Wireless Charging for Electric Road Cars: ಅಮೆರಿಕದ ಮಿಚಿಗನ್‌ನಲ್ಲಿ ಡೆಟ್ರಾಯಿಟ್ ಹೆಸರಿನ ನಗರವಿದ್ದು, ಅಲ್ಲಿ ದೇಶದ ಮೊದಲ ವೈರ್‌ಲೆಸ್ ಎಲೆಕ್ಟ್ರಿಕ್ ರಸ್ತೆಯನ್ನು ನಿರ್ಮಿಸಲಾಗಿದೆ. ಈ ರಸ್ತೆ ಕಾರ್ಕ್‌ಟೌನ್ ಪ್ರದೇಶದಲ್ಲಿದೆ. ಇಲ್ಲಿ, 14th street ನಲ್ಲಿ   ಎಲೆಕ್ಟ್ರಿಕ್ ಕಾರನ್ನು ಓಡಿಸಿದರೆ, ಅದರ ಬ್ಯಾಟರಿ ಡಿಸ್ಚಾರ್ಜ್ ಆಗುವುದಿಲ್ಲ, ಬದಲಿಗೆ  ಚಾರ್ಜ್ ಆಗುತ್ತಲೇ ಇರುತ್ತದೆ. ಮೇಲಿನಿಂದ ನೋಡಿದರೆ ರಸ್ತೆ ಇತರ ಡಾಂಬರು ರಸ್ತೆಯಂತೆಯೇ ಕಾಣುತ್ತದೆ.ಆದರೆ, ಇದು ನಿಮ್ಮ ಕಾರ್ ಬ್ಯಾಟರಿಯನ್ನು ವೈರ್‌ಲೆಸ್ ಆಗಿ ಚಾರ್ಜ್ ಮಾಡುವ ಶಕ್ತಿಯನ್ನು ಹೊಂದಿದೆ. ಈ ರಸ್ತೆಯ ಉದ್ದ 400 ಮೀಟರ್.


COMMERCIAL BREAK
SCROLL TO CONTINUE READING

ವೈರ್‌ಲೆಸ್  ಎಲೆಕ್ಟ್ರಿಕ್ ರಸ್ತೆಯನ್ನು ಹೇಗೆ ಮಾಡಲಾಯಿತು? :
ವೈರ್‌ಲೆಸ್  ವಿದ್ಯುತ್ ರಸ್ತೆ ಮಾಡಲು, ರಸ್ತೆಯ ಮೇಲ್ಮೈ ಅಡಿಯಲ್ಲಿ ವಿದ್ಯುತ್ಕಾಂತೀಯ ಕಾಯಿಲ್ ಗಳನ್ನು ಹಾಕಲಾಗಿದೆ. ಇವುಗಳನ್ನು ನಗರದ ವಿದ್ಯುತ್ ಗ್ರಿಡ್‌ಗೆ ಜೋಡಿಸಲಾಗಿದ್ದು, ಅಲ್ಲಿಂದ ಅವುಗಳಿಗೆ ವಿದ್ಯುತ್ ಪೂರೈಕೆಯಾಗುತ್ತದೆ. ವಿದ್ಯುತ್ ಸರಬರಾಜು ಮಾಡಿದಾಗ, ವಿದ್ಯುತ್ಕಾಂತೀಯ ಕಾಯಿಲ್ ಗಳು ರಸ್ತೆಯ ಮೇಲಿರುವ ವಿದ್ಯುತ್ಕಾಂತೀಯ ಕ್ಷೇತ್ರವನ್ನು ಸೃಷ್ಟಿಸುತ್ತವೆ. ಇದು ವಿದ್ಯುತ್ ವಾಹನದ ಬ್ಯಾಟರಿಯ ರಿಸೀವರ್ ಗೆ ಶಕ್ತಿಯನ್ನು ವರ್ಗಾಯಿಸುತ್ತದೆ. ಈ ಪ್ರಕ್ರಿಯೆಯನ್ನು "Intuitive charging"   ಎಂದು ಕರೆಯಲಾಗುತ್ತದೆ. 


ಇದನ್ನೂ ಓದಿ : Samsung Smart TVಗಳಲ್ಲಿ ಇನ್ಮುಂದೆ ಇರಲ್ಲ Google Assistant ವೈಶಿಷ್ಟ್ಯ!


ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಉತ್ತೇಜನ :
ಇದು ಮೊಬೈಲ್ ಫೋನ್‌ಗಳಿಗೆ ವೈರ್‌ಲೆಸ್ ಚಾರ್ಜಿಂಗ್‌ಗೆ ಬಳಸುವ ತಂತ್ರಜ್ಞಾನದಂತೆಯೇ ಕೆಲಸ ಮಾಡುತ್ತದೆ. ರಸ್ತೆಗಳು ಮತ್ತು ತಂತ್ರಜ್ಞಾನಗಳು ಎಲೆಕ್ಟ್ರಿಕ್ ವಾಹನಗಳ ಅಳವಡಿಕೆಯನ್ನು ಹೆಚ್ಚಿಸಲು ಮತ್ತು ಅದಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿಭಾಯಿಸಲು ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ. 


ರೇಂಜ್  ಸಮಸ್ಯೆ, ಪಬ್ಲಿಕ್ ಚಾರ್ಜಿಂಗ್ ಇನ್ಫ್ರಸ್ಟ್ರೆಕ್ಚರ್,ಪ್ರಯಾಣದ ಸಮಯದಲ್ಲಿ ವಾಹನವನ್ನು ಚಾರ್ಜ್ ಮಾಡಲು ತೆಗೆದುಕೊಳ್ಳುವ ಸಮಯ ಇವೆಲ್ಲವನ್ನೂ ಗಣನೆಗೆ ತೆಗೆದುಕೊಂಡು ಜನರು ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡಲು ಹಿಂದೇಟು ಹಾಕುತ್ತಾರೆ. ಇದು ಜನರು ICE ವಾಹನಗಳಿಗೆ ಅಂಟಿಕೊಳ್ಳುವಂತೆ ಒತ್ತಾಯಿಸುತ್ತದೆ. 


ಇದನ್ನೂ ಓದಿ : Digital Detox Program: ಗ್ಯಾಜೆಟ್ ಗಳಿಂದ ಮಾನಸಿಕ ಆರೋಗ್ಯ ಹಾಳಾಗುತ್ತಿದೆ, ಆತಂಕಗೊಂಡ ಸರ್ಕಾರದಿಂದ ಅಭಿಯಾನ ಆರಂಭ!


ಈ ದೇಶಗಳಲ್ಲಿಯೂ ವೈರ್‌ಲೆಸ್ ಎಲೆಕ್ಟ್ರಿಕ್ ರಸ್ತೆ :
ಎಲೆಕ್ಟ್ರಿಕ್ ವಾಹನಗಳಿಗೆ ಉತ್ತೇಜನ ನೀಡಬೇಕಾದರೆ ಅವುಗಳನ್ನು ನಿಭಾಯಿಸುವುದು ಅವಶ್ಯಕ. ವೈರ್‌ಲೆಸ್ ಎಲೆಕ್ಟ್ರಿಕ್ ರಸ್ತೆಗಳು ಇದಕ್ಕೆ ಸಹಾಯ ಮಾಡಬಹುದು.ಅಮೆರಿಕದ ಹೊರತಾಗಿ, ಯುರೋಪ್ ಮತ್ತು ಇಸ್ರೇಲ್‌ನ ಕೆಲವು ಸ್ಥಳಗಳಲ್ಲಿ ವೈರ್‌ಲೆಸ್ ಎಲೆಕ್ಟ್ರಿಕ್ ರಸ್ತೆಗಳನ್ನು ನಿರ್ಮಿಸಲಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ