ಈ 7 ಸಿಕ್ರೇಟ್ ಕೋಡ್ಗಳಿಂದ ಫೋನ್‌ನಲ್ಲಿರುವ ಪ್ರತಿಯೊಂದು ಮಾಹಿತಿಯನ್ನು ಪಡೆಯಬಹುದು!
Secret Code in Mobile: ನಿಮ್ಮ ಫೋನ್‌ನಲ್ಲಿರುವ ರಹಸ್ಯ ಕ್ಷಣಾರ್ಧದಲ್ಲಿ ಹೊರತರಬಲ್ಲ ಹಲವು ಸಿಕ್ರೇಟ್ ಕೋಡ್‌ಗಳಿವೆ ಎಂಬುದು ನಿಮಗೆ ತಿಳಿದಿದೆಯೇ? ಇಲ್ಲವಾದರೆ ಇಲ್ಲಿ ತಿಳಿದುಕೊಳ್ಳಿ..
Secret Codes: ಕೆಲವು ವರ್ಷಗಳ ಹಿಂದೆ, ನಮ್ಮ ಫೋನ್ ಬ್ಯಾಲೆನ್ಸ್ ಪರಿಶೀಲಿಸಲು ನಾವು.. * ಅಥವಾ # ಎಂದು ಪ್ರಾರಂಭವಾಗುವ ಕೋಡ್ ಅನ್ನು ಡಯಲ್ ಮಾಡಬೇಕಾಗಿತ್ತು. ಕಾಲಾನಂತರದಲ್ಲಿ, ಅವುಗಳ ಬಳಕೆಯು ಕೊನೆಗೊಂಡಿತು. ಆದರೆ ನಿಮ್ಮ ಫೋನ್‌ನಲ್ಲಿರುವ ಗುಪ್ತ ಮಾಹಿತಿಯನ್ನು ಕ್ಷಣಮಾತ್ರದಲ್ಲಿ ಹೊರತರಬಲ್ಲ ಇಂತಹ ಇನ್ನೂ ಹಲವು ಸಿಕ್ರೇಟ್ ಕೋಡ್‌ಗಳಿವೆ ಎಂಬುದು ನಿಮಗೆ ತಿಳಿದಿದೆಯೇ. ಈ ಕೋಡ್‌ಗಳು ನಿಮ್ಮ ಸ್ಮಾರ್ಟ್‌ಫೋನ್ ಕುರಿತು ಬಹಳ ಮುಖ್ಯವಾದ ಮಾಹಿತಿಯನ್ನು ಒದಗಿಸುತ್ತವೆ.
ಆಂಡ್ರಾಯ್ಡ್ 2 ರೀತಿಯ ರಹಸ್ಯ ಕೋಡ್‌ಗಳನ್ನು ಹೊಂದಿದೆ. ಈ ಸಂಕೇತಗಳು (USSD) ಮತ್ತು (MMI). USSD SIM ಕಾರ್ಡ್ ಬ್ಯಾಲೆನ್ಸ್ ಮತ್ತು ಸೇವೆಗಳ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ ಮತ್ತು MMI ಸ್ಮಾರ್ಟ್ಫೋನ್ ಸಾಫ್ಟ್ವೇರ್ ಮತ್ತು ಹಾರ್ಡ್ವೇರ್ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ.
ಇದನ್ನೂ ಓದಿ-ಭಾರತದಲ್ಲಿ 71 ಲಕ್ಷಕ್ಕೂ ಹೆಚ್ಚು ಖಾತೆಗಳಿಗೆ ಕತ್ತರಿ ಹಾಕಿದ ವಾಟ್ಸಾಪ್..!
*#21# : ಈ ರಹಸ್ಯ ಕೋಡ್‌ಗಳ ಸಹಾಯದಿಂದ ನಿಮ್ಮ ಕರೆ, ಡೇಟಾ ಅಥವಾ ಸಂಖ್ಯೆಯನ್ನು ಬೇರೆ ಯಾವುದೇ ಸಂಖ್ಯೆಗೆ ಫಾರ್ವರ್ಡ್ ಮಾಡಲಾಗಿದೆಯೇ ಎಂದು ತಿಳಿಯಬಹುದು.
#0# : ಈ ಕೋಡ್ ಸಹಾಯದಿಂದ, ನಿಮ್ಮ ಫೋನ್‌ನ ಡಿಸ್ಪ್ಲೇ, ಸ್ಪೀಕರ್, ಕ್ಯಾಮೆರಾ, ಸೆನ್ಸಾರ್ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂದು ನೀವು ತಿಳಿದುಕೊಳ್ಳಬಹುದು.
*#07# : ಈ ಕೋಡ್ ನಿಮ್ಮ ಫೋನ್‌ನ SAR ಮೌಲ್ಯವನ್ನು ಹೇಳುತ್ತದೆ. ಇದರ ಸಹಾಯದಿಂದ ಫೋನ್ ಹೊರಸೂಸುವ ವಿಕಿರಣದ ಬಗ್ಗೆ ಮಾಹಿತಿ ಪಡೆಯಬಹುದು.
*#06# : ಈ ಕೋಡ್‌ನ ಸಹಾಯದಿಂದ ನಿಮ್ಮ ಫೋನ್‌ನ IMEI ಸಂಖ್ಯೆಯನ್ನು ನೀವು ನೋಡಬಹುದು. ಫೋನ್ ಕಳೆದುಹೋದಾಗ ಈ IMEI ಸಂಖ್ಯೆ ಅಗತ್ಯವಿದೆ.
##4636## : ಈ ರಹಸ್ಯ ಕೋಡ್‌ನಿಂದ ನಿಮ್ಮ ಸ್ಮಾರ್ಟ್‌ಫೋನ್ ಬ್ಯಾಟರಿ, ಇಂಟರ್ನೆಟ್, ವೈಫೈ ಮಾಹಿತಿಯನ್ನು ನೀವು ಪರಿಶೀಲಿಸಬಹುದು.
##34971539## : ಈ ಕೋಡ್‌ನಿಂದ ಫೋನ್ ಕ್ಯಾಮರಾ ಮಾಹಿತಿಯನ್ನು ತಿಳಿಯಬಹುದು. ಈ ಕೋಡ್ ಕ್ಯಾಮೆರಾ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ಸಹ ಹೇಳುತ್ತದೆ.
2767*3855# : ನೀವು ಈ ಕೋಡ್ ಅನ್ನು ಟೈಪ್ ಮಾಡಿದರೆ ಅದು ನಿಮ್ಮ ಸ್ಮಾರ್ಟ್‌ಫೋನ್ ರಿ ಸೆಟ್ ಮಾಡುತ್ತದೆ. ಆದ್ದರಿಂದ ಈ ಸಂಖ್ಯೆಯನ್ನು ನಮೂದಿಸುವ ಮೊದಲು ನಿಮ್ಮ ಮೊಬೈಲ್‌ನಲ್ಲಿನ ಡೇಟಾವನ್ನು ಸೇವ್ ಮಾಡಿಕೊಳ್ಳಿ..
ಇದನ್ನೂ ಓದಿ-ತನ್ನ ಈ 2 ರೀಚಾರ್ಜ್ ಯೋಜನೆಗಳಲ್ಲಿ 3 ಜಿಬಿ ಹೆಚ್ಚುವರಿ ಡೇಟಾ ನೀಡುವುದಾಗಿ ಘೋಷಿಸಿದ ಟೆಲಿಕಾಂ ಕಂಪನಿ!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.