ಮ್ಯಾಡ್ರಿಡ್: Crime - ಗೂಗಲ್ ಮ್ಯಾಪ್ (Google Maps) ನಿಂದಾಗಿ ಮಹಿಳೆಯೊಬ್ಬಳ ಜೀವ ಅಪಾಯಕ್ಕೆ ಸಿಲುಕಿರುವ ಘಟನೆ ಸ್ಪೇನ್ (Spain) ನಲ್ಲಿ ನಡೆದಿದೆ. ಮಹಿಳೆ ಶಾಪಿಂಗ್ ಗಾಗಿ ಸ್ಪೇನ್ ತಲುಪಿದ್ದಳು. ಮಾರ್ಕೆಟ್ ನಲ್ಲಿ ಶಾಪಿಂಗ್ ಮುಗಿಸಿ ಮನೆಗೆ ವಾಪಸ್ಸಾಗುವಾಗ ದಾರಿ ಮರೆತು ಹೋಗದಂತೆ ಗೂಗಲ್ ಮ್ಯಾಪ್ ಬಳಸುತ್ತಿದ್ದರು. ಆದರೆ ಶಾರ್ಟ್‌ಕಟ್‌ಗಳಿಂದಾಗಿ ದರೋಡೆ ಘಟನೆಗಳಿಗೆ ಕುಖ್ಯಾತವಾಗಿರುವ ಸ್ಥಳಕ್ಕೆ (Most Dangerous Road) ಗೂಗಲ್ ಮ್ಯಾಪ್ ಅವರನ್ನು ಕರೆದೊಯ್ದಿದೆ. ಮಹಿಳೆಗೆ ಏನಾದರೂ ಅರ್ಥವಾಗುವ ಮೊದಲು, ಒಬ್ಬ ಅಪರಾಧಿ ಅವಳನ್ನು ಹಿಡಿದು ಥಳಿಸಿದ್ದಾನೆ.


COMMERCIAL BREAK
SCROLL TO CONTINUE READING

ದಾರಿಗೆ ಸಂಬಂಧಿಸಿದಂತೆ ಎದುರಾದ ಕನ್ಫ್ಯೂಶನ್
'ಮಿರರ್'ನಲ್ಲಿ ಪ್ರಕಟಗೊಂಡ ವರದಿ ಪ್ರಕಾರ, ಮಹಿಳೆ ತನಗಾದ ಸಂಕಷ್ಟವನ್ನು ಸಾಮಾಜಿಕ ಜಾಲತಾಣ 'ರೆಡ್ಡಿಟ್' (Reddit)ನಲ್ಲಿ ವಿವರಿಸಿದ್ದಾರೆ. ಕೆಲ ಸಮಯದ ಹಿಂದೆ ಸ್ಪೇನ್‌ಗೆ ತೆರಳಿರುವುದಾಗಿ ಸಂತ್ರಸ್ತೆ ತಿಳಿಸಿದ್ದಾರೆ. ಮಾರುಕಟ್ಟೆಯಲ್ಲಿ ಶಾಪಿಂಗ್ ಮಾಡಿದ ನಂತರ, ಹಿಂತಿರುಗುವ ಮಾರ್ಗದ ಬಗ್ಗೆ ಸ್ವಲ್ಪ ಗೊಂದಲಕ್ಕೊಳಗಿದ್ದಾಳೆ, ಆದ್ದರಿಂದ ಅವಳು ಗೂಗಲ್ ನಕ್ಷೆಗಳನ್ನು (Google Maps) ಆಶ್ರಯಿಸಿದ್ದಾಳೆ. ನಕ್ಷೆಯಲ್ಲಿ ಸೂಚಿಸಲಾದ ಮಾರ್ಗವನ್ನು ಅನುಸರಿಸಿ ಅವಳು ಕುಖ್ಯಾತ ಪ್ರದೇಶವನ್ನು ತಲುಪಿದ್ದಾಳೆ. ಅಲ್ಲಿ ಆಕೆಯ ಮೇಲೆ ಹಲ್ಲೆ ನಡೆಸಿ ದೋಚಲಾಗಿದೆ.


ಇದನ್ನೂ ಓದಿ-Pee Power: ಇನ್ಮುಂದೆ ಮೂತ್ರದಿಂದಲೂ ಮೊಬೈಲ್ ಚಾರ್ಜ್ ಮಾಡಬಹುದಂತೆ! ವಿಜ್ಞಾನಿಗಳಿಗೆ ಸಿಕ್ಕ ದೊಡ್ಡ ಯಶಸ್ಸು


ದರೋಡೆ ವಿರೋಧಿಸಿದ ಆಕೆಯ ಮೇಲೆ ಹಲ್ಲೆ ನಡೆಸಲಾಗಿದೆ
ಘಟನೆಯ ಕುರಿತು ಹೇಳಿರುವ ಮಹಿಳೆ, "ನಾನು El Vacie ಪಕ್ಕದಲ್ಲಿರುವ ಪ್ರದೇಶ ತಲುಪಿದಾಗ, ಒಬ್ಬ ವ್ಯಕ್ತಿ ನನ್ನ ಬಳಿಗೆ ಬಂದು ನನ್ನ ಪರ್ಸ್ ಅನ್ನು ಕಸಿದುಕೊಳ್ಳಲು ಯತ್ನಿಸಿದ್ದಾನೆ. ನಾನು ಪ್ರತಿಭಟಿಸಿದಾಗ ಅವನು ನನ್ನ ಮೇಲೆ ಹಲ್ಲೆ ನಡೆಸಿದ. ಇದಾದ ನಂತರ ಕಣ್ಣು ತೆರೆದಾಗ ನಾನು ಆಸ್ಪತ್ರೆಯಲ್ಲಿದ್ದೆ. ಅವನು ನನ್ನ ಪರ್ಸ್ ಅನ್ನು ದೊಚಿದ್ದಾನೆಮತ್ತು ಅದನ್ನು ತೆಗೆದುಕೊಂಡು ಹೋಗಿದ್ದಾನೆ. ಕ್ರಿಮಿನಲ್ ಗಳಿಗೆ ಹೆಸರುವಾಸಿಯಾದ ಆ ಪ್ರದೇಶಕ್ಕೆ ಹೋಗುವ ಅಗತ್ಯ ಏನಿತ್ತು ಎಂದು ಆಸ್ಪತ್ರೆ ಸಿಬ್ಬಂದಿ ನನ್ನನ್ನು ಪ್ರಶ್ನಿಸಿದ್ದಾನೆ" ಎಂದು ಹೇಳಿದ್ದಾರೆ.


ಇದನ್ನೂ ಓದಿ-Detergent ನಲ್ಲಿ ಬಳಸಲಾಗುವ ಕೆಮಿಕಲ್ ನಿಂದ ತಯಾರಾಗುತ್ತೆ ಪಿಜ್ಜಾ-ಬರ್ಗರ್, ಈ ಹೆಸರಾಂತ ಬ್ರಾಂಡ್ ಔಟ್ ಲೆಟ್ ಗಳ ಮೇಲೆ ಗಂಭೀರ ಆರೋಪ


ತಂತ್ರಜ್ಞಾನದ ಮೇಲೆ ಅತಿಯಾದ ನಂಬಿಕೆ ಭಾರಿ ಪರಿಣಮಿಸಿದೆ
ಮಹಿಳೆಯ ಪ್ರಕಾರ, ಮರುದಿನ ಅವರು ಘಟನೆಯನ್ನು ವರದಿ ಮಾಡಲು ಪೊಲೀಸ್ ಠಾಣೆಗೆ ಹೋದಾಗ, ಅಧಿಕಾರಿಗಳು ಅಲ್ಲಿಗೆ ಹೋಗಲು ಕಾರಣವನ್ನು ಕೇಳಿದ್ದಾರೆ. ಅಲ್ಲದೆ ಈ ಪ್ರದೇಶವು ಅಪರಾಧ ಘಟನೆಗಳಿಗೆ (Dangerous Place) ಕುಖ್ಯಾತವಾಗಿದೆ ಎಂದು ಹೇಳಿದ್ದಾರೆ. ಹಾಗಾಗಿ ಭವಿಷ್ಯದಲ್ಲಿ ಒಬ್ಬಂಟಿಯಾಗಿ ಅಲ್ಲಿಗೆ ಹೋಗುವ ಯೋಚನೆಯೂ ಬೇಡ. ತನಗೆ ತಂತ್ರಜ್ಞಾನದಲ್ಲಿ ಹೆಚ್ಚಿನ ನಂಬಿಕೆ ಇಲ್ಲದಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ ಎಂದು ಸಂತ್ರಸ್ತ ಮಹಿಳೆ ಹೇಳಿದ್ದಾರೆ.


ಇದನ್ನೂ ಓದಿ-Facebook New Name: ಫೇಸ್‌ಬುಕ್‌ನ ಹೆಸರು ಬದಲಾವಣೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ