ.
>> ವಿಂಡೋಸ್ 11 ನಲ್ಲಿ ವಿಜೆಟ್‌ಗಳನ್ನು ಸಹ ನವೀಕರಿಸಲಾಗಿದೆ. ಈಗ ನೀವು ನಿಮ್ಮ ಮೆಚ್ಚಿನ ವಿಜೆಟ್‌ಗಳನ್ನು ಒಟ್ಟಿಗೆ ಸೇರಿಸಬಹುದು. ಇದರೊಂದಿಗೆ, ನೀವು ಈಗ ಫೋಟೋಗಳು, ಪೇಂಟ್, ವಾಟ್ಸಾಪ್ ಮತ್ತು ಮೆಸೆಂಜರ್‌ನಂತಹ ಅಪ್ಲಿಕೇಶನ್‌ಗಳಲ್ಲಿ ವಿಂಡೋಸ್ ಇಂಕ್ ಅನ್ನು ಬಳಸಬಹುದು, ಇದರಿಂದ ನೀವು ಸ್ಕ್ರೀನ್ ಮೇಲೆ ಬರೆಯಲು ಸಾಧ್ಯವಾಗಲಿದೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ