ನವದೆಹಲಿ : ವಾಟ್ಸಾಪ್ (Whatsapp) ವಿಶ್ವದ ಅತ್ಯಂತ ಪ್ರೀತಿಯ ಮತ್ತು ಜನಪ್ರಿಯ ಮೆಸೇಜಿಂಗ್ ಆಪ್‌ಗಳಲ್ಲಿ ಒಂದಾಗಿದೆ. ಈ ಆಪ್ ತನ್ನ ಬಳಕೆದಾರರಿಗೆ ಎಲ್ಲಾ ರೀತಿಯ ವೈಶಿಷ್ಟ್ಯಗಳನ್ನು (Whatsapp features) ಒದಗಿಸುತ್ತದೆ. ಅವರ ಸುರಕ್ಷತೆಯ ಬಗ್ಗೆಯೂ ಕಾಳಜಿ ವಹಿಸುತ್ತದೆ. ವಾಟ್ಸಾಪ್‌ನ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ವೈಶಿಷ್ಟ್ಯವು ಬಳಕೆದಾರರ ಚಾಟ್‌ಗಳು,  ಫೋಟೋಗಳು, ವೀಡಿಯೊಗಳು ಇತ್ಯಾದಿ ಎಲ್ಲವನ್ನೂ ಸುರಕ್ಷಿತವಾಗಿರಿಸುತ್ತದೆ.  ಆದರೆ ಇಷ್ಟೆಲ್ಲಾ ಮುನ್ನೆಚ್ಚರಿಕೆ ತೆಗೆದುಕೊಂಡ ನಂತರವೂ, ಸೈಬರ್ ಕ್ರಿಮಿನಲ್ ಗಳು ಅಂದರೆ ಹ್ಯಾಕರ್‌ಗಳು ವಂಚನೆಗೆ ಹೊಸ ಹೊಸ ದಾರಿಗಳನ್ನು ಹುಡುಕುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಇತ್ತೀಚಿನ ವಾಟ್ಸಾಪ್ ಬಗ್ : 
ಹ್ಯಾಕರ್‌ಗಳು (Hackers) ಬಳಕೆದಾರರ ವಾಟ್ಸಾಪ್ ಖಾತೆಯನ್ನು ಹೊಸ ರೀತಿಯಲ್ಲಿ ಹ್ಯಾಕ್ ಮಾಡಬಹುದಾದ ಬಗ್ಗೆ ವರದಿಯಾಗಿದೆ. ಈ ದೋಷವು WhatsApp ನ ಇಮೇಜ್ ಫಿಲ್ಟರ್ ವೈಶಿಷ್ಟ್ಯದಲ್ಲಿ ಕಂಡುಬಂದಿದೆ. ಇದರ ಹೆಸರು Out-of-Bounds Read-Write Vulnerability. ಚೆಕ್ ಪಾಯಿಂಟ್ ಸಂಶೋಧಕರು ಈ ದೋಷದ ಬಗ್ಗೆ ವಾಟ್ಸಾಪ್ಗೆ ಮಾಹಿತಿ ನೀಡಿದ್ದಾರೆ.  


ಇದನ್ನೂ ಓದಿ : Airtel ಈ ಪ್ರಿಪೇಯ್ಡ್ ಪ್ಲಾನ್ ರಿಚಾರ್ಜ್ ಮಾಡಿ ಪ್ರತಿದಿನ ಪಡೆಯಿರಿ 3GB ಡೇಟಾ ಹಾಗೂ ಎಲ್ಲಾ ಪ್ರಯೋಜನಗಳನ್ನ!


ಹೇಗೆ ಕೆಲಸ ಮಾಡುತ್ತದೆ ಈ ವಾಟ್ಸಾಪ್ ಬಗ್ ?:
ಈ ದೋಷವು  ಫೆಬ್ರವರಿಯಲ್ಲಿ ಬಂದಿರುವ WhatsApp ಅಪ್ಡೇಟ್  v2.21.1.13 ನ  ಇಮೇಜ್ ಫಿಲ್ಟರ್ ವೈಶಿಷ್ಟ್ಯದೊಂದಿಗೆ ಬಂದಿದೆ ಎನ್ನುತಾರೆ ಚೆಕ್ ಪಾಯಿಂಟ್ ಸಂಶೋಧಕರು. ಬಳಕೆದಾರರಿಗೆ ಸೂಕ್ತವಲ್ಲದ ಚಿತ್ರವನ್ನುಕಳುಹಿಸಿ, ಇಮೇಜ್ ಫಿಲ್ಟರ್ (Image filter) ಬಳಸಿ,  ಹ್ಯಾಕರ್ ಬಳಕೆದಾರರ ಖಾತೆಯನ್ನು ಹ್ಯಾಕ್ ಮಾಡಬಹುದು.


ಆದರೆ, ಇದನ್ನು ಬಹಳ ಸುಲಭವಾಗಿ ಕೂಡಾ ಮಾಡಲು ಸಾಧ್ಯವಿಲ್ಲ. ದೀರ್ಘ ಪ್ರಕ್ರಿಯೆಯ ಮೂಲಕ ಹ್ಯಾಕರ್ ಗಳು ತಮ್ಮ ಕೆಲಸದಲ್ಲಿ ಯಶಸ್ವಿಯಾಗುತ್ತಾರೆ ಎಂದು, ಚೆಕ್ ಪಾಯಿಂಟ್ ಸಂಶೋಧಕರು ತಿಳಿಸಿದ್ದಾರೆ.  ಹ್ಯಾಕ್ ಮಾಡಬೇಕಾದರೆ, ಮೊದಲು ಸೂಕ್ತವಲ್ಲದ ಚಿತ್ರವನ್ನು ರಚಿಸಬೇಕು. ನಂತರ ಅದನ್ನು ವಾಟ್ಸಾಪ್‌ನ ಇಮೇಜ್ ಫಿಲ್ಟರ್‌ಗೆ ಅಪ್‌ಲೋಡ್ ಮಾಡಬೇಕು. ನಂತರ ಬಳಕೆದಾರರು ಆ ಸೂಕ್ತವಲ್ಲದ ಫೋಟೋವನ್ನು ಹೊಂದಿರುವ ಫಿಲ್ಟರ್‌ನಲ್ಲಿ ಫೋಟೋವನ್ನು ಕ್ಲಿಕ್ ಮಾಡಿದಾಗ,  ಆ ಚಿತ್ರದ ಮೂಲಕ ಹ್ಯಾಕರ್ ಬಳಕೆದಾರರ ಖಾತೆಯ ಬಗ್ಗೆ ಎಲ್ಲಾ ಮಾಹಿತಿಯನ್ನು ಪಡೆಯಲು ಸಾಧ್ಯವಾಗುತ್ತದೆ.


ಇದನ್ನೂ ಓದಿ : Airtel Black Offers : Airtel ಗ್ರಾಹಕರಿಗೆ ಬಂಪರ್ ಸಿಹಿ ಸುದ್ದಿ : ಏರ್‌ಟೆಲ್‌ನ ಎಲ್ಲಾ ಸೇವೆಗಳು 30 ದಿನಗಳವರೆಗೆ ಫುಲ್ Free 


ಇದಕ್ಕಾಗಿ ವಾಟ್ಸಾಪ್ ನೀಡಿದ ಪರಿಹಾರ ಏನು ? 
WhatsApp ತನ್ನ ಸೆಕ್ಯೂರಿಟಿ ಅಡವೈಸರಿ ವೆಬ್‌ಸೈಟ್‌ನಲ್ಲಿ ಈ ದೋಷದ ಬಗ್ಗೆ ಮಾಹಿತಿಯನ್ನು ನೀಡಿತ್ತು. ಅಲ್ಲದೆ, ಇಮೇಜ್  ಫಿಲ್ಟರ್‌ನಿಂದ ಈ ದೋಷವನ್ನು ತೆಗೆದುಹಾಕುವಲ್ಲಿ WhatsApp ಯಶಸ್ವಿಯಾಗಿದೆ. ಕಂಪನಿಯು ಮೂಲ ಮತ್ತು ಫಿಲ್ಟರ್ ಇಮೇಜ್ ಮೇಲೆ ಇನ್ನೂ ಎರಡು ಭದ್ರತಾ ತಪಾಸಣೆಗಳನ್ನು ಸೇರಿಸಿದೆ.

 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.